ಕೂಲ್ ಡ್ರಿಂಕ್ಸ್ ಕುಡಿಯೋದ್ರಿಂದ 10 ನಿಮಿಷದಲ್ಲಿ ದೇಹಕ್ಕೆ ಸೇರುತ್ತಂತೆ ವಿಷ!
ತಂಪು ಪಾನೀಯಗಳನ್ನು ಯಾವಾಗಲೂ ಕೆಟ್ಟ ಪಾನೀಯವೆಂದು ಪರಿಗಣಿಸಲಾಗುತ್ತದೆ. ನೀವು ಹೆಚ್ಚು ಕೋಲ್ಡ್ ಡ್ರಿಂಕ್ ಕುಡಿದಷ್ಟೂ ನಿಮಗೆ ಸಮಸ್ಯೆಗಳು ಹೆಚ್ಚು. ಯಾಕೆಂದರೆ ಈ ತಂಪು ಪಾನೀಯಗಳು ದೇಹದಲ್ಲಿ ವಿಷವಾಗಿ ಪರಿಣಮಿಸುತ್ತೆ.
ನೀವು ಇಷ್ಟಪಟ್ಟು ಕುಡಿಯುವ ತಂಪು ಪಾನೀಯಗಳು (Cold Drink) ನಿಮ್ಮ ಆರೋಗ್ಯಕ್ಕೆ ಎಷ್ಟು ಭಯಾನಕವಾಗಿವೆ ಎಂದು ನಿಮಗೆ ತಿಳಿದಿಲ್ಲದಿರಬಹುದು. ಕೂಲ್ ಡ್ರಿಂಕ್ಸ್ ಸಿಪ್ ಮಾಡುತ್ತಿದ್ದಂತೆ, ನಿಮಗೆ ಏನೋ ಒಂಥರಾ ಖುಷಿ ಸಿಗುತ್ತೆ. ಆದರೆ ನಿಮಗೆ ಗೊತ್ತಾ? ಈ ಕೂಲ್ ಡ್ರಿಂಕ್ ಹೊಟ್ಟೆಗೆ ಹೋದ ಕೂಡಲೇ ಅದರ ಬಣ್ಣವನ್ನು ತೋರಿಸಲು ಪ್ರಾರಂಭಿಸುತ್ತದೆ ಮತ್ತು ಒಂದು ಗಂಟೆಯೊಳಗೆ ಅದು ದೇಹವನ್ನು ಒಳಗಿನಿಂದ ನಾಶಪಡಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ.
ನೀವು ಸ್ಟೈಲ್ ಆಗಿ ಕುಡಿಯೋ ಕೂಲ್ ಡ್ರಿಂಕ್ಸ್ ದೇಹಕ್ಕೆ ಸೇರಿದ ಒಂದು ಗಂಟೆಯೊಳಗೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಅನ್ನೋದನ್ನು ನೋಡೋಣ. ಯಾಕೆ ನೀವು ಕೂಲ್ ಡ್ರಿಂಕ್ಸ್ ಕುಡಿಯಬಾರದು ಅನ್ನೋದನ್ನು ತಿಳಿದುಕೊಳ್ಳೋಣ. ಕೂಲ್ ಡ್ರಿಂಕ್ಸ್ ಕುಡಿಯೋದರಿಂದ ನಿಮಿಷ ನಿಮಿಷದಲ್ಲಿ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ನೋಡೋಣ.
10 ನಿಮಿಷಗಳಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ: ತಂಪು ಪಾನೀಯಗಳನ್ನು ಕುಡಿದ 10 ನಿಮಿಷಗಳಲ್ಲಿ, 10 ಟೀಸ್ಪೂನ್ಗಳಿಗೆ ಸಮನಾದ ಸಕ್ಕರೆ ದೇಹವನ್ನು ಪ್ರವೇಶಿಸುತ್ತದೆ, ಇದು ದೈನಂದಿನ ಅಗತ್ಯದ 100 ಪ್ರತಿಶತವಾಗಿದೆ. ಇದರಿಂದ ಶುಗರ್ (sugar level) ಹೆಚ್ಚುವ ಸಾಧ್ಯತೆ ಇದೆ.
20 ನಿಮಿಷಗಳ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ: 20 ನಿಮಿಷಗಳ ನಂತರ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು (blood sugar level) ಹೆಚ್ಚಾಗುತ್ತದೆ ಮತ್ತು ನಿಮ್ಮ ಯಕೃತ್ತು ಅದನ್ನು ಕೊಬ್ಬಾಗಿ ಪರಿವರ್ತಿಸಲು ಪ್ರಾರಂಭಿಸುತ್ತದೆ. ಕೊಬ್ಬು ಹೆಚ್ಚಾದರೆ ದೇಹದಲ್ಲಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತೆ.
40 ನಿಮಿಷಗಳ ನಂತರ ರಕ್ತದೊತ್ತಡ ಹೆಚ್ಚಾಗುತ್ತದೆ: 40 ನಿಮಿಷಗಳ ನಂತರ, ಕೆಫೀನ್ ಜೀರ್ಣವಾಗುತ್ತದೆ ಮತ್ತು ಕಣ್ಣುಗಳು ಉಬ್ಬಲು ಪ್ರಾರಂಭಿಸುತ್ತವೆ, ರಕ್ತದೊತ್ತಡ ಹೆಚ್ಚಾಗುತ್ತದೆ ಮತ್ತು ಯಕೃತ್ತು ಹೆಚ್ಚು ಹೆಚ್ಚು ಸಕ್ಕರೆಯನ್ನು ರಕ್ತಪ್ರವಾಹಕ್ಕೆ ಕಳುಹಿಸಲು ಪ್ರಾರಂಭಿಸುತ್ತದೆ.
45 ನಿಮಿಷಗಳ ಮೆದುಳಿನ ಸ್ಥಿತಿ ಹದಗೆಡಲು ಪ್ರಾರಂಭಿಸುತ್ತದೆ: ಬಹಳ ಸಮಯದ ನಂತರ, ನಿಮ್ಮ ದೇಹವು ಡೋಪಮೈನ್ (dopamine) ತಯಾರಿಸಲು ಪ್ರಾರಂಭಿಸುತ್ತದೆ, ಇದು ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
1 ಗಂಟೆಯ ನಂತರ, ಆಯಾಸದಿಂದಾಗಿ ದೇಹವು ತುಂಬಾನೆ ಹದಗೆಡುತ್ತದೆ: ತಂಪು ಪಾನೀಯಗಳನ್ನು ಕುಡಿದ ಒಂದು ಗಂಟೆಯ ನಂತರ, ನಿಮ್ಮ ದೇಹವು ಆಯಾಸದಿಂದ ಕೆಟ್ಟದಾಗಿ ಬಾಧಿಸಲ್ಪಡುತ್ತದೆ, ಏಕೆಂದರೆ ಸಕ್ಕರೆ ಮಟ್ಟವು ಹೆಚ್ಚಾಗುವ ಮೂಲಕ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ.