MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಈ ಆರೋಗ್ಯ ಸಮಸ್ಯೆ ಇರೋರು ತುಪ್ಪ ತಿನ್ನಲೇಬಾರದು!

ಈ ಆರೋಗ್ಯ ಸಮಸ್ಯೆ ಇರೋರು ತುಪ್ಪ ತಿನ್ನಲೇಬಾರದು!

ತುಪ್ಪ ಅನಾದಿಕಾಲದಿಂದಲೂ ನಮ್ಮ ಆಹಾರದ ಭಾಗ. ಬಹುತೇಕರು ತುಪ್ಪವನ್ನು ಅಡುಗೆಯಲ್ಲಿ ಬಳಸುತ್ತಾರೆ. ಏಕೆಂದರೆ ತುಪ್ಪದಲ್ಲಿ ಆರೋಗ್ಯಕರ ಕೊಬ್ಬಿನಾಂಶ ಹೆಚ್ಚಿದೆ. ಮುಖ್ಯವಾಗಿ ವಿಟಮಿನ್ ಎ, ಡಿ, ಇ, ಕೆಯೂ ಹೇರಳವಾಗಿದೆ. ಆದ್ರೆ ಕೆಲವು ಆರೋಗ್ಯ ಸಮಸ್ಯೆ ಇರುವವರು ತುಪ್ಪವನ್ನು ತಿನ್ನಲೇಬಾರದು.ಹಾಗಾದ್ರೆ ಯಾರು ತುಪ್ಪ ತಿನ್ನಬಾರದು? 

1 Min read
Author : Anusha Kb
| Updated : Oct 14 2024, 01:49 PM IST
Share this Photo Gallery
  • FB
  • TW
  • Linkdin
  • Whatsapp
15

ತುಪ್ಪ ಪೌಷ್ಟಿಕಾಂಶಗಳ ಆಗರ. ನಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬಹುದಾದ ಸೂಪರ್ ಫುಡ್ ಇದು. ತುಪ್ಪ ತಿಂದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೇದು. ತುಪ್ಪದಲ್ಲಿ ಹೆಲ್ದೀ ಫ್ಯಾಟ್ಸ್ ಹೆಚ್ಚಿದೆ ಅಷ್ಟೇ ಅಲ್ಲ, ನಮ್ಮ ಶರೀರಕ್ಕೆ ಬೇಕಾದ ವಿಟಮಿನ್ ಎ, ಡಿ, ಇ, ಕೆ ಹೇರಳವಾಗಿದೆ. ತುಪ್ಪ ಶರೀರಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನು ಒದಗಿಸುತ್ತೆ. ಆರೋಗ್ಯಕರ ಕೊಬ್ಬನ್ನು ಹೆಚ್ಚಿಸುತ್ತೆ, ಹಲವು ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತೆ ತುಪ್ಪ. ತುಪ್ಪ ದಿನಕ್ಕೆ ದೇಹಕ್ಕೆ ಬೇಕಾದ ವಿಟಮಿನ್ ಇ ನ 11% ಮತ್ತು ವಿಟಮಿನ್ ಎ ನ 100% ಒದಗಿಸುತ್ತೆ. ಹಾಗೆಯೇ ಇದರಲ್ಲಿ ಫ್ಯಾಟಿ ಆಸಿಡ್ ಕೂಡ ಇದೆ. 

 

25

ತುಪ್ಪ ಜಾಸ್ತಿ ತಿಂದ್ರೆ ಹಾರ್ಟ್ ಪ್ರಾಬ್ಲಮ್ ಆಗುತ್ತೆ ಅಂತ ಅನೇಕರು ಅಂದುಕೊಳ್ತಾರೆ. ಆದ್ರೆ ಅದು ತಪ್ಪು. ಮಿತವಾಗಿ ತಿಂದ್ರೆ ತುಪ್ಪ ಹೃದಯದ ಆರೋಗ್ಯಕ್ಕೆ ಒಳ್ಳೇದು. ಅಷ್ಟೇ ಅಲ್ಲ, ಶರೀರದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತೆ, ಚರ್ಮದ ಸೌಂದರ್ಯವನ್ನು ಹೆಚ್ಚಿಸುತ್ತೆ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತೆ. ಇಷ್ಟೆಲ್ಲಾ ಉಪಯೋಗಗಳಿರುವ ತುಪ್ಪನ ಕೆಲವರು ತಿನ್ನಲೇಬಾರದು ಅಂತ ನಿಮಗೆ ಗೊತ್ತಾ? ಯಾರು ತುಪ್ಪ ತಿನ್ನಬಾರದು ಅಂತ ಈಗ ನೋಡೋಣ.

 

35
ತುಪ್ಪದ ಉಪಯೋಗಗಳು

ತುಪ್ಪದ ಉಪಯೋಗಗಳು

ಜೀರ್ಣಕ್ರಿಯೆ ಸಮಸ್ಯೆ ಇರುವವರು

ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆ ಇರುವವರು ತುಪ್ಪ ತಿನ್ನಬಾರದು. ತುಪ್ಪ ತಿಂದ್ರೆ ಹೊಟ್ಟೆ ಉಬ್ಬರ, ವಾಕರಿಕೆ, ಅಜೀರ್ಣ ಆಗಬಹುದು. ಪಿತ್ತಕೋಶದ ಸಮಸ್ಯೆ, ದೀರ್ಘಕಾಲದ ಜೀರ್ಣಕ್ರಿಯೆ ಸಮಸ್ಯೆ, ಇರಿಟೇಬಲ್ ಬವೆಲ್ ಸಿಂಡ್ರೋಮ್ ಇರುವವರಿಗೆ ತುಪ್ಪ ಸಮಸ್ಯೆಯನ್ನು ಹೆಚ್ಚಿಸಬಹುದು.

45

ತೂಕ ನಿಯಂತ್ರಣ

ತೂಕ ಇಳಿಸಿಕೊಳ್ಳೋರು ತುಪ್ಪ ಜಾಸ್ತಿ ತಿನ್ನಬಾರದು. ಆದ್ರೆ, ಸ್ವಲ್ಪ ತಿಂದ್ರೆ ಹಸಿವು ನಿಯಂತ್ರಣದಲ್ಲಿರುತ್ತೆ. ತೂಕ ಇಳಿಸಿಕೊಳ್ಳಲು ಕಡಿಮೆ ಕ್ಯಾಲೋರಿ ಇರುವ ಆಹಾರ ತಿನ್ನಬೇಕು.

ಲಿವರ್ ಸಮಸ್ಯೆ

ಲಿವರ್ ಸಮಸ್ಯೆ ಇರುವವರು ಜಾಗ್ರತೆ ವಹಿಸಬೇಕು. ತುಪ್ಪದಲ್ಲಿ ಕೊಬ್ಬು ಜಾಸ್ತಿ ಇರೋದ್ರಿಂದ ಲಿವರ್ ಸಮಸ್ಯೆ ಹೆಚ್ಚಾಗಬಹುದು.

 

55

ಹೆಚ್ಚಿನ ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್ ಜಾಸ್ತಿ ಇರುವವರು ತುಪ್ಪ, ಬೆಣ್ಣೆ, ಎಣ್ಣೆ ತಿನ್ನಬಾರದು. ಆದ್ರೆ, ಸ್ವಲ್ಪ ತಿಂದ್ರೆ ಒಳ್ಳೆಯ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತೆ. ತುಪ್ಪ ಜಾಸ್ತಿ ತಿಂದ್ರೆ ಹೃದಯದ ಆರೋಗ್ಯಕ್ಕೆ ಹಾನಿಕರ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ತುಪ್ಪ

Latest Videos
Recommended Stories
Recommended image1
ಹೋಳಿ ಹಬ್ಬದ ಬಣ್ಣಗಳ ಬಗ್ಗೆ ಎಚ್ಚರ! ಇದು ಕಿವಿ ನೋವು, ಸೈನಸ್ ಸೋಂಕಿಗೂ ಕಾರಣವಾಗ್ಬೋದು
Recommended image2
ಲಿವರ್ ಕ್ಯಾನ್ಸರ್ ತಡೆಗಟ್ಟಲು ಆಹಾರದಲ್ಲಿ ನೀವು ಮಾಡುತ್ತಿರುವ ಈ ತಪ್ಪು ತಿದ್ದಿಕೊಳ್ಳಿ!
Recommended image3
AI Therapist: ಆರೋಗ್ಯ ಸಮಸ್ಯೆಗೆ ವೈದ್ಯರ ಬಳಿ ಹೋಗದೇ AI ಚಾಟ್‌ಬಾಟ್‌ಗೆ ಕೇಳ್ತೀರಾ? ಇದು ತುಂಬಾ ಡೇಂಜರ್! ತಜ್ಞರು ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved