ನೀವು ತಾಜಾ ಹಣ್ಣುಗಳ ಬದಲು, ಜ್ಯೂಸ್ ಕುಡಿಯೋದಕ್ಕೆ ಇಷ್ಟ ಪಡ್ತೀರಾ? ಹಾಗಿದ್ರೆ ಇದನ್ನ ಓದ್ಲೇ ಬೇಕು…
ಹಣ್ಣಿನ ಜ್ಯೂಸ್ ಅಥವಾ ಸಂಪೂರ್ಣ ಹಣ್ಣುಗಳು. ಇವುಗಳಲ್ಲಿ ಯಾವುದನ್ನ ತಿನ್ನೋದು ತುಂಬಾನೆ ಉತ್ತಮ, ಅನ್ನೋ ಪ್ರಶ್ನೆ ನಿಮ್ಮನ್ನೂ ಕಾಡುತ್ತಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ. ನೀವು ಹಣ್ಣುಗಳಿಗಿಂತ ಹೆಚ್ಚಾಗಿ ಜ್ಯೂಸ್ ಕುಡಿಯೋರು ಆಗಿದ್ರೆ ಇದನ್ನ ನೀವು ಓದಲೇ ಬೇಕು.
ಹಣ್ಣಿನ ಸೇವನೆಯು (eating fruits) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ಅನ್ನೋದು ನಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ, ಪ್ರತಿದಿನ ಕನಿಷ್ಠ 2 ಹಣ್ಣುಗಳನ್ನು ತಿನ್ನಬೇಕು ಎಂದು ಯಾವಾಗಲೂ ಸಲಹೆ ನೀಡಲಾಗುತ್ತದೆ. ಆದರೆ ಅನೇಕ ಜನರಿಗೆ, ಪ್ರತಿ ಬಾರಿಯೂ ಸಂಪೂರ್ಣ ಹಣ್ಣುಗಳನ್ನು ತಿನ್ನಲು ಸಾಧ್ಯವಾಗೋದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ಮನೆಯಿಂದ ಹೊರಬಂದಾಗಲೆಲ್ಲಾ, ಹಣ್ಣಿನ ಜ್ಯೂಸ್ ಕುಡಿಯುತ್ತಾರೆ. ಅನೇಕ ಜನರು ಹಣ್ಣುಗಳನ್ನು ತಿನ್ನುವುದಕ್ಕಿಂತ ಫ್ರುಟ್ ಜ್ಯೂಸ್ ಕುಡಿಯೋದಕ್ಕೆ ಹೆಚ್ಚು ಇಷ್ಟಪಡುತ್ತಾರೆ.
ಸಾಮಾನ್ಯವಾಗಿ, ಹಣ್ಣಿನ ಜ್ಯೂಸ್ (fruit juice) ಕುಡಿಯೋದರಿಂda ಹಣ್ಣುಗಳನ್ನು ತಿನ್ನುವಷ್ಟೇ ಪ್ರಯೋಜನ ಸಿಗುತ್ತೆ ಎಂದು ಜನರು ನಂಬುತ್ತಾರೆ. ಆದರೆ ಅದು ನಿಜವೇ? ಖಂಡಿತಾ ಅಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಏಕೆಂದರೆ ಸಂಪೂರ್ಣ ಹಣ್ಣುಗಳನ್ನು ತಿನ್ನುವುದರಿಂದ ನೀವು ಪಡೆಯುವ ಅನೇಕ ಅಗತ್ಯ ಪೋಷಕಾಂಶಗಳು, ನೀವು ಜ್ಯೂಸ್ ಕುಡಿಯೋದರಿಂದ ಸಿಗೋದೆ ಇಲ್ಲ. ಇದಿಷ್ಟೇ ಅಲ್ಲ, ಹಣ್ಣುಗಳ ಜ್ಯೂಸ್ ಗಿಂತ, ತಾಜಾ ಹಣ್ಣುಗಳನ್ನು ತಿನ್ನುವುದು ಬೆಸ್ಟ್ ಅನ್ನೋದು ಯಾಕೆ ಅನ್ನೋದನ್ನ ನೀವೇ ನೋಡಿ.
ಆಹಾರದ ಫೈಬರ್
ನೀವು ಹಣ್ಣಿನ ಜ್ಯೂಸ್ ತಯಾರಿಸಿದಾಗ, ಅವುಗಳಲ್ಲಿರುವ ಆಹಾರದ ಫೈಬರ್ (food fiber) ಸಂಪೂರ್ಣವಾಗಿ ಕರಗಿ ಹೋಗುತ್ತವೆ, ಇದರಿಂದ ಕೇವಲ ಜ್ಯೂಸ್ ಮಾತ್ರ ಪಡೆಯುತ್ತೀರಿ. ಆಹಾರದ ಫೈಬರ್ ಹಣ್ಣುಗಳ ತಿರುಳಿನಲ್ಲಿದೆ, ಜ್ಯೂಸ್ ತೆಗೆದುಹಾಕಿದ ನಂತರ ಹಣ್ಣುಗಳ ತಿರುಳನ್ನು ಕಸಕ್ಕೆ ಎಸೆಯಲಾಗುತ್ತದೆ. ಇದರಿಂದ ದೇಹಕ್ಕೆ ಅಗತ್ಯವಾಗಿ ಬೇಕಾದ ಫೈಬರ್ ಸಿಗೋದೆ ಇಲ್ಲ.
ನಮ್ಮ ಕರುಳಿನ ಆರೋಗ್ಯವನ್ನು (gut health)ಕಾಪಾಡಿಕೊಳ್ಳಲು ಮತ್ತು ಹೊಟ್ಟೆಯ ಸಮಸ್ಯೆಗಳಿಂದ ದೂರವಿರಲು ಆಹಾರದ ಫೈಬರ್ ಬಹಳ ಮುಖ್ಯ. ಇದು ಅಜೀರ್ಣ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ, ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಗ್ಲೈಸೆಮಿಕ್ ಸೂಚ್ಯಂಕ
ನೀವು ಹಣ್ಣಿನ ಜ್ಯೂಸ್ ತಯಾರಿಸಿ ಕುಡಿದಾಗ, ಜ್ಯೂಸಿನ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಹೆಚ್ಚಾಗುತ್ತದೆ. ಏಕೆಂದರೆ ಹಣ್ಣಿನ ತಿರುಳು ಮತ್ತು ನಾರನ್ನು ಬೇರ್ಪಡಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಜ್ಯೂಸ್ ಸೇವಿಸಿದಾಗ, ಅದು ಬಹಳ ಬೇಗನೆ ಜೀರ್ಣವಾಗುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಇದು ಮಧುಮೇಹದಂತಹ ಗಂಭೀರ ಕಾಯಿಲೆಗೆ ಕಾರಣವಾಗಬಹುದು.
ವೈದ್ಯರು ಏನು ಶಿಫಾರಸು ಮಾಡುತ್ತಾರೆ?
ನೀವು ಹಣ್ಣುಗಳು ಅಥವಾ ಜ್ಯೂಸ್ ಗಳಲ್ಲಿ ಒಂದನ್ನು ಆರಿಸಬೇಕಾಗಿ ಬಂದಾಗಲೆಲ್ಲಾ, ಯಾವಾಗಲೂ ಸಂಪೂರ್ಣ ಹಣ್ಣುಗಳನ್ನು ಆರಿಸಿ. ಇದು ನಿಮ್ಮ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಅವು ನಮ್ಮ ಕರುಳಿನ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಆದ್ದರಿಂದ, ಯಾವಾಗಲೂ ಸಂಪೂರ್ಣ ಹಣ್ಣುಗಳನ್ನು ತಿನ್ನುವುದು ಉತ್ತಮ ಆಯ್ಕೆಯಾಗಿದೆ.