Brain fog : ಮೆದುಳನ್ನು ಗಂಭೀರವಾಗಿ ಕಾಡೋ ಈ ಸಮಸ್ಯೆಗೆ ಪರಿಹಾರ ಏನು?
ನೀವು ಎಂದಾದರೂ ಒಂದು ವಿಚಾರವನ್ನು ನೆನಪಿಟ್ಟುಕೊಳ್ಳಲು ಕಷ್ಟಪಡುವ ಅಥವಾ ಅಸ್ಪಷ್ಟವಾದ ಆಲೋಚನೆಯನ್ನು ಹೊಂದಿರುವ ಪರಿಸ್ಥಿತಿಯನ್ನು ಎದುರಿಸಿದ್ದೀರಾ? ಇದು ಬ್ರೈನ್ ಫಾಗ್ ಸಮಸ್ಯೆಯಾಗಿರಬಹುದು. ಈ ಬ್ರೈನ್ ಫಾಗ್ ಒಂದು ವೈದ್ಯಕೀಯ ಸ್ಥಿತಿಯಲ್ಲ, ಬದಲಿಗೆ ವ್ಯಕ್ತಿಯು ಯೋಚಿಸಲು ಕಷ್ಟ, ಒಂದು ವಿಚಾರದ ಮೇಲೆ ಕೇಂದ್ರೀಕರಿಸಲು ಅಸಮರ್ಥತೆ, ತನ್ನ ಆಲೋಚನೆಗಳಿಂದ ಸೂಕ್ತವಾದ ವಾಕ್ಯಗಳನ್ನು ರಚಿಸಲು ಅಸಮರ್ಥನಾಗಿರುವ ಮತ್ತು ನೇರವಾಗಿ ಯೋಚಿಸಲು ಅಸಮರ್ಥರಾಗಿರುತ್ತಾರೆ. ಈ ಸಮಸ್ಯೆಗೆ ಕಳಪೆ ಜೀವನ ಶೈಲಿಯೂ ಕಾರಣವಾಗಿರಬಹುದು.
ಬದಲಾಗುತ್ತಿರುವ ಲೈಫ್ ಸ್ಟೈಲ್ ಮತ್ತು ಹೆಚ್ಚುತ್ತಿರುವ ಮಾನಸಿಕ ಒತ್ತಡದಿಂದಾಗಿ, ಜನರು ಇತ್ತೀಚಿನ ದಿನಗಳಲ್ಲಿ ಬ್ರೈನ್ ಫಾಗ್(Brain fog) ನಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬ್ರೈನ್ ಫೋಗ್ ಸ್ವತಃ ಯಾವುದೇ ಮೆಡಿಕಲ್ ಕಂಡೀಷನಲ್ಲ ಆದ್ರೆ ಇತರ ಮೆಡಿಕಲ್ ಕಂಡೀಶನ್ ಗಳ ಲಕ್ಷಣವಾಗಿದೆ. ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
ಬ್ರೈನ್ ಫೋಗ್, ಜ್ಞಾಪಕ ಶಕ್ತಿ ನಷ್ಟ(Memory loss), ಮಾನಸಿಕ ಸ್ಪಷ್ಟತೆಯ ಕೊರತೆ, ಗಮನ ಕೇಂದ್ರೀಕರಿಸುವಲ್ಲಿ ತೊಂದರೆ, ಏಕಾಗ್ರತೆಯ ಅಸಮರ್ಥತೆಯನ್ನು ಒಳಗೊಂಡಿರುವ ಒಂದು ರೀತಿಯ ಅರಿವಿನ ಕಾಯಿಲೆಯಾಗಿದೆ. ಹಾಗಾಗಿ ವ್ಯಕ್ತಿ ಯಾವಾಗಲೂ ಗೊಂದಲಕ್ಕೊಳಗಾಗುತ್ತಾನೆ ಮತ್ತು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಅಸಮರ್ಥನಾಗುತ್ತಾನೆ. ಈ ರೋಗಕ್ಕೆ ಸಂಬಂಧಿಸಿದ ಪ್ರತಿಯೊಂದು ಅಂಶ ಅರ್ಥಮಾಡಿಕೊಳ್ಳಲು ಮುಂದೆ ಓದಿ.
ಬ್ರೈನ್ ಫೋಗ್ ಸಮಸ್ಯೆಗೆ ಕಾರಣಗಳು
ದೀರ್ಘಕಾಲದ ಒತ್ತಡವು ರಕ್ತದೊತ್ತಡವನ್ನು ಹೆಚ್ಚಿಸುತ್ತೆ, ರೋಗನಿರೋಧಕ ಶಕ್ತಿಯನ್ನು(Immunity power) ದುರ್ಬಲಗೊಳಿಸುತ್ತೆ ಮತ್ತು ಖಿನ್ನತೆಯನ್ನು ಪ್ರಚೋದಿಸುತ್ತೆ. ಇದು ಮಾನಸಿಕ ಆಯಾಸಕ್ಕೂ ಕಾರಣವಾಗಬಹುದು. ಇದರಿಂದ ಬ್ರೈನ್ ಫಾಗ್ ಸಮಸ್ಯೆ ಕಾಡುತ್ತದೆ ಎಂದು ಹೇಳಲಾಗಿದೆ.
ಬ್ರೈನ್ ಫೋಗ್ ಇದ್ದಾಗ, ಮೆದುಳಿಗೆ ಯೋಚಿಸಲು(Thinking), ಅರ್ಥಮಾಡಿಕೊಳ್ಳಲು, ತನ್ನ ಮಾತನ್ನು ಉಳಿಸಿಕೊಳ್ಳಲು ಮತ್ತು ಕೇಂದ್ರೀಕರಿಸಲು ಕಷ್ಟವಾಗುತ್ತೆ. ಹಾಗಾಗಿ ಬ್ರೈನ್ ಫೋಗ್ ಬಗ್ಗೆ ಮೊದಲೇ ತಿಳಿದುಕೊಳ್ಳೋದು ಒಳ್ಳೇದು. ಇದನ್ನು ನೀವು ಇಗ್ನೋರ್ ಮಾಡಿದ್ರೆ ಮುಂದೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಆದುದರಿಂದ ಈ ಬಗ್ಗೆ ಎಚ್ಚರ ವಹಿಸಿ.
ನಿದ್ರೆಯ ಕೊರತೆ(Sleeplessness) ನಿಮ್ಮ ಮೆದುಳಿನ ಕಾರ್ಯನಿರ್ವಹಣೆಗೆ ಅಡ್ಡಿಯಾಗಬಹುದು. ಪ್ರತಿದಿನ 8 ರಿಂದ 9 ಗಂಟೆಗಳ ಕಾಲ ಮಲಗೋದು ಅತ್ಯಗತ್ಯ. ತುಂಬಾ ಕಡಿಮೆ ನಿದ್ರೆ ಮಾಡೋದರಿಂದ ಕಡಿಮೆ ಫೋಕಸ್ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಬ್ರೈನ್ ಫೋಗ್ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತೆ.
ಬ್ರೈನ್ ಫೋಗ್ ನ ರೋಗಲಕ್ಷಣ
ನಿದ್ರಾಹೀನತೆ
ತಲೆನೋವು(Head ache)
ಲೊ ಎನರ್ಜಿ ಅಥವಾ ಆಯಾಸ
ದುರ್ಬಲಗೊಂಡ ಅರಿವಿನ ಕಾರ್ಯ
ಮೂಡ್ ಸ್ವಿಂಗ್
ಕಿರಿಕಿರಿ
ಮರೆಯುವ ಅಭ್ಯಾಸ
ಏಕಾಗ್ರತೆಯಲ್ಲಿ ತೊಂದರೆ
ಆಲೋಚನೆಗಳ ಕೊರತೆ
ದುಃಖ ಅನುಭವಿಸೋದು ಅಥವಾ ಒಂಟಿತನ ಅನುಭವಿಸೋದು
ಇವೆಲ್ಲವೂ ಬ್ರೈನ್ ಫಾಗ್ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ.
ಬ್ರೈನ್ ಫೋಗ್ ಗೆ ಚಿಕಿತ್ಸೆ ಮತ್ತು ತಡೆಗಟ್ಟುವಿಕೆ ಬಗ್ಗೆ ತಿಳಿಯೋಣ
ಬ್ರೈನ್ ಫೋಗ್ ಗೆ ಚಿಕಿತ್ಸೆಯು ಬ್ರೈನ್ ಫಾಗ್ ಹೇಗೆ ಉಂಟಾಯಿತು ಅನ್ನೋ ಕಾರಣವನ್ನು ಅವಲಂಬಿಸಿರುತ್ತೆ . ಜೀವನಶೈಲಿಯ ಬದಲಾವಣೆಗಳು ಸಹ ಈ ಪರಿಸ್ಥಿತಿಯಲ್ಲಿ ಸಹಾಯ ಮಾಡಬಹುದು.
ಕಂಪ್ಯೂಟರ್ ಮತ್ತು ಮೊಬೈಲ್ ಫೋನ್ ಗಳಲ್ಲಿ(Mobile phone) ಕಡಿಮೆ ಸಮಯವನ್ನು ಕಳೆಯಿರಿ. ಇದಲ್ಲದೇ ನೀವು ಯಾವಾಗಲೂ ಪಾಸಿಟಿವ್ ಥಿಂಕಿಂಗ್ ಇಟ್ಟುಕೊಳ್ಳಿ, ಒತ್ತಡವನ್ನು ಕಡಿಮೆ ಮಾಡಿ.
ಸಾಕಷ್ಟು ನಿದ್ರೆ(Sleep) ಮಾಡಿ - ದಿನಕ್ಕೆ 7-8 ಗಂಟೆಗಳ ಕಾಲ ಮಲಗೋದು ಮುಖ್ಯ. ರಾತ್ರಿ ಬೇಗನೆ ಹೋಗಿ ಮಲಗಲು ಪ್ರಯತ್ನಿಸಿ. ಇದರಿಂದ ಹೆಚ್ಚು ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. ನಮ್ಮ ದೇಹ ಸರಿಯಾಗಿ ಕೆಲಸ ಮಾಡಲು ಚೆನ್ನಾಗಿ ನಿದ್ರೆ ಮಾಡೋದು ತುಂಬಾನೆ ಮುಖ್ಯವಾಗಿದೆ. ಆದುದರಿಂದ ಯಾವಾಗಲೂ ದಿನಕ್ಕೆ 7-8 ಗಂಟೆಗಳ ಕಾಲ ಮಲಗೋದನ್ನು ರೂಢಿಸಿಕೊಳ್ಳೋದು ಉತ್ತಮ.
ನಿಮ್ಮ ಆಹಾರಕ್ರಮವನ್ನು ಬದಲಾಯಿಸಿಕೊಳ್ಳಿ. ಅಂದರೆ ಜಂಕ್ ಫುಡ್(Junk food), ಆಯ್ಲಿ ಫುಡ್ ಬಿಟ್ಟು ನೀವು ದೇಹಕ್ಕೆ ಪೋಷಣೆ ನೀಡುವಂತಹ ಆಹಾರವನ್ನು ಸೇವಿಸೋದು ಮುಖ್ಯ.
ನಿಯಮಿತವಾಗಿ ವ್ಯಾಯಾಮ ಮಾಡಿ. ವ್ಯಾಯಾಮ ಮಾಡೋದರಿಂದ ದೇಹವು ಸಕ್ರಿಯವಾಗಿರಲು ಸಾಧ್ಯವಾಗುತ್ತೆ. ದೇಹವು ಆಕ್ಟೀವ್ ಆಗಿದ್ದರೆ ಉತ್ತಮ ಆರೋಗ್ಯವನ್ನು ಪಡೆಯಲು ಸಾಧ್ಯವಾಗುತ್ತೆ.
ಮದ್ಯಪಾನ, ಧೂಮಪಾನ(Smoke) ಮತ್ತು ಹೆಚ್ಚು ಕಾಫಿ ಕುಡಿಯೋದನ್ನು ತಪ್ಪಿಸಿ. ಇವು ಆರೋಗ್ಯಕ್ಕೆ ಹಾನಿಕಾರಕ. ಇವುಗಳಿಗೆ ಹೆಚ್ಚು ಹೆಚ್ಚು ದಾಸರಾದಷ್ಟು ನಾವು ಅನಾರೋಗ್ಯಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಇದಲ್ಲದೇ ನೀವು ಸಂತೋಷ ಸಿಗೋ ಕೆಲಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಇದರಿಂದ ಮನಸ್ಸು ಆರೋಗ್ಯದಿಂದಿರುತ್ತದೆ. ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ, ದೈಹಿಕ ಆರೋಗ್ಯವೂ ಚೆನ್ನಾಗಿರುತ್ತೆ.