Detox Drink ಕುಡಿದ್ರೆ ತೂಕ ಕಡಿಮೆಯಾಗುತ್ತಾ ? ತಜ್ಞರು ಏನಂತಾರೆ?
ಡಿಟಾಕ್ಸ್ ಡ್ರಿಂಕ್ಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಸಾದಾ ನೀರಿನ ಬದಲಿಗೆ ಡಿಟಾಕ್ಸ್ ಡ್ರಿಂಕ್ಸ್ ಸೇವಿಸುವ ಮೂಲಕ ನೀವು ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಅವುಗಳಿಗೆ ಸಂಬಂಧಿಸಿದ ಸತ್ಯ ಮಿಥ್ಯಗಳ ಬಗ್ಗೆ ತಿಳಿದುಕೊಂಡರೆ ಉತ್ತಮ.
ಆರೋಗ್ಯವಾಗಿರಲು, ಆಹಾರದ ಬಗ್ಗೆ ಮಾತ್ರವಲ್ಲದೆ ನೀರಿನ ಸೇವನೆಯ ಬಗ್ಗೆಯೂ ಗಮನ ಹರಿಸೋದು ಬಹಳ ಮುಖ್ಯ. ಸಾಮಾನ್ಯವಾಗಿ, ಜನರು ಸಾದಾ ನೀರನ್ನು ಕುಡಿಯುವುದನ್ನು ತಪ್ಪಿಸುತ್ತಾರೆ. ಹೀಗಿರೋವಾಗ, ಡಿಟಾಕ್ಸ್ ಪಾನೀಯಗಳನ್ನು (detox drinks) ತಯಾರಿಸಿ ಕುಡಿಯುವುದು ಉತ್ತಮ ಮಾರ್ಗವಾಗಿದೆ. ಡಿಟಾಕ್ಸ್ ಪಾನೀಯಗಳು ಎಂದರೆ ತಾಜಾ ಹಣ್ಣುಗಳು, ತರಕಾರಿಗಳು ಅಥವಾ ಗಿಡಮೂಲಿಕೆ ಬೆರೆಸಿರುವ ನೀರು. ಇದು ನೀರಿನ ರುಚಿಯನ್ನು ಬಹಳಷ್ಟು ಹೆಚ್ಚಿಸುತ್ತದೆ. ಜೊತೆಗೆ, ಡಿಟಾಕ್ಸ್ ಪಾನೀಯಗಳನ್ನು ಸೇವಿಸುವುದು ಅನೇಕ ಪ್ರಯೋಜನಗಳನ್ನು ನೀಡುತ್ತೆ.
ಜನರು ದಿನವಿಡೀ ಡಿಟಾಕ್ಸ್ ಡ್ರಿಂಕ್ಸ್ ಸೇವಿಸಲು ಕಾರಣ ಏನಂದ್ರೆ ಡಿಟಾಕ್ಸ್ ಡ್ರಿಂಕ್ಸ್ ನಲ್ಲಿ ಕ್ಯಾಲರಿ ತುಂಬಾ ಕಡಿಮೆ (low calory), ಆದ್ದರಿಂದ ಜನರು ಇದನ್ನು ತೂಕ ಇಳಿಸಲು ಸೇವಿಸುತ್ತಾರೆ. ಆದಾಗ್ಯೂ, ಡಿಟಾಕ್ಸ್ ಡ್ರಿಂಕ್ಸ್ ಪ್ರಯೋಜನಗಳ ಜೊತೆಗೆ, ಜನರು ಅದಕ್ಕೆ ಸಂಬಂಧಿಸಿದ ಕೆಲವು ಮಿಥ್ಯೆಗಳನ್ನು ನಿಜವೆಂದು ಪರಿಗಣಿಸುತ್ತಾರೆ. ಆದ್ದರಿಂದ ಇಂದು ಡಿಟಾಕ್ಸ್ ಡ್ರಿಂಕ್ಸ್ ಗೆ ಸಂಬಂಧಿಸಿದ ಮಿಥ್ಯೆಗಳು ಮತ್ತು ಅವುಗಳ ಸತ್ಯದ ಬಗ್ಗೆ ತಿಳಿಯೋಣ.
ಡಿಟಾಕ್ಸ್ ಡ್ರಿಂಕ್ಸ್ ದೇಹವನ್ನು ನಿರ್ವಿಷಗೊಳಿಸುತ್ತವೆ
ಸತ್ಯ: ದೇಹದಿಂದ ವಿಷವನ್ನು ತೆಗೆದುಹಾಕಲು ಡಿಟಾಕ್ಸ್ ಡ್ರಿಂಕ್ಸ್ ಸೇವಿಸುವುದು ಬಹಳ ಮುಖ್ಯ ಎಂದು ಹೆಚ್ಚಿನ ಜನರು ನಂಬುತ್ತಾರೆ. ಆದರೆ, ಇದು ಹಾಗಲ್ಲ. ದೇಹಕ್ಕೆ ಯಾವುದೇ ಪ್ರತ್ಯೇಕ ಡಿಟಾಕ್ಸ್ ಪ್ರೋಗ್ರಾಂ ಅಗತ್ಯವಿಲ್ಲ. ದೇಹವು ಸ್ವತಃ ತನ್ನನ್ನು ತಾನು ನಿರ್ವಿಷಗೊಳಿಸುವಂತೆ ವಿನ್ಯಾಸಗೊಂಡಿದೆ.. ನಮ್ಮ ಪಿತ್ತಜನಕಾಂಗವು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.
ದೇಹವು ವಿಷವನ್ನು ತೊಡೆದುಹಾಕಲು ಸಹಾಯ ಮಾಡಲು ನೀವು ಮಾಡಬಹುದಾದ ಪ್ರಮುಖ ಕೆಲಸ ಎಂದರೆ ನಿಮ್ಮ ಯಕೃತ್ತಿನ ಬಗ್ಗೆ ಕಾಳಜಿ ವಹಿಸುವುದು. ನಿಮ್ಮ ಆಹಾರದ ಬಗ್ಗೆ ಗಮನ ಹರಿಸುವ ಮೂಲಕ ದೇಹವನ್ನು ನೈಸರ್ಗಿಕವಾಗಿ ನಿರ್ವಿಷಗೊಳಿಸಬಹುದು. ಡಿಟಾಕ್ಸ್ ಪಾನೀಯಗಳಿಂದ (detox water)ಮಾತ್ರ ನೀವು ದೇಹದ ವಿಷವನ್ನು ತೆಗೆದುಹಾಕಲು ಸಾಧ್ಯ ಎನ್ನುವ ನಿಮ್ಮ ಆಲೋಚನೆ ತಪ್ಪು.
ಡಿಟಾಕ್ಸ್ ಪಾನೀಯಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ
ಸತ್ಯ: ತೂಕ ಇಳಿಸಿಕೊಳ್ಳಲು (weight loss) ಡಿಟಾಕ್ಸ್ ಡ್ರಿಂಕ್ಸ್ ತುಂಬಾ ಪರಿಣಾಮಕಾರಿ ಎಂದು ಜನರು ಪರಿಗಣಿಸುತ್ತಾರೆ. ಡಿಟಾಕ್ಸ್ ಡ್ರಿಂಕ್ಸ್ ಸೇವನೆಯು ದೇಹದಿಂದ ವಿಷವನ್ನು ಹೊರಹಾಕುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಭಾವಿಸುತ್ತಾರೆ. ಆದರೆ ಇದು ಸಂಪೂರ್ಣವಾಗಿ ನಿಜ ಅಲ್ಲ.
ಡಿಟಾಕ್ಸ್ ಡ್ರಿಂಕ್ಸ್ ನಿಮ್ಮ ದೈನಂದಿನ ನೀರಿನ ಸೇವನೆಯನ್ನು ಹೆಚ್ಚಿಸುತ್ತವೆ ಎಂಬುದು ನಿಜ. ಆದರೆ ತೂಕ ನಷ್ಟವನ್ನು ಅವುಗಳ ಸಹಾಯದಿಂದ ಮಾಡಲು ಸಾಧ್ಯವಿಲ್ಲ. ಉತ್ತಮ ತೂಕ ನಷ್ಟಕ್ಕಾಗಿ, ನಿಮ್ಮ ಆಹಾರ, ವ್ಯಾಯಾಮ, ನಿದ್ರೆ ಮುಂತಾದ ಅನೇಕ ಪ್ರಮುಖ ಅಂಶಗಳ ಬಗ್ಗೆಯೂ ನೀವು ಗಮನ ಹರಿಸಬೇಕಾಗುತ್ತದೆ.
ಹೆಚ್ಚು ಡಿಟಾಕ್ಸ್ ಡ್ರಿಂಕ್ಸ್ ಸೇವಿಸುವುದು ಪ್ರಯೋಜನಕಾರಿ
ಸತ್ಯ: ದಿನವಿಡೀ ಡಿಟಾಕ್ಸ್ ಡ್ರಿಂಕ್ಸ್ ಸೇವಿಸಿದ್ರೆ, ಅದು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಆದರೆ ಇದು ಹಾಗಲ್ಲ. ನೀವು ಡಿಟಾಕ್ಸ್ ಡ್ರಿಂಕ್ಸ್ ತೆಗೆದುಕೊಳ್ಳುತ್ತಿದ್ದರೆ, ಅದರ ಪ್ರಮಾಣಕ್ಕೆ ಗಮನ ಕೊಡಿ. ಅಂದಹಾಗೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಡಿಟಾಕ್ಸ್ ಡ್ರಿಂಕ್ಸ್ ಸೇವಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಇದನ್ನು ನೀವು ಹಗಲಲ್ಲಿ ಕುಡಿಯಬಹುದು. ಆದ್ರೆ ಯಾವತ್ತೂ ನೀರಿನ ಬದಲು ಕೇವಲ ಡಿಟಾಕ್ಸ್ ಡ್ರಿಂಕ್ಸ್ ಸೇವಿಸೋ ತಪ್ಪನ್ನು ಎಂದಿಗೂ ಮಾಡಬೇಡಿ. ಸಾದಾ ನೀರು (normal water) ದೇಹಕ್ಕೆ ತುಂಬಾನೆ ಮುಖ್ಯವಾಗಿದೆ. ನೀವು ದಿನವಿಡೀ ಡಿಟಾಕ್ಸ್ ಡ್ರಿಂಕ್ಸ್ ಸೇವಿಸಿದರೆ, ವಿರುದ್ಧ ಫಲಿತಾಂಶಗಳನ್ನು ಎದುರಿಸಬೇಕಾಗಬಹುದು. ನೀವು ದಿನಕ್ಕೆ ಎರಡರಿಂದ ಮೂರು ಲೋಟ ಡಿಟಾಕ್ಸ್ ಡ್ರಿಂಕ್ಸ್ ಕುಡಿಯಬಹುದು, ಆದರೆ ಅದಕ್ಕಿಂತ ಹೆಚ್ಚಿನದನ್ನು ಸೇವಿಸಬೇಡಿ.
ಇನ್ನು ಮುಂದೆ ನೀವು ಡಿಟಾಕ್ಸ್ ಪಾನೀಯಗಳನ್ನು ಸಹ ಸೇವಿಸಬೇಕು ನಿಜ. ಆದರೆ ಅವುಗಳಿಗೆ ಸಂಬಂಧಿಸಿದ ಮಿಥ್ಯೆಗಳನ್ನು ನಿಜವೆಂದು ನಂಬಲೇಬೇಡಿ. ತೂಕ ಅಂತೂ ಇಳಿಯೋದಿಲ್ಲ, ಅದಕ್ಕಾಗಿ ಎಕ್ಸರ್ಸೈಸ್, ಆಹಾರದ ಕಡೆಗೆ ಗಮನ ಹರಿಸಬೇಕು. ಜೊತೆ ಸಾದಾ ನೀರನ್ನು ಕುಡಿಯೋದನ್ನು ಮುಂದುವರೆಸಬೇಕು.