ಕುಡಿದ ಮರುದಿನವೂ ಹ್ಯಾಂಗೋವರ್ ಬಿಟ್ಟಿಲ್ಲವೇ? ಸಹಜಸ್ಥಿತಿಗೆ ಮರಳಲು ಇಲ್ಲಿದೆ ಟಿಪ್ಸ್!
ಆಲ್ಕೋಹಾಲ್ ಸೇವನೆ ಈಗ ಗೌಪ್ಯವಾಗಿ ಉಳಿದಿಲ್ಲ. ವೀಕೆಂಡ್ ಪಾರ್ಟಿ ಸೇರಿದಂತೆ ಹಲವು ಪಾರ್ಟಿಗಳು ಮದ್ಯ ಇಲ್ಲದೆ ನಡೆಯುವುದಿಲ್ಲ. ತಡರಾತ್ರಿವರಗೆ ಪಾರ್ಟಿ ಸೇರಿದಂತೆ ಹಲವು ಕಾರಣಗಳಿಂದ ಆಲ್ಕೋಹಾಲ್ ಹೆಚ್ಚಾದರೆ ಮರುದಿನವಾದರೂ ಹ್ಯಾಂಗೋವರ್ ಇಳಿಯಲ್ಲ. ತಲೆನೋವು, ಸುಸ್ತು ಸೇರಿದಂತೆ ಹಲವು ಸಮಸ್ಯೆಗಳಿಂದ ಇಡೀ ದಿನ ಸಮಸ್ಯೆಯಲ್ಲೇ ಸಾಗಲಿದೆ. ತಕ್ಷಣ ಹ್ಯಾಂಗೋವರ್‌ನಿಂದ ಹೊರಬರಲು ಏನು ಮಾಡಬೇಕು?
ಮದ್ಯ ಸೇವನೆ ಟ್ರೆಂಡ್ ಇದೀಗ ಕಾಮನ್ ಆಗಿದೆ. ಪಾರ್ಟಿ, ಕಾರ್ಯಕ್ರಮಗಳಲ್ಲಿ, ಕೆಲವರು ಪ್ರತಿದಿನ, ಹಲವರು ವೀಕೆಂಡ್ ಹೀಗೆ ಆಲ್ಕೋಹಾಲ್ ಸೇವನೆಗೆ ಸಮಯ ಮಿತಿ ಇಲ್ಲ. ಆದರೆ ಮದ್ಯ ಕೊಂಚ ಹೆಚ್ಚಾದರೂ, ಅಥವಾ ನಿಗದಿತ ಪ್ರಮಾಣದಲ್ಲಿದ್ದರೂ ಹಲವರಿಗೆ ಮರುದಿನ ಹ್ಯಾಂಗೋವರ್ ಸಂಕಷ್ಟ ತಪ್ಪಿದಲ್ಲ.
ಪಾರ್ಟಿ ಮುಗಿದು ದಿನಗಳೇ ಉರುಳಿದರೂ ಹ್ಯಾಂಗೋವರ್ ಮಾತ್ರ ಇಳಿದಿರುವುದಿಲ್ಲ. ಹೀಗಾದಾಗ ತಕ್ಷಣವೇ ಹ್ಯಾಂಗೋವರ್‌ನಿಂದ ಹೊರಬರಲು ಕೆಲ ಸೂತ್ರಗಳಿವೆ.
ಹ್ಯಾಂಗೋವರ್‌ನಿಂದ ತಲೆ ನೋವು, ಸುಸ್ತು ಸೇರಿದಂತೆ ಇತರ ಸಮಸ್ಯೆ ಕಾಣಿಸಿಕೊಳ್ಳಲು ಮುಖ್ಯ ಕಾರಣ ಡಿಹೈಡ್ರೇಶನ್. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವ ಕಾರಣ ಡಿಹೈಡ್ರೇಶನ್ ಸಮಸ್ಯೆ ತಲೆದೋರಲಿದೆ.
Image: Getty
ದೇಹದಲ್ಲಿನ ನೀರಿನ ಕೊರತೆ ನೀಗಿಸಲು ಉಗುರು ಬೆಚ್ಚಿನ ನೀರು ಸಿಪ್ ಮಾಡಬೇಕು. ಫಿಲ್ಟರ್ ಮಾಡಿದ ನೀರು ಶುದ್ಧವಾಗಿರುತ್ತದೆ ನಿಜ. ಆದರೆ ಹ್ಯಾಂಗೋವರ್ ಇಳಿಸುವ ಮಿನರಲ್ ಈ ನೀರಿನಲ್ಲಿ ಇರುವುದಿಲ್ಲ. ಹೀಗಾಗಿ ಮಿನರಲ್ಸ್ ತುಂಬಿದ ನೀರು ಕುಡಿದರೆ ಹ್ಯಾಂಗೋವರ್‌ನಿಂದ ಹೊರಬರಲು ಸಾಧ್ಯ.
ಅಲ್ಕೋಹಾಲ್‌ನಿಂದ ದೇಹದಲ್ಲಿನ ಎಲೆಕ್ಟ್ರೋಲೈಟ್ಸ್ ಪ್ರಮಾಣ ಕಡಿಮೆಯಾಗಲಿದೆ. ಪ್ರಮುಖವಾಗಿ ಪೊಟಾಶಿಯಂ ಹಾಗೂ ಸೋಡಿಯಂ ಅಂಶಗಳು ದೇಹಗಲ್ಲಿ ಕಡಿಮೆಯಾಗುವದರಿಂದ ತಲೆನೋವು ಸೇರಿದಂತೆ ಇತರ ಸಮಸ್ಯೆ ಕಾಣಿಸುತ್ತದೆ. ಇದಕ್ಕೆ ಬಾಳೇ ಹಣ್ಣು, ಎಳನೀರು ಉತ್ತಮ ಮದ್ದು. ಇದರ ಜೊತೆಗೆ ಸ್ಪೋರ್ಟ್ಸ್ ಡ್ರಿಂಕ್, ಎನರ್ಜಿ ಡ್ರಿಂಕ್ ಬಳಕೆ ಮಾಡಬಹುದು.
ಮದ್ಯ ಸೇವನೆಯಿಂದ ದೇಹದಲ್ಲಿನ ಉತ್ಕರ್ಷಣ ನಿರೋಧಕ ಅಂಶಗಳು ನಾಶವಾಗಲಿದೆ. ಹಾಳಾಗಿರುವ ಆಹಾರ, ಅಥವಾ ಫುಡ್ ಪಾಯ್ಸನ್‌ನಿಂದ ದೇಹದಲ್ಲಿನ ಉತ್ಕರ್ಣಣ ನಿರೋಧಕ ನಾಶವಾಗುತ್ತದೆ. ಈ ವೇಳೆ ವಾಂತಿ ಅಥವಾ ಭೇದಿಗಳು ಸಂಭವಿಸುತ್ತದೆ.
ಅಲ್ಕೋಹಾಲ್ ಪ್ರಮಾಣ ಹೆಚ್ಚಾದರೂ ಉತ್ಕರ್ಷಣ ನಿರೋಧಕ ಸಮಸ್ಯೆ ಕಾಡಲಿದೆ, ಜೊತೆಗೆ ಹ್ಯಾಂಗೋವರ್ ಕಾಡಲಿದೆ. ಹೀಗಾಗಿ ತರಕಾರಿ, ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಇದರಿಂದ ಹ್ಯಾಂಗೋವರ್ ಇಳಿಸಲು ಸಾಧ್ಯ.
ಹೆಚ್ಚಿನ ಪ್ರಮಾಣದ ನೀರು, ಬಾಳೇ ಹಣ್ಣು, ಎಳನೀರು, ಎಲೆಕ್ಟ್ರೋಲೈಟ್, ಹಣ್ಣು, ತರಕಾರಿ ಸೇವನೆಗಳಿಂದ ಹ್ಯಾಂಗೋವರ್‌ನಿಂದ ಹೊರಬರಲು ಸಾಧ್ಯವಿದೆ.ಇದರ ಜೊತೆಗೆ ಪ್ರಮುಖವಾಗಿ ದೇಹಕ್ಕೆ ವಿಶ್ರಾಂತಿ ಹಾಗೂ ನಿದ್ದೆ ಅತೀ ಅವಶ್ಯಕವಾಗಿದೆ.