ಹೀಗೂ ಉಂಟೆ…! ಕನ್ಯತ್ವವನ್ನ ಮರಳಿ ಪಡೆಯಲು 16 ಲಕ್ಷದ ಸರ್ಜರಿ ಮಾಡಿಸಲು ಸಜ್ಜಾದ ಮಾಡೆಲ್
ಬ್ರೆಜಿಲಿಯನ್ ರೂಪದರ್ಶಿ ಮತ್ತು ಇನ್’ಫ್ಲ್ಯುಯೆನ್ಸರ್ ರಾವೆನಾ ಹ್ಯಾನಿಯೆಲಿ ತನ್ನ ಕನ್ಯತ್ವವನ್ನು ಮರಳಿ ಪಡೆಯಲು ವಿಶೇಷ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿ, ಅದಕ್ಕಾಗಿ ಬರೋಬ್ಬರಿ 16 ಲಕ್ಷ ಖರ್ಚು ಮಾಡಿದ್ದಾರೆ.

ಬ್ರೆಜಿಲಿಯನ್ ರೂಪದರ್ಶಿ ಮತ್ತು ಸೋಶಿಯಲ್ ಮೀಡಿಯಾ ಇನ್’ಫ್ಲ್ಯುಯೆನ್ಸರ್ (Social Media Influencer) ರಾವೆನಾ ಹ್ಯಾನಿಯೆಲಿ ತನ್ನ ಕನ್ಯತ್ವವನ್ನು ಮರಳಿ ಪಡೆಯಲು ವಿಶೇಷ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಸರ್ಜರಿಗೆ ಒಳಗಾಗುತ್ತಿದ್ದು, ಈ ವಿಷಯ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
23 ವರ್ಷದ ರಾವೆನ್ನಾ ಹ್ಯಾನೆಲಿ (Ravena Hanniely) ಈ ದಿನಗಳಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಆಕೆ ತನ್ನ ಕನ್ಯತ್ವವನ್ನು ಮರಳಿ ಪಡೆಯಲು ಬಯಸುತ್ತಿದುದ್, ಅದಕ್ಕಾಗಿ ಹೈಮೆನೊಪ್ಲಾಸ್ಟಿ ಎಂಬ ಸರ್ಜರಿಗೆ ಒಳಗಾಗಲು ಯೋಜಿಸಿದ್ದಾಳೆ ಎಂದು ವರದಿಗಳು ತಿಳಿಸಿವೆ. ಈ ಶಸ್ತ್ರಚಿಕಿತ್ಸೆಗೆ ಬರೋಬ್ಬರಿ 19,000 ಡಾಲರ್ (16 ಲಕ್ಷ ರೂ.) ವೆಚ್ಚವಾಗಲಿದೆ.
ಕನ್ಯತ್ವವನ್ನು ಮರಳಿ ಪಡೆಯಲು ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಮಾಡೆಲ್
ಇನ್ಸ್ಟಾಗ್ರಾಮ್ನಲ್ಲಿ 266,000 ಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ರಾವೆನ್ನಾ ಹನ್ನೆಲಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧ ಇನ್’ಫ್ಲುಯೆನ್ಸರ್ ಆಗಿದ್ದಾರೆ. ಜೆಎಎಂ ಪ್ರೆಸ್ ಜೊತೆಗಿನ ಸಂಭಾಷಣೆಯಲ್ಲಿ ಹೈಮೆನೊಪ್ಲಾಸ್ಟಿ ಪಡೆಯುವ ಬಗ್ಗೆ ಮಾತನಾಡಿದ್ದಾರೆ. ತನ್ನ ಆತ್ಮಗೌರವವನ್ನು ಪುನಃಸ್ಥಾಪಿಸಲು ಇದನ್ನು ಮಾಡುತ್ತಿದ್ದೇನೆ ಎಂದು ಆಕೆ ತಿಳಿಸಿದ್ದಾಳೆ. ಇದು ಆಕೆಯ ವೈಯಕ್ತಿಕ ಮತ್ತು ವೃತ್ತಿಪರ ಜೀವನಕ್ಕೆ ಹೊಸ ಆರಂಭವಾಗಲಿದೆ ಎಂದು ಸಹ ತಿಳಿಸಿದ್ದಾರೆ.
ಮಾಧ್ಯಮವೊಂದರ ಜೊತೆ ಮಾತನಾಡಿದ ಹ್ಯಾನೆಲಿ , "ಈ ಸರ್ಜರಿ ನನಗೆ ತುಂಬಾನೆ ಮುಖ್ಯವಾಗಿದೆ. ನಾನು ಮತ್ತೆ ಕನ್ಯೆಯಾಗಲು ಬಯಸುತ್ತೇನೆ. ಇದು ನನ್ನ ಸ್ವಾಭಿಮಾನದ ಬಗ್ಗೆ ಮತ್ತು ನನಗೆ ಕೆಲವು ವೈಯಕ್ತಿಕ ಕಾರಣಗಳಿವೆ, ಅದಕ್ಕಾಗಿ ಈ ಸರ್ಜರಿ ಯಾವಾಗಲೂ ನನಗೆ ಬಹಳ ಮುಖ್ಯವಾಗಿದೆ.
ಅಂತಹ ಶಸ್ತ್ರಚಿಕಿತ್ಸೆಗಳು ಜನರಿಂದ ಹೇಗೆ ಟೀಕೆಗೆ ಒಳಗಾಗುತ್ತವೆ ಎನ್ನುವ ಬಗ್ಗೆ ಕೂಡ ಮಾತನಾಡಿದ ಹ್ಯಾನೆಲಿ "ದುರದೃಷ್ಟವಶಾತ್, ಪ್ರತಿಯೊಬ್ಬರೂ ಅಂತಹ ಇಂಟಿಮೆಟ್ ಆಯ್ಕೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ ಅಥವಾ ಅದನ್ನ ಬೆಂಬಲಿಸುವುದಿಲ್ಲ. ನಾವು ಜನರ ವೈಯಕ್ತಿಕ ನಿರ್ಧಾರಗಳನ್ನು ಗೌರವಿಸಬೇಕು, ಅವರನ್ನು ಯಾವುದೇ ಕಾರಣಕ್ಕೂ ಜಡ್ಜ್ ಮಾಡಬಾರದು ಎಂದಿದ್ದಾರೆ.
ಹೈಮೆನೊಪ್ಲಾಸ್ಟಿ ಎಂದರೇನು?
ಹೈಮೆನೊಪ್ಲಾಸ್ಟಿ (Hymenoplasty) ಎಂಬುದು ಒಂದು ರೀತಿಯ ಶಸ್ತ್ರಚಿಕಿತ್ಸೆಯಾಗಿದ್ದು, ಇದರಲ್ಲಿ ಯೋನಿಯ ಕೆಳಭಾಗದಲ್ಲಿರುವ ಹೈಮೆನ್ ಅನ್ನು ಸರಿಪಡಿಸಲಾಗುತ್ತದೆ. ಈ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯಲ್ಲಿ, ಹೈಮೆನ್ ನ ಮುರಿದ ಭಾಗಗಳನ್ನು ಹೊಲಿಗೆಗಳಿಂದ ಸ್ಟಿಚ್ ಮಾಡಲಾಗುತ್ತದೆ, ಇದರಿಂದ ಹೊಸ ಹೈಮೆನ್ ರೂಪುಗೊಳ್ಳುತ್ತದೆ. ಇದನ್ನು ಹೈಮೆನ್ ಪುನಃಸ್ಥಾಪನೆ ಅಥವಾ ಹೈಮೆನ್ ದುರಸ್ತಿ ಶಸ್ತ್ರಚಿಕಿತ್ಸೆ ಎಂದೂ ಕರೆಯಲಾಗುತ್ತದೆ. ಆದಾಗ್ಯೂ, ಹೈಮೆನೊಪ್ಲಾಸ್ಟಿ ಸಾಕಷ್ಟು ಅಪಾಯಕಾರಿ ಎಂದು ವೈದ್ಯರು ಹೇಳುತ್ತಾರೆ.
ಸರಿಯಾಗಿ ಹೇಳೋದಾದರೆ, ಕನ್ಯತ್ವವು ಹೈಮೆನೊಪ್ಲಾಸ್ಟಿಯ ಮೂಲಕ ಹಿಂತಿರುಗುವುದಿಲ್ಲ, ಅದು ಕೇವಲ ಸಾಂಕೇತಿಕವಾಗಿದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಸೋಂಕಿನ ಹೆಚ್ಚಿನ ಅಪಾಯವೂ ಇದೆ. ಜೀವಮಾನವಿಡೀ ಉಳಿಯುವಂತಹ ಗಾಯವೂ ಆಗಬಹುದು. ಅಥವಾ ಏನೂ ಆಗದೇ ಇರಬಹುದು ಇದರ ಬಗ್ಗೆ ದೃಢವಾಗಿ ಏನೂ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು.