ಪ್ರತಿದಿನ ಬೆಳಗ್ಗೆ ಕರಿಬೇವು ಎಲೆ ನೀರು ಕುಡಿದ್ರೆ ಎಷ್ಟೊಂದು ಪ್ರಯೋಜನ ಗೊತ್ತಾ?
ನೀವು ಪ್ರತಿದಿನ ಬೆಳಿಗ್ಗೆ ಕರಿಬೇವಿನ ಎಲೆಯ ನೀರನ್ನು ಕುಡಿದರೆ, ಕೂದಲಿನ ಬೆಳವಣಿಗೆಯ ಜೊತೆಗೆ ತೂಕವನ್ನು ಸಹ ಸುಲಭವಾಗಿ ಇಳಿಸಿಕೊಳ್ಳಬಹುದು, ಇದರಿಂದ ಇನ್ನು ಏನೆಲ್ಲಾ ಪ್ರಯೋಜನಗಳಿವೆ ಎಲ್ಲಾ ಪ್ರಯೋಜನಗಳನ್ನು ತಿಳಿದುಕೊಳ್ಳಿ
ಕರಿಬೇವನ್ನು ತಿನ್ನೋದ್ರಿಂದ ಕೂದಲು ಆರೋಗ್ಯಕರವಾಗಿರುತ್ತೆ (healthy hair), ಅನ್ನೋದರ ಬಗ್ಗೆ ನೀವು ಕೇಳಿರಬಹುದು. ಕರಿಬೇವಿನ ಎಲೆಗಳ ನೀರು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಅನ್ನೋದು ನಿಮಗೆ ಗೊತ್ತಾ? . ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು ಯಾವುವು ಎಂಬುದು ಇಲ್ಲಿದೆ.
ಕರಿಬೇವಿನ ಎಲೆಗಳನ್ನು (curry leaves) ಅಡುಗೆಯಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತೆ. ಈ ಎಲೆಗಳು ರುಚಿಯಲ್ಲಿ ಉತ್ತಮವಾಗಿವೆ ಮತ್ತು ಅವುಗಳನ್ನು ತಿನ್ನೋದ್ರಿಂದ ಆರೋಗ್ಯವು ಸಹ ಉತ್ತಮವಾಗಿರುತ್ತದೆ. ಆದ್ರೆ ಇದರ ನೀರನ್ನು ಕುಡಿಯೋದ್ರಿಂದನೂ ಪ್ರಯೋಜನಗಳಿವೆ ಅನ್ನೋದು ನಿಮಗೆ ಗೊತ್ತಾ? ಕರಿಬೇವಿನ ಎಲೆಗಳ ನೀರನ್ನು ತಯಾರಿಸಿ ಕುಡಿಯುವ ಪ್ರಯೋಜನಗಳು ಇಲ್ಲಿವೆ.
ಕರಿಬೇವಿನ ಎಲೆಗಳಲ್ಲಿ ಕಂಡುಬರುವ ಆಂಟಿ-ಆಕ್ಸಿಡೆಂಟ್ಗಳು, ಉರಿಯೂತ ನಿವಾರಕ ಗುಣಲಕ್ಷಣಗಳು, ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಮತ್ತು ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಎಲೆಗಳು ಜೀರ್ಣಕ್ರಿಯೆಯನ್ನು ಸುಧಾರಿಸುವುದರಿಂದ ಹಿಡಿದು ತೂಕ ನಷ್ಟದವರೆಗಿನ ಗುಣಲಕ್ಷಣಗಳನ್ನು ಹೊಂದಿವೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಯಿರಿ.
ಕರಿಬೇವಿನ ಎಲೆಗಳ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು
ಕರಿಬೇವಿನ ಎಲೆಗಳಿಂದ ನೀರನ್ನು ತಯಾರಿಸುವುದು ತುಂಬಾ ಸುಲಭ. ಒಂದು ಲೋಟ ನೀರಿನಲ್ಲಿ ಬೆರಳೆಣಿಕೆಯಷ್ಟು ಕರಿಬೇವಿನ ಎಲೆಗಳನ್ನು ಕುದಿಸಿ. ನೀರು ಕುದಿಸಿದ ನಂತರ, ಅದನ್ನು ಫಿಲ್ಟರ್ ಮಾಡಿ ಮತ್ತು ಉಗುರು ಬೆಚ್ಚಗಾದಾಗ ಅದನ್ನು ಕುಡಿಯಿರಿ. ಈ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಲಾಗುತ್ತದೆ. ನೀವು ಬಯಸಿದರೆ, ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ಜಗಿಯಬಹುದು.
ತೂಕ ಇಳಿಕೆಗೆ ಸಹಾಯಕ: ಕರಿಬೇವಿನ ಎಲೆಗಳ ನೀರು ಕುಡಿಯುವುದರಿಂದ ತೂಕ ಸುಲಭವಾಗಿ ಇಳಿಸಿಕೊಳ್ಳಲು (weight loss) ಸಹಾಯ ಮಾಡುತ್ತದೆ. ಈ ನೀರು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ ಮತ್ತು ದೇಹವನ್ನು ನಿರ್ವಿಷಗೊಳಿಸುತ್ತದೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ಕರಗುವ ಮೂಲಕ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡುತ್ತದೆ.
ಇದು ಕೂದಲಿಗೂ ಉತ್ತಮ: ಕರಿಬೇವಿನ ಎಲೆಗಳ ನೀರು ದೇಹವನ್ನು ಆಂತರಿಕವಾಗಿ ಮಾತ್ರವಲ್ಲದೆ ಬಾಹ್ಯವಾಗಿಯೂ ಸುಧಾರಿಸುತ್ತದೆ. ಇದು ಕೂದಲಿನ ಆರೋಗ್ಯವನ್ನು ಸಹ ಉತ್ತಮಗೊಳಿಸುತ್ತೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳ ನೀರನ್ನು ಕುಡಿಯುವುದರಿಂದ ಕೂದಲಿಗೆ ಆಂಟಿ-ಆಕ್ಸಿಡೆಂಟ್ಗಳು ಮತ್ತು ಅಮೈನೋ ಆಮ್ಲಗಳನ್ನು ಒದಗಿಸುತ್ತದೆ, ಇದು ನೆತ್ತಿಯನ್ನು ತೇವಾಂಶದಿಂದ ಇರಿಸುತ್ತದೆ. ಜೊತೆಗೆ ಕೂದಲನ್ನು ಸಹ ಬಲಪಡಿಸುತ್ತೆ ಈ ಎಲೆಗಳ ಸೇವನೆಯು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ.
ಕೊಲೆಸ್ಟ್ರಾಲ್ ಕಡಿಮೆ ಇರುತ್ತದೆ: ಕರಿಬೇವಿನ ಎಲೆಗಳಲ್ಲಿ ಆಂಟಿ-ಆಕ್ಸಿಡೆಂಟ್ ಗಳು ಸಮೃದ್ಧವಾಗಿವೆ, ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಎಲ್ ಡಿಎಲ್ ಅಂದರೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುತ್ತದೆ. ಈ ಎಲೆಗಳ ನೀರು ಕುಡಿಯುವುದರಿಂದ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಾಗಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ: ಹೊಟ್ಟೆ ಕೆಟ್ಟಿದ್ದರೆ ಕರಿಬೇವಿನ ಎಲೆಗಳನ್ನು ತಿನ್ನಬಹುದು ಮತ್ತು ಅವುಗಳ ನೀರನ್ನು ಕುಡಿಯಬಹುದು. ಈ ಎಲೆಗಳ ನೀರನ್ನು ಕುಡಿಯುವುದರಿಂದ ಮಲಬದ್ಧತೆ (constipation) ಮತ್ತು ಹೊಟ್ಟೆಯುಬ್ಬರದಂತಹ ಸಮಸ್ಯೆಗಳು ನಿವಾರಣೆಯಾಗುತ್ತೆ.
ಮಾರ್ನಿಂಗ್ ಸಿಕ್ ನೆಸ್: ಕೆಲವು ಜನರು ಬೆಳಗ್ಗೆ ಎದ್ದಾಗ ಕೆಲವೊಂದು ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಜ್ವರ ಬರುತ್ತಿರುವಂತೆ ಭಾಸವಾಗುತ್ತದೆ, ದೇಹದಲ್ಲಿ ನೋವು ಕಾಣಿಸಿಕೊಳ್ಳಲಿದೆ, ವಾಂತಿ ಸಹ ಉಂಟಾಗಬಹುದು. ಈ ಪರಿಸ್ಥಿತಿಯಲ್ಲಿ ಕರಿಬೇವಿನ ಎಲೆಯ ನೀರು ತುಂಬಾನೆ ಪರಿಣಾಮಕಾರಿಯಾಗಿದೆ. ಕರಿಬೇವಿನ ಎಲೆಯ ನೀರನ್ನು ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಬಹುದು.