- Home
- Life
- Health
- ರಾತ್ರಿ ಹೊತ್ತು ಬಿಸಿ ನೀರಿಗೆ ಇದನ್ನ ಹಾಕಿ ಕುಡಿಯಿರಿ… ಒಂದೇ ವಾರದಲ್ಲಿ ಉತ್ತಮ ಆರೋಗ್ಯ ನಿಮ್ಮದಾಗುತ್ತೆ!
ರಾತ್ರಿ ಹೊತ್ತು ಬಿಸಿ ನೀರಿಗೆ ಇದನ್ನ ಹಾಕಿ ಕುಡಿಯಿರಿ… ಒಂದೇ ವಾರದಲ್ಲಿ ಉತ್ತಮ ಆರೋಗ್ಯ ನಿಮ್ಮದಾಗುತ್ತೆ!
ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗಿನ ನೀರಿಗೆ ತುಪ್ಪ ಹಾಕಿ ಕುಡಿಯುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳು ಸಿಗುತ್ತೆ. ಇವತ್ತಿಂದಲೇ ಕುಡಿಯಲು ಆರಂಭಿಸಿ, ಒಂದೇ ವಾರದಲ್ಲಿ ಉತ್ತಮ ಆರೋಗ್ಯ ನಿಮ್ಮದಾಗುತ್ತೆ

ಇಡೀ ದಿನ ಕೆಲಸ ಮಾಡಿದ ನಂತರ, ತುಂಬಾನೆ ಸುಸ್ತಾಗಿರೋದರಿಂದ ರಾತ್ರಿಯಲ್ಲಿ ನೀವು ಶಾಂತಿಯುತ ನಿದ್ರೆಯನ್ನು ಬಯಸುತ್ತೀರಾ? ಅಥವಾ ಹೊಟ್ಟೆಯ ಸಮಸ್ಯೆಗಳು ನಿಮ್ಮನ್ನು ಮತ್ತೆ ಮತ್ತೆ ಕಾಡುತ್ತಿವೆಯೇ? ಹೌದು ಎಂದಾದರೆ, ಆಯುರ್ವೇದವು (Ayurveda)ತುಂಬಾ ಸರಳ ಮತ್ತು ಪರಿಣಾಮಕಾರಿ ಪರಿಹಾರವನ್ನು ನೀಡಿದೆ. ರಾತ್ರಿ ಮಲಗುವ ಮೊದಲು ಒಂದು ಚಮಚ ದೇಸಿ ತುಪ್ಪವನ್ನು ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಹಾಕಿ ಕುಡಿಯಿರಿ. ಅಷ್ಟೇ ತಾನೇ ಎನಿಸಬಹುದು, ಆದರೆ ಇದರ ಪ್ರಯೋಜನಗಳು ಅಚ್ಚರಿ ಮೂಡಿಸುತ್ತವೆ.
ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ:
ರಾತ್ರಿಯಲ್ಲಿ ತುಪ್ಪ ಮತ್ತು ಉಗುರು ಬೆಚ್ಚಗಿನ ನೀರನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದು ಆಹಾರದ ಸರಿಯಾದ ಜೀರ್ಣಕ್ರಿಯೆಗೆ (digestion) ಸಹಾಯ ಮಾಡುತ್ತದೆ ಮತ್ತು ಹೊಟ್ಟೆಯ ಅನಿಲ, ಆಮ್ಲೀಯತೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತವೆ.
ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ:
ನಿಮಗೆ ರಾತ್ರಿ ಸರಿಯಾಗಿ ನಿದ್ರೆ ಬಾರದೆ ಇದ್ದರೆ, ತುಪ್ಪವು ನಿಮ್ಮ ನಿದ್ರೆಯ ಸಮಸ್ಯೆಯನ್ನು (sleeping problem) ಪರಿಹರಿಸಬಹುದು. ತುಪ್ಪದಲ್ಲಿರುವ ಕೊಬ್ಬಿನಾಮ್ಲಗಳು ಮೆದುಳಿಗೆ ವಿಶ್ರಾಂತಿ ನೀಡುತ್ತವೆ, ಇದು ಆಳವಾದ ಮತ್ತು ಉತ್ತಮ ನಿದ್ರೆಗೆ ಕಾರಣವಾಗುತ್ತದೆ.
ಕೀಲು ನೋವಿನಿಂದ ಪರಿಹಾರ:
ತುಪ್ಪದ ನಿಯಮಿತ ಸೇವನೆಯು ಮೂಳೆಗಳು ಮತ್ತು ಕೀಲುಗಳಿಗೆ ಪ್ರಯೋಜನಕಾರಿಯಾಗಿದೆ. ಇದು ಕೀಲುಗಳನ್ನು ಸ್ಮೂತ್ ಮಾಡುತ್ತೆ, ಅಲ್ಲದೇ ಇದು ಕೀಲುಗಳಲ್ಲಿನ ಬಿಗಿತ ಮತ್ತು ನೋವಿನಿಂದ ಪರಿಹಾರ ನೀಡುತ್ತದೆ.
ಚರ್ಮದಲ್ಲಿ ನೈಸರ್ಗಿಕ ಹೊಳಪು:
ತುಪ್ಪವು ದೇಹವನ್ನು ಒಳಗಿನಿಂದ ತೇವಗೊಳಿಸುತ್ತದೆ. ನೀವು ಅದನ್ನು ಉಗುರು ಬೆಚ್ಚಗಿನ ನೀರಿನಿಂದ ಕುಡಿದಾಗ, ಅದು ದೇಹದ ವಿಷವನ್ನು ಹೊರಹಾಕುತ್ತದೆ ಮತ್ತು ಚರ್ಮಕ್ಕೆ ಹೊಳಪು (glowing skin) ಮತ್ತು ಮೃದುತ್ವವನ್ನು ತರುತ್ತದೆ.
ತೂಕ ಇಳಿಕೆಗೂ ಸಹಾಯ ಮಾಡುತ್ತದೆ:
ಸರಿಯಾದ ಪ್ರಮಾಣದಲ್ಲಿ ದೇಸಿ ತುಪ್ಪ ಸೇವಿಸುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ಇದು ಕೊಬ್ಬನ್ನು ವೇಗವಾಗಿ ಸುಡುತ್ತದೆ ಮತ್ತು ತೂಕವನ್ನು ನಿಯಂತ್ರಣದಲ್ಲಿಡುತ್ತದೆ.
ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ:
ತುಪ್ಪವು ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ, ಇದು ನರಕೋಶಗಳನ್ನು ಬಲಪಡಿಸುತ್ತದೆ. ಇದರ ಸೇವನೆಯು ಸ್ಮರಣ ಶಕ್ತಿಯನ್ನು (memory power) ಹೆಚ್ಚಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.