Health and Food tips: ಹೆಚ್ಚು ಕುಕೀ ತಿನ್ನೋ ಚಟ ನಿಮ್ಮನ್ನು ಅನಾರೋಗ್ಯಕ್ಕೆ ದೂಡಬಹುದು ಜೋಪಾನ!
ನೀವು ಕುಕೀ ಪ್ರಿಯರಾಗಿರಬಹುದು, ಆದರೆ ಹೆಚ್ಚು ಕುಕೀಗಳನ್ನು ತಿನ್ನುವ ಚಟವು ನಿಮ್ಮನ್ನು ಅನಾರೋಗ್ಯಕ್ಕೆ ದೂಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು ಇದರಿಂದ ಏನೆಲ್ಲಾ ಸಮಸ್ಯೆ ಕಾಡುತ್ತೆ
ಕೇಕ್, ಕುಕ್ಕೀಸ್ (cookies) ಎಂದರೆ ಪ್ರತಿಯೊಬ್ಬರಿಗೂ ಇಷ್ಟ. ಕೆಲವರಿಗಂತೂ ಕುಕ್ಕೀಸ್ ಎಂದ ತಕ್ಷಣ ಕೆಲವು ಜನರ ಬಾಯಿಯಲ್ಲಿ ನೀರು ಬರುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇದನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಅಗತ್ಯಕ್ಕಿಂತ ಹೆಚ್ಚು ಕುಕೀಗಳನ್ನು ತಿನ್ನುವುದರಿಂದ ನೀವು ಅನಾರೋಗ್ಯಕ್ಕೆ ಒಳಗಾಗಬಹುದು ಎಂದು ನಿಮಗೆ ತಿಳಿದಿದೆಯೇ?
ಮೊದಲು ಕುಕೀಗಳು ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಿ?
ಸರಳವಾಗಿ ಹೇಳುವುದಾದರೆ, ಕುಕೀಗಳು ಎಂದರೆ ಸಣ್ಣ ಕೇಕ್. ಇದನ್ನು ಸಾಮಾನ್ಯವಾಗಿ ಹಿಟ್ಟು, ಮೈದಾ, ಸಕ್ಕರೆ, ಚಾಕೊಲೇಟ್, ಬೆಣ್ಣೆ ಇತ್ಯಾದಿಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದಕ್ಕೆ ಕೆಲವು ಒಣ ಹಣ್ಣುಗಳನ್ನು (dry fruits) ಸಹ ಸೇರಿಸಲಾಗುತ್ತದೆ. ಇದು ಬಿಸ್ಕತ್ತುಗಳಂತೆ ಕಾಣುತ್ತದೆ, ಆದರೆ ಅದಕ್ಕೆ ಹೋಲಿಸಿದರೆ ಸ್ವಲ್ಪ ಭಾರವಾಗಿರುತ್ತದೆ.
ಕುಕೀ ತಿನ್ನೋದು ಏಕೆ ಕೆಟ್ಟದು?
ವರದಿ ಪ್ರಕಾರ, 2024 ರಲ್ಲಿ ಕುಕೀಗಳು ಮಾರ್ಕೆಟ್ ನಲ್ಲಿ ಅತಿ ಹೆಚ್ಚಾಗಿ ಮಾರಾಟವಾಗುತ್ತಿರುವ ಆಹಾರ. ಇದು ಭಾರತದ ಯುವಜನರಲ್ಲಿಯೂ ಜನಪ್ರಿಯವಾಗಿದೆ, ಆದರೆ ಅದರ ಅತಿಯಾದ ಸೇವನೆಯು ನಮ್ಮನ್ನು ಅನಾರೋಗ್ಯಕ್ಕೆ ದೂಡುತ್ತದೆ ಅನ್ನೋದಂತೂ ನಿಜ.
ಕುಕೀಗಳು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ, ಇದು ಇನ್ಸುಲಿನ್ (inslulin) ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಮಧುಮೇಹ (diabetes) ಮತ್ತು ಚಯಾಪಚಯ ಸಿಂಡ್ರೋಮ್ಗೆ ಕಾರಣವಾಗಬಹುದು.
ಕುಕೀಗಳು ಹೆಚ್ಚಿನ ಸಂಸ್ಕರಿಸಿದ ಆಹಾರಗಳಲ್ಲಿ ಬರುತ್ತವೆ. ಇದನ್ನು ರುಚಿಕರವಾಗಿಸಲು ವಿವಿಧ ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತದೆ, ಆರೋಗ್ಯಕ್ಕೆ ಹಾನಿಕಾರಕವಾದ ಅಂಶಗಳನ್ನು ಸೇರಿಸಲಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕ.
ಕುಕೀಗಳಲ್ಲಿ ಅನೇಕ ಪೋಷಕಾಂಶಗಳ ಕೊರತೆಯಿದೆ, ಇದು ದೇಹವನ್ನು ದುರ್ಬಲಗೊಳಿಸುತ್ತದೆ. ಹೆಚ್ಚು ಕುಕೀಗಳನ್ನು ತಿನ್ನುವುದು ಅತಿಯಾದ ಬಾಯಾರಿಕೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ದಿಹೈಡ್ರೇಶನ್ (dehydration) ಸಮಸ್ಯೆಯಿಂದ ಜನರಲ್ಲಿ ಹಲವಾರು ಸಮಸ್ಯೆಗಳು ಕಾಡಬಹುದು.
ಕುಕೀಗಳು ನಮ್ಮ ಜೀರ್ಣಕಾರಿ ಪ್ರಕ್ರಿಯೆಯನ್ನು (digestive system) ದುರ್ಬಲಗೊಳಿಸುತ್ತವೆ. ಇದನ್ನು ತಿಂದ ನಂತರ, ಹಸಿವು ಕಡಿಮೆಯಾಗುತ್ತದೆ ಮತ್ತು ದೇಹವು ಒಳಗೆ ದುರ್ಬಲವಾಗುತ್ತದೆ. ಇದರಿಂದ ನೀವು ಸಹ ನಿಶ್ಯಕ್ತಿಗೆ ಒಳಗಾಗುವ ಸಾಧ್ಯತೆ ಇದೆ. ಆದುದರಿಂದ ಕುಕೀ ತಿನ್ನದೇ ಇದ್ದರೆ ಉತ್ತಮ.