ಹಳ್ಳಿಯ ಮಕ್ಕಳಿಗೆ ಹೋಲಿಸಿದ್ರೆ, ನಗರ ಮಕ್ಕಳು ತಡವಾಗಿ ಮಾತನಾಡ್ತಾರಂತೆ ಯಾಕೆ ಗೊತ್ತಾ?
ನೀವು ನಗರದಲ್ಲಿ ವಾಸಿಸುತ್ತಿದ್ದರೆ, ನಿಮ್ಮ ಮಗು ಸ್ವಲ್ಪ ತಡವಾಗಿ ಮಾತನಾಡಲು ಕಲಿಯಬಹುದು. ಇದಕ್ಕೆ ಕಾರಣವೇನು ಗೊತ್ತಾ? ನಗರ ಪ್ರದೇಶದ ಮಕ್ಕಳು ತಡವಾಗಿ ಮಾತನಾಡಲು ಪ್ರಾರಂಭಿಸುತ್ತಾರೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ ಅದರ ಬಗ್ಗೆ ತಿಳಿಯೋಣ.
ಮಕ್ಕಳ ಬೆಳವಣಿಗೆ (Children developement) ಅಥವಾ ಅಭಿವೃದ್ಧಿಯ ಬಗ್ಗೆ ಮಾತನಾಡುವುದಾದರೆ, ಅವರ ಜೀವನದ ಮೊದಲ ನಾಲ್ಕು ವರ್ಷಗಳು ತುಂಬಾನೆ ಇಂಪಾರ್ಟಂಟ್ ಆಗಿದೆ. ಈ ಸಮಯದಲ್ಲಿ ಮಕ್ಕಳು ಮಾತನಾಡಲು ಕಲಿಯುತ್ತಾರೆ, ನಡೆಯಲು ಪ್ರಾರಂಭಿಸುತ್ತಾರೆ ಮತ್ತು ಇದರೊಂದಿಗೆ ಅವರ ಬೆಳವಣಿಗೆ, ಬುದ್ಧಿ ಶಕ್ತಿ ಬೆಳವಣಿಗೆ ಕೂಡ ಆಗುತ್ತೆ. ಆದರೆ ನಿಮಗೆ ಗೊತ್ತಾ? ನಗರಗಳಲ್ಲಿ ವಾಸಿಸುವ ಮಕ್ಕಳು ತಡವಾಗಿ ಮಾತನಾಡಲು ಪ್ರಾರಂಭಿಸುತ್ತಾರೆ ಮತ್ತು ಇದಕ್ಕೆ ಹೋಲಿಸಿದರೆ, ಹಳ್ಳಿಯ ಮಕ್ಕಳು ಬೇಗನೆ ಮಾತನಾಡಲು ಪ್ರಾರಂಭಿಸುತ್ತಾರೆ.
ಹೆಚ್ಚಿನ ಶಿಶುಗಳು 18 ತಿಂಗಳ ವಯಸ್ಸಿನಲ್ಲಿ ಮಾತನಾಡಲು ಪ್ರಾರಂಭಿಸುತ್ತವೆ. ಎರಡರಿಂದ ಮೂರು ವರ್ಷ ವಯಸ್ಸಿನ ಹೊತ್ತಿಗೆ ಪೂರ್ಣ ವಾಕ್ಯಗಳನ್ನು ಮಾತನಾಡಲು ಪ್ರಾರಂಭಿಸುತ್ತಾರೆ. ಆದರೆ ಎಲ್ಲರೂ ಒಂದೇ ರೀತಿ ಇರುತ್ತಾರೆ ಅನ್ನಲಾಗೋದಿಲ್ಲ, ಯಾಕಂದ್ರೆ ಪ್ರತಿ ಮಗುವಿನ ಬೆಳವಣಿಗೆಯು ವಿಭಿನ್ನವಾಗಿರುತ್ತದೆ ಮತ್ತು ಕೆಲವು ಮಕ್ಕಳು ಬೇಗನೆ ಮಾತನಾಡಲು ಪ್ರಾರಂಭಿಸುತ್ತಾರೆ ಮತ್ತು ಇನ್ನು ಕೆಲವು ಮಕ್ಕಳು ನಿಧಾನವಾಗಿ ಮಾತನಾಡುತ್ತಾರೆ ಅದರಲ್ಲೂ ಗ್ರಾಮಕ್ಕೆ ಹೋಲಿಕೆ ಮಾಡಿದ್ರೆ ನಗರ ಮಕ್ಕಳು ತುಂಬಾನೆ ನಿಧಾನವಾಗಿ ಮಾತನಾಡುತ್ತಾರೆ. ಈ ವಿಷಯದ ಬಗ್ಗೆ ಅಧ್ಯಯನ ನಡೆದಿದೆ. ಅದರ ಬಗ್ಗೆ ತಿಳಿಯೋಣ.
ಅಧ್ಯಯನವನ್ನು ಹೇಗೆ ಮಾಡಲಾಯಿತು?: ಈ ಅಧ್ಯಯನದ (Study) ಪ್ರಮುಖ ಲೇಖಕಿ ಎಲಿಕಾ ಬರ್ಗೆಲ್ಸನ್, ಮಕ್ಕಳ ಮಾತಿನಲ್ಲಿ ಅಂತಹ ವ್ಯತ್ಯಾಸ ಹೇಗೆ ಇರಲು ಸಾಧ್ಯ ಎಂದು ಹೇಳುತ್ತಾರೆ. ಈ ಅಧ್ಯಯನದಲ್ಲಿ, ನಾಲ್ಕು ವರ್ಷದವರೆಗಿನ 1001 ಮಕ್ಕಳನ್ನು ತೆಗೆದುಕೊಳ್ಳಲಾಯಿತು ಮತ್ತು ಈ ಮಕ್ಕಳನ್ನು ನಗರಗಳು ಮತ್ತು ಹಳ್ಳಿಗಳಲ್ಲಿ ವಾಸಿಸುವ ಮಕ್ಕಳು ಎಂದು ವಿಭಾಗ ಮಾಡಿ, ಮಕ್ಕಳ ಭಾಷಾ ಕಲಿಕೆಯ ಮೇಲೆ ಅವರು ಬೆಳೆದ ವಾತಾವರಣ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ಮಾಡಲಾಯಿತು.
ಈ ಅಂಶಗಳ ಬಗ್ಗೆ ಗಮನ ಹರಿಸಲಾಗಿದೆ: ಈ ಅಧ್ಯಯನವು ಮಕ್ಕಳ ಮಾತನಾಡುವ ಸಮಯ, ಗಂಡು ಮತ್ತು ಹೆಣ್ಣು, ಅವರ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಬಹು ಭಾಷೆಗಳಿಗೆ ಒಡ್ಡಿಕೊಳ್ಳುವಂತಹ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಅಧ್ಯಯನದಲ್ಲಿ, ತ್ವರಿತವಾಗಿ ಮಾತನಾಡಲು ಕಲಿಯುವ ಮಕ್ಕಳು, ತಮ್ಮ ಮನೆಯ ಹಿರಿಯ ಸದಸ್ಯರಿಂದ ಹೆಚ್ಚು ಕೇಳುತ್ತಾರೆ ಎಂದು ತಿಳಿದುಬಂದಿದೆ.
ಪೋಷಕರು ಏನು ಮಾಡಬೇಕು?: ಪೋಷಕರ ಆರ್ಥಿಕ ಮತ್ತು ಸಾಮಾಜಿಕ ಪರಿಸರವು (social sarounding)ಮಗುವಿನ ಮಾತನಾಡುವ ಕಲಿಕೆಗೆ ಕಾರಣವಾಗಿದೆ ಎಂದು ಈ ಅಧ್ಯಯನವು ಹೇಳುತ್ತದೆ. ತ್ವರಿತವಾಗಿ ಮಾತನಾಡಲು ಕಲಿಯುವ ಮಕ್ಕಳು ತಮ್ಮ ಸುತ್ತಲಿನ ಜನರಿಂದ ಪ್ರಭಾವಿತರಾಗುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ನೀವು ಮಗುವಿನೊಂದಿಗೆ ಹೆಚ್ಚು ಮಾತನಾಡಿದರೆ, ಅವನು ಬೇಗನೆ ಮಾತನಾಡಲು ಕಲಿಯಬಹುದು.
ನಗರಗಳಲ್ಲಿ ಮಕ್ಕಳು ತಡವಾಗಿ ಮಾತನಾಡುತ್ತಾರೆ: ಮಕ್ಕಳ ಭಾಷೆಯನ್ನು ಮಾತನಾಡುವ ಅಥವಾ ಕಲಿಯುವ ಸಂಬಂಧವು ನಗರ ಮತ್ತು ಹಳ್ಳಿಯೊಂದಿಗೆ ಇದೆ, ನಗರಗಳಲ್ಲಿನ ಮಕ್ಕಳಿಗೆ ಮಾತನಾಡಲು ಅವಕಾಶ ಸಿಗೋದು ಕಡಿಮೆ, ಆದರೆ ಹಳ್ಳಿಯಲ್ಲಿ ಜನರು ಸುತ್ತಲೂ ವಾಸಿಸುತ್ತಾರೆ ಮತ್ತು ಮಕ್ಕಳು ತಮ್ಮ ಸುತ್ತಲಿನ ಜನರ ಮಾತನ್ನು ಕೇಳುತ್ತಲೇ ಇರುತ್ತಾರೆ, ಇದರಿಂದ ಅವರು ಬೇಗನೆ ಮಾತನಾಡಲು (learn to talk) ಕಲಿಯಬಹುದು.
ಅಧ್ಯಯನ ಹೇಗೆ ನಡೆಯಿತು?: ಹಾರ್ವರ್ಡ್ ವಿಶ್ವವಿದ್ಯಾಲಯವು 12 ದೇಶಗಳು ಮತ್ತು 43 ಭಾಷೆಗಳನ್ನು ಒಳಗೊಂಡ ಅಧ್ಯಯನವನ್ನು ನಡೆಸಿತು. ಈ ಅಧ್ಯಯನದಲ್ಲಿ, ನಗರ ಮತ್ತು ಹಳ್ಳಿಯ ಮಕ್ಕಳನ್ನು ಭಾಗಿಯಾಗಿಸಿತು. ಮಕ್ಕಳ ವಯಸ್ಸಿನ ಬಗ್ಗೆ ಮಾತನಾಡುವುದಾದರೆ, ಎರಡು ತಿಂಗಳಿನಿಂದ ನಾಲ್ಕು ವರ್ಷದವರೆಗಿನ ಮಕ್ಕಳ ಧ್ವನಿಗಳನ್ನು ಅವರ ಬೆಳವಣಿಗೆಯ ಹಂತದಲ್ಲಿ ಹಲವಾರು ಬಾರಿ ದಾಖಲಿಸಲಾಗಿದೆ. 40 ಸಾವಿರ ಗಂಟೆಯ ಅಧ್ಯಯನದ ಬಳಿಕ, ಮಕ್ಕಳ ಭಾಷಾ ಕಲಿಕೆಯ (learning language) ಮೇಲೆ ಯಾವೆಲ್ಲಾ ವಿಷಯಗಳು ಪರಿಣಾಮ ಬೀರುತ್ತದೆ ಅನ್ನೋದನ್ನು ಕಂಡು ಹಿಡಿಯಲಾಯಿತು.