ಕಣ್ಣಿನ ದೃಷ್ಟಿ ಹೆಚ್ಚಿಸಲು, ಬಿಪಿ ನಿಯಂತ್ರಿಸಲು ಕರಬೂಜ ಸಹಕಾರಿ!

First Published Mar 26, 2021, 2:13 PM IST

ಬೇಸಿಗೆ ಕಾಲದಲ್ಲಿ  ಮಾವು, ಲಿಚ್ಚಿ, ಕಲ್ಲಂಗಡಿ, ಕರಬೂಜ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಈ ಎಲ್ಲಾ ಬೇಸಿಗೆಯ ಋತುಮಾನದ ಹಣ್ಣುಗಳು. ಟೇಸ್ಟಿಯಾಗಿದ್ದು, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಇಂದು ನಾವು ಕರಬೂಜ ಹಣ್ಣಿನ ಸೇವನೆಯಿಂದ ಆಗುವ ಪ್ರಯೋಜನಗಳ ಬಗ್ಗೆ ಹೇಳುತ್ತಿದ್ದೇವೆ. ಕರಬೂಜ ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳ ಪವರ್ ಹೌಸ್ ಎಂದು ಪರಿಗಣಿಸಲಾಗಿದೆ. ಇದರಲ್ಲಿ ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ಅಂಶವೂ ಇದ್ದು, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.