ಕೊಳಕಾದ ವಾಷಿಂಗ್ ಮಷಿನಿನಲ್ಲಿ ಬಟ್ಟೆ ಒಗೆದರೆ Skin Care ಕಷ್ಟ ಕಷ್ಟ!
ವಾಷಿಂಗ್ ಮಶೀನ್ ಗಳನ್ನು ಬಹುತೇಕ ಪ್ರತಿಯೊಂದು ಮನೆಯಲ್ಲೂ ಬಳಸಲಾಗುತ್ತೆ. ವರ್ಷಗಳವರೆಗೆ ನಾವು ಒಂದೇ ಯಂತ್ರದಲ್ಲಿ ಬಟ್ಟೆಗಳನ್ನು ಒಗೆಯುತ್ತಲೇ ಇರುತ್ತೇವೆ, ಆದರೆ ವಾಷಿಂಗ್ ಮಶೀನ್ ಕೂಡ ಕೊಳಕಾಗುತ್ತೆ ಎಂದು ನಿಮಗೆ ತಿಳಿದಿದ್ಯಾ? ಹೌದು ವಾಷಿಂಗ್ ಮಷೀನ್ ಸಹ ಕೊಳಕಾಗುತ್ತೆ, ಹಾಗಾಗಿ ಅದನ್ನು ಸಮಯಕ್ಕೆ ಸರಿಯಾಗಿ ಸ್ವಚ್ಛಗೊಳಿಸೋದು ಬಹಳ ಮುಖ್ಯ.
ಮನೆಯನ್ನು ಸ್ವಚ್ಛಗೊಳಿಸುವ ವಿಷಯಕ್ಕೆ ಬಂದಾಗ, ನಾವು ಮನೆಯ ಸಣ್ಣ ಮೂಲೆಗಳಿಂದ ಹಿಡಿದು ಅಡುಗೆಮನೆಯ ಉಪಕರಣಗಳು ಮತ್ತು ಎಲ್ಲವನ್ನೂ ಸ್ವಚ್ಛಗೊಳಿಸುತ್ತೇವೆ. ಆದರೆ ವಾಷಿಂಗ್ ಮಶೀನ್ (Washing machine) ಸ್ವಚ್ಛಗೊಳಿಸುವ ವಿಷಯಕ್ಕೆ ಬಂದಾಗ, ನಾವು ಅದರ ಬಗ್ಗೆ ಹೆಚ್ಚು ಗಮನ ಹರಿಸೋದಿಲ್ಲ. ಅನೇಕ ವರ್ಷಗಳಿಗೊಮ್ಮೆ, ನಾವು ಕಂಪನಿಯವರನ್ನು ಕರೆಯುತ್ತೇವೆ ಮತ್ತು ವಾಷಿಂಗ್ ಮಶೀನ್ ಸ್ವಚ್ಛಗೊಳಿಸುತ್ತೇವೆ, ಅನೇಕ ಜನರು ಅದನ್ನು ಸಹ ಮಾಡೋದಿಲ್ಲ.
ಮನೆಯನ್ನು ಕ್ಲೀನ್ (Clean) ಮಾಡುವಂತೆ ವಾಷಿಂಗ್ ಮಷಿನ್ ಅನ್ನು ಸಹ ಕ್ಲೀನ್ ಮಾಡೋದು ಮುಖ್ಯ. ಮನೆಯಲ್ಲಿ ವಾಷಿಂಗ್ ಮಶೀನ್ ಸ್ವಚ್ಛಗೊಳಿಸೋದು ಎಷ್ಟು ಸುಲಭ ಮತ್ತು ಅಗತ್ಯ ಎಂದು ನಿಮಗೆ ತಿಳಿದಿದ್ಯಾ? ನಿಮ್ಮ ವಾಷಿಂಗ್ ಮಶೀನ್ ಅನ್ನು ಕಾಲಕಾಲಕ್ಕೆ ನೀವೇ ಹೇಗೆ ಸ್ವಚ್ಛಗೊಳಿಸಬಹುದು ಎಂದು ಇಲ್ಲಿ ಹೇಳಲಾಗಿದೆ. ಇದರಿಂದ ಬಟ್ಟೆಗಳನ್ನು ಇನ್ನೂ ಸ್ವಚ್ಛವಾಗಿ ವಾಷಿಂಗ್ ಮಶೀನ್ ತೊಳೆಯುತ್ತೆ ಮತ್ತು ಅದರಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಯಾವುದೇ ಅಪಾಯವಿರೋದಿಲ್ಲ.
ವಾಷಿಂಗ್ ಮಶೀನ್ ಶುಚಿಗೊಳಿಸಲು ಬೇಕಾಗೋ ಪದಾರ್ಥಗಳು
ವಿನೇಗರ್
ಬೇಕಿಂಗ್ ಸೋಡಾ(Baking soda)
ಓಲ್ಡ್ ಟೂತ್ ಬ್ರಷ್
ಮೈಕ್ರೋಫೈಬರ್ ಫ್ಯಾಬ್ರಿಕ್
ಡಿಶ್ ವಾಷಿಂಗ್ ಲಿಕ್ವಿಡ್
ನೀರು
ವಾಷಿಂಗ್ ಮಶೀನ್ ಸ್ವಚ್ಛಗೊಳಿಸೋದು ಹೇಗೆ?
- ವಾಷಿಂಗ್ ಮಶೀನ್ನಲ್ಲಿ ಉಳಿದಿರುವ ಯಾವುದೇ ಪೌಡರ್ ಡಿಟರ್ಜೆಂಟ್ (Detergent powder) ಕಣಗಳನ್ನು ತೆಗೆದು ಹಾಕಲು, ಮೊದಲು ವಾಷಿಂಗ್ ಮಷಿನ್ ಅನ್ನು ಖಾಲಿಯಾಗಿ ಚಲಾಯಿಸಿ. ಹೀಗೆ ಮಾಡೋದರಿಂದ ಅದರಲ್ಲಿರುವ ಡಿಟರ್ಜೆಂಟ್ ಕಣಗಳು ಇನ್ನು ಪೌಡರ್ ಆಗುತ್ತೆ. ಹಾಗೆಯೇ, ವಾಷಿಂಗ್ ಮಶೀನ್ ಗೆ ಯಾವಾಗಲೂ ಲಿಕ್ವಿಡ್ ಡಿಟರ್ಜೆಂಟ್ ಬಳಸಲು ಪ್ರಯತ್ನಿಸಿ.
- ಇದರ ನಂತರ, ಮಶೀನ್ ಡ್ರಮ್ (Drum)ಸ್ವಚ್ಛಗೊಳಿಸಲು, ಮಶೀನ್ ನ ಡ್ರಮ್ ಅನ್ನು ಅದರ ಸಾಮರ್ಥ್ಯದ 2/3 ಭಾಗದಷ್ಟು ನೀರಿನಿಂದ ತುಂಬಿಸಿ ಮತ್ತು ಅದಕ್ಕೆ 1 ಕಪ್ ವಿನೆಗರ್ ಸೇರಿಸಿ. ವಿನೆಗರ್ ದ್ರಾವಣವನ್ನು ಯಂತ್ರದಲ್ಲಿ ಒಂದು ಗಂಟೆಗಳ ಕಾಲ ಬಿಡಿ. ಈ ಸಮಯದಲ್ಲಿ ಯಂತ್ರದ ಮುಚ್ಚಳವನ್ನು ತೆರೆದಿಡಿ.
- ಡಿಟರ್ಜೆಂಟ್ ಟ್ರೇ ಮತ್ತು ಲಿಂಟ್ ಫಿಲ್ಟರ್ (Lint filter)ಅನ್ನು ಇದರಿಂದ ತೊಳೆಯಿರಿ, ಯಾಕಂದ್ರೆ ಅಲ್ಲಿ ಎಣ್ಣೆ ಪಸೆ ಮತ್ತು ಕೊಳಕು ವಾಸನೆ ಇರುತ್ತೆ. ಅದನ್ನು ಸ್ವಚ್ಛಗೊಳಿಸಲು ಡಿಸ್ಪೆನ್ಸರ್ ಪ್ಯಾನೆಲ್ ಅನ್ನು ತೆಗೆದುಹಾಕಿ. ಬೆಚ್ಚಗಿನ ನೀರು ಮತ್ತು ಡಿಶ್ ವಾಷಿಂಗ್ ಲಿಕ್ವಿಡಿಂದ ತೊಳೆಯಿರಿ.
ಲಿಂಟ್ ಫಿಲ್ಟರ್ ಒಂದು ಸಣ್ಣ ಮೆಶ್ ಫಿಲ್ಟರ್ ಆಗಿದ್ದು, ಅದು ತೊಳೆಯುವ ಸಮಯದಲ್ಲಿ ಲಿಂಟ್ ಹಿಡಿದಿಟ್ಟುಕೊಳ್ಳುತ್ತೆ. ಲಿಂಟ್ ಚೆನ್ನಾಗಿ ಸ್ವಚ್ಛಗೊಳಿಸಲು ಪೇಪರ್ ಟವೆಲ್ ಮತ್ತು ಹಳೆಯ ಟೂತ್ ಬ್ರಶ್ ಬಳಸಬಹುದು. ಇದನ್ನು 1 ಟೀಸ್ಪೂನ್ ಲಿಕ್ವಿಡ್ ಡಿಟರ್ಜೆಂಟ್ (Liquid detergent) ಮತ್ತು ನೀರಿನೊಂದಿಗೆ ಸಿದ್ಧಪಡಿಸಿದ ದ್ರಾವಣದಲ್ಲಿ 1 ಗಂಟೆ ಕಾಲ ಇರಿಸಿ. ಇದು ಕೊಳೆಯನ್ನು ಚೆನ್ನಾಗಿ ತೆಗೆದುಹಾಕಲು ಸಹಾಯ ಮಾಡುತ್ತೆ. ನಂತರ ಅದನ್ನು ಸಾದಾ ನೀರಿನಿಂದ ತೊಳೆಯಿರಿ, ಒಣಗಿಸಿ ಮತ್ತು ಅದನ್ನು ಅದರ ಜಾಗದಲ್ಲಿ ಮತ್ತೆ ಫಿಟ್ ಮಾಡಿ.
- ಅಡುಗೆ ಸೋಡಾದಿಂದ ವಾಶ್ ಸೈಕಲ್ ಕ್ಲೀನ್ ಮಾಡಿ ನೋಡಿ, ಯಾಕಂದ್ರೆ ಇದು ಹಗುರವಾದ ಕ್ಷಾರವನ್ನು ಹೊಂದಿರುತ್ತೆ, ಇದು ಕೊಳೆ ಮತ್ತು ಗ್ರೀಸ್ ಅನ್ನು ಪರಿಣಾಮಕಾರಿಯಾಗಿ ಸ್ವಚ್ಛಗೊಳಿಸಲು ಸಹಾಯ ಮಾಡುತ್ತೆ. 1 ಕಪ್ ಅಡುಗೆ ಸೋಡಾವನ್ನು(Baking soda) ಸುರಿಯಿರಿ ಮತ್ತು ವಿನೆಗರ್ ಉಳಿದದನ್ನು ತೆಗೆದುಹಾಕಲು ಮಷೀನ್ ಚಲಾಯಿಸಿ ಮತ್ತು ಯಂತ್ರದ ಡ್ರಮ್ ಚೆನ್ನಾಗಿ ಸ್ವಚ್ಛಗೊಳಿಸಿ.
- ಡ್ರಮ್ ಚೆನ್ನಾಗಿ ಸ್ವಚ್ಛಗೊಳಿಸಿದ ನಂತರ, ನೀರನ್ನು ಬಸಿದುಕೊಂಡ ನಂತರ, ಡ್ರಮ್ ಒರೆಸಿ ಮತ್ತು ಸ್ವಚ್ಛವಾದ ಹತ್ತಿ ಬಟ್ಟೆಯಿಂದ ಒಣಗಿಸಿ.
- ವಾಷಿಂಗ್ ಮಶೀನ್ ನ ಡ್ರೈನ್ ಪೈಪ್ ತುಂಬಾ ಸಮಯದ ನಂತರ ಬ್ಲಾಕ್ ಆಗುತ್ತೆ. ಡ್ರೈನ್ ಪೈಪಿಗೆ ಬಿಸಿ ನೀರು, ಸೋಡಾ ಮತ್ತು ವಿನೆಗರ್ ಸೇರಿಸಿ ಮತ್ತು ಸ್ವಲ್ಪ ಸಮಯದವರೆಗೆ ಬಿಡಿ. ನಂತರ ಅದಕ್ಕೆ ಪ್ರೆಷರಿಂದ ನೀರನ್ನು ಸೇರಿಸಿ. ಇದು ಅದರ ಬ್ಲಾಕೇಜ್ ಅನ್ನು ತೆರೆಯುತ್ತೆ.