ಮೊಳಕೆ ಕಾಳುಗಳು ಪೋಷಕಾಂಶಗಳ ಆಗರ.. ಸೇವಿಸಿ ಅರೋಗ್ಯ ಹೆಚ್ಚಿಸಿ
First Published Jan 1, 2021, 10:42 AM IST
ದೇಹದಲ್ಲಿ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರಬೇಕಾದ ಅಗತ್ಯವಿದೆ, ಆದರೆ ದೇಹದಲ್ಲಿರುವ ಎಲ್ಲಾ ಪೋಷಕಾಂಶಗಳು ಸಮತೋಲನದಲ್ಲಿ ಇರುವುದು ಕೂಡ ಮುಖ್ಯ. ಒಂದು ವೇಳೆ ಪೋಷಕಾಂಶ ಕಡಿಮೆಯಾದರೆ ಅದು ಸಹ ದೇಹಕ್ಕೆ ಒಳ್ಳೆಯದಲ್ಲ. ಆದ್ದರಿಂದ, ದೇಹದಲ್ಲಿ ಸಾಕಷ್ಟು ಮತ್ತು ಸಮತೋಲಿತ ಪೋಷಕಾಂಶಗಳ ಆಗರವಾಗಿ, ಆಹಾರದಲ್ಲಿ ಪ್ರತಿದಿನವೂ ಮೊಳಕೆಕಾಳುಗಳನ್ನು ಸೇರಿಸಿಕೊಳ್ಳುವುದು ಬಹಳ ಮುಖ್ಯ. ಮೊಳಕೆ ಕಾಳುಗಳನ್ನು ನಿತ್ಯವೂ ಏಕೆ ಸೇವಿಸಬೇಕು ಎಂಬುದನ್ನು ಇಲ್ಲಿ ನೋಡಿ.

ಮೊಳಕೆಕಾಳಲ್ಲಿ ಕರಿದ ಪದಾರ್ಥಗಳಿಗಿಂತ ನೂರು ಪಟ್ಟು ಹೆಚ್ಚು ಕಿಣ್ವಗಳು: .
ತಜ್ಞರ ಪ್ರಕಾರ, ಯಾವುದೇ ಆಹಾರವನ್ನು ಹುರಿಯುವ ಅಥವಾ ಇತರೆ ಪದಾರ್ಥಗಳನ್ನು ಸೇರಿಸುವ ಮೂಲಕ ಯಾವುದೇ ಆಹಾರದ ಪೋಷಕಾಂಶವನ್ನು ತೆಗೆದುಹಾಕುತ್ತೇವೆ. ಮೊಳಕೆಕಾಳುಗಳಲ್ಲಿ ಕರಿದ ಆಹಾರಕ್ಕಿಂತ ನೂರು ಪಟ್ಟು ಹೆಚ್ಚು ಕಿಣ್ವಗಳು ಸಿಗುತ್ತವೆ.

ತರಕಾರಿ ಅಥವಾ ಹಣ್ಣನ್ನು ಸೇವಿಸಿದರೆ ಮೊಳಕೆಯಲ್ಲಿರುವ ಪೋಷಕಾಂಶಗಳ ಪ್ರಮಾಣವು ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ. ಇದರಲ್ಲಿ ಇರುವಂತಹ ಕಿಣ್ವಗಳು ದೇಹವನ್ನು ವಿವಿಧ ಕಾರ್ಯಗಳನ್ನು ಮಾಡುವಂತೆ ಉತ್ತೇಜಿಸುತ್ತವೆ, ಏಕೆಂದರೆ ಅವು ಒಂದು ಕ್ಯಾಟಲಿಸ್ಟಿಕ್ ಶಕ್ತಿಯಾಗಿ ಕೆಲಸ ಮಾಡುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?