ಈ ಆಹಾರ ಸೇವಿಸಿದ್ರೆ ಸ್ತನ ಕ್ಯಾನ್ಸರ್ ಅಪಾಯ ಇರೋದೇ ಇಲ್ಲ
ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಜನರು ಕ್ಯಾನ್ಸರ್ ನಿಂದ ಸಾಯುತ್ತಾರೆ. ಈ ಮಾರಣಾಂತಿಕ ರೋಗವನ್ನು ತಡೆಗಟ್ಟಲು ಅನೇಕ ಆಹಾರ ಪದಾರ್ಥಗಳು ಸಹಾಯ ಮಾಡುತ್ತವೆ. ಹಾಗಾಗಿ ಸ್ತನ ಕ್ಯಾನ್ಸರ್ ರೋಗಿಗಳಿಗೆ ಯಾವ ಆಹಾರಗಳು ಪ್ರಯೋಜನಕಾರಿ ಅನ್ನೋದನ್ನು ತಿಳಿಯೋಣ.
ತಪ್ಪು ಆಹಾರ ಪದ್ಧತಿಯಿಂದಾಗಿ, ಜನರು ಅನೇಕ ಅಪಾಯಕಾರಿ ಕಾಯಿಲೆಗಳಿಗೆ ಬಲಿಯಾಗುತ್ತಾರೆ. ಸರಿಯಾದ ಆಹಾರವು ಮಾರಣಾಂತಿಕ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಸ್ತನ ಕ್ಯಾನ್ಸರ್ (breast cancer) ನಂತಹ ಮಾರಣಾಂತಿಕ ಕಾಯಿಲೆಯನ್ನು ತಪ್ಪಿಸಲು, ನೀವು ನಿಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಜೊತೆಗೆ ಕಾಲಕಾಲಕ್ಕೆ ವೈದ್ಯರ ಬಳಿ ತಪಾಸಣೆ ಮಾಡಬೇಕು.
ಸ್ತನ ಕ್ಯಾನ್ಸರ್ ಗೆ ಅನೇಕ ಕಾರಣಗಳಿದ್ದರೂ, ಆರೋಗ್ಯಕರ ಜೀವನಶೈಲಿ ಮತ್ತು ಆಹಾರವನ್ನು ಅಳವಡಿಸಿಕೊಳ್ಳುವ ಮೂಲಕ, ಈ ಮಾರಣಾಂತಿಕ ಕಾಯಿಲೆಯ ಅಪಾಯವನ್ನು ಸಹ ಕಡಿಮೆ ಮಾಡಬಹುದು. ಸ್ತನ ಕ್ಯಾನ್ಸರ್ ರೋಗಿಗಳು ತಮ್ಮ ಆಹಾರದಲ್ಲಿ ಯಾವ ಆಹಾರ ಸೇವಿಸಬೇಕು ಎಂದು ತಿಳಿಯೋಣ.
ಫ್ಯಾಟಿ ಫಿಶ್ (Fatty Fish): ಫ್ಯಾಟಿ ಫಿಶ್ ಉತ್ಕರ್ಷಣ ನಿರೋಧಕಗಳು, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಸೆಲೆನಿಯಂ ಅನ್ನು ಹೊಂದಿರುತ್ತದೆ. ಕ್ಯಾನ್ಸರ್ ನಿಂದ ರಕ್ಷಿಸಲು ಇದು ಸಹಾಯಕವಾಗಿದೆ. ನಿಮ್ಮ ಆಹಾರದಲ್ಲಿ ಸಾರ್ಡಿನ್, ಸಾಲ್ಮನ್ ಮತ್ತು ಬಂಗುಡೆಯಂತಹ ಮೀನುಗಳನ್ನು ಸೇರಿಸಬಹುದು.
ಹಸಿರು ತರಕಾರಿಗಳು (Leafy Vegetables): ಹಸಿರು ತರಕಾರಿಗಳು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಸಮೃದ್ಧವಾಗಿವೆ. ಇದು ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಸಂಶೋಧನೆಯ ಪ್ರಕಾರ, ಹೆಚ್ಚು ಹಸಿರು ಎಲೆಗಳ ತರಕಾರಿಗಳನ್ನು ಸೇವಿಸುವ ಮಹಿಳೆಯರಿಗೆ ಇತರ ಮಹಿಳೆಯರಿಗಿಂತ ಸ್ತನ ಕ್ಯಾನ್ಸರ್ ಅಪಾಯ ಕಡಿಮೆ ಇರುವುದು ಕಂಡುಬಂದಿದೆ. ನೀವು ಸ್ತನ ಕ್ಯಾನ್ಸರ್ ಅನ್ನು ತಪ್ಪಿಸಲು ಬಯಸಿದರೆ, ಆಹಾರದಲ್ಲಿ ಪಾಲಕ್, ಅರಿವೆ ಮೊದಲಾದ ಸೊಪ್ಪುಇತ್ಯಾದಿಗಳನ್ನು ಸೇರಿಸಬೇಕು.
ದ್ವಿದಳ ಧಾನ್ಯಗಳು (Pulses): ದ್ವಿದಳ ಧಾನ್ಯಗಳು ಸ್ತನ ಕ್ಯಾನ್ಸರ್ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಅವು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಸ್ತನ ಕ್ಯಾನ್ಸರ್ ಸಮಸ್ಯೆ ಇರುವ ಮಹಿಳೆಯರು ತಮ್ಮ ದೈನಂದಿನ ಆಹಾರದಲ್ಲಿ ಕಡಲೆ, ಕಪ್ಪು ಬೀನ್ಸ್, ರಾಜ್ಮಾ ಸೇವಿಸುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
ಬೆಳ್ಳುಳ್ಳಿ ಮತ್ತು ಈರುಳ್ಳಿ (Garlic and Onion): ಬೆಳ್ಳುಳ್ಳಿ ಮತ್ತು ಈರುಳ್ಳಿ ಫ್ಲೇವನಾಯ್ಡ್ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿವೆ. ಇವು ಸ್ತನ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತವೆ. ಆದ್ದರಿಂದ, ಸ್ತನ ಕ್ಯಾನ್ಸರ್ ರೋಗಿಗಳಿಗೆ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಸೇವಿಸಲು ಸೂಚಿಸಲಾಗುತ್ತದೆ.
ಬ್ರೊಕೋಲಿ, ಎಲೆಕೋಸು ಮತ್ತು ಹೂಕೋಸು: ಸ್ತನ ಕ್ಯಾನ್ಸರ್ ರೋಗಿಗಳು ತಮ್ಮ ಆಹಾರದಲ್ಲಿ ಬ್ರೊಕೋಲಿ, ಎಲೆಕೋಸು ಮತ್ತು ಹೂಕೋಸು ಮುಂತಾದ ಹಸಿರು ತರಕಾರಿಗಳನ್ನು ಸೇರಿಸಬೇಕು. ಅವು ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡುವ ಐಸೊಥಿಯೋಸಯನೇಟ್ ಗಳು ಮತ್ತು ಇಂಡೋಲ್ಸ್ ಎಂಬ ಫೈಟೊಕೆಮಿಕಲ್ ಗಳನ್ನು ಹೊಂದಿರುತ್ತವೆ.