MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಮಹಿಳೆಯರು ಮಾತ್ರವಲ್ಲ, ಪುರುಷರು ಸಹ ಬಿಂದಿ ಹಚ್ಚೋದು ಒಳ್ಳೇಯದೇ!

ಮಹಿಳೆಯರು ಮಾತ್ರವಲ್ಲ, ಪುರುಷರು ಸಹ ಬಿಂದಿ ಹಚ್ಚೋದು ಒಳ್ಳೇಯದೇ!

ಭಾರತೀಯ ಮಹಿಳೆಯರು ಶತಮಾನಗಳಿಂದ ಹಣೆಗೆ ಬಿಂದಿ ಹಚ್ಚುತ್ತಿದ್ದಾರೆ. ಹೆಚ್ಚಿನ ಜನರು ಇದನ್ನು ಫ್ಯಾಷನ್‌ನ ಒಂದು ಭಾಗವೆಂದು ಪರಿಗಣಿಸುತ್ತಾರೆ ಆದರೆ ಅದನ್ನು ಹಚ್ಚೋದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಯೋಗದ ಪ್ರಕಾರ, ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ.

2 Min read
Author : Suvarna News
Published : Apr 25 2023, 04:33 PM IST
Share this Photo Gallery
  • FB
  • TW
  • Linkdin
  • Whatsapp
17

ಭಾರತದಲ್ಲಿ ಹಿಂದೆ ಪ್ರತಿಯೊಬ್ಬ ಮಹಿಳೆಯೂ ಪ್ರತಿದಿನ ಬಿಂದಿ (Bindi) ಹಚ್ಚುತ್ತಿದ್ದರು. ಆದರೆ ಈಗ ಹೆಚ್ಚಿನ ಜನ ಬಿಂದಿ ಹಾಕೋದಿಲ್ಲ. ಆದರೆ ಖಂಡಿತವಾಗಿಯೂ ಪ್ರತಿ ಮಹಿಳೆಯ ಬಳಿ ಕನಿಷ್ಠ ಒಂದು ಬಿಂದಿ ಪ್ಯಾಕೆಟ್ ಕಾಣಬಹುದು. ಮಹಿಳೆಯರು ವಿಶೇಷ ಸಂದರ್ಭಗಳಿಗೆ ಸಾಂಪ್ರದಾಯಿಕವಾಗಿ ಸಿದ್ಧರಾದಾಗ, ಬಿಂದಿ ಅವರ ನೋಟವನ್ನು ಪೂರ್ಣಗೊಳಿಸುತ್ತದೆ ಅಲ್ವಾ?
 

27

ಫ್ಯಾಷನ್ ಅನ್ನು ಬದಿಗಿಟ್ಟು, ಭಾರತೀಯ ಮಹಿಳೆಯರು ಶತಮಾನಗಳಿಂದ ಬಿಂದಿ ಧರಿಸುತ್ತಿದ್ದಾರೆ. ಇದನ್ನು ಸಾಮಾನ್ಯವಾಗಿ ಫ್ಯಾಷನ್ ನ ಒಂದು ಭಾಗವೆಂದು ಪರಿಗಣಿಸಲಾಗುತ್ತದೆ, ಆದರೆ ಬಿಂದಿ ಹಚ್ಚುವುದರ ಹಿಂದೆ ಕಾರಣಗಳಿವೆ. ಇದರಿಂದ ಪುರುಷರಿಗೂ ಹೆಚ್ಚಿನ ಪ್ರಯೋಜನಗಳಿವೆ ಗೊತ್ತಾ?

37

ಹಣೆಯ ಮೇಲೆ ಬಿಂದಿ ಹಾಕಲು ಕಾರಣವೇನು?
ಯೋಗದ ಪ್ರಕಾರ, ಮಹಿಳೆಯರು ಬಿಂದಿ ಇಡುವ ಸ್ಥಳವನ್ನು ಅಜ್ಞ ಚಕ್ರ ಎಂದು ಕರೆಯಲಾಗುತ್ತದೆ. ಅಜ್ಞ ಚಕ್ರವನ್ನು ಮಾನವ ದೇಹದ ಆರನೇ ಮತ್ತು ಅತ್ಯಂತ ಶಕ್ತಿಯುತ ಚಕ್ರವೆಂದು ಪರಿಗಣಿಸಲಾಗಿದೆ. ಮತ್ತು ಈ ಅಂಶವನ್ನು ದಿನಕ್ಕೆ ಹಲವಾರು ಬಾರಿ ಒತ್ತುವುದರಿಂದ ಆರೋಗ್ಯ ಮತ್ತು ಚರ್ಮಕ್ಕೆ (health and skin) ಅನೇಕ ಪ್ರಯೋಜನಗಳನ್ನು ನೀಡುತ್ತದೆ. ನಾವು ಬಿಂದಿ ಹಾಕಿದಾಗ, ಆ ಜಾಗವು ಪ್ರೆಸ್ ಆಗುತ್ತೆ.

47

ಆಯುರ್ವೇದ ತಜ್ಞರೊಬ್ಬರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದ (social media) ಮೂಲಕ ಪ್ರತಿದಿನ ಬಿಂದಿ ಹಚ್ಚುವುದರಿಂದ ದೇಹಕ್ಕೆ ಏನು ಪ್ರಯೋಜನಗಳು ಸಿಗುತ್ತವೆ ಎಂದು ಹೇಳಿದ್ದಾರೆ. ಪ್ರತಿದಿನ ಬಿಂದಿ ಹಾಕೋದರಿಂದ ನಾವು ಹಣೆಯ ಮಧ್ಯೆ ಭಾಗವನ್ನು ಪ್ರೆಸ್ ಮಾಡುತ್ತೇವೆ. ಇದು ತಲೆ, ಕಣ್ಣುಗಳು, ಮೆದುಳು, ಪೀನಿಯಲ್ ಗ್ರಂಥಿ ಮತ್ತು ಪಿಟ್ಯುಟರಿ ಗ್ರಂಥಿಯನ್ನು ಒಳಗೊಂಡಿದೆ.

57

ಬಿಂದಿಯನ್ನು ಹಚ್ಚಲು ಮೊದಲು ಅದನ್ನು ಸರಿಯಾದ ಜಾಗದಲ್ಲಿ ಇರಿಸಿ, ನಂತರ ಅದನ್ನು ಸ್ವಲ್ಪ ಸರಿಹೊಂದಿಸಿ ಮತ್ತು ನಂತರ ಅದನ್ನು ಲಘುವಾಗಿ ಒತ್ತಿ, ಇದರಿಂದ ಅದು ಅದರ ಸ್ಥಳದಲ್ಲಿ ಉಳಿಯುತ್ತದೆ. ಇದನ್ನು ದಿನಕ್ಕೆ ಹಲವಾರು ಬಾರಿ ಒತ್ತಿದಾಗ, ಅದು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ.

67

ಬಿಂದಿ ಹಾಕೋದು ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಪ್ರಯೋಜನಕಾರಿ. ಪುರುಷರು ಬಿಂದಿಯನ್ನು ಧರಿಸದಿದ್ದರೂ, ಅವರು ಪ್ರತಿದಿನ ಅಜ್ಞ ಚಕ್ರದ ಮೇಲೆ ಕುಂಕುಮ ತಿಲಕವನ್ನು (kumkum Tilak) ಹಚ್ಚಬಹುದು. ಇದಲ್ಲದೆ, ಪುರುಷರು ಹಣೆಯ ಈ ಬಿಂದುವನ್ನು ದಿನಕ್ಕೆ 100 ಬಾರಿ ಮಾತ್ರ ಒತ್ತಬಹುದು.
 

77

ಬಿಂದಿ ಹಚ್ಚುವುದರ ಪ್ರಯೋಜನಗಳು (benefits of Bindi)
ತಲೆನೋವು ದೂರವಾಗಬಹುದು
ಸೈನಸ್ ಸಮಸ್ಯೆ ದೂರವಾಗುತ್ತೆ
ದೃಷ್ಟಿ ಮತ್ತು ಆರೋಗ್ಯವನ್ನು ಸುಧಾರಿಸುತ್ತದೆ
ಚರ್ಮವು ಯೌವನದಿಂದ ಕೂಡಿರುತ್ತದೆ
ಖಿನ್ನತೆಯಿಂದ ದೂರವಿರಿ (depression)
ಶ್ರವಣ ಶಕ್ತಿ ಉತ್ತಮವಾಗಿರುತ್ತದೆ.
ಸ್ಮರಣೆ ಉತ್ತಮವಾಗಿರುತ್ತದೆ. ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತೆ.
ಮೈಗ್ರೇನ್ ಅಪಾಯವನ್ನು ಕಡಿಮೆ ಮಾಡುತ್ತದೆ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಆರೋಗ್ಯ

Latest Videos
Recommended Stories
Recommended image1
ಮರೆವಿಗೆ ರಾಮಬಾಣ, ತಿಮರೆ ಚಟ್ನಿಯ ಆರೋಗ್ಯದ ಗುಟ್ಟು 100 ವರ್ಷ ಆಯಸ್ಸು! ಮಾಡೋದೇಗೆ?
Recommended image2
Bile Duct Cancer: ಪಿತ್ತನಾಳದ ಕ್ಯಾನ್ಸರ್‌ನ ಈ 6 ಲಕ್ಷಣಗಳು ಅಪಾಯದ ಮುನ್ಸೂಚನೆ!
Recommended image3
Spinach benefits for men: ಪುರುಷರಿಗೆ ಈ ಸೊಪ್ಪು ಅತ್ಯುತ್ತಮ ಔಷಧ.. ವಾರಕ್ಕೊಮ್ಮೆ ತಿಂದರೆ ಸಾಕು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved