ಈ ಹುಳಿ ಹಣ್ಣನ್ನ ತಿಂದ್ರೆ ದೃಷ್ಟಿ ಕ್ರಮೇಣ ಹದ್ದಿನಂತೆ ತೀಕ್ಷ್ಣವಾಗುತ್ತೆ, ಕನ್ನಡಕವೂ ಬೇಡ!
ಕೆಲವು ಆಹಾರಗಳು ಕಣ್ಣಿನ ಆರೋಗ್ಯಕ್ಕೆ ವರದಾನವಾಗಿದ್ದು, ದೃಷ್ಟಿಹೀನತೆಯ ಅಪಾಯ ಕಡಿಮೆ ಮಾಡುತ್ತವೆ. ಆದ್ದರಿಂದ ಕಣ್ಣುಗಳನ್ನು ಆರೋಗ್ಯವಾಗಿಡಲು ಮತ್ತು ಕನ್ನಡಕ ಧರಿಸುವ ಸಾಧ್ಯತೆಯನ್ನು ತಡೆಯಲು ಸಹಾಯ ಮಾಡುವ ಆ 10 ಸೂಪರ್‌ಫುಡ್‌ಗಳು ಯಾವುವು ಎಂದು ನೋಡೋಣ ಬನ್ನಿ…

ಆ 10 ಸೂಪರ್‌ಫುಡ್ಸ್
ಇತ್ತೀಚಿನ ದಿನಗಳಲ್ಲಿ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಟಿವಿ ಸ್ಕ್ರೀನ್ ನೋಡುತ್ತಾ ಕಾಲ ಕಳೆಯವುದು ಹೆಚ್ಚಾಗಿದೆ. ಇದರ ಪರಿಣಾಮವಾಗಿ ಕಣ್ಣುಗಳು ಒತ್ತಡಕ್ಕೊಳಗಾಗುತ್ತಿವೆ, ದೃಷ್ಟಿ ದುರ್ಬಲಗೊಳ್ಳುತ್ತಿದೆ. ಅಷ್ಟೇ ಏಕೆ, ಬಹಳ ಬೇಗ ಕನ್ನಡಕ ಧರಿಸುವ ಸಮಯವೂ ಬಂದಿದೆ. ಈ ಸಮಸ್ಯೆ ದೊಡ್ಡವರು, ಚಿಕ್ಕವರು ಎನ್ನದೆ ಎಲ್ಲಾ ವಯೋಮಾನದವರಲ್ಲೂ ಸಾಮಾನ್ಯವಾಗಿದೆ. ಆದರೆ ಏನೆಲ್ಲಾ ಮಾಡುವ ನಾವು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಕಡೆ ಗಮನಹರಿಸುವುದಿಲ್ಲ. ನಿಜ ಹೇಳಬೇಕೆಂದರೆ ಕೆಲವು ಆಹಾರಗಳು ಕಣ್ಣಿನ ಆರೋಗ್ಯಕ್ಕೆ ವರದಾನವಾಗಿದ್ದು, ದೃಷ್ಟಿಹೀನತೆಯ ಅಪಾಯ ಕಡಿಮೆ ಮಾಡುತ್ತವೆ. ಆದ್ದರಿಂದ ಕಣ್ಣುಗಳನ್ನು ಆರೋಗ್ಯವಾಗಿಡಲು ಮತ್ತು ಕನ್ನಡಕ ಧರಿಸುವ ಸಾಧ್ಯತೆಯನ್ನು ತಡೆಯಲು ಸಹಾಯ ಮಾಡುವ ಆ 10 ಸೂಪರ್‌ಫುಡ್‌ಗಳು ಯಾವುವು ಎಂದು ನೋಡೋಣ ಬನ್ನಿ..
ಕ್ಯಾರೆಟ್
ಕ್ಯಾರೆಟ್‌ನಲ್ಲಿ ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದ್ದು, ಇದು ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ. ಈ ವಿಟಮಿನ್ ದೃಷ್ಟಿಗೆ ಅತ್ಯಗತ್ಯ ಮತ್ತು ರಾತ್ರಿ ಕುರುಡುತನದ ಅಪಾಯವನ್ನು ಕಡಿಮೆ ಮಾಡುತ್ತದೆ.
ಪಾಲಕ್ ಸೊಪ್ಪು
ಪಾಲಕ್ ಸೊಪ್ಪಿನಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಎಂಬ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು, ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ಕಣ್ಣುಗಳನ್ನು ರಕ್ಷಿಸುತ್ತದೆ ಮತ್ತು ಕಣ್ಣಿನ ಪೊರೆ ತಡೆಯಲು ಸಹಾಯ ಮಾಡುತ್ತದೆ.
ನೆಲ್ಲಿಕಾಯಿ
ಪ್ರತಿದಿನ ನೆಲ್ಲಿಕಾಯಿ ಸೇವಿಸುವುದರಿಂದ ಕಣ್ಣುಗಳ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನೆಲ್ಲಿಕಾಯಿ ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿರುವುದರಿಂದ, ಇದು ಕಣ್ಣಿನ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.
ಬಾದಾಮಿ
ಬಾದಾಮಿಯಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ಇದು ಕಣ್ಣಿನಲ್ಲಿರುವ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ. ಪ್ರತಿದಿನ 5-6 ನೆನೆಸಿದ ಬಾದಾಮಿ ತಿನ್ನುವುದರಿಂದ ಕಣ್ಣಿನ ಆಯಾಸ ಕಡಿಮೆಯಾಗುತ್ತದೆ.
ಮೊಟ್ಟೆ
ಮೊಟ್ಟೆಗಳನ್ನು ತಿನ್ನುವುದರಿಂದ ಕಣ್ಣುಗಳಲ್ಲಿನ ಮ್ಯಾಕುಲಾ ಎಂಬ ಪ್ರದೇಶವನ್ನು ರಕ್ಷಿಸುತ್ತದೆ, ಇದು ಸ್ಪಷ್ಟ ದೃಷ್ಟಿಗೆ ಮುಖ್ಯವಾಗಿದೆ. ಮೊಟ್ಟೆಗಳಲ್ಲಿ ಸತು ಮತ್ತು ಲುಟೀನ್ ಇದ್ದು, ಇದು ಕಣ್ಣಿನ ಪೊರೆಯ ಅಪಾಯದಿಂದ ರಕ್ಷಿಸುತ್ತದೆ.
ದಾಳಿಂಬೆ
ದಾಳಿಂಬೆ ಕಣ್ಣುಗಳಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ, ಇದು ಕಣ್ಣುಗಳಿಗೆ ಸಾಕಷ್ಟು ಆಮ್ಲಜನಕ ಮತ್ತು ಪೋಷಣೆಯನ್ನು ಒದಗಿಸುತ್ತದೆ. ದೃಷ್ಟಿ ಸುಧಾರಿಸಲು ಸಹ ಸಹಾಯ ಮಾಡುತ್ತದೆ.
ಎಳನೀರು
ಎಳನೀರು ದೇಹವನ್ನು ಹೈಡ್ರೇಟ್ ಆಗಿಡುತ್ತದೆ, ಇದು ಕಣ್ಣುಗಳಲ್ಲಿನ ಶುಷ್ಕತೆಯನ್ನು ಕಡಿಮೆ ಮಾಡುತ್ತದೆ ಮತ್ತು ಆಯಾಸವನ್ನು ನಿವಾರಿಸುತ್ತದೆ. ಇದು ಬೇಸಿಗೆಯಲ್ಲಿ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
ಅಗಸೆಬೀಜ
ಅಗಸೆಬೀಜದಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು ಕಣ್ಣುಗಳಲ್ಲಿನ ಶುಷ್ಕತೆ ಮತ್ತು ಉರಿಯೂತವನ್ನು ಕಡಿಮೆ ಮಾಡಿ, ಕಣ್ಣುಗಳನ್ನು ಆರೋಗ್ಯಕರವಾಗಿಡುತ್ತವೆ.
ಕಿತ್ತಳೆಹಣ್ಣು
ಕಿತ್ತಳೆ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ, ಇದು ಕಣ್ಣಿನ ಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ ಮತ್ತು ವೃದ್ಧಾಪ್ಯದಲ್ಲಿ ದೃಷ್ಟಿಯನ್ನು ಕಾಪಾಡುತ್ತದೆ.
ಬೀಟ್‌ರೂಟ್
ಬೀಟ್‌ರೂಟ್ ನೈಟ್ರೇಟ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತವೆ. ಇದು ಕಣ್ಣುಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ರೆಟಿನಾದ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.