ಈ ಮಸಾಲೆ ಪದಾರ್ಥದ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿದ್ರೆ… ರೋಗ ದೂರವಾಗುತ್ತೆ!
ಕೊತ್ತಂಬರಿಯನ್ನು ಭಾರತೀಯ ಆಹಾರದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದರ ಬೀಜಗಳನ್ನು ಒಣಗಿಸಿ, ಅದನ್ನು ಮಸಾಲೆಯಾಗಿ ಬಳಸುತ್ತಾರೆ, ಇದು ಆಹಾರದ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸುತ್ತೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ನೀರನ್ನು ಕುಡಿಯುವುದರಿಂದ ಅನೇಕ ಸಮಸ್ಯೆಗಳಿಗೆ ಹಾಡಬಹುದು ಮುಕ್ತಿ.
ಪ್ರತಿ ಅಡುಗೆ ಮನೆಯಲ್ಲಿ ಕೊತ್ತಂಬರಿಯನ್ನು (coriander) ಸುಲಭವಾಗಿ ಕಾಣಬಹುದು. ಇದನ್ನು ಆಹಾರದಲ್ಲಿ ಮಸಾಲೆಯಾಗಿ ಬಳಸಲಾಗುತ್ತದೆ. ಇದು ಆಹಾರವನ್ನು ರುಚಿಕರ ಮತ್ತು ಪರಿಮಳಯುಕ್ತವಾಗಿಸುತ್ತದೆ, ಆದರೆ ಕೊತ್ತಂಬರಿ ಬೀಜಗಳು ಆರೋಗ್ಯಕರವಾಗಿದೆ ಎಂದು ನಿಮಗೆ ತಿಳಿದಿದೆಯೇ. ಅವು ನಿಮ್ಮನ್ನು ಅನೇಕ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ.
ಹೌದು, ಕೊತ್ತಂಬರಿ ಬೀಜಗಳಲ್ಲಿ ವಿಟಮಿನ್-ಸಿ, ವಿಟಮಿನ್-ಕೆ ಮತ್ತು ಆಂಟಿ-ಆಕ್ಸಿಡೆಂಟ್ ಗುಣಗಳಿವೆ. ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ನೀರನ್ನು ಕುಡಿದರೆ, ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು (health issues) ನಿವಾರಿಸಬಹುದು. ಅದರ ಪ್ರಯೋಜನಗಳು ಮತ್ತು ಅದನ್ನು ಹೇಗೆ ತಯಾರಿಸುವುದು ಎಂದು ತಿಳಿಯೋಣ.
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ
ಉತ್ಕರ್ಷಣ ನಿರೋಧಕ ಸಮೃದ್ಧ ಕೊತ್ತಂಬರಿ ಬೀಜಗಳು ನಿಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತವೆ. ಕೊತ್ತಂಬರಿ ನೀರು ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ನೀವು ಅನೇಕ ರೀತಿಯ ಸೋಂಕನ್ನು ತಪ್ಪಿಸಬಹುದು.
ಕಣ್ಣುಗಳಿಗೆ ಪ್ರಯೋಜನಕಾರಿ
ಕೊತ್ತಂಬರಿಯಲ್ಲಿ ವಿಟಮಿನ್-ಎ, ವಿಟಮಿನ್-ಸಿ, ವಿಟಮಿನ್-ಇ ನಂತಹ ಎಲ್ಲಾ ಪೋಷಕಾಂಶಗಳಿವೆ, ಇದು ಕಣ್ಣಿನ ದೃಷ್ಟಿಯನ್ನು (sharp site) ಸುಧಾರಿಸುತ್ತದೆ. ಕಣ್ಣಿನ ಆರೋಗ್ಯಕ್ಕಾಗಿ ನೀವು ಪ್ರತಿದಿನ ಕೊತ್ತಂಬರಿ ನೀರನ್ನು ಕುಡಿಯಬಹುದು.
ಸಕ್ಕರೆ ರೋಗಿಗಳಿಗೆ ಪ್ರಯೋಜನಕಾರಿ
ನೀವು ಮಧುಮೇಹ diabetes) ರೋಗಿಯಾಗಿದ್ದರೆ, ಕೊತ್ತಂಬರಿ ನೀರು ನಿಮಗೆ ತುಂಬಾ ಪರಿಣಾಮಕಾರಿ. ಹೌದು ಕೊತ್ತಂಬರಿ ನೀರು ಕುಡಿಯೋದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇದು ಸಹಾಯಕ.
ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ
ನಿಮ್ಮ ತೂಕ ಇಳಿಸುವ (weight loss) ಆಹಾರದಲ್ಲಿ ಕೊತ್ತಂಬರಿ ನೀರನ್ನು ಸಹ ಸೇರಿಸಬಹುದು. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ನೀವು ಇದನ್ನು ಡಿಟಾಕ್ಸ್ ಡ್ರಿಂಕ್ಸ್ ಆಗಿ ಸಹ ಕುಡಿಯಬಹುದು. ಇದು ತೂಕ ಇಳಿಸಿಕೊಳ್ಳಲು ಹೆಚ್ಚಿನ ಮಟ್ಟಿಗೆ ಸಹಾಯ ಮಾಡುತ್ತದೆ.
ಕೂದಲನ್ನು ಬಲಪಡಿಸುತ್ತದೆ
ಕೊತ್ತಂಬರಿ ಸೊಪ್ಪು ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ವಿಟಮಿನ್-ಸಿ, ವಿಟಮಿನ್-ಕೆ ಮತ್ತು ಇತರ ಅಂಶಗಳಿವೆ, ಇದು ಕೂದಲನ್ನು ಬಲಪಡಿಸುತ್ತದೆ. ಬೆಳಿಗ್ಗೆ ಕೊತ್ತಂಬರಿ ನೀರನ್ನು ಕುಡಿಯುವುದರಿಂದ ಕೂದಲು ಉದುರುವಿಕೆ ಮತ್ತು ಒಡೆಯುವಿಕೆಯನ್ನು ಕಡಿಮೆ ಮಾಡಬಹುದು. ಇದಲ್ಲದೆ, ನೀವು ಕೊತ್ತಂಬರಿ ಎಣ್ಣೆ ಅಥವಾ ಹೇರ್ ಮಾಸ್ಕ್ ಅನ್ನು ಸಹ ಬಳಸಬಹುದು.
ಕೊತ್ತಂಬರಿ ನೀರು ತಯಾರಿಸುವುದು ಹೇಗೆ?
ಒಂದು ಬಟ್ಟಲಿನಲ್ಲಿ ನೀರನ್ನು ತೆಗೆದುಕೊಳ್ಳಿ, ಅದಕ್ಕೆ ಒಂದು ಟೀಸ್ಪೂನ್ ಕೊತ್ತಂಬರಿ ಬೀಜಗಳನ್ನು ಸೇರಿಸಿ.
ಈಗ ಈ ನೀರನ್ನು ಕುದಿಸಿ.
ನೀರು ಅರ್ಧದಷ್ಟು ಕಡಿಮೆಯಾದಾಗ, ಗ್ಯಾಸ್ ಆಫ್ ಮಾಡಿ.
ಈಗ ಅದನ್ನು ಫಿಲ್ಟರ್ ಮಾಡಿ ಮತ್ತು ಉಗುರು ಬೆಚ್ಚಗಿರುವಾಗ ಕುಡಿಯಿರಿ.