Insulin resistance ಬಗ್ಗೆ ಎಚ್ಚರದಿಂದಿರಿ… ಇಲ್ಲಾಂದ್ರೆ ಆರೋಗ್ಯಕ್ಕೆ ಮಾರಕ
ಮಧುಮೇಹ ಮತ್ತು ಇನ್ಸುಲಿನ್ ನಡುವೆ ನೇರ ಸಂಬಂಧವಿದೆ. ಟೈಪ್ 1 ಡಯಾಬಿಟಿಸ್ ಇದ್ದರೆ, ರೋಗಿಯ ದೇಹ ಇನ್ಸುಲಿನ್ ತಯಾರಿಸೋದನ್ನು ನಿಲ್ಲಿಸುತ್ತೆ ಅಥವಾ ಕೆಲವೊಮ್ಮೆ ಅದನ್ನು ಬಹಳ ಕಡಿಮೆ ಪ್ರಮಾಣದಲ್ಲಿ ತಯಾರಿಸಲಾಗುತ್ತೆ. ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತೆ. ಟೈಪ್ 2 ಮಧುಮೇಹದಲ್ಲಿ, ರೋಗಿಯ ದೇಹದಲ್ಲಿ ಇನ್ಸುಲಿನ್ ತಯಾರಿಸಲಾಗುತ್ತೆ, ಆದರೆ ಪ್ರತಿರೋಧದ ಕಾರಣದಿಂದಾಗಿ, ಅದನ್ನು ಸರಿಯಾಗಿ ಬಳಸಲಾಗೋದಿಲ್ಲ. ಇನ್ಸುಲಿನ್ ಉತ್ಪಾದಿಸಿದರೆ ಮತ್ತು ದೇಹದಲ್ಲಿ ಸರಿಯಾಗಿ ಬಳಸಿದರೆ, ಆಗ ಮಧುಮೇಹದ ಅಪಾಯವಿರೋದಿಲ್ಲ .
ಇನ್ಸುಲಿನ್ ರೆಸಿಸ್ಟನ್ಸ್ (Insulin resistance)ಎಂದರೇನು ಮತ್ತು ಈ ಸಮಸ್ಯೆ ಯಾಕೆ ಕಾಣಿಸಿಕೊಳ್ಳುತ್ತೆ?. ಅದರ ರೋಗಲಕ್ಷಣಗಳು ಯಾವುವು ಮತ್ತು ತಡೆಗಟ್ಟುವ ಮಾರ್ಗಗಳು ಯಾವುವು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ನೀವು ಹುಡುಕಾಡುತ್ತಿದ್ದರೆ, ಇಲ್ಲಿದೆ ಸಂಪೂರ್ಣ ಮಾಹಿತಿ. ಅವುಗಳ ಬಗ್ಗೆ ತಿಳಿಯೋಣ.
ಇನ್ಸುಲಿನ್ ರೆಸಿಸ್ಟನ್ಸ್ ಎಂದರೇನು?
ಇನ್ಸುಲಿನ್ ರೆಸಿಸ್ಟನ್ಸ್ ಒಂದು ಕಾಂಪ್ಲೆಕ್ಸ್ ಸ್ಥಿತಿಯಾಗಿದ್ದು, ಇದರಲ್ಲಿ ಸ್ನಾಯು, ಕೊಬ್ಬು ಮತ್ತು ಪಿತ್ತಜನಕಾಂಗದ ಜೀವಕೋಶ ಇನ್ಸುಲಿ ನ್(Insulin) ಗೆ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ. ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟವು ಕ್ಷೀಣಿಸುತ್ತೆ ಮತ್ತು ಅನೇಕ ಸಮಸ್ಯೆಗಳನ್ನುಂಟು ಮಾಡುತ್ತೆ. ಇನ್ಸುಲಿನ್ ನಮ್ಮ ಪ್ಯಾಂಕ್ರಿಯಾಟಿಕ್ ಗ್ರಂಥಿಯಲ್ಲಿ ತಯಾರಿಸಿದ ಹಾರ್ಮೋನ್ ಆಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತೆ.
ದೇಹದಲ್ಲಿ ಇನ್ಸುಲಿನ್ ರೆಸಿಸ್ಟನ್ಸ್ ರೂಪುಗೊಳ್ಳಲು ಪ್ರಾರಂಭಿಸಿದಾಗ, ಈ ಹಾರ್ಮೋನ್ ಸರಿಯಾಗಿ ಕೆಲಸ ಮಾಡೋದಿಲ್ಲ ಮತ್ತು ಇದು ದೀರ್ಘಕಾಲದವರೆಗೆ ಸಂಭವಿಸಿದರೆ, ಮಧುಮೇಹ ಉಂಟಾಗುತ್ತೆ. ಈ ಕಾರಣದಿಂದಾಗಿ, ಅಧಿಕ ರಕ್ತದೊತ್ತಡ(Blood pressure) ಮತ್ತು ಅಪಧಮನಿಗಳು ಗಟ್ಟಿಯಾಗುವ ಅಪಾಯವೂ ಹೆಚ್ಚಾಗುತ್ತೆ. ಅನೇಕ ಜನರಲ್ಲಿ, ಇನ್ಸುಲಿನ್ ರೆಸಿಸ್ಟನ್ಸ್ ತಾತ್ಕಾಲಿಕವಾಗಿರುತ್ತೆ, ಆದರೆ ಕೆಲವೊಮ್ಮೆ ಅದು ದೀರ್ಘಕಾಲೀನ ಸಮಸ್ಯೆಯಾಗಿ ಮುಂದುವರೆಯುತ್ತೆ.
ಯಾವುದೇ ರೋಗಲಕ್ಷಣ (Symptoms) ಕಾಣೋದಿಲ್ಲ
ದೊಡ್ಡ ವಿಷಯವೆಂದರೆ ಇನ್ಸುಲಿನ್ ರೆಸಿಸ್ಟನ್ಸ್ ಸಮಸ್ಯೆ ಇದ್ರೆ, ಅದನ್ನು ಯಾವುದೇ ಟೆಸ್ಟ್ ಮೂಲಕ ಸಹ ಕಂಡುಹಿಡಿಯಲಾಗುವುದಿಲ್ಲ. ಯಾವುದೇ ರೋಗಲಕ್ಷಣಗಳಿರೋದಿಲ್ಲ. ಈ ಸ್ಥಿತಿಯು ಪ್ರಿ ಡಯಾಬಿಟಿಸ್ ಆಗಿ ಮಾರ್ಪಟ್ಟಾಗ, ಅದನ್ನು ಟೆಸ್ಟ್ ಮೂಲಕ ಕಂಡುಹಿಡಿಯಬಹುದು. ಪ್ರಿ ಡಯಾಬಿಟಿಸ್ ನಲ್ಲಿ, ರಕ್ತದಲ್ಲಿನ ಸಕ್ಕರೆ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗುತ್ತೆ, ಆದರೆ ಮಧುಮೇಹಕ್ಕಿಂತ ಕಡಿಮೆ ಇರುತ್ತೆ.
ಪ್ರೀ-ಡಯಾಬಿಟಿಸ್ ಗೆ ಚಿಕಿತ್ಸೆ ನೀಡದಿದ್ದರೆ, ಕೆಲವೇ ವರ್ಷಗಳಲ್ಲಿ ಟೈಪ್ 2 ಡಯಾಬಿಟಿಸ್ ಉಂಟಾಗುತ್ತೆ. ಇನ್ಸುಲಿನ್ ರೆಸಿಸ್ಟನ್ಸ ಕಂಡುಹಿಡಿಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷಿಸಬೇಕು. ಇದು ಸಾಮಾನ್ಯಕ್ಕಿಂತ ಹೆಚ್ಚಿದ್ದರೆ ವೈದ್ಯರನ್ನು ಸಂಪರ್ಕಿಸಿ.(Consult doctor)
ಇತರ ಕಾರಣ ಏನಿರಬಹುದು?
ಇನ್ಸುಲಿನ್ ರೆಸಿಸ್ಟನ್ಸಗೆ ನಿಖರವಾದ ಕಾರಣ ಇನ್ನೂ ಕಂಡುಹಿಡಿಯಲಾಗಿಲ್ಲ. ವಿಭಿನ್ನ ಜೀನ್ಸ್ ಗಳ(Genes) ಕಾರಣದಿಂದಾಗಿ, ಜನರು ಹೆಚ್ಚು ಅಥವಾ ಕಡಿಮೆ ಅಪಾಯ ಹೊಂದಿರಬಹುದು ಎಂದು ವಿಜ್ಞಾನಿಗಳು ನಂಬುತ್ತಾರೆ.
ತಜ್ಞರ ಪ್ರಕಾರ, ಹೊಟ್ಟೆಯ ಮೇಲಿನ ಹೆಚ್ಚುವರಿ ಕೊಬ್ಬು, ಬೊಜ್ಜು(Obesity), ದೈಹಿಕ ನಿಷ್ಕ್ರಿಯತೆ, ಹೆಚ್ಚಿನ ಸಂಸ್ಕರಿಸಿದ ಆಹಾರಗಳು, ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಕೆಲವು ಔಷಧಿಗಳು ಇನ್ಸುಲಿನ್ ರೆಸಿಸ್ಟನ್ಸ್ ಗೆ ಕಾರಣವಾಗಬಹುದು. ಇದಲ್ಲದೆ, ವಯಸ್ಸಾದವರುಈ ಸಮಸ್ಯೆಗೆ ಹೆಚ್ಚು ತುತ್ತಾಗುತ್ತಾರೆ. ಇದು ಯಾವುದೇ ವಯಸ್ಸಿನ ಜನರಿಗೆ ಸಂಭವಿಸಬಹುದು.
ಇನ್ಸುಲಿನ್ ರೆಸಿಸ್ಟನ್ಸ ತಡೆಗಟ್ಟುವುದು ಹೇಗೆ?
ಈ ಸಮಸ್ಯೆಯನ್ನು ತಪ್ಪಿಸಲು, ಎಲ್ಲಾ ಜನರು ಆರೋಗ್ಯಕರ ಆಹಾರ ತೆಗೆದುಕೊಳ್ಳಬೇಕು. ಹಣ್ಣು, ತರಕಾರಿ, ಇಡೀ ಧಾನ್ಯ, ಮೀನು ಮತ್ತು ಕೋಳಿಗಳನ್ನು ಆಹಾರದಲ್ಲಿ ಸೇರಿಸಬಹುದು. ಅಧಿಕ ಕಾರ್ಬೋಹೈಡ್ರೇಟ್(Carbohydrate), ರೆಡ್ ಮೀಟ್ ಮತ್ತು ಸಕ್ಕರೆಯುಕ್ತ ಆಹಾರಗಳನ್ನು ತಪ್ಪಿಸಬೇಕು.
ಇದಲ್ಲದೆ, ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ದೈಹಿಕ ಚಟುವಟಿಕೆ(Physical activities) ಮಾಡಬೇಕು. ಇದು ಗ್ಲುಕೋಸ್ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತೆ ಮತ್ತು ಇನ್ಸುಲಿನ್ ಸಂವೇದನೆಯನ್ನು ಸುಧಾರಿಸುತ್ತೆ. ನಿಮ್ಮ ತೂಕವು ಹೆಚ್ಚಿದ್ದರೆ, ಅದನ್ನು ಕಡಿಮೆ ಮಾಡಲು ಪ್ರಯತ್ನಿಸಿ. 7% ನಷ್ಟು ನಷ್ಟವು ಟೈಪ್ 2 ಮಧುಮೇಹದ ಅಪಾಯ 58% ರಷ್ಟು ಕಡಿಮೆ ಮಾಡುತ್ತೆ.