Health Tips: ಥೈರಾಯ್ಡ್ ನಿಂದ ಪಿರಿಯಡ್ಸ್ ಮೇಲೆ ಪರಿಣಾಮ? ಬಂಜೆತನಕ್ಕೂ ಕಾರಣ?
ಥೈರಾಯ್ಡ್ ಹಾರ್ಮೋನುಗಳಲ್ಲಿನ ಏರಿಳಿತಗಳು ಚಯಾಪಚಯ ಮತ್ತು ಋತುಚಕ್ರದ ಮೇಲೆ ಪರಿಣಾಮ ಬೀರುತ್ತವೆ. ಇದು ತೂಕದ ಮೇಲೂ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ ಥೈರಾಯ್ಡ್ ನಿಂದಾಗಿ ಪಿರಿಯಡ್ಸ್ ಸೈಕಲ್ ಮತ್ತು ರಕ್ತಸ್ರಾವದ ಮೇಲೆ ಪರಿಣಾಮ ಬೀರುತ್ತದೆ.
ಥೈರಾಯ್ಡ್ ಹಾರ್ಮೋನುಗಳಲ್ಲಿನ (thyroid hormones) ಏರಿಳಿತಗಳಿಂದಾಗಿ, ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗಬಹುದು. ಹೆಚ್ಚು ಅಥವಾ ಕಡಿಮೆ ಥೈರಾಯ್ಡ್ ಹಾರ್ಮೋನ್ ಹೊಂದಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಕಾರಣದಿಂದಾಗಿ, ಋತುಚಕ್ರದ ಮೇಲೂ ಪರಿಣಾಮ ಬೀರುತ್ತದೆ. ಅಲ್ಲದೆ, ತೂಕ ಬದಲಾವಣೆಗಳು, ಕೂದಲು ಉದುರುವಿಕೆ, ಒತ್ತಡ, ಇವೆಲ್ಲವೂ ಥೈರಾಯ್ಡ್ ಹಾರ್ಮೋನುಗಳ ಅಸಮತೋಲನವನ್ನು ಸೂಚಿಸುತ್ತವೆ.
ಋತುಚಕ್ರವು ನಿಯಮಿತವಾಗಿರಲು ಥೈರಾಯ್ಡ್ ಹಾರ್ಮೋನುಗಳು ಬ್ಯಾಲೆನ್ಸ್ ಆಗಿರೋದು ತುಂಬಾನೆ ಮುಖ್ಯ. ಥೈರಾಯ್ಡ್ ಗ್ರಂಥಿಯು ಸಂತಾನೋತ್ಪತ್ತಿ ಅಂಗದೊಂದಿಗೆ ನೇರ ಸಂಪರ್ಕ ಹೊಂದಿದೆ. ಆದ್ದರಿಂದ, ಇದು ಅಂಡಾಶಯಗಳು ಮತ್ತು ಹಾರ್ಮೋನುಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಥೈರಾಯ್ಡ್ ನಿಂದಾಗಿ ಬಂಜೆತನದ ಸಮಸ್ಯೆಯೂ ಉಂಟಾಗಬಹುದು. ಆದ್ದರಿಂದ, ಥೈರಾಯ್ಡ್ ಮಟ್ಟವು ಋತುಚಕ್ರದ (periods) ಮೇಲೆ ಪರಿಣಾಮ ಬೀರುತ್ತಿದ್ದರೆ, ಅದನ್ನು ನಿರ್ಲಕ್ಷಿಸಬಾರದು.
ಥೈರಾಯ್ಡ್ ಋತುಚಕ್ರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?: ಥೈರಾಯ್ಡ್ ಹಾರ್ಮೋನ್ ಟಿಎಸ್ಎಚ್ ಹೆಚ್ಚಳವು ಪ್ರೊಲ್ಯಾಕ್ಟಿನ್ ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ. ಪ್ರೊಲ್ಯಾಕ್ಟಿನ್ ಹಾರ್ಮೋನ್ ಮಹಿಳೆಯರ ಫರ್ಟಿಲಿಟಿ ಆರೋಗ್ಯದ (fertility health) ಮೇಲೆ ಪರಿಣಾಮ ಬೀರುತ್ತದೆ. ಇದು ಈಸ್ಟ್ರೊಜೆನ್ ಹಾರ್ಮೋನ್ ಮೇಲೂ ಪರಿಣಾಮ ಬೀರುತ್ತದೆ. ಟಿಎಸ್ಎಚ್ ಹೆಚ್ಚಾದಂತೆ, ಪ್ರೊಲ್ಯಾಕ್ಟಿನ್ ಹಾರ್ಮೋನ್ ಹೆಚ್ಚಾಗುತ್ತದೆ ಮತ್ತು ಈ ಕಾರಣದಿಂದಾಗಿ ಋತುಚಕ್ರವು ಅನಿಯಮಿತವಾಗುತ್ತದೆ.
ಥೈರಾಯ್ಡ್ ಹಾರ್ಮೋನ್ ಕಾರಣದಿಂದಾಗಿ ಪ್ರೊಲ್ಯಾಕ್ಟಿನ್ ಹಾರ್ಮೋನ್ ಮಟ್ಟದಲ್ಲಿ ಬದಲಾವಣೆಯಾದಾಗ, ಅಂಡೋತ್ಪತ್ತಿ ಮತ್ತು ಋತುಚಕ್ರವನ್ನು ನಿಯಂತ್ರಿಸಲು ಅಗತ್ಯವಾದ ಹಾರ್ಮೋನುಗಳ ಬಿಡುಗಡೆ ಕಡಿಮೆಯಾಗುತ್ತದೆ.
ಈ ಕಾರಣದಿಂದಾಗಿ, ಋತುಚಕ್ರವು ಅನಿಯಮಿತವಾಗಿರುತ್ತದೆ.
ರಕ್ತದ ಹರಿವು ತುಂಬಾ ವೇಗವಾಗಿ ಅಥವಾ ನಿಧಾನವಾಗಿರಬಹುದು.
ಮಹಿಳೆಯರ ಆರೋಗ್ಯದ ಮೇಲೆ ಥೈರಾಯ್ಡ್ ನ ಇತರ ಪರಿಣಾಮಗಳು
ಬಂಜೆತನವು ಥೈರಾಯ್ಡ್ ನಿಂದಲೂ ಉಂಟಾಗಬಹುದು.
ಅತಿಯಾದ ಸಕ್ರಿಯ ಅಥವಾ ನಿಷ್ಕ್ರಿಯ ಥೈರಾಯ್ಡ್ ಮಹಿಳೆಯರ ಫರ್ಟಿಲಿಟಿ ಮೇಲೆ ಪರಿಣಾಮ ಬೀರುತ್ತದೆ.
ಥೈರಾಯ್ಡ್ ಕಾರಣದಿಂದಾಗಿ, ಮಹಿಳೆಯರು ಆರಂಭಿಕ ಋತುಬಂಧದ ಸಮಸ್ಯೆಗಳನ್ನು ಹೊಂದಿರಬಹುದು, ಅಂದರೆ ಅಕಾಲಿಕ ಋತುಚಕ್ರ (irregular periods) ಸಮಸ್ಯೆ ಎದುರಿಸಬಹುದು
ಇದಲ್ಲದೆ, ಚರ್ಮದ ಮೇಲಿನ ಮೊಡವೆಗಳು ಥೈರಾಯ್ಡ್ ಮಟ್ಟದಲ್ಲಿ ವ್ಯತ್ಯಾಸಕ್ಕೆ ಕಾರಣವಾಗಬಹುದು.
ಹೆರಿಗೆಯ ನಂತರ ಅಥವಾ ಋತುಬಂಧದ ಸಮಯದಲ್ಲಿ ಮಹಿಳೆಯರಿಗೆ ಥೈರಾಯ್ಡ್ ಬರುವ ಸಾಧ್ಯತೆ ಹೆಚ್ಚು.
ಥೈರಾಯ್ಡ್ ಗುಣಪಡಿಸಲು, ಆಹಾರ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳೊಂದಿಗೆ ಒತ್ತಡದಿಂದ ದೂರವಿರುವುದು ಸಹ ಮುಖ್ಯ.