ಹೆಂಗಸರ ಕಾಡದ ಆರೋಗ್ಯ ಸಮಸ್ಯೆ ಗಂಡಸರ ಹಿಂದೆ ಬೀಳೋದು?
ಕೆಲವೊಂದು ಆರೋಗ್ಯ ಸಮಸ್ಯೆಗಳು ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರನ್ನೇ ಕಾಡುತ್ತೆ. ಯಾವುವು ಆ ಸಮಸ್ಯೆಗಳು ಅನ್ನೋದನ್ನು ತಿಳಿಯೋಣ.
ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಒಂದಲ್ಲೊಂದು ಕಾಯಿಲೆಗಳು ಬಾಧಿಸುತ್ತವೆ. ಆದರೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಮಹಿಳೆಯರಿಗಿಂತ, ಪುರುಷರಲ್ಲಿಯೇ ಹೆಚ್ಚು. ಅಂತಹ ಸಮಸ್ಯೆಗಳು ಯಾವುವು? ಅನ್ನೋದರ ಬಗ್ಗೆ ತಿಳಿಯೋಣ.
ಪ್ರೋಸ್ಟೇಟ್ ಕ್ಯಾನ್ಸರ್ (prostate cancer)
ಪ್ರೋಸ್ಟೇಟ್ ಕ್ಯಾನ್ಸರ್ ಪುರುಷರನ್ನೇ ಕಾಡುತ್ತೆ. ಹೆಚ್ಚಿನ ಪುರುಷರು ಈ ಸಮಸ್ಯೆಗೆ ಒಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಾರೆ. ಮಹಿಳೆಯರಲ್ಲಿ ಇದು ಕಂಡು ಬರೋದು ತೀರಾ ಕಡಿಮೆ.
ಹೆಚ್‌ಐವಿ (HIV)
ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, 2019 ರಲ್ಲಿ ಹೊಸ ಎಚ್ಐವಿ ಸೋಂಕುಗಳಲ್ಲಿ ಪುರುಷರು ಮಹಿಳೆಯರನ್ನು ಮೀರಿಸಿದ್ದಾರೆ. ವಿಶ್ವಾದ್ಯಂತ ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಕಡಿಮೆ ಪ್ರಮಾಣದಲ್ಲಿ ಕಂಡು ಬಂದಿದೆ.
ಪಾರ್ಕಿನ್ಸನ್ ಕಾಯಿಲೆ (parkinson)
ಮಹಿಳೆಯರಿಗಿಂತ ಪುರುಷರು ಪಾರ್ಕಿನ್ಸನ್ ಕಾಯಿಲೆಗೆ 1.5 ಪಟ್ಟು ಹೆಚ್ಚು ಒಳಗಾಗುತ್ತಾರೆ. ಸ್ನಾಯುಗಳು ಸ್ಲೋ ಮತ್ತು ಗಟ್ಟಿಯಾಗುತ್ತವೆ. ದೇಹವು ಅನಿಯಂತ್ರಿತವಾಗಿ ಅಲುಗಾಡಲು ಪ್ರಾರಂಭಿಸುತ್ತದೆ.
ಆಟಿಸಂ ಸ್ಪೆಕ್ಟ್ರಮ್ (autism spectrum disorder)
ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಪುರುಷರು ಆಟಿಸಂ ಸ್ಪೆಕ್ಟ್ರಮ್ ಅಸ್ವಸ್ಥತೆಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಮಹಿಳೆಯರಿಗಿಂತ ತುಂಬಾನೆ ಹೆಚ್ಚಾಗಿರುತ್ತೆ. ಪುರುಷರಲ್ಲಿ 52 ಜನರಲ್ಲಿ ಒಬ್ಬರಿಗೆ ಈ ಸಮಸ್ಯೆ ಕಂಡು ಬಂದರೆ, ಮಹಿಳೆಯರಲ್ಲಿ 252 ಜನರಲ್ಲಿ ಒಬ್ಬರಿಗೆ ಈ ಸಮಸ್ಯೆ ಕಂಡು ಬರುತ್ತೆ.
ಮೆಲನೋಮಾ (melanoma)
ಮೆಲನೋಮಾ ಎಂಬ ಗಂಭೀರ ರೀತಿಯ ಚರ್ಮದ ಕ್ಯಾನ್ಸರ್‌ಗೆ ಪುರುಷರು ಹೆಚ್ಚು ಒಳಗಾಗುತ್ತಾರೆ. ಪುರುಷರಲ್ಲಿ ರೋಗ ನಿರ್ಣಯ ಮಾಡಿದಾಗ ಇದು ಗಂಭೀರವಾಗುವ ಸಾಧ್ಯತೆಯಿದೆ. ಇದರಿಂದ ಸಾವು ಕೂಡ ಸಂಭವಿಸುವ ಸಾಧ್ಯತೆ ಇದೆ.