MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • Low Sperm Count: ಅಪ್ಪನಾಗದ ನೋವಿಗೆ ಕಾರಣ ಬರೀ ಸಿಗರೇಟ್ ತಂಬಾಕಲ್ಲ, ಇದ್ರಿಂದ್ಲೂ ಕಡಿಮೆ ಆಗ್ತಿದೆ ಸ್ಪರ್ಮ್ ಕೌಂಟ್

Low Sperm Count: ಅಪ್ಪನಾಗದ ನೋವಿಗೆ ಕಾರಣ ಬರೀ ಸಿಗರೇಟ್ ತಂಬಾಕಲ್ಲ, ಇದ್ರಿಂದ್ಲೂ ಕಡಿಮೆ ಆಗ್ತಿದೆ ಸ್ಪರ್ಮ್ ಕೌಂಟ್

Male Fertility : ಸ್ಪರ್ಮ್ ಕೌಂಟ್‌ ಕಡಿಮೆಯಾಗಿ ಅನೇಕ ಪುರುಷರು ಅಪ್ಪನಾಗುವ ಅವಕಾಶ ಕಳೆದುಕೊಳ್ತಿದ್ದಾರೆ. ಇದಕ್ಕೆ ಬರೀ ತಂಬಾಕು ಕಾರಣ ಆಗ್ತಿಲ್ಲ. ಇದಕ್ಕೆ ಯಾವೆಲ್ಲ ಕಾರಣ ಇದೆ ? ಪರಿಹಾರ ಏನು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

2 Min read
Author : Roopa Hegde
Published : Jul 06 2026, 12:26 PM IST
Share this Photo Gallery
  • FB
  • TW
  • Linkdin
  • Whatsapp
16
ಅಪ್ಪನಾಗುವ ಕನಸು
Image Credit : AI

ಅಪ್ಪನಾಗುವ ಕನಸು

ಇತ್ತೀಚಿನ ವರ್ಷಗಳಲ್ಲಿ ಪುರುಷರಲ್ಲಿ ಕಡಿಮೆ ವೀರ್ಯಾಣುಗಳ ಸಂಖ್ಯೆ (Low Sperm Count) ಸಮಸ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಕೇವಲ ಧೂಮಪಾನ ಅಥವಾ ತಂಬಾಕು ಮಾತ್ರ ಕಾರಣ ಎಂದು ಹಲವರು ಭಾವಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ಅನಾರೋಗ್ಯಕರ ಜೀವನಶೈಲಿ, ಪೌಷ್ಟಿಕಾಂಶದ ಕೊರತೆ, ಮಾನಸಿಕ ಒತ್ತಡ, ಬೊಜ್ಜು ಹಾಗೂ ಕೆಲವು ಆರೋಗ್ಯ ಸಮಸ್ಯೆಗಳೂ ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತವೆ. ಸಮಯಕ್ಕೆ ಸರಿಯಾಗಿ ಗಮನಹರಿಸದಿದ್ದರೆ, ಮಗುವಿನ ಕನಸು ನನಸಾಗುವ ಸಾಧ್ಯತೆ ದೂರವಾಗುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸ್ಪರ್ಮ್‌ ಕೌಂಟ್ ಕಡಿಮೆ ಅಂದ್ರೇನು?
Image Credit : AI

ಸ್ಪರ್ಮ್‌ ಕೌಂಟ್ ಕಡಿಮೆ ಅಂದ್ರೇನು?

ಒಂದು ಮಿಲಿಲೀಟರ್ ವೀರ್ಯದಲ್ಲಿ 15 ಮಿಲಿಯನ್ಗಿಂತ ಕಡಿಮೆ ವೀರ್ಯಾಣುಗಳಿದ್ದರೆ ಅದನ್ನು ವೈದ್ಯಕೀಯವಾಗಿ ಒಲಿಗೋಸ್ಪರ್ಮಿಯಾ (Oligospermia) ಎಂದು ಕರೆಯಲಾಗುತ್ತದೆ. ವೀರ್ಯಾಣುಗಳ ಸಂಖ್ಯೆ ಕಡಿಮೆಯಾದರೆ ನೈಸರ್ಗಿಕವಾಗಿ ಗರ್ಭಧರಿಸುವ ಸಾಧ್ಯತೆ ಇಳಿಮುಖವಾಗಬಹುದು. ಕೆಲವರಲ್ಲಿ ವೀರ್ಯದಲ್ಲಿ ವೀರ್ಯಾಣುಗಳೇ ಇಲ್ಲದಿರುವ ಅಜೋಸ್ಪರ್ಮಿಯಾ (Azoospermia) ಸಮಸ್ಯೆಯೂ ಕಂಡುಬರಬಹುದು.

Related Articles

Related image1
ಬೆಳಗ್ಗೆ ನೋಡಿದ್ರೆ 57 ವರ್ಷದವ, ಮಧ್ಯಾಹ್ನಕ್ಕೆ 25ರ ಯುವಕನಂತೆ ಬಿಂದಾಸ್ ಆಗಿರುವ ವ್ಯಕ್ತಿಯ ವಿಡಿಯೋ ವೈರಲ್
Related image2
ಮಳೆಗಾಲದಲ್ಲಿ ದೇಹ ಸೂಚಿಸುವ ಈ ಲಕ್ಷಣ ಕಡೆಗಣಿಸಬೇಡಿ, ಇದು ಹೊಟ್ಟೆ ಸೋಂಕಿನ ಅಲರ್ಟ್
36
ಕಡಿಮೆ ಸ್ಪರ್ಮ್ ಲಕ್ಷಣಗಳು
Image Credit : AI

ಕಡಿಮೆ ಸ್ಪರ್ಮ್ ಲಕ್ಷಣಗಳು

ಸ್ಪರ್ಮ್‌ ಕೌಂಟ್‌ ಕಡಿಮೆ ಆಗಿದೆ ಎಂಬುದನ್ನು ಪತ್ತೆ ಮಾಡೋದು ಸುಲಭವಲ್ಲ. ಯಾವುದೇ ವಿಶೇಷ ಲಕ್ಷಣ ಕಾಣಿಸೋದಿಲ್ಲ. ದೀರ್ಘಕಾಲ ಪ್ರಯತ್ನಿಸಿದರೂ ಪಾಲಕರಾಗದಿರುವುದು, ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ನಿಮಿರುವಿಕೆಯ ಸಮಸ್ಯೆ, ಖಾಸಗಿ ಅಂಗದಲ್ಲಿ ನೋವು ಅಥವಾ ಊತ, ಹಾರ್ಮೋನುಗಳ ಅಸಮತೋಲನಕ್ಕೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

46
ಸ್ಪರ್ಮ್‌ ಕೌಂಟ್‌ ಕಡಿಮೆಯಾಗಲು ಕಾರಣ
Image Credit : AI

ಸ್ಪರ್ಮ್‌ ಕೌಂಟ್‌ ಕಡಿಮೆಯಾಗಲು ಕಾರಣ

ಸ್ಪರ್ಮ್‌ ಕೌಂಟ್‌ ಕಡಿಮೆ ಆಗಲು ಅನೇಕ ಕಾರಣವಿದೆ. ಧೂಮಪಾನ ಮತ್ತು ತಂಬಾಕು ಸೇವನೆ ಒಂದು ಕಾರಣವಾಗಿದೆ. ಆದ್ರೆ ಇದೇ ಅಂತಿಮವಲ್ಲ. ಧೂಮಪಾನ ಮತ್ತು ತಂಬಾಕು ಸೇವನೆ ಮಾಡದ ಪುರುಷರಲ್ಲೂ ಸ್ಪರ್ಮ್‌ ಕೌಂಟ್‌ ಕಡಿಮೆಯಾಗುವ ಸಾಧ್ಯತೆ ಇದೆ. ಅದಕ್ಕೆ ಅತಿಯಾದ ಮದ್ಯಪಾನ ಕೂಡ ಒಂದು ಕಾರಣ. ಜೊತೆಗೆ ಬೊಜ್ಜು ಮತ್ತು ವ್ಯಾಯಾಮದ ಕೊರತೆ, ನಿರಂತರ ಮಾನಸಿಕ ಒತ್ತಡ, ಹಾರ್ಮೋನುಗಳ ಅಸಮತೋಲನ, ಥೈರಾಯ್ಡ್ ಸಮಸ್ಯೆಗಳು, ವೆರಿಕೋಸೆಲೆ ಮತ್ತು ಕೆಲವು ಸೋಂಕುಗಳು, ಕೆಲವು ಔಷಧಿಗಳ ದೀರ್ಘಕಾಲದ ಬಳಕೆ ಇದಕ್ಕೆ ಕಾರಣವಾಗುತ್ತದೆ.

56
ಇದಕ್ಕೆ ಚಿಕಿತ್ಸೆ
Image Credit : AI

ಇದಕ್ಕೆ ಚಿಕಿತ್ಸೆ

ಸ್ಪರ್ಮ್ ಕೌಂಟ್‌ ಕಡಿಮೆ ಇದೆ ಅಂದ್ರೆ ಅದು ಶಾಶ್ವತ ಬಂಜೆತನ ಎಂದರ್ಥವಲ್ಲ. ಕಾರಣವನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದ ಅನೇಕ ಪುರುಷರು ಪಾಲಕರಾಗಿದ್ದಾರೆ. ಅಗತ್ಯವಿದ್ದರೆ ಔಷಧಿ, ಶಸ್ತ್ರಚಿಕಿತ್ಸೆ ಅಥವಾ ಫಲವತ್ತತೆ ಚಿಕಿತ್ಸೆಯ ಮೂಲಕವೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

66
ಸ್ಪರ್ಮ್‌ ಕೌಂಟ್‌ ಹೆಚ್ಚಳಕ್ಕೆ ಏನು ಮಾಡ್ಬೇಕು?
Image Credit : AI

ಸ್ಪರ್ಮ್‌ ಕೌಂಟ್‌ ಹೆಚ್ಚಳಕ್ಕೆ ಏನು ಮಾಡ್ಬೇಕು?

ಪೌಷ್ಟಿಕ ಆಹಾರ ಸೇವನೆ, ಪ್ರತಿದಿನ ವ್ಯಾಯಾಮ, ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದಲ್ಲದೆ ಸಾಕಷ್ಟು ನಿದ್ರೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಅತ್ಯಗತ್ಯ. ಧೂಮಪಾನ, ತಂಬಾಕು ಮತ್ತು ಅತಿಯಾದ ಮದ್ಯಪಾನದಿಂದ ದೂರ ಇರಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಪುರುಷರು
ಪುರುಷರ ಆರೋಗ್ಯ
ಆರೋಗ್ಯ ಸಮಸ್ಯೆಗಳು

Latest Videos
Recommended Stories
Recommended image1
ಮಳೆಗಾಲದಲ್ಲಿ ದೇಹ ಸೂಚಿಸುವ ಈ ಲಕ್ಷಣ ಕಡೆಗಣಿಸಬೇಡಿ, ಇದು ಹೊಟ್ಟೆ ಸೋಂಕಿನ ಅಲರ್ಟ್
Recommended image2
ಬೆಳಗ್ಗೆ ನೋಡಿದ್ರೆ 57 ವರ್ಷದವ, ಮಧ್ಯಾಹ್ನಕ್ಕೆ 25ರ ಯುವಕನಂತೆ ಬಿಂದಾಸ್ ಆಗಿರುವ ವ್ಯಕ್ತಿಯ ವಿಡಿಯೋ ವೈರಲ್
Recommended image3
Honey Facts: 3000 ವರ್ಷವಾದರೂ ಜೇನುತುಪ್ಪ ಕೆಡುವುದಿಲ್ಲವೇ? ಇಲ್ಲಿದೆ ಅಚ್ಚರಿಯ ಸತ್ಯ!
Related Stories
Recommended image1
ಬೆಳಗ್ಗೆ ನೋಡಿದ್ರೆ 57 ವರ್ಷದವ, ಮಧ್ಯಾಹ್ನಕ್ಕೆ 25ರ ಯುವಕನಂತೆ ಬಿಂದಾಸ್ ಆಗಿರುವ ವ್ಯಕ್ತಿಯ ವಿಡಿಯೋ ವೈರಲ್
Recommended image2
ಮಳೆಗಾಲದಲ್ಲಿ ದೇಹ ಸೂಚಿಸುವ ಈ ಲಕ್ಷಣ ಕಡೆಗಣಿಸಬೇಡಿ, ಇದು ಹೊಟ್ಟೆ ಸೋಂಕಿನ ಅಲರ್ಟ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved