ತೂಕ ಹೆಚ್ಚಾದ್ರೆ ಮಾತ್ರವಲ್ಲ, ಕಡಿಮೆ ತೂಕದಿಂಲೂ ಕಾಡುತ್ತೆ ಅನಾರೋಗ್ಯ
ಸ್ಲಿಮ್-ಟ್ರಿಮ್ ಆಗಿರೋದು ಒಂದು ತರ ಆದ್ರೆ, ತೂಕ ಕಳಕೊಂಡು ತೆಳ್ಳಗಾಗೋದು ಇನ್ನೊಂದು ತರ. ಹೆಚ್ಚು ತೆಳ್ಳಗಾಗೋದು ಆರೋಗ್ಯಕ್ಕೆ ಒಳ್ಳೆಯದಲ್ಲ. ದೇಹದ ಈ ಸ್ಥಿತಿಯು ಅನೇಕ ರೋಗಗಳನ್ನು ಆಹ್ವಾನಿಸುತ್ತೆ. ಅದರ ಬಗ್ಗೆ ಇಲ್ಲಿ ವಿವರವಾಗಿ ತಿಳಿದುಕೊಳ್ಳೋಣ.
ಹೆಚ್ಚಿನ ಜನರು ಅಧಿಕ ತೂಕ (Weight) ಅನೇಕ ರೋಗಗಳಿಗೆ ಮೂಲ ಎಂಬ ಭ್ರಮೆ ಹೊಂದಿರುತ್ತಾರೆ. ಇದು ಸರಿ. ಆದರೆ ಸಂಪೂರ್ಣವಾಗಿ ಅಲ್ಲ, ಕಡಿಮೆ ತೂಕ ಹೊಂದಿರೋದು ಸಹ ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡಬಹುದು. ಸ್ಥೂಲಕಾಯದಂತೆಯೇ, ತೆಳ್ಳಗಿರೋದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಕಾರಣದಿಂದಾಗಿ, ಕೆಲವರು ಆತ್ಮವಿಶ್ವಾಸ ಕಳಕೊಳ್ಳುತ್ತಾರೆ, ದೇಹದ ಮೇಲೆ ಯಾವುದೇ ಬಟ್ಟೆಗಳು ಚೆನ್ನಾಗಿ ಕಾಣೋದಿಲ್ಲ ಮತ್ತು ಕೆಲವೊಮ್ಮೆ ಜನರು ಖಿನ್ನತೆಗೆ ಬಲಿಯಾಗುತ್ತಾರೆ. ತೆಳ್ಳಗಾಗಲು ಅನೇಕ ಕಾರಣಗಳಿರಬಹುದು, ಆದರೆ ಅದು ಯಾವೆಲ್ಲಾ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬುದರ ಬಗ್ಗೆ ತಿಳಿಯೋಣ.
ಇಮ್ಮ್ಯೂನ್ ಸಿಸ್ಟಮ್ (Immune system) ದುರ್ಬಲಗೊಳ್ಳೋದು
ದುರ್ಬಲ ದೇಹದಿಂದಾಗಿ, ಹವಾಮಾನದಲ್ಲಿ ಸ್ವಲ್ಪ ಬದಲಾವಣೆ ಉಂಟಾದಾಗ ಅಂತಹ ಜನರು ಬಹಳ ಬೇಗ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇದು ವೀಕ್ ಇಮ್ಮ್ಯೂನ್ ಸಿಸ್ಟಮ್ ಅನ್ನು ಸೂಚಿಸುತ್ತೆ. ಹಾಗಾಗಿ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿವಹಿಸಬೇಕು.
ಮೂಳೆಗಳು(Bone) ವೀಕ್ ಆಗೋದು
ತೆಳ್ಳಗಿನ ವ್ಯಕ್ತಿಯ ದೇಹದಲ್ಲಿ ಕೊಬ್ಬು ಸಹ ಕಡಿಮೆ ಇರುತ್ತೆ. ಈ ಕಾರಣದಿಂದಾಗಿ ಸಣ್ಣ ಗಾಯವಾದರೂ ಮೂಳೆಗಳು ಮುರಿಯುವ ಅಪಾಯವಿದೆ. ಆದ್ದರಿಂದ ಹೆಚ್ಚು ತೆಳ್ಳಗಿರೋರು ಹೆಚ್ಚು ಎಚ್ಚರದಿಂದಿರಬೇಕು. ಇಲ್ಲವಾದರೆ ಹೆಚ್ಚು ಸಮಸ್ಯೆಗೆ ಒಳಗಾಗುವ ಮತ್ತು ಮೂಳೆ ಮುರಿತಕ್ಕೆ ಒಳಗಾಗುವ ಸಾಧ್ಯತೆ ಇದೆ.
ಹೃದಯ ಸಮಸ್ಯೆಗಳ(Heart problems) ಅಪಾಯ
ತೂಕ ಹೆಚ್ಚಳಕ್ಕೆ ಕಾರಣವಾಗಬಹುದಾದ ಎಲ್ಲವನ್ನೂ ಅತಿಯಾಗಿ ತಿನ್ನಲು ಜನರು ತೆಳ್ಳಗಿನ ಜನರಿಗೆ ಸಲಹೆ ನೀಡುತ್ತಾರೆ. ಈ ಕಾರಣದಿಂದಾಗಿ ಅನೇಕ ಬಾರಿ ಅಂತಹ ಜನರು ಜಂಕ್ ಫುಡ್ ಮತ್ತು ಕರಿದ ಆಹಾರ ತಿನ್ನಲು ಪ್ರಾರಂಭಿಸುತ್ತಾರೆ. ಈ ಕಾರಣದಿಂದಾಗಿ, ಅವರ ದೇಹದಲ್ಲಿ ವಿಸೆರಲ್ ಕೊಬ್ಬು ಹೆಚ್ಚಾಗುತ್ತೆ. ಇದು ಹೃದಯದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತೆ
ಆಯಾಸ
ಕಡಿಮೆ ತೂಕದ ಜನರು ಶಕ್ತಿಯ ಕೊರತೆಯನ್ನು ಹೆಚ್ಚು ಹೊಂದುತ್ತಾರೆ. ಇದರಿಂದಾಗಿ ಅವರು ಕೆಲವು ಕೆಲಸ (Work) ಮಾಡಿದ್ರೆ ಸಾಕು ದಣಿಯುತ್ತಾರೆ. ಇದರಿಂದಾಗಿ ಅವರು ಬಯಸಿದರೂ ಅನೇಕ ಬಾರಿ ವ್ಯಾಯಾಮ ಮಾಡಲು ಸಾಧ್ಯವಾಗೋದಿಲ್ಲ, ಇದು ಇತರ ಸಮಸ್ಯೆಗಳಿಗೆ ಕಾರಣವಾಗುತ್ತೆ.
ಕಿರಿಕಿರಿ
ಜನರು ತೆಳ್ಳಗಿನ ವ್ಯಕ್ತಿಯನ್ನು ವಿವಿಧ ಹೆಸರುಗಳಿಂದ ಕರೆಯುತ್ತಾರೆ, ಅವನನ್ನು ಕೀಟಲೆ ಮಾಡುತ್ತಾರೆ, ಇದರಿಂದಾಗಿ ಅವನ ಸ್ವಭಾವವು ಕಿರಿಕಿರಿಯಾಗುತ್ತೆ ಮತ್ತು ಕೆಲವೊಮ್ಮೆ ಜನರು ಖಿನ್ನತೆಗೆ (Depression) ಒಳಗಾಗುತ್ತಾರೆ. ಹೆಚ್ಚು ಸಂದರ್ಭಗಳಲ್ಲಿ ಇಂತಹ ಜನರು ಮುಜುಗರಕ್ಕೊಳಗಾಗಿ, ಜನರೊಂದಿಗೆ ಬೆರೆತುಕೊಳ್ಳಲು ಹಿಂಜರೆಯುತ್ತಾರೆ.
ಗರ್ಭಾವಸ್ಥೆಯಲ್ಲಿನ (Pregnancy) ಸಮಸ್ಯೆಗಳು
ಕಡಿಮೆ ತೂಕವು ಮಹಿಳೆಯರಿಗೆ ಹೆಚ್ಚು ಅಪಾಯಕಾರಿ. ಇದು ಗರ್ಭಾವಸ್ಥೆಯಲ್ಲಿ ಅವರಿಗೆ ಸಾಕಷ್ಟು ಸಮಸ್ಯೆಗಳನ್ನು ಉಂಟು ಮಾಡಬಹುದು. ಮಹಿಳೆಯೊಂದಿಗೆ, ಇದು ಮಗುವಿನ ಮೇಲೂ ಪರಿಣಾಮ ಬೀರುತ್ತೆ. ಮಗು ಅಪೌಷ್ಟಿಕತೆಗೆ ಬಲಿಯಾಗಬಹುದು. ಹಾಗಾಗಿ ಒಳ್ಳೆಯ ಆಹಾರ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ.