ಪ್ರತಿದಿನ ಕೇವಲ 1 ಗಂಟೆ ನಡೆದರೆ ಆರೋಗ್ಯದ ಮೇಲಾಗುವ ಪರಿಣಾಮಗಳು ಏನು?
ಒಂದು ಗಂಟೆ ನಡಿಗೆ : ಪ್ರತಿದಿನ ಸುಮಾರು ಒಂದು ಗಂಟೆ ನಡೆಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.
ಒಂದು ಗಂಟೆ ನಡಿಗೆಯ ಪ್ರಯೋಜನಗಳು
ಇಂದಿನ ದಿನಗಳಲ್ಲಿ ಯಾವುದೇ ದೈಹಿಕ ಶ್ರಮವಿಲ್ಲದ ಜೀವನಶೈಲಿಯಿಂದಾಗಿ ನಾವೆಲ್ಲರೂ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ದೃಢಕಾಯರಾಗಿ, ಆರೋಗ್ಯವಂತರಾಗಿರಲು ಪ್ರಮುಖ ಕಾರಣ ಅವರ ಜೀವನಶೈಲಿ ಮತ್ತು ಆಹಾರ ಪದ್ಧತಿ.
ಆದರೆ ಇಂದು ಕಂಪ್ಯೂಟರ್ ಮುಂದೆ ಗಂಟೆಗಳ ಕಾಲ ಕುಳಿತು ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಮೊಬೈಲ್‌ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದೇವೆ. ಪ್ರಯಾಣಕ್ಕೆ ಬೈಕ್ ಅಥವಾ ಕಾರನ್ನೇ ಆಯ್ದುಕೊಳ್ಳುತ್ತಿದ್ದೇವೆ. ಇದರಿಂದ ದೈಹಿಕ ಶ್ರಮ ಬಹಳಷ್ಟು ಕಡಿಮೆಯಾಗಿದೆ, ಇದರ ಫಲಿತಾಂಶವಾಗಿ ನಮಗೆ ಬರುವುದು ರೋಗಗಳು.
ಒಂದು ಗಂಟೆ ನಡಿಗೆಯ ಪ್ರಯೋಜನಗಳು
ಮುಖ್ಯವಾಗಿ ಇಂದು ಹಲವರು ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಒಂದು ಬೊಜ್ಜು. ಹೌದು, ಬೊಜ್ಜಿನಿಂದಾಗಿ ಮಧುಮೇಹ, ಹೃದಯಾಘಾತ, ರಕ್ತದೊತ್ತಡ, ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳು ಬರುವ ಸಾಧ್ಯತೆಗಳಿವೆ. ಇದರಿಂದ ಕೆಲವೊಮ್ಮೆ ಪ್ರಾಣವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.
ತೂಕ ಇಳಿಸಿಕೊಳ್ಳಲು ಕೆಲವರು ಹಣ ಖರ್ಚು ಮಾಡಿ ಜಿಮ್‌ಗೆ ಹೋಗುತ್ತಾರೆ. ಆದರೆ ಒಂದು ರೂಪಾಯಿಯನ್ನೂ ಖರ್ಚು ಮಾಡದೆ, ಹೆಚ್ಚು ಶ್ರಮವಿಲ್ಲದೆ ತೂಕ ಇಳಿಸಿಕೊಳ್ಳಲು ಸುಲಭ ಮಾರ್ಗ ನಡಿಗೆ. ಹೌದು, ಪ್ರತಿದಿನ ಒಂದೇ ಸಮಯದಲ್ಲಿ ಒಂದು ಗಂಟೆ ನಡೆದರೆ, ಒಂದು ವಾರದಲ್ಲಿ ಮೂರು ಕಿಲೋಗಳಷ್ಟು ತೂಕ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹಲವು ಅಧ್ಯಯನಗಳು ಹೇಳುತ್ತಿವೆ.
ಒಂದು ಗಂಟೆ ನಡಿಗೆಯ ಪ್ರಯೋಜನಗಳು
ಒಂದು ಗಂಟೆ ನಡೆದರೆ ಏನಾಗುತ್ತದೆ?
ಹಲವು ಅಧ್ಯಯನಗಳ ಪ್ರಕಾರ, 7 ದಿನಗಳು ಒಂದೇ ಸಮಯದಲ್ಲಿ ಒಂದು ಗಂಟೆ ನಡೆದರೆ, ಮೂರು ಕಿಲೋಗಳಷ್ಟು ತೂಕ ಕಡಿಮೆಯಾಗಬಹುದು ಎಂದು ಕಂಡುಹಿಡಿದಿದ್ದಾರೆ. ಸತತ ಮೂರು ತಿಂಗಳು ಪ್ರತಿದಿನ ಒಂದೇ ಸಮಯದಲ್ಲಿ ಒಂದು ಗಂಟೆ ನಡೆದರೆ ಕನಿಷ್ಠ 20 ರಿಂದ 30 ಕಿಲೋಗಳಷ್ಟು ತೂಕ ಇಳಿಸಿಕೊಳ್ಳಬಹುದಂತೆ.
ಒಂದು ಗಂಟೆ ನಡಿಗೆಯ ಪ್ರಯೋಜನಗಳು
ಇದು ಮಾತ್ರ ಸಾಕಾಗುವುದಿಲ್ಲ:
ತೂಕ ಇಳಿಸಿಕೊಳ್ಳಲು ಕೇವಲ ನಡಿಗೆ ಮಾತ್ರ ಸಾಕಾಗುವುದಿಲ್ಲ. ಹೌದು, ನೀವು ಪ್ರತಿದಿನ ಒಂದು ಗಂಟೆ ನಡೆಯುವಾಗ ಆಹಾರಕ್ರಮವನ್ನು ಕಡ್ಡಾಯವಾಗಿ ಪಾಲಿಸುವುದು ಬಹಳ ಮುಖ್ಯ. ಇದಕ್ಕಾಗಿ ನೀವು ಹೆಚ್ಚಿನ ಕೊಬ್ಬಿನಂಶವಿರುವ ಆಹಾರಗಳನ್ನು ಸೇವಿಸಬಾರದು. ಇದರ ಜೊತೆಗೆ ಕಾರ್ಬೋಹೈಡ್ರೇಟ್‌ಗಳು ಹೆಚ್ಚಿರುವ ಆಹಾರವನ್ನು ಸಹ ಸೇವಿಸುವುದನ್ನು ಮಾಡಬಾರದು. ಮಾಂಸಾಹಾರ ಸೇವನೆ ಕಡಿಮೆ ಮಾಡಿ. ಅದರ ಬದಲಾಗಿ ನೀವು ತಾಜಾ ಹಣ್ಣುಗಳು, ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಇವುಗಳನ್ನು ನೀವು ಪಾಲಿಸಿದರೆ ಮಾತ್ರ ಒಂದು ತಿಂಗಳಲ್ಲಿ ಉತ್ತಮ ಫಲಿತಾಂಶಗಳು ಕಾಣಿಸಿಕೊಳ್ಳುತ್ತವೆ.
ಒಂದು ಗಂಟೆ ನಡಿಗೆಯ ಪ್ರಯೋಜನಗಳು
ಒಂದು ಗಂಟೆ ನಡೆಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು:
ನೀವು ಪ್ರತಿದಿನ ನಡೆಯುವಾಗ ನಿಮ್ಮ ವೇಗವನ್ನು ಸ್ವಲ್ಪ ಸ್ವಲ್ಪ ಹೆಚ್ಚಿಸಿಕೊಳ್ಳಬೇಕು. ಇದು ನಿಮಗೆ ಸ್ವಲ್ಪ ಕಷ್ಟವೆನಿಸಿದರೂ ಕೊನೆಗೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಒಂದು ಗಂಟೆ ನಡೆಯುವುದರಿಂದ ತೂಕ ಇಳಿಸಿಕೊಳ್ಳುವುದು ಮಾತ್ರವಲ್ಲದೆ ಮೆದುಳನ್ನು ಚುರುಕಾಗಿಡಲು ಸಹಾಯ ಮಾಡುತ್ತದೆ. ಇದರಿಂದ ಮರೆವು ಸಮಸ್ಯೆ ಬರುವುದಿಲ್ಲ. ಜೊತೆಗೆ ಪ್ರತಿದಿನ ಒಂದು ಗಂಟೆ ನಡೆಯುವುದರಿಂದ ದೇಹದಲ್ಲಿ ರಕ್ತ ಸಂಚಾರ ಸುಧಾರಿಸುತ್ತದೆ. ಇದರಿಂದ ಹೃದಯಾಘಾತ ಬರುವ ಸಾಧ್ಯತೆಗಳು ಬಹಳಷ್ಟು ಕಡಿಮೆಯಾಗುತ್ತವೆ. ಹೃದಯ ಯಾವಾಗಲೂ ಆರೋಗ್ಯವಾಗಿರುತ್ತದೆ.
ಅದೇ ರೀತಿ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಪ್ರತಿದಿನ ಒಂದು ಗಂಟೆ ನಡೆದರೆ ರಕ್ತದೊತ್ತಡ ಹೆಚ್ಚಾಗದಂತೆ ನಿಯಂತ್ರಣದಲ್ಲಿರುತ್ತದೆ. ಅಷ್ಟೇ ಅಲ್ಲದೆ ಉಸಿರಾಸುವ ಸಮಸ್ಯೆ ಇರುವವರು ನಡೆದರೆ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ.