ಸೌತೆಕಾಯಿ ತಿಂದ್ಮೇಲೆ ಈ ತಪ್ಪು ಮಾಡ್ತೀರಾ? ಬೇಡ, ಬಿಟ್ಟು ಬಿಡಿ
ಬೇಸಿಗೆಯಲ್ಲಿ ಬಿಸಿಲಿನ ಧಗೆ ನಿವಾರಿಸಲು ತಂಪು ಪಾನೀಯ, ನೀರು ಹೆಚ್ಚಿರುವ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಬೇಸಿಗೆ ಸೂಪರ್ ಫುಡ್‌ಗಳಲ್ಲಿ ಸೌತೆಕಾಯಿಯೂ ಸೇರಿದೆ. ಇದು ದೇಹವನ್ನು ತಂಪಾಗಿಸುತ್ತದೆ ಮತ್ತು ದೇಹದ ನೀರು ಖಾಲಿ ಮಾಡಲು ಬಿಡುವುದಿಲ್ಲ. ಸೌತೆಕಾಯಿ ಎಂದಿಗೂ ದೇಹವನ್ನು ನಿರ್ಜಲೀಕರಣಗೊಳಿಸುವುದಿಲ್ಲ ಮತ್ತು ಅದರಲ್ಲಿ ಇರುವ ಪೋಷಕಾಂಶಗಳು ದೇಹಕ್ಕೆ ಪ್ರಯೋಜನಕಾರಿ. ಅದಕ್ಕಾಗಿಯೇ ಜನರು ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುತ್ತಾರೆ.
ಬೇಸಿಗೆಯ ಧಗೆ ನೀಗಿಸಲು ನೀವೂ ಸೌತೆಕಾಯಿಯನ್ನು ತಿನ್ನುತ್ತಿದ್ದರೆ, ಈ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ, ಇಲ್ಲದಿದ್ದರೆ ಅದನ್ನು ಸೌತೆಕಾಯಿಯ ಪೋಷಕಾಂಶಗಳನ್ನು ಸರಿಯಾಗಿ ಪಡೆಯಲು ಸಾಧ್ಯವಾಗುವುದಿಲ್ಲ.
ಸೌತೆಕಾಯಿ ತಿಂದ ಮೇಲೆ ನೀರು ಕುಡಿದರೆ ದೇಹಕ್ಕೆ ಅಗತ್ಯ ಪೋಷಕಾಂಶಗಳು ಸಿಗುವುದಿಲ್ಲ. ಇದಲ್ಲದೆ, ವಿಸರ್ಜಿಸುವ ಪ್ರಕ್ರಿಯೆ ಸಹ ತುಂಬಾ ಹಾನಿಗೊಳಗಾಗುತ್ತದೆ.
ಸೌತೆಕಾಯಿಯಲ್ಲಿ ವಿಟಮಿನ್ ಸಿ, ಕೆ, ಮೆಗ್ನೀಷಿಯಂ, ತಾಮ್ರ, ಪೊಟ್ಯಾಷಿಯಂ, ಮ್ಯಾಂಗನೀಸ್‌ನಂತಹ ಪೋಷಕಾಂಶಗಳಿವೆ. ಆದರೆ ಸೌತೆಕಾಯಿ ತಿಂದ ನಂತರ ಅಪ್ಪಿ ತಪ್ಪಿಯೂ ನೀರು ಕುಡಿಯಬಾರದು. ಅದು ಏನು ಹಾನಿ ಮಾಡುತ್ತದೆ ಎಂದು ಇಲ್ಲಿದೆ ನೋಡಿ..
ವಾಸ್ತವವಾಗಿ, ಸೌತೆಕಾಯಿಯಲ್ಲಿ 95% ಮಾತ್ರ ನೀರಿತ್ತದೆ. ಅಲ್ಲದೆ, ಮೇಲೆ ಹೇಳಿದ ಎಲ್ಲಾ ಅಂಶಗಳನ್ನು ಇದು ಒಳಗೊಂಡಿದೆ. ಇದು ಚರ್ಮ ಮತ್ತು ಕೂದಲನ್ನು ಶಾಶ್ವತವಾಗಿ ಉತ್ತಮವಾಗಿರುವಂತೆ ಮಾಡುತ್ತದೆ. ಆದರೆ ಸೌತೆಕಾಯಿ ತಿಂದ ಮೇಲೆ ನೀರು ಕುಡಿದರೆ ಈ ಪೋಷಕಾಂಶಗಳು ದೇಹಕ್ಕೆ ಲಭ್ಯವಿರುವುದಿಲ್ಲ.
ಸೌತೆಕಾಯಿ ತಿನ್ನುವುದರಿಂದ ಮಲಬದ್ಧತೆಗೆ ಮದ್ದಾಗಬಹುದು. ಆದರೆ ಸೌತೆಕಾಯಿ ತಿಂದ ಮೇಲೆ ನೀರು ಕುಡಿದರೆ, ಲೂಸ್ ಮೋಷನ್ ಉಂಟಾಗುವ ಸಾಧ್ಯತೆ ಇದೆ. ಆದುದರಿಂದ ಸೌತೆಕಾಯಿ ತಿಂದ ನಂತರ ಅರ್ಧ ಗಂಟೆ ನೀರು ಕುಡಿಯಲೇ ಬೇಡಿ.
ಸೌತೆಕಾಯಿ ಮಾತ್ರವಲ್ಲ, ನೀರಿನ ಸಮೃದ್ಧವಾಗಿರುವ ಯಾವುದೇ ಹಣ್ಣು ಅಥವಾ ತರಕಾರಿ ತಿಂದು ನೀರು ಕುಡಿಯಬಾರದು ಎಂದು ವೈದ್ಯರು ಹೇಳುತ್ತಾರೆ. ಆದ್ದರಿಂದ ಕಲ್ಲಂಗಡಿ, ಅನಾನಸ್ ತಿನ್ನುತ್ತಿದ್ದರೆ, ನೀರನ್ನು ಅರ್ಧ ಗಂಟೆ ಬಳಿಕ ಸೇವಿಸಿ.
ಯಾವುದೇ ಆಹಾರವನ್ನು ಜೀರ್ಣಿಸಿಕೊಳ್ಳಲು ಕರುಳಿಗೆ ಪಿಎಚ್ ಮಟ್ಟ ಬೇಕಾಗುತ್ತದೆ, ಆದರೆ ಸೌತೆಕಾಯಿ ಜೊತೆ ನೀರು ಕುಡಿಯುವುದರಿಂದ ಪಿಎಚ್ ಮಟ್ಟವನ್ನು ದುರ್ಬಲಗೊಳಿಸುತ್ತದೆ ಮತ್ತು ವಿಸರ್ಜಿಸಲು ರೂಪುಗೊಳ್ಳಬೇಕಾದ ಆಮ್ಲವನ್ನು ತಡೆಯುತ್ತದೆ.
ಸೌತೆಕಾಯಿ ಅಥವಾ ಯಾವುದೇ ಹಸಿ ತರಕಾರಿಯ ಪ್ರಯೋಜನಗಳನ್ನು ದೇಹವು ಪೂರೈಸಬೇಕೆಂದು ಬಯಸಿದರೆ, ಸೌತೆಕಾಯಿ ಜೊತೆ ನೀರು ಕುಡಿಯುವುದನ್ನು ತಪ್ಪಿಸಿ.