MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಮನುಷ್ಯನ ದೇಹಕ್ಕೆ ಅನ್ನ-ನೀರು ಸಿಗದಿದ್ರೆ ಸಾವು ನಿಶ್ಚಿತ.. ಆದ್ರೆ ಕೊನೆದಿನಗಳಲ್ಲಿ ಏನಾಗುತ್ತಾ ಹೋಗುತ್ತೆ ಗೊತ್ತಾ?

ಮನುಷ್ಯನ ದೇಹಕ್ಕೆ ಅನ್ನ-ನೀರು ಸಿಗದಿದ್ರೆ ಸಾವು ನಿಶ್ಚಿತ.. ಆದ್ರೆ ಕೊನೆದಿನಗಳಲ್ಲಿ ಏನಾಗುತ್ತಾ ಹೋಗುತ್ತೆ ಗೊತ್ತಾ?

ನಮ್ಮ ದಿನನಿತ್ಯದ ಓಟದಲ್ಲಿ ನಾವು ಅನ್ನ-ನೀರಿಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಆದರೆ ಅನಿವಾರ್ಯವಾಗಿ ಅಥವಾ ಆಕಸ್ಮಿಕವಾಗಿ ಆಹಾರ ಮತ್ತು ನೀರು ಸಿಗದ ಪರಿಸ್ಥಿತಿ ಎದುರಾದಾಗ ನಮ್ಮ ದೇಹವು ಜೀವ ಉಳಿಸಿಕೊಳ್ಳಲು ನಡೆಸುವ ಹೋರಾಟ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಏನದು ನೋಡಿ..

2 Min read
Author : Shriram Bhat
Published : Jun 10 2026, 07:42 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Asianet News

ನಮ್ಮ ದಿನನಿತ್ಯದ ಓಟದಲ್ಲಿ ನಾವು ಅನ್ನ-ನೀರಿಲ್ಲದ ಬದುಕನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಆದರೆ ಅನಿವಾರ್ಯವಾಗಿ ಅಥವಾ ಆಕಸ್ಮಿಕವಾಗಿ ಆಹಾರ ಮತ್ತು ನೀರು ಸಿಗದ ಪರಿಸ್ಥಿತಿ ಎದುರಾದಾಗ ನಮ್ಮ ದೇಹವು ಜೀವ ಉಳಿಸಿಕೊಳ್ಳಲು ನಡೆಸುವ ಹೋರಾಟ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
Image Credit : Getty

ವಿಜ್ಞಾನದ ಪ್ರಕಾರ, ಆಹಾರವಿಲ್ಲದೆಯೂ ಮನುಷ್ಯ ಕೆಲವು ವಾರ ಬದುಕಬಹುದು, ಆದರೆ ನೀರಿಲ್ಲದೆ ಬದುಕುವುದು ಅಸಾಧ್ಯ. ಹಾಗಿದ್ದರೆ, ಈ ಅಂತಿಮ ಕ್ಷಣಗಳಲ್ಲಿ ನಮ್ಮ ದೇಹದ ಒಳಗೆ ಏನೆಲ್ಲಾ ಬದಲಾವಣೆಗಳಾಗುತ್ತವೆ? ಇಲ್ಲಿದೆ ಒಂದು ರೋಚಕ ಮಾಹಿತಿ.

Related Articles

Related image1
ಬ್ಲಡ್ ಥಿನ್ನರ್ ಮಾತ್ರೆ ಸೇವಿಸುತ್ತಿದ್ದೀರಾ? ಜೊತೆಗೆ, ಬೆಳ್ಳುಳ್ಳಿನೂ ತಿಂತೀರಾ..? ಹಾಗಿದ್ರೆ ಜೋಕೆ, ಈ ಸ್ಟೋರಿ ನಿಮಗಾಗಿ!
Related image2
ಆರೋಗ್ಯಕ್ಕೆ ಅತ್ತಿಹಣ್ಣು.. ಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಇದನ್ನು ತಿನ್ನಿ, ಜೊತೆಗೆ ಕೀಲು ನೋವು, ಸಂಧಿವಾತಕ್ಕೂ ರಾಮಬಾಣ!
37
Image Credit : visamai food/youtube

ನೀರಿಲ್ಲದೆ ಕೇವಲ 3 ರಿಂದ 5 ದಿನಗಳ ಆಟ!

ವೈದ್ಯಕೀಯ ಸಂಶೋಧನೆಗಳ ಪ್ರಕಾರ, ಒಬ್ಬ ವ್ಯಕ್ತಿಗೆ ಆಹಾರಕ್ಕಿಂತ ನೀರು ಅತ್ಯಂತ ಅಗತ್ಯ. ನಮ್ಮ ದೇಹದ ಶೇಕಡಾ 70 ರಷ್ಟು ಭಾಗ ನೀರಿನಿಂಲೇ ಕೂಡಿದೆ. ನೀರಿನ ಕೊರತೆ ಉಂಟಾದ ತಕ್ಷಣ ನಮ್ಮ ರಕ್ತವು ಗಟ್ಟಿಯಾಗಲು ಪ್ರಾರಂಭಿಸುತ್ತದೆ. ರಕ್ತ ಗಟ್ಟಿಯಾದಂತೆಲ್ಲಾ ಹೃದಯಕ್ಕೆ ಅದನ್ನು ಪಂಪ್ ಮಾಡುವುದು ಕಷ್ಟವಾಗುತ್ತದೆ.

47
Image Credit : Getty

ಪರಿಣಾಮವಾಗಿ, ಮೆದುಳು ಸೇರಿದಂತೆ ಪ್ರಮುಖ ಅಂಗಗಳಿಗೆ ಆಮ್ಲಜನಕದ ಪೂರೈಕೆ ಸ್ಥಗಿತಗೊಳ್ಳುತ್ತದೆ. ಬಾಯಾರಿಕೆ ಹೆಚ್ಚಾದ 3 ದಿನಗಳಲ್ಲೇ ಮನುಷ್ಯ ತನ್ನ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾನೆ. ಕಿಡ್ನಿಗಳು ರಕ್ತವನ್ನು ಶುದ್ಧೀಕರಿಸುವ ಕೆಲಸ ನಿಲ್ಲಿಸುವುದರಿಂದ ದೇಹದಲ್ಲಿ ವಿಷಕಾರಿ ಅಂಶಗಳು ತುಂಬಿಕೊಂಡು 'ಮಲ್ಟಿಪಲ್ ಆರ್ಗನ್ ಫೇಲ್ಯೂರ್' ಸಂಭವಿಸುತ್ತದೆ.

57
Image Credit : vismai food/ youtube

ಆಹಾರವಿಲ್ಲದಿದ್ದರೂ 60 ದಿನ ಬದುಕಲು ಸಾಧ್ಯ!

ಒಂದು ವೇಳೆ ವ್ಯಕ್ತಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿದ್ದು, ಆಹಾರ ಮಾತ್ರ ಸಿಗದಿದ್ದರೆ ಆತ ಸುಮಾರು 30 ರಿಂದ 60 ದಿನಗಳವರೆಗೆ ಜೀವಂತವಾಗಿರಬಹುದು. ಇದು ಹೇಗೆ ಸಾಧ್ಯ ಎಂದರೆ, ನಮ್ಮ ದೇಹವು ಅದ್ಭುತವಾದ 'ಬ್ಯಾಟರಿ' ವ್ಯವಸ್ಥೆಯನ್ನು ಹೊಂದಿದೆ.

67
Image Credit : vismai food/ youtube

ಹೊರಗಿನಿಂದ ಆಹಾರ ಸಿಗದಿದ್ದಾಗ, ದೇಹವು ಶಕ್ತಿಗಾಗಿ ಮೊದಲು ಲಿವರ್‌ನಲ್ಲಿರುವ ಗ್ಲುಕೋಸ್ ಅನ್ನು ಬಳಸುತ್ತದೆ. ಅದು ಖಾಲಿಯಾದ ನಂತರ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು (Fat) ಕರಗಿಸಿ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಅಂತಿಮವಾಗಿ ದೇಹವು ತನ್ನ ಸ್ನಾಯುಗಳನ್ನೇ ಇಂಧನವಾಗಿ ಬಳಸಲು ಶುರು ಮಾಡುತ್ತದೆ. ಇದನ್ನೇ ವಿಜ್ಞಾನಿಗಳು 'ದೇಹ ತನ್ನನ್ನು ತಾನೇ ತಿನ್ನುವ ಪ್ರಕ್ರಿಯೆ' ಎಂದು ಕರೆಯುತ್ತಾರೆ.

ಸಾವಿಗೆ ಹತ್ತಿರವಾದಾಗ ಏನಾಗುತ್ತದೆ?

ಹಸಿವಿನಿಂದ ಸಾವು ಸಂಭವಿಸುವ ಮೊದಲು ವ್ಯಕ್ತಿಯ ದೇಹದ ತೂಕವು ಮೂಲ ತೂಕಕ್ಕಿಂತ ಶೇ. 18 ರಿಂದ 20 ರಷ್ಟು ಕಡಿಮೆಯಾಗುತ್ತದೆ. ದೇಹದಲ್ಲಿ ಶಕ್ತಿ ಸಂಪೂರ್ಣವಾಗಿ ಬತ್ತಿ ಹೋದಾಗ, ಸ್ನಾಯುಗಳ ಬಲ ಕುಂದುತ್ತದೆ. ಇದರಿಂದ ಹೃದಯದ ಗೋಡೆಗಳು ದುರ್ಬಲಗೊಂಡು, ರಕ್ತವನ್ನು ಪಂಪ್ ಮಾಡುವ ಶಕ್ತಿ ಕಳೆದುಕೊಳ್ಳುತ್ತವೆ. ಅಂತಿಮವಾಗಿ 'ಹೃದಯ ಸ್ತಂಭನ' (Heart Failure) ಸಂಭವಿಸಿ ಜೀವಪಕ್ಷಿ ಹಾರಿಹೋಗುತ್ತದೆ.

77
Image Credit : Getty

ಯಾರು ಹೆಚ್ಚು ಕಾಲ ಬದುಕಬಲ್ಲರು?

ಹಸಿವು ಮತ್ತು ಬಾಯಾರಿಕೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಎಲ್ಲರಲ್ಲೂ ಒಂದೇ ಇರುವುದಿಲ್ಲ. ದೇಹದಲ್ಲಿ ಹೆಚ್ಚಿನ ಕೊಬ್ಬಿನಂಶ ಹೊಂದಿರುವ ವ್ಯಕ್ತಿಗಳು ತೆಳ್ಳಗಿರುವವರಿಗಿಂತ ಹೆಚ್ಚು ದಿನ ಬದುಕಬಲ್ಲರು. ಆದರೆ ಮಕ್ಕಳು ಮತ್ತು ವೃದ್ಧರಲ್ಲಿ ಈ ಸಹಿಷ್ಣುತೆ ಕಡಿಮೆ ಇರುತ್ತದೆ. ಅಲ್ಲದೆ, ಅತಿಯಾದ ಬಿಸಿಲು ಇರುವ ಪ್ರದೇಶಗಳಲ್ಲಿ ಬೆವರಿನ ಮೂಲಕ ನೀರು ಬೇಗನೆ ಬತ್ತಿಹೋಗುವುದರಿಂದ ಸಾವು ಅತ್ಯಂತ ವೇಗವಾಗಿ ಸಂಭವಿಸುತ್ತದೆ.

ಒಟ್ಟಿನಲ್ಲಿ, ನಮ್ಮ ದೇಹವು ಪ್ರತಿಯೊಂದು ಹನಿ ನೀರು ಮತ್ತು ತುತ್ತು ಅನ್ನಕ್ಕಾಗಿ ಕೊನೆಯ ಕ್ಷಣದವರೆಗೂ ಪ್ರಕೃತಿಯ ವಿರುದ್ಧ ಹೋರಾಡುತ್ತದೆ. ಈ ಸಂಕೀರ್ಣ ಪ್ರಕ್ರಿಯೆಯೇ ಮಾನವ ದೇಹದ ಅದ್ಭುತ ವಿನ್ಯಾಸಕ್ಕೆ ಸಾಕ್ಷಿಯಾಗಿದೆ. ಆದ್ದರಿಂದಲೇ ಲೈಫ್ ಸ್ಟೈಲ್ ತಜ್ಞರು ಹೇಳುವುದು - ದೇಹದ ಈ ಅದ್ಭುತ ಯಂತ್ರವನ್ನು ಸರಿಯಾದ ಪೋಷಕಾಂಶಗಳ ಮೂಲಕ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಜೀವನಶೈಲಿ
ಆರೋಗ್ಯ
ಆರೋಗ್ಯ ಸಮಸ್ಯೆಗಳು
Latest Videos
Recommended Stories
Recommended image1
ಉಪ ಮುಖ್ಯಮಂತ್ರಿಯನ್ನು ಟಿವಿಯಲ್ಲಿ ನೋಡುತ್ತಿರುವಾಗ್ಲೇ ಮೆದುಳು ಆಪರೇಷನ್​ ಮಾಡಿದ ವೈದ್ಯರು
Recommended image2
ತೂಕ ಇಳಿಸೋಕೆ ರಾತ್ರಿ ಊಟ ಬಿಟ್ಟು ಮಲಗಿದ್ರೆ ಏನಾಗುತ್ತೆ ಗೊತ್ತಾ? ತಜ್ಞರು ಹೇಳೋದೇನು?
Recommended image3
Brain Tumor: ಬ್ರೈನ್ ಟ್ಯೂಮರ್ ಅಪಾಯ ಕಡಿಮೆ ಮಾಡಲು ಈ 5 ಟಿಪ್ಸ್ ಫಾಲೋ ಮಾಡಿ
Related Stories
Recommended image1
ಬ್ಲಡ್ ಥಿನ್ನರ್ ಮಾತ್ರೆ ಸೇವಿಸುತ್ತಿದ್ದೀರಾ? ಜೊತೆಗೆ, ಬೆಳ್ಳುಳ್ಳಿನೂ ತಿಂತೀರಾ..? ಹಾಗಿದ್ರೆ ಜೋಕೆ, ಈ ಸ್ಟೋರಿ ನಿಮಗಾಗಿ!
Recommended image2
ಆರೋಗ್ಯಕ್ಕೆ ಅತ್ತಿಹಣ್ಣು.. ಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಇದನ್ನು ತಿನ್ನಿ, ಜೊತೆಗೆ ಕೀಲು ನೋವು, ಸಂಧಿವಾತಕ್ಕೂ ರಾಮಬಾಣ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved