ಏನಿದು Idiot Syndrome? ಚಿತ್ರ ವಿಚಿತ್ರ ಕಾಯಿಲೆ ನಿಮ್ಮನ್ನೂ ಕಾಡಿರಬಹುದು ನೋಡಿ
Idiot Syndrome ಹೆಸರಿನ ವಿಚಿತ್ರ ರೋಗವು ಬೆಳಕಿಗೆ ಬಂದಿದೆ. ಇದರಲ್ಲಿ, ಜನರು ಅನಾರೋಗ್ಯಕ್ಕೆ ಒಳಗಾದ ತಕ್ಷಣ ಗೂಗಲ್ ಮಾಡೋದಕ್ಕೆ ಶುರು ಮಾಡ್ತಾರೆ. ಈ ರೋಗ ನಿಮಗೂ ಕಾಡಿರಬಹುದು ನೋಡಿ.

ಇತ್ತೀಚಿನ ದಿನಗಳಲ್ಲಿ Idiot Syndrome ಎನ್ನುವ ಈ ಮಾನಸಿಕ ಕಾಯಿಲೆ ವೇಗವಾಗಿ ಹರಡುತ್ತಿದೆ. ಆದರೆ, ಈ ಕಾಯಿಲೆ ಏನಪ್ಪಾ ಅನ್ನೋದನ್ನು ಅದರ ಹೆಸರಿನಿಂದ ಅರ್ಥಮಾಡಿಕೊಳ್ಳುವುದು ಕಷ್ಟ. ಆದರೆ ಇದು ಒಬ್ಬ ವ್ಯಕ್ತಿಯನ್ನು ಬಲವಂತದ ಚಿಂತೆ ಮತ್ತು ಆತಂಕದಿಂದ ತುಂಬೋದಂತೂ ಖಚಿತ. ಇದರ ಬಗ್ಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಈ ವಿಶೇಷ ಸಿಂಡ್ರೋಮ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
ಏನಿದು Idiot Syndrome?
ಇದರಲ್ಲಿ, ಒಬ್ಬ ವ್ಯಕ್ತಿಯು ಪ್ರತಿ ಪ್ರಶ್ನೆಗೆ ಉತ್ತರಗಳಿಗಾಗಿ ಗೂಗಲ್ ಸರ್ಚ್ ಮಾಡಲು ಪ್ರಾರಂಭಿಸುತ್ತಾನೆ. ಇಂದು ಬಹುತೇಕ ಎಲ್ಲರೂ ಇದನ್ನು ಮಾಡುತ್ತಾರೆ ಅಲ್ವಾ? ಅದರಲ್ಲೇನಿದೆ ವಿಶೇಷ ಎಂದು ನೀವು ಯೋಚಿಸುತ್ತಿರಬಹುದು, ಹಾಗಾದರೆ ಇದು ಹೇಗೆ ರೋಗವಾಯಿತು? ಅಲ್ವಾ? ವಿಷ್ಯ ಏನಪ್ಪಾ ಅಂದ್ರೆ, ಗೂಗಲ್ನಲ್ಲಿ ಲಭ್ಯವಿರುವ ವಿವಿಧ ವಿಷಯಗಳ ಬಗ್ಗೆ ಸಾಕಷ್ಟು ತಪ್ಪು ಮಾಹಿತಿ ಮತ್ತು ಡೇಟಾ ಇದ್ದರೂ ಸಹ, ಒಬ್ಬ ವ್ಯಕ್ತಿಯು ಗೂಗಲ್ ಒದಗಿಸಿದ ಮಾಹಿತಿಯನ್ನು ಕುರುಡಾಗಿ ನಂಬುತ್ತಾರೆ ಅಲವಾ?. ಅಂತಹ ಪರಿಸ್ಥಿತಿಯಲ್ಲಿ, ಆ ವ್ಯಕ್ತಿಗೆ ಈಡಿಯಟ್ ಸಿಂಡ್ರೋಮ್ ಇದೆ ಎನ್ನಲಾಗುತ್ತದೆ. ಇದರಲ್ಲಿ, ವ್ಯಕ್ತಿಯು ಯಾವುದೇ ಕಾಯಿಲೆಗೆ ವೈದ್ಯರನ್ನು ಸಂಪರ್ಕಿಸುವುದಕ್ಕಿಂತ ಹೆಚ್ಚಾಗಿ ಗೂಗಲ್ ಸಲಹೆ ಕೇಳಿ, ಅದರಂತೆ ನಡೆದುಕೊಳ್ಳುತ್ತಾರೆ.
Idiot Syndrome ಲಕ್ಷಣಗಳೇನು?
- ಒಬ್ಬ ವ್ಯಕ್ತಿಯು ಅನಾರೋಗ್ಯದಿಂದ ಬಳಲುತ್ತಿರುವಾಗ ವೈದ್ಯರ ಪ್ರತಿಕ್ರಿಯೆಗಿಂತ ಗೂಗಲ್ನ ಉತ್ತರಗಳನ್ನು ಹೆಚ್ಚು ಅವಲಂಬಿಸಿದ್ದರೆ, ಅದು ಈಡಿಯಟ್ ಸಿಂಡ್ರೋಮ್ನ ಲಕ್ಷಣವಾಗಿರಬಹುದು.
- ಒಬ್ಬ ವ್ಯಕ್ತಿಯು ಪ್ರತಿ ಸಣ್ಣ ವಿಷಯಕ್ಕಾಗಿ ಗೂಗಲ್ ಸರ್ಚ್ ಮಾಡೋದು, ಇದು ಸಹ ಈಡಿಯಟ್ ಸಿಂಡ್ರೋಮ್ನ ಲಕ್ಷಣವಾಗಿದೆ.
- ಇದಲ್ಲದೇ ವ್ಯಕ್ತಿ ತನ್ನ ಪ್ರಶ್ನೆಗಳಿಗೆ ಅನುಗುಣವಾಗಿ ಗೂಗಲ್ನಲ್ಲಿ ಉತ್ತರಗಳನ್ನು ಕಂಡುಕೊಳ್ಳದಿದ್ದರೆ ಮತ್ತು ಇದರಿಂದ ಆತಂಕ ಅಥವಾ ಖಿನ್ನತೆಗೆ ಒಳಗಾದರೆ, ಇದು ಸಹ ಈಡಿಯಟ್ ಸಿಂಡ್ರೋಮ್ನ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ.
- ಗೂಗಲ್ ನೀಡಿದ ತಪ್ಪು ಮಾಹಿತಿಯನ್ನು ನಿಜವೆಂದು ನಂಬುವುದು ಮತ್ತು ಸರಿಯಾದ ಮಾಹಿತಿಯನ್ನು ನಿರಾಕರಿಸುವುದು ಸಹ ಈಡಿಯಟ್ ಸಿಂಡ್ರೋಮ್ನ ಲಕ್ಷಣವಾಗಿದೆ.
ಅದನ್ನು ತಪ್ಪಿಸುವುದು ಹೇಗೆ?
- ಗೂಗಲ್ ಯಾವಾಗಲೂ ಸರಿಯಾದ ಉತ್ತರವನ್ನು ನೀಡುವುದಿಲ್ಲ ಅನ್ನೋದನ್ನು ಜನ ಅರ್ಥಮಾಡಿಕೊಳ್ಳಬೇಕು.
- ಆರೋಗ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ, ಗೂಗಲ್ ಕೇಳುವ ಬದಲು ವೈದ್ಯರನ್ನು ಸಂಪರ್ಕಿಸಿ.
- Google ನಲ್ಲಿನ ಮಾಹಿತಿಯನ್ನು ಜನರೊಂದಿಗೆ ಹಂಚಿಕೊಳ್ಳುವ ಮೂಲಕ, ಅದು ಸರಿಯೋ, ತಪ್ಪೋ ಅನ್ನೋದನ್ನು ತಿಳಿದುಕೊಳ್ಳಬಹುದು.
- ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಿಗಾಗಿ, ಗೂಗಲ್ ಅನ್ನು ಅವಲಂಬಿಸುವ ಬದಲು ವೈದ್ಯರನ್ನು ಸಂಪರ್ಕಿಸಿ.
ಗೂಗಲ್ ಅನ್ನು ಎಂದಿಗೂ ಕುರುಡಾಗಿ ನಂಬಬೇಡಿ.