ಜೋರಾಗಿ ನಗೋರನ್ನು ನೋಡಿ ಹುಚ್ಚರು ಎನ್ನಬೇಡಿ… ತುಂಬಾನೆ ಲಾಭ ಇದೆ ತಿಳ್ಕೊಳಿ
ಬೆಳ್ಳಂಬೆಳಗ್ಗೆ ಅಥವಾ ಸಂಜೆ ಉದ್ಯಾನವನದಲ್ಲಿ ವೃದ್ಧರು ಜೋರಾಗಿ ನಗುವುದನ್ನು ನೀವು ನೋಡಿರಬೇಕು. ಅವರ ಆರೋಗ್ಯ ಉತ್ತಮವಾಗಿರಲು ಹೀಗೆ ಮಾಡುವುದರ ಹಿಂದೆ ಒಂದು ಪ್ರಮುಖ ಕಾರಣವಿದೆ. ಈ ನಗುವಿನ ಹಿಂದಿನ ರಹಸ್ಯವನ್ನು ತಿಳಿದುಕೊಳ್ಳೋಣ.

ತಾಜಾ ಗಾಳಿ ಮತ್ತು ಶಾಂತ ವಾತಾವರಣವಿರುವ ಬೆಳಗಿನ ಸಮಯವು ವೃದ್ಧರಿಗೆ ವಿಶೇಷ ಸಮಯ. ಈ ಸಮಯದಲ್ಲಿ, ಅವರು ಉದ್ಯಾನವನಗಳಲ್ಲಿ ಒಟ್ಟುಗೂಡುತ್ತಾರೆ ಮತ್ತು ಜೋರಾಗಿ ನಗುತ್ತಾರೆ (laughing loudly). ಅವರು ಹೀಗೆ ಮಾಡೋದನ್ನು ನೋಡಿದಾಗ, ನಮ್ಮ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಕಾಡೊದಕ್ಕೆ ಶುರುವಾಗುತ್ತೆ?ಯಾಕೆ ಇವರು ಹೀಗೆ ನಗ್ತಿದ್ದಾರೆ? ಅದರ ಪ್ರಯೋಜನಗಳೇನು? ನಿಮಗೂ ಹಾಗೇ ಅನಿಸುತ್ತಾ? ಈ ರೀತಿಯಾಗಿ ಜೋರಾಗಿ ನಗೋದು ಕೇವಲ ಸಾಮಾಜಿಕ ಚಟುವಟಿಕೆಯಲ್ಲ, ಬದಲಾಗಿ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ . ಈ ರೀತಿಯಾಗಿ ಜೋರಾಗಿ ಮನಸ್ಸು ಬಿಚ್ಚಿ ನಗೋದರಿಂದ ಏನೆಲ್ಲಾ ಪ್ರಯೋಜನಗಳಿವೆ ಅನ್ನೋದನ್ನು ನೋಡೋಣ ಬನ್ನಿ.

ಹಿರಿಯರು ಜೋರಾಗಿ ನಗುವುದಕ್ಕೆ ಕಾರಣಗಳು ಏನು ನೋಡೋಣ?
ಒತ್ತಡ ಕಡಿಮೆ ಮಾಡುವುದು: ಮನಃಪೂರ್ವಕವಾಗಿ ನಗೋದ್ರಿಂದ ಉದ್ವಿಗ್ನತೆಗಳು ಮತ್ತು ಒತ್ತಡವು ಕ್ಷಣಾರ್ಧದಲ್ಲಿ ಮಾಯವಾಗಬಹುದು. ನಗುವುದು ಒತ್ತಡದ ಹಾರ್ಮೋನ್ (stress hormones) ಆಗಿರುವ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತೆ. ಇದರೊಂದಿಗೆ ನಾವು ಮತ್ತೆ ಸಂತೋಷದ ಸ್ಥಿತಿಗೆ ಮರಳುತ್ತೇವೆ.
ಸಾಮಾಜಿಕ ಸಂಪರ್ಕ: ವೃದ್ಧರು ಹೆಚ್ಚಾಗಿ ಒಂಟಿತನವನ್ನು ಎದುರಿಸುತ್ತಾರೆ. ಉದ್ಯಾನವನದಲ್ಲಿ ನಗುವುದರಿಂದ ಅವರಿಗೆ ಸಾಮಾಜಿಕ ಸಂಪರ್ಕ ದೊರೆಯುತ್ತದೆ, ಇದು ಅವರ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.
ಸಕಾರಾತ್ಮಕ ಮನೋಭಾವ: ನಗು ಸಕಾರಾತ್ಮಕ ಭಾವನೆಗಳನ್ನು (positive feeling) ಉತ್ತೇಜಿಸುತ್ತದೆ ಮತ್ತು ಜೀವನದ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಬೆಳೆಸುತ್ತದೆ. ಬೇರೆಯವರು ಮನಸಾರೆ ನಗುವುದನ್ನು ನೋಡಿದ ನಂತರ, ಕೆಲವೇ ಕ್ಷಣಗಳಲ್ಲಿ ನೀವು ಕೂಡ ನಗಲು ಪ್ರಾರಂಭಿಸುತ್ತೀರಿ ಎಂಬುದನ್ನು ನೀವು ಗಮನಿಸಿರಬಹುದು. ಅದು ಒಂದು ಸಕಾರಾತ್ಮಕ ಸರಪಳಿಯಂತಿದೆ.
ದೈಹಿಕ ಪ್ರಯೋಜನಗಳು: ನಗುವುದರಿಂದ ದೇಹದಲ್ಲಿ ಎಂಡಾರ್ಫಿನ್ (endorphin)ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ, ಇದು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮ ದೇಹದಲ್ಲಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ.
ಜೋರಾಗಿ ನಗುವುದರಿಂದಾಗುವ ಪ್ರಯೋಜನಗಳು ಯಾವುವು?
ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ನಗುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ, ಇದು ಹೃದ್ರೋಗ ಮತ್ತು ಕೊಲೆಸ್ಟ್ರಾಲ್‌ನಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು: ಮನಪೂರ್ವಕವಾಗಿ ನಗುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ ಮತ್ತು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ.
ನೋವು ನಿವಾರಣೆ: ನಗುವುದರಿಂದ ದೇಹದಲ್ಲಿ ಎಂಡಾರ್ಫಿನ್‌ಗಳು ಬಿಡುಗಡೆಯಾಗುತ್ತವೆ, ಇವು ನೈಸರ್ಗಿಕ ನೋವು ನಿವಾರಕಗಳಾಗಿವೆ. ಇದಲ್ಲದೆ, ಜೋರಾಗಿ ನಗೋದ್ರಿಂದ ಮುಖದ ಸ್ನಾಯುಗಳು ಹಿಗ್ಗುತ್ತವೆ, ಇದು ನೈಸರ್ಗಿಕ ಮುಖದ ಮಸಾಜ್‌ನಂತಿರುತ್ತೆ. ಜೋರಾಗಿ ನಗೋದ್ರಿಂದ ನಿಮ್ಮ ಮುಖದಲ್ಲಿ ಹೊಳಪು ಬರುತ್ತದೆ.
ಉಸಿರಾಟವನ್ನು ಸುಧಾರಿಸುತ್ತದೆ: ಜೋರಾಗಿ ನಗುವುದರಿಂದ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಾಗುತ್ತದೆ ಮತ್ತು ಉಸಿರಾಟವು ಸುಧಾರಿಸುತ್ತದೆ. ಅದಕ್ಕಾಗಿಯೇ ವಯಸ್ಸಾದವರು ಬೆಳಿಗ್ಗೆ ಜೋರಾಗಿ ನಗುತ್ತಾರೆ, ಇದರಿಂದ ಶ್ವಾಸಕೋಶಗಳಿಗೆ ಸಾಕಷ್ಟು ಪ್ರಮಾಣದ ಗಾಳಿ ತಲುಪುತ್ತದೆ.
ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ: ಜೋರಾಗಿ ನಗುವುದರಿಂದ ಒತ್ತಡ, ಆತಂಕ ಮತ್ತು ಖಿನ್ನತೆ ಕಡಿಮೆಯಾಗುತ್ತದೆ. ಇದು ನಿಮ್ಮ ಮಾನಸಿಕ ಆರೋಗ್ಯಕ್ಕೂ (mental health)ತುಂಬಾ ಒಳ್ಳೆಯ ಅಭ್ಯಾಸ.