ಮಲಗೋ ಮುನ್ನ ನೀವು ಮಾಡೋ ಈ ತಪ್ಪು ನಿಮ್ಮನ್ನ ಝೋಂಬಿಯನ್ನಾಗಿಸುತ್ತೆ!
ತೆಳ್ಳಗಾಗಲು ಜನ ಏನೇನೋ ಸರ್ಕಸ್ ಮಾಡ್ತಾರೆ. ನೀವು ಸಹ ತೆಳ್ಳಗಾಗಬೇಕು ಎಂದು ರಾತ್ರಿ ಊಟವನ್ನು ತಿನ್ನದಿದ್ದರೆ, ಈ ತಪ್ಪನ್ನು ಇಂದೇ ಸರಿಪಡಿಸಿ. ಇಲ್ಲದಿದ್ದರೆ, ನಿಮ್ಮ ಸ್ಥಿತಿಯು ಝೋಂಬಿಯಂತಾಗುತ್ತೆ. ಸಮಯ ಮೀರುವ ಮುನ್ನ ಎಚ್ಚೆತ್ತುಕೊಳ್ಳೋದು ಬೆಸ್ಟ್.
ಚಲನಚಿತ್ರಗಳಲ್ಲಿ, ನೀವು ಝೋಂಬಿಗಳನ್ನು (zombie) ನೋಡಿರಬೇಕು, ಅವರ ಕಣ್ಣುಗಳು ಊದಿಕೊಂಡಿರುತ್ತವೆ ಮತ್ತು ಕಣ್ಣುಗಳ ಕೆಳಗೆ ಕಪ್ಪು ಕಲೆಗಳಿರುತ್ತವೆ. ಅವರ ನಡಿಗೆ ಅಥವಾ ಕೆಲಸದ ವೇಗವೂ ತುಂಬಾ ನಿಧಾನವಾಗಿರುತ್ತದೆ ಅಲ್ವಾ? ನಿಮ್ಮ ಪರಿಸ್ಥಿತಿಯೂ ಅದೇ ಆಗುತ್ತೆ. ಒಂದು ವೇಳೆ ನೀವು ರಾತ್ರಿ ವೇಳೆ ಈ ತಪ್ಪು ಮಾಡಿದ್ರೆ. ರಾತ್ರಿ ಮಲಗೋ ಮುನ್ನ ಮಾಡೋ ಯಾವ ತಪ್ಪುಗಳು ಅನೇಕ ಜೀವಸತ್ವಗಳು ಮತ್ತು ಖನಿಜಗಳ ಕೊರತೆ, ಜೊತೆಗೆ ನಿದ್ರೆಯ ಕೊರತೆಗೆ ಕಾರಣವಾಗಬಹುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.
ಮಲಗುವ ಮೊದಲು ಈ ತಪ್ಪನ್ನು ಮಾಡಬೇಡಿ.
ಮಲಗುವ ಕನಿಷ್ಠ 2-3 ಗಂಟೆಗಳ ಮೊದಲು ಆಹಾರವನ್ನು (eating 3 hours before sleeping) ಸೇವಿಸಬೇಕು ಎಂದು ಎಲ್ಲಾ ತಜ್ಞರು ಹೇಳುತ್ತಾರೆ, ಇದರಿಂದ ಆಹಾರವು ಸಂಪೂರ್ಣವಾಗಿ ಜೀರ್ಣವಾಗುತ್ತದೆ ಮತ್ತು ಮಲಗುವಾಗ ಹೊಟ್ಟೆ ಖಾಲಿಯಾಗಿರುತ್ತದೆ. ಆದರೆ ನೀವು ರಾತ್ರಿ ಊಟ ಮಾಡಿದ್ರೆ ದಪ್ಪಗಾಗ್ತಿರಿ ಎಂದು ರಾತ್ರಿ ಊಟ ತಪ್ಪಿಸಿ, ಖಾಲಿ ಹೊಟ್ಟೆಯಲ್ಲಿ ಮಲಗಿದ್ರೆ ಸಮಸ್ಯೆ ಗ್ಯಾರಂಟಿ.
ಖಾಲಿ ಹೊಟ್ಟೆಯಲ್ಲಿ ಮಲಗೋದು ಹಾನಿಕಾರಕ
ಸೈನ್ಸ್ ಡೈರೆಕ್ಟ್ ಕುರಿತ ಸಂಶೋಧನೆಯ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಮಲಗುವುದು (sleeping empty stomach), ನೀವು ಮಲಗುವ ಸ್ವಲ್ಪ ಹೊತ್ತಿನ ಮೊದಲು ತಿನ್ನುವಷ್ಟೇ ಹಾನಿಕಾರಕವಾಗಿದೆ. ಈ ಕಾರಣದಿಂದಾಗಿ, ದೇಹದ ಕಾರ್ಯನಿರ್ವಹಣೆ ಹದಗೆಡುತ್ತದೆ.
ಜೀವಸತ್ವಗಳು ಮತ್ತು ಖನಿಜಗಳ (Minerals) ತೀವ್ರ ಕೊರತೆ
ರಾತ್ರಿ ಊಟವನ್ನು ಬಿಟ್ಟುಬಿಡುವುದರಿಂದ ದೇಹದಲ್ಲಿ ವಿಟಮಿನ್ ಬಿ 12 (Vitamin B 12), ವಿಟಮಿನ್ ಡಿ, ಕ್ಯಾಲ್ಸಿಯಂ, ಪ್ರೋಟೀನ್ ಇತ್ಯಾದಿಗಳ ಕೊರತೆಗೆ ಕಾರಣವಾಗಬಹುದು. ಆರೋಗ್ಯವಾಗಿರಲು, ನಿಮಗೆ ಪ್ರತಿದಿನ ನಿಗದಿತ ಪ್ರಮಾಣದ ಆಹಾರಗಳು ಬೇಕಾಗುತ್ತವೆ.
ನಿದ್ರೆಯ ಕೊರತೆಗೆ ಕಾರಣ
ಖಾಲಿ ಹೊಟ್ಟೆಯಲ್ಲಿ ಮಲಗೋದ್ರಿಂದ ಸಾಕಷ್ಟು ತೊಂದರೆ ಉಂಟಾಗುತ್ತೆ ಮತ್ತು ಹಸಿವಿನಿಂದಾಗಿ, ನೀವು ಹಾಸಿಗೆಯ ಮೇಲಿನ ಮಗ್ಗಲು ಬದಲಾಯಿಸುತ್ತಲೇ ಇರಬೇಕಾಗುತ್ತೆ. ಈ ಕಾರಣದಿಂದಾಗಿ, ನೀವು ಆಳವಾದ ಮತ್ತು ಆರಾಮದಾಯಕ ನಿದ್ರೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ ಮತ್ತು ನಿದ್ರೆಯ ಕೊರತೆ ಉಂಟಾಗಬಹುದು.
ದೇಹದಲ್ಲಿ ಕೊಬ್ಬು (Fat) ಹೆಚ್ಚಾಗಲು ಪ್ರಾರಂಭಿಸುತ್ತದೆ
ತೂಕ ಇಳಿಸಿಕೊಳ್ಳಲು (weight loss) ಅನೇಕ ಜನರು ರಾತ್ರಿ ಊಟವನ್ನು ತಪ್ಪಿಸುತ್ತಾರೆ. ಆದರೆ ಇದು ದೇಹವು ಹೆಚ್ಚಿನ ಕೊಬ್ಬನ್ನು ಸಂಗ್ರಹಿಸಲು ಕಾರಣವಾಗುತ್ತದೆ ಮತ್ತು ತೂಕವನ್ನು ಹೆಚ್ಚಿಸುತ್ತದೆ. ಹಾಗಾಗಿ ರಾತ್ರಿ ಊಟ ಮಾಡೋದನ್ನು ಬಿಡದಿರೋದು ಉತ್ತಮ.
ಇದು ಪರಿಹಾರ
ಕೆಲವೊಮ್ಮೆ ಖಾಲಿ ಹೊಟ್ಟೆಯಲ್ಲಿ ಮಲಗುವುದು ಅಷ್ಟು ಹಾನಿಕಾರಕವಲ್ಲ. ಆದರೆ ನೀವು ಪ್ರತಿದಿನ ಅದನ್ನೇ ಮಾಡಿದ್ರೆ ಇದರಿಂದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ರಾತ್ರಿ ಮಲಗುವ ಕನಿಷ್ಠ 2-3 ಗಂಟೆಗಳ ಮೊದಲು ನೀವು ಲಘು ಆಹಾರವನ್ನು ಸೇವಿಸಬೇಕು. ಇದು ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತೆ.