Asianet Suvarna News Asianet Suvarna News

ಡೈಲಿ ವಾಕ್‌ ಮಾಡ್ತಿದ್ರೂ ತೂಕ ಕಡಿಮೆಯಾಗ್ತಿಲ್ವಾ ? ಕಾರಣವೇನು ತಿಳ್ಕೊಳ್ಳಿ

ತೂಕವನ್ನು ಕಳಿಸಿಕೊಳ್ಳಲು ವಾಕಿಂಗ್‌, ವರ್ಕೌಟ್, ಡಯೆಟ್ ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯ ವಿಧಾನವನ್ನು ಅನುಸರಿಸುತ್ತಾರೆ. ಹೆಚ್ಚಿನವರು ತೂಕ ಇಳಿಸಿಕೊಳ್ಳಲು ಅನುಸರಿಸುವ ಮುಖ್ಯ ಮಾರ್ಗವೆಂದರೆ ವಾಕಿಂಗ್‌. ಯಾಕೆಂದರೆ ಇದು ಸರಳವಾಗಿದೆ ಮತ್ತು ಸುಲಭವಾಗಿದೆ. ಆದರೂ ಕೆಲವೊಬ್ಬರು ಎಷ್ಟು ವಾಕಿಂಗ್ ಮಾಡಿದರೂ ತೂಕ ಇಳಿಕೆಯಾಗುವುದಿಲ್ಲ ಅದಕ್ಕೇನು ಕಾರಣ ?

Have You Ever Wondered Why Walking Is Not Making You Lose Weight Vin
Author
First Published Dec 5, 2022, 12:23 PM IST

ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯೆಂದರೆ ತೂಕ ಹೆಚ್ಚಾಗುವುದು (Weight gain) ಮತ್ತು ಬೊಜ್ಜಿನ ಸಮಸ್ಯೆ. ಇದು ಕೇವಲ ಕಳಪೆ ಆಹಾರ ಪದ್ಧತಿ ಅಥವಾ ಜೀವನಶೈಲಿ (Lifestyle)ಯಿಂದ ಉಂಟಾಗುವುದಿಲ್ಲ. ಬದಲಿಗೆ ಔಷಧೀಯ ಅಡ್ಡಪರಿಣಾಮಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದಲೂ ಸಂಭವಿಸಬಹುದು. ತೂಕವನ್ನು ಕಳೆದುಕೊಳ್ಳಲು ಜನರು ತಮ್ಮ ಜೀವನಶೈಲಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಮಾಡಲು ವಿಫಲರಾಗುತ್ತಾರೆ. ಹೀಗಾಗಿ ತೂಕವನ್ನು ಕಳೆದುಕೊಳ್ಳುವುದು ಕಷ್ಟವಾಗುತ್ತದೆ ಮತ್ತು ಬೊಜ್ಜಿನ ಸಮಸ್ಯೆ (Obesity) ಕಾಣಿಸಿಕೊಳ್ಳುತ್ತದೆ

ತೂಕವನ್ನು ಕಳಿಸಿಕೊಳ್ಳಲು ವಾಕಿಂಗ್‌, ವರ್ಕೌಟ್, ಡಯೆಟ್ ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯ ವಿಧಾನವನ್ನು ಅನುಸರಿಸುತ್ತಾರೆ. ಆದರೆ ಎಲ್ಲರಿಗೂ ಆ ವಿಧಾನದಿಂದ ತೂಕ ಕಡಿಮೆಯಾಗಬೇಕು ಅಂತ ಏನಿಲ್ಲ. ದೇಹ ಪ್ರಕಾರಕ್ಕೆ (Body type) ತಕ್ಕಂತೆ ಈ ವೈಟ್ ಲಾಸ್ ಟೆಕ್ನಿಕ್ ಪ್ರಯೋಜನಕ್ಕೆ ಬರುತ್ತೆ. ಹೆಚ್ಚಿನವರು ತೂಕ ಇಳಿಸಿಕೊಳ್ಳಲು ಅನುಸರಿಸುವ ಮುಖ್ಯ ಮಾರ್ಗವೆಂದರೆ ವಾಕಿಂಗ್‌. ಯಾಕೆಂದರೆ ಇದು ಸರಳವಾಗಿದೆ ಮತ್ತು ಸುಲಭವಾಗಿದೆ. ಉಳಿದ ಎಲ್ಲಾ ವೈಟ್ ಲಾಸ್ ವಿಧಾನಗಳು ಹೆಚ್ಚಿನ ಏಕಾಗ್ರತೆ ಮತ್ತು ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ವಾಕಿಂಗ್ ಹಾಗಲ್ಲ ನಿರ್ಧಿಷ್ಟ ಸಮಯದಲ್ಲಿ , ನಿರ್ಧಿಷ್ಟ ಗಂಟೆಗಳ ಕಾಲ ನಡೆದರಷ್ಟೇ ಸಾಕಾಗುತ್ತದೆ. ಕೆಲವೊಬ್ಬರು ಬೆಳಗ್ಗೆ, ರಾತ್ರಿ ಊಟದ ನಂತರ ಹೀಗೆ ವಾಕಿಂಗ್ ಮಾಡುವ ಅಭ್ಯಾಸ (Habit) ಹೊಂದಿರುತ್ತಾರೆ. ಆದರೂ ಕೆಲವೊಬ್ಬರಿಗೆ ತೂಕ ಇಳಿಕೆಯಾಗುವುದಿಲ್ಲ.

Health Tips: ಊಟ ಮಾಡಿದ್‌ ತಕ್ಷಣ ಕುಳಿತುಕೊಳ್ಳೋದು ಒಳ್ಳೆದಾ? ವಾಕಿಂಗ್‌ ಮಾಡ್ಬೋದಾ?

ಹೀಗೆ ತೂಕ ಇಳಿಸಿಕೊಳ್ಳಲು ಪ್ರತಿದಿನ ಕಷ್ಟಪಟ್ಟು ನಡೆಯುತ್ತಿದ್ದರೂ ನಿರೀಕ್ಷಿತ ಫಲಿತಾಂಶ ಲಭಿಸುತ್ತಿಲ್ಲ ಅಂತ ಕೊರಗುತ್ತಿರುವವರಲ್ಲಿ ನೀವೂ ಒಬ್ಬರೇ.  ಸರಿ, ವಾಕಿಂಗ್ ಮೂಲಕ ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುವಾಗ ನೀವು ಮಾಡುತ್ತಿರುವ ತಪ್ಪುಗಳು ಇದಕ್ಕೆ ಕಾರಣವಾಗ್ತಿರಬಹುದು. ಹಾಗಿದ್ರೆ ವಾಕಿಂಗ್ ಮಾಡುವಾಗ ಒಬ್ಬರು ಗಮನಿಸಿಕೊಳ್ಳಬೇಕಾದ ಅಂಶವೇನು ತಿಳಿಯಿರಿ.

ವಾಕಿಂಗ್ ಮಾಡುವಾಗ ಇಂಥಾ ವಿಚಾರಗಳ ಬಗ್ಗೆ ಗಮನವಿರಲಿ

ಸರಿಯಾದ ಪಾದರಕ್ಷೆಗಳನ್ನು ಆರಿಸಿ: ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳುವ ಉದ್ದೇಶದಿಂದ ವಾಕಿಂಗ್ ಮಾಡುವುದಾದರೆ ಜನರು ಹೆಚ್ಚು ವೇಗವಾಗಿ ನಡೆಯುತ್ತಾರೆ. ಹೀಗಾಗಿ ಸರಿಯಾದ ಪಾದರಕ್ಷೆಗಳನ್ನು (Footwear) ಆಯ್ದುಕೊಳ್ಳುವುದು ಮುಖ್ಯ. ವಾಕಿಂಗ್ ಮಾಡುವಾಗ ಬಿಗಿಯಾದ ಅಥವಾ ಅನಾನುಕೂಲವಾದ ಬೂಟುಗಳನ್ನು ಧರಿಸಿದರೆ ಇದು ಪಾದಗಳನ್ನು ನೋಯಿಸಬಹುದು ಅಥವಾ ಗಾಯಗೊಳಿಸಬಹುದು. ಹೀಗಾಗಿ ನಡೆಯಲು ಹೆಚ್ಚು ಕಂಫರ್ಟೆಬಲ್ ಅನಿಸುವ ಸರಿಯಾದ ಪಾದರಕ್ಷೆಯನ್ನು ಆರಿಸುವುದು ಬಹಳ ಅವಶ್ಯಕ.

ಆರಾಮದಾಯಕ ಬಟ್ಟೆಗಳನ್ನು ಧರಿಸಿ: ವಾಕ್ ಮಾಡುವಾಗ ಬಿಗಿಯಾದ ಬಟ್ಟೆಗಳನ್ನು (Cloth) ಧರಿಸುವುದು ಅನಾನೂಕೂಲ ಉಂಟು ಮಾಡಬಹುದು. ಹೀಗಾಗಿ ನೀವು ಆಯ್ಕೆ ಮಾಡಿದ ಉಡುಪನ್ನು ನೋಡಿಕೊಳ್ಳಬೇಕು ಮತ್ತು ವಾಕ್ ಮಾಡುವಾಗ ಸಡಿಲವಾದ, ಆರಾಮದಾಯಕ ಮತ್ತು ಉಸಿರಾಡುವ ಬಟ್ಟೆಗಳನ್ನು ಧರಿಸಬೇಕು. ಇದು ನಿಮಗೆ ಮುಕ್ತವಾಗಿ ಚಲಿಸಲು ಸಹಾಯ ಮಾಡುತ್ತದೆ. ನಿಮ್ಮ ವಾಕಿಂಗ್ ಅನುಭವವನ್ನು ಉತ್ತಮಗೊಳಿಸುತ್ತದೆ.

Walk for Diabetics: ಮಧುಮೇಹಿಗಳು ಯಾವ ಸಮಯದಲ್ಲಿ ವಾಕಿಂಗ್‌ ಮಾಡಿದ್ರೆ ಬೆಸ್ಟ್?

ವಾಕ್ ಮಾಡುವ ರೀತಿ: ವಾಕ್ ಮಾಡುವಾಗ ನಿಮ್ಮ ತೋಳುಗಳನ್ನು ಹಿಂದಕ್ಕೆ ಮತ್ತು ಮುಂದಕ್ಕೆ ತಿರುಗಿಸಲು ತಜ್ಞರು ಶಿಫಾರಸು ಮಾಡುತ್ತಾರೆ. ಇದು ವೇಗ ಮತ್ತು ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಾಮೂಲಿಯಾಗಿ ನಡೆಯುವುದು ತೂಕ ಇಳಿಕೆಗೆ ಯಾವುದೇ ರೀತಿಯಲ್ಲಿ ನೆರವಾಗುವುದಿಲ್ಲ.

ನಡೆಯುವಾಗ ಮಾತನಾಡುವುದು: ವಾಕಿಂಗ್ ನಿಮ್ಮ ದೈಹಿಕ ಆದರೆ ಮಾನಸಿಕ ಆರೋಗ್ಯದ ಸುಧಾರಣೆಗೆ ಸಂಪೂರ್ಣವಾಗಿ ಮೀಸಲಿಡಬೇಕಾದ ಸಮಯವಾಗಿದೆ. ವಾಕ್ ಮಾಡುವಾಗ ನೀವು ಯಾವುದೇ ರೀತಿಯ ಸಂಭಾಷಣೆಯನ್ನು (Communication) ತಪ್ಪಿಸಿದರೆ ಅದು ಹೆಚ್ಚು ಉಲ್ಲಾಸಕರವಾಗಿರುತ್ತದೆ. ಆದರೆ ಹೆಚ್ಚಿನವರು ವಾಕ್ ಮಾಡುವಾಗ ನಿರಂತರವಾಗಿ ಮಾತನಾಡುತ್ತಲೇ ಇರುತ್ತಾರೆ. ಅಥವಾ ಫೋನ್ ಸಂಭಾಷಣೆಯಲ್ಲಿ ನಿರತರಾಗುತ್ತಾರೆ. ಇಂಥಾ ಅಭ್ಯಾಸ ಒಳ್ಳೆಯದಲ್ಲ.

ವಾಕ್ ಮಾಡುವಾಗ ಸರಿಯಾದ ಪಾನೀಯ ಕುಡಿಯಿರಿ: ದೇಹಕ್ಕೆ ನೀರು (Water) ಯಾವಾಗಲೂ ಅತ್ಯುತ್ತಮ ಪಾನೀಯವಾಗಿದೆ. ಅದು ದೇಹವನ್ನು ಹೈಡ್ರೀಕರಿಸಿ ಇಡುತ್ತೆ ಅಥವಾ ತೂಕವನ್ನು ಕಳೆದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ನಿಮ್ಮ ನಡಿಗೆಯ ಸಮಯದಲ್ಲಿ ಸೋಡಾವನ್ನು ಕುಡಿಯಬೇಡಿ, ಏಕೆಂದರೆ ಇದು ದೇಹದಲ್ಲಿ ಸಕ್ಕರೆ ಮತ್ತು ಕ್ಯಾಲೊರಿಗಳನ್ನು ಹೆಚ್ಚಿಸುತ್ತದೆ. ವಾಕ್ ಮಾಡುವ ಸಮಯದಲ್ಲಿ ಈ ಎಲ್ಲಾ ವಿಚಾರಗಳನ್ನು ಗಮದಲ್ಲಿಟ್ಟುಕೊಳ್ಳುವ ಮೂಲಕ ಬೇಗ ತೂಕವನ್ನು ಇಳಿಸಿಕೊಳ್ಳಬಹುದು.

Follow Us:
Download App:
  • android
  • ios