ಹಾರ್ಟ್ ಪ್ರಾಬ್ಲಂನಿಂದ ಪಾರಾಗಲು ಜ್ಯೋತಿಷ್ಯ ಉಪಾಯ!

ಹೃದಯ ಸಂಬಂಧಿ ರೋಗಗಳು ಆಗಾಗ ಎಲ್ಲರಿಗೂ ಕಾಡುವುದುಂಟು. ಈಗಿನ ಫಾಸ್ಟ್ ಲೈಫ್‌ನಲ್ಲಿ ಯಾರಿಗೆ ಯಾವಾಗ ಬರುತ್ತದೆ ಎಂಬುದು ಸಹ ತಿಳಿಯುವುದಿಲ್ಲ. ಇದಕ್ಕೆ ಆಧುನಿಕ ಜೀವನಶೈಲಿಯು ಒಂದೆಡೆಯಾದರೆ ಜ್ಯೋತಿಷ್ಯದ ಪ್ರಕಾರ ಕೆಲವು ಗ್ರಹಗಳೂ ಕಾರಣವಾಗುತ್ತವೆ. ಹಾಗಾಗಿ ಆ ಗ್ರಹಗಳು ಯಾವುವು? ಅದಕ್ಕೆ ಪರಿಹಾರ ಏನು ಎಂಬುದರ ಬಗ್ಗೆ ನೋಡೋಣ... 

Astrology way to get rid of heart problem and be fit

ಹೃದಯ (Heart) ಸಂಬಂಧಿ ಸಮಸ್ಯೆಗಳು (Problems) ಈಗಂತೂ ಯಾರಿಗೆ ಬೇಕಾದರೂ ಬರಬಹುದು. ಆಧುನಿಕ ಜಗತ್ತಿನ ಆಧುನಿಕ ಜೀವನದಲ್ಲಿ (Modern life) ಎಂದು ಎಲ್ಲರೂ ಬಂದು ಬಿಡುತ್ತವೆ. ಇದಕ್ಕೆ ಇಂಥದ್ದೇ ಕಾರಣ ಎಂದು ಹೇಳುವುದು ಕಷ್ಟಕರ. ಕೆಲಸದ ಒತ್ತಡಗಳಿಂದ ಜೀವನಶೈಲಿಯೂ (Lifestyle) ಕೂಡ ಅಸ್ತವ್ಯಸ್ತವಾಗಿರುವುದರಿಂದ ಊಟ (Meal) ಮಾಡುವುದು, ಮಲಗುವುದು (Sleep), ಏಳುವುದು ಸೇರಿದಂತೆ ಯಾವುದು ಸಹ ಸರಿಯಾದ ಸಮಯಕ್ಕೆ ಆಗುತ್ತಿರುವುದಿಲ್ಲ. ಇದರಿಂದ ಎದೆನೋವು (Chest pain) ಕಾಣಿಸಿಕೊಳ್ಳುವುದು, ಇತ್ಯಾದಿಗಳು ಸಂಭವಿಸುತ್ತಲೇ ಇರುತ್ತವೆ.

ವೈದ್ಯರ ಪ್ರಕಾರ ಇದು ಹೆಚ್ಚಿಗೆ ಸ್ಟ್ರೆಸ್ ಅನ್ನು ತೆಗೆದುಕೊಳ್ಳುತ್ತಿರುವುದೇ ಮುಖ್ಯ ಕಾರಣವಾಗಿದೆ. ಆದರೆ ಜ್ಯೋತಿಷ್ಯದ ಪ್ರಕಾರ ಹೇಳುವುದಾದರೆ ಇದಕ್ಕೆ ಕೆಲವು ಗ್ರಹಗಳೇ ಕಾರಣ ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ ಜ್ಯೋತಿಷ್ಯದ ಅನುಸಾರ ಯಾವ ಗ್ರಹಗಳು ಇದಕ್ಕೆ ಕಾರಣವಾಗಿವೆ? ಅದಕ್ಕೆ ಬೇರೆ ಏನು ಕಾರಣಗಳಿವೆ? ಅದಕ್ಕೆ ಪರಿಹಾರಗಳೇನು ಎಂಬಿತ್ಯಾದಿಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ಯಾವ ಗ್ರಹಗಳು ಇದಕ್ಕೆ ಕಾರಣ? ಮತ್ತು ಪರಿಹಾರಗಳೇನು ಎಂಬುದರ ಬಗ್ಗೆ ತಿಳಿಯೋಣ...

ಸೂರ್ಯ ಗ್ರಹ (Sun planet)
ಜ್ಯೋತಿಷ್ಯದ (Astrology) ಅನುಸಾರ ಪಿತ ಮತ್ತು ಆತ್ಮದ ಕಾರಕ ಗ್ರಹವೇ ಸೂರ್ಯ ಗ್ರಹವಾಗಿದೆ. ಹಾಗಾಗಿ ಇದರ ಶುಭ - ಅಶುಭ ಸ್ಥಿತಿಯ ಆಧಾರದ ಮೇಲೆ ಹೃದಯ ರೋಗದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬಹುದಾಗಿದೆ. 

ಚಂದ್ರ ಗ್ರಹ (Moon Planet)
ಮನಸ್ಸು (Mind) ಮತ್ತು ಬುದ್ಧಿಯ / ಮೆದುಳಿನ (Brain) ಕಾರಕ ಗ್ರಹ ಚಂದ್ರ ಆಗಿದ್ದಾನೆ. ಒಂದು ವೇಳೆ ಚಂದ್ರಗ್ರಹದ ಸ್ಥಿತಿ ನೀಚವಾಗಿದ್ದರೆ, ಹೃದಯ ಸಂಬಂಧಿ ರೋಗಗಳ ಸಮಸ್ಯೆ ಕಾಡುತ್ತದೆ. 

ಮಂಗಳ ಗ್ರಹ (Mars)
ಜ್ಯೋತಿಷ್ಯದ ಪ್ರಕಾರ ಮಂಗಳ ಗ್ರಹವು ನಮ್ಮ ಶರೀರದ ಮಾಂಸಖಂಡಗಳ (Muscles) ಪ್ರತಿನಿಧಿಸುವ ಗ್ರಹವಾಗಿದೆ. ಹೃದಯವೂ ಸಹ ಮಾಂಸಗಳಿಂದಲೇ ರಚಿತಗೊಂಡಿರುವ ಒಂದು ಅಂಗವಾಗಿದೆ. ಹಾಗಾಗಿ ಮಂಗಳ ಗ್ರಹವು ಸಹ ಹೃದಯ ರೋಗಕ್ಕೆ (Diseases) ಕಾರಣವಾಗುವ ಸಾಧ್ಯತೆ ಇದೆ.

ಇದನ್ನು ಓದಿ: ನಿಮ್ಮ ರಾಶಿಗೆ ಯಾವ ಬಣ್ಣ ಅದೃಷ್ಟ ತರುತ್ತೆ ಗೊತ್ತಾ..?

ರಾಹು ಗ್ರಹ (Rahu planet)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹು ಗ್ರಹವು ಅಚಾನಕ್ ಆಗಿ ಸಂಭವಿಸುವ ದುರ್ಘಟನೆಗಳು (Accidents), ರೋಗಗಳನ್ನು ತರುವ ಗ್ರಹ ಎಂದು ಉಲ್ಲೇಖಿಸಲಾಗಿದೆ. ಯಾವುದಾದರೂ ವ್ಯಕ್ತಿಗೆ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡರೆ ಅದಕ್ಕೆ ರಾಹು ಗ್ರಹವು ಕಾರಣ ಆಗಿರಬಹುದು. 

ಇದರಿಂದ ಪರಿಹಾರಗಳೇನು?
ಇದಕ್ಕೆ ಪರಿಹಾರಗಳನ್ನು (Solution) ನೋಡುವ ಮೊದಲು ಹೃದಯ ಸಂಬಂಧ ಸಮಸ್ಯೆಗಳೇನಾದರೂ ಇದ್ದರೆ ಮೊದಲು ವೈದ್ಯರ (Doctor) ಬಳಿ ಸಂಪರ್ಕಿಸಿಯೇ ಬಳಿಕ ಜ್ಯೋತಿಷ್ಯದಲ್ಲಿ ಹೇಳಲಾಗಿರುವ ಪರಿಹಾರಗಳನ್ನು ಮಾಡಬಹುದಾಗಿದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೃದಯ ಸಂಬಂಧಿ ಸಮಸ್ಯೆಗಳಿಂದ ಪಾರಾಗಬೇಕಾದರೆ ಭಾನುವಾರದಂದು (Sunday) ಸೂರ್ಯೋದಯದ ಸಮಯಕ್ಕೆ 108 ಬಾರಿ ಗಾಯತ್ರಿ ಮಂತ್ರವನ್ನು (Gayatri Mantra) ಜಪಿಸಬೇಕು. ಹೀಗೆ ಮಾಡುವುದರಿಂದ ಹೃದಯ ಸಂಬಂಧಿ ರೋಗಗಳಿಂದ ರಕ್ಷಣೆಯನ್ನು ಪಡೆಯಬಹುದು. 

ಸೋಮವಾರದಂದು (Monday) ರಾತ್ರಿ ಸಮಯದಲ್ಲಿ ವಿಶ್ರಾಂತಿ ಸ್ಥಿತಿಯಲ್ಲಿ ಕುಳಿತುಕೊಂಡು ಚಂದ್ರನ ಮಂತ್ರವಾದ "ಓಂ ಸೋಮ ಸೋಮಾಯ ನಮಃ" ವನ್ನು 108 ಬಾರಿ ಜಪಿಸಬೇಕು.

ಮಂಗಳವಾರದಂದು (Tuesday) ಪ್ರಾತಃ ಕಾಲದಲ್ಲಿ ಪೂಜೆಯ ಸಮಯದಲ್ಲಿ "ಓಂ ಅಂ ಅಂಗಾರಕಾಯನಮಃ" ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು.

ಇದನ್ನು ಓದಿ: ಈ 4 ರಾಶಿಯವರಿಗೆ ಜೂನ್‌ನಲ್ಲಿ ಹರಿಯುತ್ತೆ ಹಣದ ಹೊಳೆ!

ಮನಸ್ಸಿನ ಶಾಂತಿ (Peace of mind) ಹಾಗೂ ನೆಮ್ಮದಿಗಾಗಿ ಪಚ್ಚೆ, ಬಿಳಿ ಮುತ್ತು ಅಥವಾ ನೀಲಿ ಪುಕ್ಕರಾಜವನ್ನು ಧರಿಸಬೇಕು. ಇದನ್ನು ಧರಿಸುವ ಮುನ್ನ ತಜ್ಞ  ಜ್ಯೋತಿಷಿಗಳನ್ನು (Astrologer) ಸಂಪರ್ಕಿಸಿ ಸಲಹೆಗಳನ್ನು ಪಡೆದುಕೊಳ್ಳಬೇಕು.

Latest Videos
Follow Us:
Download App:
  • android
  • ios