ಚೆಂಡು ಹೂವಿನ ಟೀ ಚರ್ಮದ ರೋಗಕ್ಕೆ ಆಗಬಲ್ಲದು ಮದ್ದು!
ದೇವರ ಸಿಂಗಾರಕ್ಕೆ, ಮದುವೆ ಮನೆಯ ಸಿಂಗಾರಕ್ಕೆ ಚೆಂಡು ಹೂವು ಬಳಸುವುದನ್ನು ನೋಡಿದ್ದೇವೆ. ಆದರೆ ಇದರಿಂದ ಚಹಾ ಸಹ ತಯಾರಿಸಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಹೌದು, ಇದರ ದಳಗಳನ್ನು ಈಗಲೂ ಫೇಸ್ ಪ್ಯಾಕ್ ಮತ್ತು ಹೇರ್ ಮಾಸ್ಕ್ ಇತ್ಯಾದಿಗೆ ಬಳಸಲಾಗುತ್ತದೆ, ಆದರೆ ಚಹಾ ಮೂಲಕ ಅನೇಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡಬಹುದು. ಇದರ ಹೂವುಗಳಿಂದ ತಯಾರಿಸಿದ ಈ ಚಹಾವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಲಾಭಗಳು ಇರುತ್ತವೆ.
ಚೆಂಡು ಹೂವಿನ ಚಹಾ ಚರ್ಮ ಗುಣಪಡಿಸುವಿಕೆ, ಉರಿಯೂತ-ವಿರೋಧಿ, ಆಂಟಿಸೆಪ್ಟಿಕ್ ಮತ್ತು ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿದ. ಹಾಗಾದರೆ ಚೆಂಡು ಹೂವುಗಳಿಂದ ತಯಾರಿಸಿದ ಚಹಾದ ಪ್ರಯೋಜನಗಳೇನು?
ಚರ್ಮಕ್ಕೆ ಪ್ರಯೋಜನ
ಚೆಂಡು ಹೂವುಗಳಿಂದ ತಯಾರಿಸಿದ ಚಹಾ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದರ ನಿಯಮಿತ ಸೇವನೆಯು ಚರ್ಮದ ಅನೇಕ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಇದು ಚರ್ಮದ ಎಲ್ಲಾ ಸಮಸ್ಯೆಗಳನ್ನು ಗುಣಪಡಿಸುತ್ತದೆ ಮತ್ತು ಮೊಡವೆ, ಸ್ಕಿನ್ ಸಮಸ್ಯೆಗಳಿಗೆ ಮುಕ್ತಿ ಹಾಡುತ್ತೆ.
ಚರ್ಮ ಸುಟ್ಟ ಅಥವಾ ಗಾಯ ಇತ್ಯಾದಿಯಾದರೆ ಆಗ ಈ ಟೀ ಸೇವನೆಯಿಂದ ಚರ್ಮದ ಸಮಸ್ಯೆಗಳು ವೇಗವಾಗಿ ಗುಣವಾಗುತ್ತೆ. SPFನಿಂದ ಉಂಟಾಗುವ ಹಾನಿಯನ್ನು ಅದರ ಸೇವನೆಯಿಂದ ಗುಣಪಡಿಸಬಹುದು. ಇದು ಚರ್ಮವನ್ನು ವಯಸ್ಸಾಗದಂತೆ ರಕ್ಷಿಸುತ್ತದೆ ಮತ್ತು ಚರ್ಮದ ದದ್ದುಗಳಿಗೆ ಚಿಕಿತ್ಸೆ ಮಾಡುತ್ತೆ.
ಉತ್ಕರ್ಷಣ ನಿರೋಧಕಗಳು ಸಮೃದ್ಧ
ಚೆಂಡು ಹೂವುಗಳಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗುಣಗಳು ಒತ್ತಡದ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇದು ಗಡ್ಡೆಗಳು, ಉರಿಯೂತ, ಬೊಜ್ಜು, ಚಯಾಪಚಯ ಸಿಂಡ್ರೋಮ್ ಮತ್ತು ಟೈಪ್ 2 ಮಧುಮೇಹ ಇತ್ಯಾದಿಗಳನ್ನು ನಿಯಂತ್ರಿಸುತ್ತದೆ.
ಚೆಂಡು ಹೂವಿನಲ್ಲಿರುವ ಸಂಯುಕ್ತ ಅಂಶಗಳು ವಿಟಮಿನ್ ಎ ಆಂಟಿ ಆಕ್ಸಿಡೆಂಟ್‌ಗಳು ಚಹಾವನ್ನು ಆರೋಗ್ಯಕರವಾಗಿಸುತ್ತೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ನೋವು ಸೇರಿದಂತೆ ಹಲವು ಸಮಸ್ಯೆಗಳಿಂದ ಪರಿಹಾರ ಸಿಗುತ್ತೆ.
ಹಲ್ಲುನೋವನ್ನು ಕಡಿಮೆ ಮಾಡುತ್ತೆ
ಹಲ್ಲುನೋವಿನ ಸಂದರ್ಭದಲ್ಲಿ, ಚೆಂಡು ಹೂವಿನ ಚಹಾವನ್ನು ತಣ್ಣಗಾಗಿಸಿ ಸೇವಿಸಿ ಮತ್ತು ಅಥವಾ ಅದರಿಂದ ಬಾಯಿಯನ್ನು ತೊಳೆಯಿರಿ. ಸ್ವಲ್ಪ ಹೊತ್ತು ಟೀಯನ್ನು ಬಾಯಿಯಲ್ಲಿ ಇರಿಸಿ ಸ್ವಲ್ಪ ಸಮಯದ ನಂತರ ಬಾಯಿಯಿಂದ ಉಗುಳಿ. ಇದರಿಂದ ಹಲ್ಲುನೋವು ನಿವಾರಣೆಯಾಗುತ್ತೆ ಮತ್ತು ಹಲ್ಲಿನ ಸೋಂಕು ನಿವಾರಣೆಯಾಗುತ್ತದೆ.
ಬಾಯಿ ಹುಣ್ಣು ಮತ್ತು ಗಂಟಲು ನೋವನ್ನು ನಿವಾರಣೆ
ಆಂಟಿ ಸೆಪ್ಟಿಕ್ ಗುಣಗಳನ್ನು ಹೊಂದಿರುವ ಈ ಟೀ ಸೇವನೆಯಿಂದ ಬಾಯಿ ಹುಣ್ಣು ಮತ್ತು ಗಂಟಲು ನೋವು ನಿವಾರಣೆಯಾಗುತ್ತೆ.
ಚೆಂಡು ಹೂವಿನ ಚಹಾವನ್ನು ಈ ರೀತಿ ಮಾಡಿ
ಚೆಂಡು ಹೂವಿನ ಚಹಾ ತಯಾರಿಸಲು ನಮಗೆ 4 ರಿಂದ 5 ಚೆಂಡು ಹೂವುಗಳು, ಎರಡು ಲೋಟ ನೀರು ಮತ್ತು ಜೇನುತುಪ್ಪ ಬೇಕು. ಅದನ್ನು ತಯಾರಿಸಲು, ಮೊದಲು ಒಂದು ಬಾಣಲೆಗೆ ನೀರನ್ನು ಸೇರಿಸಿ ಮತ್ತು ಕುದಿಯಲು ಇರಿಸಿ. ಚೆಂಡು ಹೂವು ದಳವನ್ನು ಈ ನೀರಿಗೆ ಹಾಕಿ. ನೀರು ಚೆನ್ನಾಗಿ ಕುದಿಯಲು ಬಿಡಿ ಮತ್ತು ಕನಿಷ್ಠ 5 ನಿಮಿಷಗಳ ಕಾಲ ಮುಚ್ಚಿ ಮತ್ತು ಕುದಿಯಲು ಬಿಡಿ.
ನೀರು ಚೆನ್ನಾಗಿ ಕುದಿಯಲ್ಪಟ್ಟ ಬಳಿಕ, ಚೆಂಡುಹೂವಿನ ದಳಗಳ ಬಣ್ಣವು ನೀರಿನಲ್ಲಿ ಕಾಣಿಸಿಕೊಳ್ಳುತ್ತದೆ. ನೀರು ಅರ್ಧದಷ್ಟು ಕಡಿಮೆ ಆಗುವವರೆಗೆ ಅದನ್ನು ಕುದಿಸಿ. ಗ್ಯಾಸ್ ಆಫ್ ಮಾಡಿ ಮತ್ತು ಜೇನುತುಪ್ಪವನ್ನು ಸೇರಿಸಿ, ಸರ್ವ್ ಮಾಡಿ.
ಯಾವಾಗ ಸೇವಿಸಬೇಕು?
ಈ ಟೀಯನ್ನು ದಿನಕ್ಕೆ 2 ಬಾರಿ ಸೇವಿಸಿ. ಬೆಳಿಗ್ಗೆ ಒಂದು ಬಾರಿ ಮತ್ತು ಊಟವಾದ ನಂತರ ಕನಿಷ್ಠ 1 ಗಂಟೆ ನಂತರ ಒಮ್ಮೆ ತೆಗೆದುಕೊಳ್ಳಬಹುದು. ಆದರೆ ನಿಮಗೆ ಈಗಾಗಲೇ ಆರೋಗ್ಯಕರ ಸಮಸ್ಯೆ ಇದ್ದರೆ, ವೈದ್ಯರನ್ನು ಸಂಪರ್ಕಿಸಿದ ನಂತರ ಅದನ್ನು ಸೇವಿಸಿ.