ಪದೇ ಪದೇ ಮೂಡ್ ಸ್ವಿಂಗ್ ಸಮಸ್ಯೆ ಆಗ್ತಿದ್ಯಾ? ಆಹಾರದಲ್ಲಿ ಈ ಬದಲಾವಣೆ ಇರಲಿ
ಈ ದಿನಗಳಲ್ಲಿ ಹೆಚ್ಚಿನ ಜನರು ಮೂಡ್ ಸ್ವಿಂಗ್ ಸಮಸ್ಯೆಯಿಂದ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಕೆಲಸದ ಒತ್ತಡ (Stress) ಮತ್ತು ಜೀವನಶೈಲಿಯಿಂದಾಗಿ (Lifestyle), ಜನರು ಆಗಾಗ್ಗೆ ಈ ಸಮಸ್ಯೆ ಅನುಭವಿಸುತ್ತಿದ್ದಾರೆ. ಪದೇ ಪದೇ ಈ ಸಮಸ್ಯೆಯನ್ನು ಹೊಂದಿರುವ ಜನರಲ್ಲಿ ನೀವೂ ಒಬ್ಬರಾಗಿದ್ದರೆ, ಈ 5 ಪೋಷಕಾಂಶಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ.
ಹೆಚ್ಚುತ್ತಿರುವ ಕೆಲಸದ ಹೊರೆ (Work Load) ಮತ್ತು ಒತ್ತಡದಿಂದಾಗಿ (Stress), ಇತ್ತೀಚಿನ ದಿನಗಳಲ್ಲಿ ಜನರು ದೈಹಿಕ ಮಾತ್ರವಲ್ಲದೆ ಮಾನಸಿಕ ಸಮಸ್ಯೆಗಳಿಗೂ (Mental Health Issues) ಬಲಿಯಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮೂಡ್ ಸ್ವಿಂಗ್ (mood swing) ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ. ಹಾರ್ಮೋನುಗಳಲ್ಲಿನ ಬದಲಾವಣೆಯಿಂದಾಗಿ, ಆಗಾಗ್ಗೆ ಮೂಡ್ ಸ್ವಿಂಗ್ ಸಮಸ್ಯೆ ಉಂಟಾಗುತ್ತೆ. ಹಾರ್ಮೋನುಗಳು ನಿಮ್ಮ ದೇಹದ ರಾಸಾಯನಿಕ ಸಂದೇಶವಾಹಕಗಳಾಗಿವೆ, ಅವು ರಕ್ತದ ಹರಿವಿನ ಮೂಲಕ ಅಂಗಾಂಶಗಳು ಮತ್ತು ದೇಹದ ಇತರ ಭಾಗಗಳನ್ನು ತಲುಪುತ್ತವೆ.
ಹಾರ್ಮೋನುಗಳು (hormones) ನಿಮ್ಮ ಮನಸ್ಥಿತಿಯ ಮೇಲೆ ಮಾತ್ರವಲ್ಲದೆ, ತೂಕ (Weight), ಹಸಿವು (Hungry), ಋತುಚಕ್ರ (Menstruation), ಗರ್ಭಧಾರಣೆ (Pregnancy) ಮತ್ತು ಥೈರಾಯ್ಡ್ (Thyroid) ಸೇರಿದಂತೆ ಒಟ್ಟಾರೆ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಹಾರ್ಮೋನುಗಳಿಂದ ಉಂಟಾಗುವ ಮನಸ್ಥಿತಿಯ ಬದಲಾವಣೆಗಳಿಂದ ನೀವು ಪದೇ ಪದೇ ತೊಂದರೆಗೀಡಾಗುತ್ತಿದ್ದರೆ, ಈ ಆಹಾರ ಸೇವಿಸುವ ಮೂಲಕ ಸಮಸ್ಯೆ ನಿವಾರಿಸಬಹುದು.
ಒಮೆಗಾ -3 ಕೊಬ್ಬಿನಾಮ್ಲಗಳು (omega-3 fatty acid)
ಒಮೆಗಾ -3 ಕೊಬ್ಬಿನಾಮ್ಲಗಳು, ವಿಶೇಷವಾಗಿ ಇಪಿಎ (ಐಕೋಸಾಪೆಂಟೆನೋಯಿಕ್ ಆಮ್ಲ) ಮತ್ತು ಡಿಎಚ್ಎ (ಡೊಕೊಸಾಹೆಕ್ಸಾನೋಯಿಕ್ ಆಮ್ಲ) ಮೆದುಳಿನ ಆರೋಗ್ಯಕ್ಕೆ ಅತ್ಯಗತ್ಯ. ಮನಸ್ಥಿತಿಯನ್ನು ಸುಧಾರಿಸಲು ಮತ್ತು ಖಿನ್ನತೆಯ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಇದು ಸಹಾಯಕವಾಗಿದೆ. ಸಾಲ್ಮನ್, ಬಂಗುಡೆ ಮತ್ತು ಸಾರ್ಡೀನ್, ವಾಲ್ನಟ್, ಚಿಯಾ ಬೀಜಗಳು, ಅಗಸೆಬೀಜಗಳು, ಕೊಬ್ಬಿನ ಮೀನುಗಳಿಂದ ನೀವು ಒಮೆಗಾ -3 ಫ್ಯಾಟಿ ಆಸಿಡ್ ಪಡೆಯಬಹುದು.
B ಜೀವಸತ್ವಗಳು (Vitamin B)
ವಿಟಮಿನ್ ಬಿ 6, ಬಿ 9 (ಫೋಲೇಟ್) ಮತ್ತು ಬಿ 12 ನಂತಹ ಬಿ ಜೀವಸತ್ವಗಳು ನರಗಳನ್ನು ನಿಯಂತ್ರಣದಲ್ಲಿ ಸಹಾಯ ಮಾಡುತ್ತೆ., ಇದು ಮೂಡ್ ಸರಿಯಾಗಿರಲು ಸಹಾಯ ಮಾಡುತ್ತೆ. ಅದಕ್ಕಾಗಿ ವಿಟಮಿನ್ ಬಿ ಯ ಉತ್ತಮ ಮೂಲಗಳಾದ ಧಾನ್ಯಗಳು, ಬೀನ್ಸ್, ಹಸಿರು ತರಕಾರಿಗಳು, ಮೊಟ್ಟೆಗಳು, ನಟ್ಸ್ ಗಳನ್ನು ಸೇವಿಸಿ.
ವಿಟಮಿನ್ ಡಿ (Vitamin D)
ವಿಟಮಿನ್ ಡಿ ಕೊರತೆಯು ಖಿನ್ನತೆ ಮತ್ತು ಮಾನಸಿಕ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಸೂರ್ಯನ ಬೆಳಕು ವಿಟಮಿನ್ ಡಿ ಯ ಅತ್ಯುತ್ತಮ ಮೂಲವಾಗಿದೆ. ಇದನ್ನು ಕೊಬ್ಬಿನ ಮೀನು, ಬಲವರ್ಧಿತ ಡೈರಿ ಅಥವಾ ಸಸ್ಯ ಆಧಾರಿತ ಹಾಲು, ಮೊಟ್ಟೆಯ ಹಳದಿ ಲೋಳೆ ಮತ್ತು ಅಣಬೆಗಳಲ್ಲಿಯೂ ಕಾಣಬಹುದು.
ಮೆಗ್ನೀಸಿಯಮ್ (Megnesium)
ಮೆಗ್ನೀಸಿಯಮ್ ಮೆದುಳಿನ ಕಾರ್ಯ ಮತ್ತು ಮನಸ್ಥಿತಿ ಕಂಟ್ರೋಲ್ ಮಾಡೋದಕ್ಕೆ ಸಂಬಂಧಿಸಿದ ಪ್ರತಿಕ್ರಿಯೆಗಳು ಸೇರಿದಂತೆ ದೇಹದಲ್ಲಿನ ಅನೇಕ ಜೀವರಾಸಾಯನಿಕ ಪ್ರತಿಕ್ರಿಯೆಗಳಲ್ಲಿ ಭಾಗಿಯಾಗಿದೆ. ಅಷ್ಟೇ ಅಲ್ಲ ಮೆಗ್ನೀಸಿಯಮ್ ಆತಂಕ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರಗಳಲ್ಲಿ ಗಾಢ ಬಣ್ಣದ ಎಲೆಗಳ ತರಕಾರಿಗಳು (ಪಾಲಕ್ ಮತ್ತು ಅರಿವೆ), ಬೀಜಗಳು (ಬಾದಾಮಿ ಮತ್ತು ಕುಂಬಳಕಾಯಿ ಬೀಜಗಳು), ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳು ಸೇರಿವೆ.
ಆಂಟಿ ಆಕ್ಸಿಡೆಂಟ್ (Antioxidants)
ಆಂಟಿ ಆಕ್ಸಿಡೆಂಟ್ ಮೆದುಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ಸಹಾಯ ಮಾಡುತ್ತದೆ, ಇದು ಮನಸ್ಥಿತಿಯ ಅಸಮತೋಲನಕ್ಕೆ ಕಾರಣವಾಗಬಹುದು. ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಆಹಾರಗಳಲ್ಲಿ ವರ್ಣರಂಜಿತ ಹಣ್ಣುಗಳು ಮತ್ತು ತರಕಾರಿಗಳು (ಬೆರ್ರಿಗಳು, ಸಿಟ್ರಸ್ ಹಣ್ಣುಗಳು, ಪಾಲಕ್ ಮತ್ತು ಕೇಲ್), ಬೀಜಗಳು, ನಟ್ಸ್ ಮತ್ತು ಗ್ರಿನ್ ಟೀ ಸೇರಿವೆ.