Piles symptoms: ಪೈಲ್ಸ್ ಇದ್ದಾಗ ದೇಹದಲ್ಲಿ ಕಾಣಿಸಿಕೊಳ್ಳುವ 8 ಲಕ್ಷಣಗಳಿವು
Piles Home Remedies: ಜನರು ಪೈಲ್ಸ್ ಬಗ್ಗೆ ಚರ್ಚಿಸಲು ಹಿಂಜರಿಯುತ್ತಾರೆ. ಆದರೆ ಇದಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳದಿದ್ದರೆ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಡಾ. ಉಪಾಸನ ವೋಹ್ರಾ ಇಲ್ಲಿ ಕೆಲವು ಮನೆಮದ್ದು ತಿಳಿಸಿದ್ದು, ಇದನ್ನು ಫಾಲೋ ಮಾಡಿದ್ರೆ ಬರದಂತೆ ತಡೆಯಬಹುದು.

ಚಿಕ್ಕ ಮಕ್ಕಳಿಗೂ ಸಮಸ್ಯೆ
ಮೂಲವ್ಯಾಧಿ ಅಥವಾ ಪೈಲ್ಸ್ ಪುರುಷರಿಗೆ ಮಾತ್ರವಲ್ಲ, ಮಹಿಳೆಯರಿಗೂ ಬರುತ್ತದೆ. ಈ ಸಮಸ್ಯೆ ಪುರುಷರಿಗೆ ಮಾತ್ರ ಬರುತ್ತದೆ ಎಂಬ ತಪ್ಪು ಕಲ್ಪನೆ ಅನೇಕ ಜನರಲ್ಲಿದೆ. ಆದರೆ ಪೈಲ್ಸ್ ಮಹಿಳೆಯರಲ್ಲಿಯೂ ಸಾಮಾನ್ಯವಾಗಿದೆ. ಪೈಲ್ಸ್ ಅನಾರೋಗ್ಯಕರ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿಯಿಂದ ಉಂಟಾಗುವ ಕಾಯಿಲೆಯಾಗಿದೆ. ಈಗ ಚಿಕ್ಕ ಮಕ್ಕಳು ಸಹ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಡಾ. ಉಪಾಸನ ವೋಹ್ರಾ ವಿವರಿಸುತ್ತಾರೆ. ಆದರೆ ಕೆಲವೇ ಸರಳ ಹಂತ ಅನುಸರಿಸುವುದರಿಂದ ಇದನ್ನು ಗುಣಪಡಿಸಬಹುದು. ಅದಕ್ಕೂ ಮುನ್ನ ಪೈಲ್ಸ್ ಏಕೆ ಬರುತ್ತದೆ, ಆರಂಭಿಕ ಲಕ್ಷಣಗಳೇನು? ಇತ್ಯಾದಿ ಮಾಹಿತಿಯನ್ನು ತಿಳಿಯೋಣ…
ಪೈಲ್ಸ್ ಏಕೆ ಬರುತ್ತದೆ?
ಆಯುರ್ವೇದ ವೈದ್ಯೆ ಉಪಾಸನಾ ವೋಹ್ರಾ ಅವರು ಪೈಲ್ಸ್ ಕಳಪೆ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಉಂಟಾಗುತ್ತವೆ ಎಂದು ವಿವರಿಸುತ್ತಾರೆ. ದೀರ್ಘಕಾಲ ಕುಳಿತು ಕೆಲಸ ಮಾಡುವವರು ಅಥವಾ ಬಿಗಿಯಾದ ಬಟ್ಟೆಗಳನ್ನು ಧರಿಸುವವರಲ್ಲಿಯೂ ಪೈಲ್ಸ್ ಬರಬಹುದು. ಆದರೆ ಮಲಬದ್ಧತೆ ಮೂಲವ್ಯಾಧಿಗೆ ಅಥವಾ ಪೈಲ್ಸ್‌ಗೆ ಪ್ರಮುಖ ಕಾರಣವಾಗಿದೆ. ತೀವ್ರ ಮಲಬದ್ಧತೆಯಿಂದ ಬಳಲುತ್ತಿರುವ ಜನರಿಗೆ ಆ ನಂತರ ಪೈಲ್ಸ್ ಬರುವ ಸಾಧ್ಯತೆ ಹೆಚ್ಚು.
ಪೈಲ್ಸ್‌ನ ಆರಂಭಿಕ ಲಕ್ಷಣಗಳು
*ಹಲವಾರು ದಿನಗಳವರೆಗೆ ಮಲವಿಸರ್ಜನೆ ಮಾಡಲು ಸಾಧ್ಯವಾಗುವುದಿಲ್ಲ.
*ಕೆಲವೊಮ್ಮೆ ಕೆಲವು ರೋಗಿಗಳಿಗೆ ಆಗಾಗ್ಗೆ ಮಲವಿಸರ್ಜನೆ ಮಾಡಬೇಕೆಂದು ಅನಿಸುತ್ತದೆ.
*ಮಲವಿಸರ್ಜನೆ ಮಾಡುವಾಗ ತೀವ್ರ ನೋವು.
*ಮಲದೊಂದಿಗೆ ರಕ್ತಸ್ರಾವ.
*ಮಲ ಬರುವ ಜಾಗದಲ್ಲಿ ನೋವು.
*ಗುದದ್ವಾರದ ಬಳಿ ಟ್ಯಾಗ್ಸ್ ಬೆಳೆಯುತ್ತವೆ.
*ಗುದದ್ವಾರದ ಬಳಿ ತುರಿಕೆ ಮತ್ತು ಸುಡುವಂತಹ ಅನುಭವ.
*ಮಲದೊಂದಿಗೆ ಲೋಳೆಯಂತೆ ಸ್ರವಿಸುವುದು.
ಪೈಲ್ಸ್ ಗುಣಪಡಿಸಲು ಮನೆಮದ್ದುಗಳು
ಮಲ ಬರುವ ಜಾಗದಲ್ಲಿ ಟ್ಯಾಗ್ಸ್ ಇದ್ದು ನೋವು ಅನುಭವಿಸುತ್ತಿರುವವರು ಅರಿಶಿನ ಪುಡಿ ಮತ್ತು ಲವಂಗ ಪುಡಿಯನ್ನು ಹರಳೆಣ್ಣೆ (Castor oil)ನಲ್ಲಿ ಬೆರೆಸಿ ಈ ಪೇಸ್ಟ್ ಅನ್ನು ಪ್ರತಿದಿನ ತಿರುಳಿನ ಸುತ್ತಲೂ ಹಚ್ಚಬೇಕು ಎಂದು ಡಾ. ಉಪಾಸನ ಹೇಳಿದ್ದಾರೆ.
ಮಲಬದ್ಧತೆಯನ್ನು ನಿವಾರಿಸಿಕೊಳ್ಳಿ
*ಮೊದಲನೆಯದಾಗಿ ಮಲಬದ್ಧತೆಯನ್ನು ಸರಿಪಡಿಸುವುದು ಅತ್ಯಂತ ಮುಖ್ಯವಾದ ವಿಷಯ. ಮಲಬದ್ಧತೆಯನ್ನು ನಿವಾರಿಸುವುದರಿಂದ ಮೂಲವ್ಯಾಧಿಯನ್ನು ಗುಣಪಡಿಸಬಹುದು ಎಂದು ತಜ್ಞರು ಹೇಳುತ್ತಾರೆ. ಇದನ್ನು ಮಾಡಲು, ನೀವು ಆಗಾಗ್ಗೆ ಒಣಗಿದ ತೆಂಗಿನಕಾಯಿಯನ್ನು ತಿನ್ನಬೇಕು ಮತ್ತು ಕಮಲದ ಬೇರು ಸೇವಿಸಬೇಕು. ಇದು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
*ಸಾಕಷ್ಟು ನೀರು ಕುಡಿಯಿರಿ ಮತ್ತು ಮಜ್ಜಿಗೆ ಸೇವಿಸಿ.