MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಕಾಳು ಜೀರಿಗೆ ಅಥವಾ ಕಪ್ಪು ಜೀರಿಗೆಯ ಆರೋಗ್ಯ ಪ್ರಯೋಜನಗಳು

ಕಾಳು ಜೀರಿಗೆ ಅಥವಾ ಕಪ್ಪು ಜೀರಿಗೆಯ ಆರೋಗ್ಯ ಪ್ರಯೋಜನಗಳು

ಕಲೋಂಜಿ ಬೀಜಗಳನ್ನು ಕರಿಜೀರಿಗೆ ಅಂತಾನೂ ಕರೀತಾರೆ. ಈ ಬೀಜದ ಎಣ್ಣೆ ನಮ್ಮ ಶರೀರದ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಬಹಳಷ್ಟು ಜನ ಈ ಕರಿಜಿರಿಗೆ ಅಥವಾ ಕಾಳುಜೀರಿಗೆಯನ್ನು ನೀರಲ್ಲಿ ಕುದಿಸಿ ಆ ನೀರನ್ನು ಕುಡಿಯುತ್ತಾರೆ. ಆದ್ರೆ ನೀರು ಮಾತ್ರ ಅಲ್ಲ, ಇದರ ಎಣ್ಣೆ ಕೂಡ ನಮಗೆ ಒಳ್ಳೆಯದನ್ನೇ ಮಾಡುತ್ತೆ. ಏನೇನು ಉಪಯೋಗಗಳಿವೆ ಅಂತ ಈಗ ನೋಡೋಣ...

2 Min read
Author : Anusha Kb
Published : Nov 12 2024, 02:26 PM IST
Share this Photo Gallery
  • FB
  • TW
  • Linkdin
  • Whatsapp
15

ಇತ್ತೀಚಿನ ದಿನಗಳಲ್ಲಿ ಎಲ್ಲರ ಬದುಕು ತುಂಬಾ ಬ್ಯುಸಿ ಆಗಿದೆ. ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಓಡಾಟದಲ್ಲಿಯೇ ಕಳೆಯುತ್ತಿದೆ. ಇದರಿಂದಾಗಿ ನಮ್ಮ ಆಹಾರ ಪದ್ಧತಿ ಕೂಡ ಬದಲಾಗಿದೆ. ಫಾಸ್ಟ್ ಫುಡ್ ನಮ್ಮ ಜೀವನದ ಒಂದು ಭಾಗವಾಗಿದೆ. ಇದರಿಂದ ನಮಗೆ ಹಲವು ರೀತಿಯ ಕಾಯಿಲೆಗಳು ಬರುತ್ತಿವೆ. ಆದರೆ, ಈ ಸಮಸ್ಯೆಗಳನ್ನು ಕಡಿಮೆ ಮಾಡಲು ಕಲೋಂಜಿ ಅಥವಾ ಕಾಳು ಜೀರಿಗೆ  ತುಂಬಾ ಸಹಾಯ ಮಾಡುತ್ತವೆ. ಏಕೆಂದರೆ ಈ ಬೀಜಗಳಲ್ಲಿ ಪೋಷಕಾಂಶಗಳು ತುಂಬಾ ಹೆಚ್ಚಾಗಿರುತ್ತವೆ. ಸೋಡಿಯಂ, ಕ್ಯಾಲ್ಸಿಯಂ, ಕಬ್ಬಿಣದಂತಹ ಖನಿಜಾಂಶಗಳಿಂದ ಕೂಡಿದ ಈ ಕಾಳು ಜೀರಿಗೆ ಹಲವು ರೀತಿಯ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ.

25

ಈ ಬೀಜಗಳಲ್ಲಿ ಕಾರ್ಬೋಹೈಡ್ರೇಟ್, ಪೊಟ್ಯಾಶಿಯಂ, ನಾರಿನಂಶ ಹೇರಳವಾಗಿದೆ. ಹಲವು ವಿಧದ ವಿಟಮಿನ್ ಗಳಿರುವ ಈ ಎಣ್ಣೆಯಲ್ಲಿ ಉತ್ಕರ್ಷಣ ನಿರೋಧಕ ಗುಣಗಳೂ ಇವೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

35

ಕ್ಯಾನ್ಸರ್ ತಡೆಗಟ್ಟುವಿಕೆ:

ಕಾಳುಜೀರಿಗೆ ಎಣ್ಣೆ ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ತಡೆಯುತ್ತದೆ. ಈ ಎಣ್ಣೆಯನ್ನು ಸೇವಿಸುವುದರಿಂದ ಕ್ಯಾನ್ಸರ್ ಕಣಗಳ ಬೆಳವಣಿಗೆ ನಿಲ್ಲುತ್ತದೆ. ಕ್ಯಾನ್ಸರ್ ಇರುವವರಲ್ಲಿ ಆರೋಗ್ಯಕರ ಕಣಗಳನ್ನು ಈ ಎಣ್ಣೆ ಹಾನಿಯಾಗದಂತೆ ಕಾಪಾಡುತ್ತದೆ. ಒಂದು ಲೋಟ ದ್ರಾಕ್ಷಿ ರಸದಲ್ಲಿ ಅರ್ಧ ಟೀ ಚಮಚ ಕಲೋಂಜಿ ಎಣ್ಣೆ ಬೆರೆಸಿ ದಿನಕ್ಕೆ 3 ಬಾರಿ ಕುಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.

45

ಕೆಮ್ಮು & ಆಸ್ತಮಾ:

ಕೆಲವರಿಗೆ ದೀರ್ಘಕಾಲದ ಕೆಮ್ಮಿನ ಸಮಸ್ಯೆ ಇರುತ್ತದೆ. ಅವರಿಗೆ ಮತ್ತು ಆಸ್ತಮಾದಿಂದ ಬಳಲುತ್ತಿರುವವರಿಗೆ ಕಲೋಂಜಿ ಎಣ್ಣೆ ಉಪಶಮನ ನೀಡುತ್ತದೆ. ಬಿಸಿ ಕಾಳುಜೀರಿಗೆ ಎಣ್ಣೆಯಿಂದ ಎದೆ ಮತ್ತು ಬೆನ್ನಿನ ಭಾಗಕ್ಕೆ ಮಸಾಜ್ ಮಾಡಬೇಕು. ಇದು ಶ್ವಾಸಕೋಶದ ಸೋಂಕನ್ನು ಕಡಿಮೆ ಮಾಡಿ ಉತ್ತಮ ಉಸಿರಾಟಕ್ಕೆ ಸಹಾಯ ಮಾಡುತ್ತದೆ.

ಮಧುಮೇಹ ನಿಯಂತ್ರಣ:

ಕಾಳುಜೀರಿಗೆ ಎಣ್ಣೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕಲೋಂಜಿಯನ್ನು ಹಾಲು ಇಲ್ಲದ ಬ್ಲ್ಯಾಕ್ ಟೀಯಲ್ಲಿ ಬೆರೆಸಿ ಕುಡಿಯಬಹುದು. ಸಾಸಿವೆ, ಕಲೋಂಜಿ ಮತ್ತು ಒಣಗಿದ ದಾಳಿಂಬೆ ಸಿಪ್ಪೆಯನ್ನು ಒಟ್ಟಿಗೆ ಪುಡಿ ಮಾಡಿ, ಅದರಿಂದ ಟೀ ಮಾಡಿ ಕುಡಿಯಬಹುದು.

55

ಕಿಡ್ನಿ ಸ್ಟೋನ್:

ಕಿಡ್ನಿ ಸ್ಟೋನ್ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆ ಇರುವವರು ಕಲೋಂಜಿ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನಬಹುದು. ಈ ಮಿಶ್ರಣಕ್ಕೆ ಎರಡು ಟೀ ಚಮಚ ಕಲೋಂಜಿ ಎಣ್ಣೆ ಮತ್ತು ಬಿಸಿ ನೀರು ಸೇರಿಸಿ ಪ್ರತಿದಿನ ಬೆಳಿಗ್ಗೆ ಆಹಾರ ಸೇವನೆಗೆ ಮೊದಲು  ಕುಡಿಯಬೇಕು.

ಹೃದ್ರೋಗ ಮತ್ತು ರಕ್ತದೊತ್ತಡ:

ವಿವಿಧ ಕಾರಣಗಳಿಂದ ಬರುವ ಹೃದ್ರೋಗ ಮತ್ತು ರಕ್ತದೊತ್ತಡ ಸಮಸ್ಯೆಗಳನ್ನು ಕಾಳು ಜೀರಿಗೆ ಎಣ್ಣೆ ಕಡಿಮೆ ಮಾಡುತ್ತದೆ. ಈ ಎಣ್ಣೆ ಹೃದಯದ ಆರೋಗ್ಯವನ್ನು ಸಹ ಸುಧಾರಿಸುತ್ತದೆ. ಟೀ, ಕಾಫಿ ಅಥವಾ ಸೂಪ್ ನಂತಹ ಯಾವುದೇ ಬಿಸಿ ಪಾನೀಯದಲ್ಲಿ ಒಂದು ಟೀ ಚಮಚ ಕಲೋಂಜಿ ಎಣ್ಣೆಯನ್ನು ಬೆರೆಸುವುದು ಒಳ್ಳೆಯದು. ಈ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡಿದರೆ ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಿಂದ ದೇಹ ಹಗುರವಾಗುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ರಕ್ತದೊತ್ತಡ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.

Latest Videos
Recommended Stories
Recommended image1
ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಬಹುಪಯೋಗಿ ಏಲಕ್ಕಿ
Recommended image2
ಮಲೆನಾಡಿನ ಮಳೆಗಾಲದ ಸವಿ ಕಳಲೆ ಪಲ್ಯ: ಆದ್ರೆ ಈ ಒಂದು ಪದಾರ್ಥ ಸೇರಿಸದಿದ್ರೆ ಕಳಲೇಪಲ್ಯದ ರುಚಿ ಅಷ್ಟಕಷ್ಟೇ!
Recommended image3
7 ಗಂಟೆ 18 ನಿಮಿಷದ ನಿದ್ದೆಯಲ್ಲಿ ಅಡಗಿದೆ ಬಿಪಿ, ಶುಗರ್ ಗುಟ್ಟು, ಏನಿದು ಹೊಸ ಅಧ್ಯಯನ ವರದಿ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved