ಈ ಆಹಾರವನ್ನು ಜೊತೆಯಾಗಿ ಸೇವಿಸುವ ಮುನ್ನ ಇರಲಿ ಎಚ್ಚರ
First Published Jan 1, 2021, 3:01 PM IST
ಅನೇಕ ಜನರು ತಮ್ಮ ತಟ್ಟೆಯಲ್ಲಿ ಅನೇಕ ಪದಾರ್ಥಗಳನ್ನು ಜೊತೆಯಾಗಿ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ, ಆದರೆ ಹಾಗೆ ಮಾಡುವ ಮೊದಲು, ಆಯುರ್ವೇದದ ಪ್ರಕಾರ ಏನನ್ನು ತಿನ್ನಬಾರದು ಎಂಬುದನ್ನು ತಿಳಿದಿರಬೇಕು. ಒಟ್ಟಿಗೆ ತಿನ್ನಬಾರದ ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ.

ಆಹಾರಗಳ ಸೇವನೆ ಕೇವಲ ಹೊಟ್ಟೆ ತುಂಬಲು ಮಾತ್ರ ಎಂದು ತಿಳಿದರೆ ತಪ್ಪಾಗಬಹುದು. ಯಾಕೆಂದರೆ ಎರಡು ವಿರುದ್ಧವಾದ ಆಹಾರಗಳನ್ನು ಜೊತೆಯಾಗಿ ಸೇವಿಸಿದರೆ ಅದರಿಂದ ಆರೋಗ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಅಜೀರ್ಣದ ಸಮಸ್ಯೆ ಹೆಚ್ಚಾಗಿ ಕಾಡುವ ಸಾಧ್ಯತೆ ಇದೆ.

ಹಾಲಿನೊಂದಿಗೆ ಇವುಗಳನ್ನು ಸೇವನೆ ಮಾಡುವುದು ಹಾನಿಕಾರಕ
ಉದ್ದಿನ ಬೇಳೆ, ಪನೀರ್, ಮೊಟ್ಟೆ, ಮಾಂಸ
ಉದ್ದಿನ ಬೇಳೆಯನ್ನು ಸೇವಿಸಿದ ನಂತರ ಹಾಲನ್ನು ಕುಡಿಯಬೇಡಿ. ಹಸಿರು ತರಕಾರಿ ಮತ್ತು ಮೂಲಂಗಿಗಳನ್ನು ಸೇವಿಸಿದ ಬಳಿಕವೂ ಹಾಲನ್ನು ಕುಡಿಯಬಾರದು. ಮೊಟ್ಟೆ, ಮಾಂಸ ಮತ್ತು ಚೀಸ್ ಸೇವಿಸಿದ ನಂತರ ಹಾಲು ಕುಡಿಯುವುದನ್ನು ತಪ್ಪಿಸಬೇಕು. ಅವುಗಳನ್ನು ಒಟ್ಟಿಗೆ ತಿನ್ನುವುದರ ಮೂಲಕ ಅದು ಜೀರ್ಣಕ್ಕೆ ಕಾರಣವಾಗಬಹುದು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?