ಅಳು ಬಂದರೆ ತಡೀಬೇಡಿ, ಕಣ್ಣೀರು ಸುರಿಸಿದರೆ ಆರೋಗ್ಯಕ್ಕೆ ಒಳಿತು!

First Published Mar 31, 2021, 3:59 PM IST

ನಗುವುದರಿಂದ ಆಗುವ ಲಾಭಗಳ ಬಗ್ಗೆ  ಸಾಕಷ್ಟು ಕೇಳಿರಬಹುದು ಅಥವಾ ಓದಿರಬಹುದು. ಆದರೆ ಅಳು ಕೂಡ ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂಬುದು ತಿಳಿದಿದೆಯೇ? ಹೌದು, ಅಳುವುದೂ ಒಬ್ಬ ವ್ಯಕ್ತಿಗೆ ಕಡ್ಡಾಯ, ಮತ್ತು ಇದು ಆತನ ಮನಸ್ಸನ್ನು ಹಗುರಗೊಳಿಸುವುದಲ್ಲದೆ, ದೇಹಕ್ಕೆ ಲಾಭವನ್ನೂ ನೀಡುತ್ತದೆ. ಆದ್ದರಿಂದ ಅಳುವುದರಿಂದ ವ್ಯಕ್ತಿಗೆ ಯಾವ ರೀತಿ ಪ್ರಯೋಜನ ಎಂದು ತಿಳಿದುಕೊಳ್ಳೋಣ.