Parkinson's Disease: ಮೆದುಳಿನ ನರವನ್ನೇ ನಾಶ ಮಾಡುವ ಅಪಾಯಕಾರಿ ರೋಗ ಪಾರ್ಕಿನ್ಸನ್
ಪಾರ್ಕಿನ್ಸನ್ ಒಂದು ಅಪಾಯಕಾರಿ ಕಾಯಿಲೆ. ಇದರಿಂದ ಬಳಲುತ್ತಿರುವ ವ್ಯಕ್ತಿಯು ತನ್ನ ದೇಹದ ಚಲನೆಯ ಮೇಲೆ ನಿಯಂತ್ರಣ ಹೊಂದಿರುವುದಿಲ್ಲ. ಪಾರ್ಕಿನ್ಸನ್ ರೋಗಲಕ್ಷಣಗಳು ಆರಂಭಿಕ ಹಂತದಲ್ಲಿ ಹೆಚ್ಚು ತೀವ್ರವಾಗಿರುವುದಿಲ್ಲ. ಈ ಕಾರಣದಿಂದಾಗಿ ಈ ರೋಗವನ್ನು ಪತ್ತೆಹಚ್ಚಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದು ಗುಣಪಡಿಸಲಾಗದ ರೋಗವಾಗಿದೆ. ಆದರೆ, ಅದರ ರೋಗಲಕ್ಷಣಗಳನ್ನು ಔಷಧಿಗಳ ಮೂಲಕ ಕಡಿಮೆ ಮಾಡಬಹುದು.
ಪಾರ್ಕಿನ್ಸನ್ ರೋಗವು (Parkinson's Disease) ಒಂದು ಅಸ್ವಸ್ಥತೆಯಾಗಿದ್ದು, ಇದರಲ್ಲಿ ಅದರ ರೋಗಲಕ್ಷಣಗಳು ಸಮಯದ ನಂತರ ತೀವ್ರ ಸ್ವರೂಪ ಪಡೆಯುತ್ತವೆ. ಈ ರೋಗದಲ್ಲಿ, ಮೆದುಳಿನ ನರಗಳು ಒಡೆಯಲು ಪ್ರಾರಂಭಿಸುತ್ತವೆ ಮತ್ತು ನಾಶವಾಗುತ್ತವೆ. ಆದ್ದರಿಂದ, ಈ ರೋಗದ ಪರಿಣಾಮವು ನರವ್ಯೂಹ ಅಥವಾ ನರಗಳಿಂದ ನಿಯಂತ್ರಿಸಲ್ಪಡುವ ದೇಹದ ಎಲ್ಲಾ ಭಾಗಗಳ ಮೇಲೆ ಪರಿಣಾಮ ಬೀರುತ್ತೆ. ತಜ್ಞರು ಈ ರೋಗಕ್ಕೆ ಆನುವಂಶಿಕ ಅಂಶಗಳು ಮತ್ತು ಕಲುಷಿತ ಪರಿಸರ ಕಾರಣವೆನ್ನುತ್ತಾರೆ. ಈ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗದಿದ್ದರೂ, ಔಷಧಿಗಳಿಂದ ಅದರ ರೋಗಲಕ್ಷಣಗಳನ್ನು ನಿಯಂತ್ರಿಸಲು ಸಾಧ್ಯವಿದೆ.
ಈ ರೊಗದ ಕುರಿತು ನಡೆಸಿದ ಅಧ್ಯಯನದಲ್ಲಿ, ಪಾರ್ಕಿನ್ ಸನ್ ಸಣ್ಣ ಕರುಳಿನಿಂದ ಪ್ರಾರಂಭವಾಗುತ್ತದೆ ಎಂದು ತಿಳಿದುಬಂದಿದೆ. ಈ ರೋಗವು ಕರುಳುಗಳ ಮೂಲಕ ಮೆದುಳನ್ನು ತಲುಪುತ್ತದೆ ಮತ್ತು ನರಗಳ ಗುಂಪನ್ನು ರೂಪಿಸುತ್ತದೆ, ಇದು ದೈನಂದಿನ ದಿನಚರಿಗೆ ಅಡ್ಡಿಪಡಿಸುವ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಈ ರೋಗದ ಅಪಾಯದಲ್ಲಿ ಯಾರಾದರೂ ಇರಬಹುದು, ಆದ್ದರಿಂದ ಅದರ ಆರಂಭಿಕ ರೋಗಲಕ್ಷಣಗಳು ಮತ್ತು ಅದನ್ನು ತಡೆಗಟ್ಟುವ ಮಾರ್ಗಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.
ಪಾರ್ಕಿನ್ಸನ್ ನ ಆರಂಭಿಕ ಲಕ್ಷಣಗಳ ಬಗ್ಗೆ ತಿಳಿಯಿರಿ (Early Symptoms of Parkinson): ಮೇಯೋ ಕ್ಲಿನಿಕ್ ಪ್ರಕಾರ, ಪಾರ್ಕಿನ್ಸನ್ ಕಾಯಿಲೆಯ ಆರಂಭಿಕ ಹಂತಗಳಲ್ಲಿ, ನಿಮ್ಮ ಮುಖವು ಯಾವುದೇ ರೀತಿಯ ಲಕ್ಷಣಗಳನ್ನು ಅಥವಾ ಬದಲಾವಣೆಗಳನ್ನು ತೋರಿಸುವುದಿಲ್ಲ. ಅಲ್ಲದೆ, ನೀವು ನಡೆಯುವಾಗ ನಿಮ್ಮ ತೋಳುಗಳು ತೂಗಾಡುವುದಿಲ್ಲ, ಸಾಮಾನ್ಯ ನಡಿಗೆಯ ಸಮಯದಲ್ಲಿರುವಂತೆ ಇರುತ್ತದೆ. ಆದರೆ ಸಮಯ ಕಳೆದಂತೆ ಲಕ್ಷಣಗಳು ಬದಲಾಗುತ್ತವೆ. ಅವುಗಳ ಬಗ್ಗೆ ತಿಳಿಯೋಣ.
ಪಾರ್ಕಿನ್ಸನ್ ರೋಗಿಯಲ್ಲಿ ಈ ಚಿಹ್ನೆಗಳು ಕಂಡುಬರುತ್ತವೆ: ಮಲಬದ್ಧತೆ, ನಿದ್ರಾಹೀನತೆ, ಖಿನ್ನತೆ, ಆಲೋಚಿಸಲು ಕಷ್ಟವಾಗುವುದು, ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗೋದಿಲ್ಲ, ಲಾಲಾರಸ, ದೇಹದಲ್ಲಿ ಬಿಗಿತ, ನಡೆಯಲು ಕಷ್ಟವಾಗುವುದು, ಸ್ನಾಯು ದೌರ್ಬಲ್ಯ, ಅಗಿಯಲು ಮತ್ತು ನುಂಗಲು ಕಷ್ಟವಾಗುವುದು, ಅನಿಯಂತ್ರಿತ ಮೂತ್ರಕೋಶ, ಲೈಂಗಿಕ ಅಪಸಾಮಾನ್ಯ ಕ್ರಿಯೆ
ಈ ಜನರು ಪಾರ್ಕಿನ್ಸನ್ ನ ಅಪಾಯದಲ್ಲಿದ್ದಾರೆ: ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ವಯಸ್ಸಾದಂತೆ ಪಾರ್ಕಿನ್ಸನ್ ಕಾಯಿಲೆಯ ಅಪಾಯವು ಹೆಚ್ಚಾಗುತ್ತದೆ. ಅಂದಹಾಗೆ, 60 ವರ್ಷ ವಯಸ್ಸಿನ ಜನರಲ್ಲಿ ಈ ರೋಗದ ಅಪಾಯವು ಹೆಚ್ಚಾಗಿರುತ್ತದೆ. ಆದರೆ 20 ವರ್ಷ ವಯಸ್ಸಿನಂತಹ ವ್ಯಕ್ತಿಯು ಸಹ ಈ ಸಮಸ್ಯೆಯನ್ನು ಹೊಂದುವ ಸಾಧ್ಯತೆ ಇದೆ. ಅಲ್ಲದೆ ಈ ರೋಗವು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಕಾಣಿಸುವ ರೋಗವಾಗಿದೆ.
ಪಾರ್ಕಿನ್ಸನ್ಸ್ ಪತ್ತೆ ಹಚ್ಚುವ ಪರೀಕ್ಷೆಗಳು: ಪಾರ್ಕಿನ್ಸನ್ ಸಂಬಂಧಿತ ಯಾವುದೇ ರೋಗಲಕ್ಷಣಗಳನ್ನು ನೀವು ಸ್ವತಃ ಗಮನಿಸಿದರೆ ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ರೋಗವನ್ನು ಪತ್ತೆಹಚ್ಚಲು ವೈದ್ಯರು ಕೆಲವು ಪರೀಕ್ಷೆಗಳನ್ನು (Medical Tests) ಮಾಡಲು ಶಿಫಾರಸು ಮಾಡಬಹುದು.
ಪಾರ್ಕಿನ್ಸನ್ ನ ರೋಗನಿರ್ಣಯಕ್ಕಾಗಿ ಈ ಪರೀಕ್ಷೆಗಳನ್ನು ಮಾಡಲಾಗುತ್ತದೆ: ರಕ್ತ ಪರೀಕ್ಷೆ (Blood Test), CT ಸ್ಕ್ಯಾನ್, ಡಿಎನ್ ಎ ಪರೀಕ್ಷೆ (DNA Test), MRI, PET ಸ್ಕ್ಯಾನ್
ಈ ಕ್ರಮಗಳಿಂದ ಪಾರ್ಕಿನ್ಸನ್ ಕಾಯಿಲೆ ತಡೆಗಟ್ಟಿ: ಮಾಯೋ ಕ್ಲಿನಿಕ್ ಪ್ರಕಾರ, ನಿಖರವಾದ ಕಾರಣವನ್ನು ತಿಳಿಯದ ಕಾರಣ ಪಾರ್ಕಿನ್ಸನ್ ಕಾಯಿಲೆಯನ್ನು ತಡೆಗಟ್ಟಲು ಯಾವುದೇ ಮಾರ್ಗವಿಲ್ಲ. ಆದರೆ ನಿಯಮಿತ ಏರೋಬಿಕ್ ವ್ಯಾಯಾಮವು (Aerobic Exercise) ಪಾರ್ಕಿನ್ಸನ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಸಂಶೋಧನೆಗಳು ತೋರಿಸಿವೆ.