MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಬಿಯರ್ ಯೋಗದಿಂದ, ನ್ಯೂಡ್ ಯೋಗದವರೆಗೆ… ಟ್ರೆಂಡ್ ನಲ್ಲಿದೆ ಈ ಯೋಗಗಳು!

ಬಿಯರ್ ಯೋಗದಿಂದ, ನ್ಯೂಡ್ ಯೋಗದವರೆಗೆ… ಟ್ರೆಂಡ್ ನಲ್ಲಿದೆ ಈ ಯೋಗಗಳು!

ಸಮಯ ಕಳೆದಂತೆ, ಯೋಗ ಮಾಡುವ ವಿಧಾನವೂ ಬದಲಾಗಿದೆ. ಸಾಂಪ್ರದಾಯಿಕ ಯೋಗಾಭ್ಯಾಸದಲ್ಲಿ, ಇಂದಿನ ಯೋಗ ಗುರುಗಳು ಯುವಕರನ್ನು ಆಕರ್ಷಿಸಲು ಕೆಲವು ಆಸಕ್ತಿದಾಯಕ ಅಂಶಗಳನ್ನು ಸೇರಿಸುತ್ತಿದ್ದಾರೆ. ಇಂತಹ ಯೋಗಗಳು ಭಾರತದಲ್ಲಿ ಇಲ್ಲದಿದ್ದರೂ, ವಿದೇಶದಲ್ಲಿ ವಿಚಿತ್ರ ಯೋಗಗಳು ಹೆಚ್ಚು ಪ್ರಚಾರದಲ್ಲಿವೆ. ಯೋಗ ಗುರುಗಳು ಫಿಟ್ ನೆಸ್ ನ ಹೊಸ ಟ್ರೆಂಡ್ (yoga trend) ಸೆಟ್ ಮಾಡ್ತಿದ್ದಾರೆ. ಇದರಿಂದ ಪ್ರಯೋಜನಗಳೂ ಇವೆ ಅನ್ನೋದು ಸುಳ್ಳಲ್ಲ. 

2 Min read
Suvarna News
Published : Jun 20 2022, 06:01 PM IST
Share this Photo Gallery
  • FB
  • TW
  • Linkdin
  • Whatsapp
19

ಹಾಟ್ ಯೋಗ, ಬಿಯರ್ ಯೋಗ, ಜೋಡಿ ಯೋಗ ಮತ್ತು ನಗ್ನ ಯೋಗ ಟ್ರೆಂಡ್ ಇತ್ತಿಚಿನ ದಿನಗಳಲ್ಲಿ ಭಾರಿ ಟ್ರೆಂಡ್ ನಲ್ಲಿವೆ. ಅಂತರರಾಷ್ಟ್ರೀಯ ಯೋಗ ದಿನದ (International yoga day) ಹಿನ್ನೆಲೆಯಲ್ಲಿ ಈ ವಿಶಿಷ್ಟ ಯೋಗಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
 

29

 ಈ ದಿನಗಳಲ್ಲಿ ಬೆತ್ತಲೆ ಯೋಗ (nude yoga) ಸಾಕಷ್ಟು ಟ್ರೆಂಡಿಂಗ್ ಆಗಿದೆ. ಅದರ ಹಿಂದಿನ ತರ್ಕವೆಂದರೆ ನೀವು ಅದರಿಂದ ನೇರವಾಗಿ ಪ್ರಕೃತಿಯೊಂದಿಗೆ ಕನೆಕ್ಟ್ ಆಗುತ್ತೀರಿ ಎಂದು ಹೇಳಲಾಗುತ್ತೆ. ನ್ಯೂಡ್ ಯೋಗವು ನಿಮ್ಮ ಸ್ವಂತ ದೇಹವನ್ನು ಪಾಸಿಟಿವ್ ಆಗಿ ನೋಡುವ ಭಾವನೆಯನ್ನು ಉಂಟು ಮಾಡುತ್ತೆ.

39

ನ್ಯೂಡ್ ಯೋಗದಲ್ಲಿ ಬಟ್ಟೆಗಳಿಲ್ಲದೇ, ಜನರು ಫ್ರೀ ಆಗಿರುತ್ತಾರೆ ಎಂದು ಸಂಶೋಧನೆಯು ಕಂಡುಕೊಂಡಿದೆ. ನಗ್ನ ಯೋಗ, ಮನಸ್ಸಿನ ಶಾಂತಿ, ನಿಮ್ಮ ಬಗ್ಗೆ ಸಕಾರಾತ್ಮಕ ಆಲೋಚನೆಗಳನ್ನು ಹೊಂದುವುದು ಮತ್ತು ದೇಹವನ್ನು ಫಿಟ್ ಆಗಿರಿಸುತ್ತೆ. ಇದು ದೇಹ, ಆತ್ಮ ಮತ್ತು ಮನಸ್ಸಿನ ಸಾಮರಸ್ಯಕ್ಕೆ ಕಾರಣವಾಗುತ್ತದೆ.

49

ಕಿಮ್ ಕರ್ದಾಶಿಯನ್, ಜೆನ್ನಿಫರ್ ಅನಿಸ್ಟನ್, ಮೇಗನ್ ಫಾಕ್ಸ್ ಸೇರಿದಂತೆ ಅನೇಕ ಹಾಲಿವುಡ್ ನಟಿಯರು ತಮ್ಮ ಸೌಂದರ್ಯ ಮತ್ತು ಫಿಟ್ನೆಸ್ ಅನ್ನು ಕಾಪಾಡಿಕೊಳ್ಳಲು ನಗ್ನ ಯೋಗವನ್ನು ಮಾಡುತ್ತಾರೆ. ಇದರಿಂದ ಉತ್ತಮ ಆರೋಗ್ಯ ಕಾಪಾಡಲು ಸಹ ಸಾಧ್ಯವಾಗುತ್ತೆ ಎನ್ನಲಾಗುತ್ತೆ.

59

ಕಪಲ್ಸ್ ಯೋಗ (couple yoga) ಕೂಡ ಟ್ರೆಂಡಿಂಗ್ ನಲ್ಲಿದೆ. ಒಂದು ಅಧ್ಯಯನವು ಕಪಲ್ಸ್ ಯೋಗವು ಸಂಬಂಧ ಬಲಪಡಿಸಲು ಕೆಲಸ ಮಾಡುತ್ತದೆ ಎಂದು ಕಂಡುಹಿಡಿದಿದೆ. ಇದು ಇಬ್ಬರ ನಡುವೆ ಭಾವನಾತ್ಮಕ ಬೆಸುಗೆ ಹೆಚ್ಚಲು ಸಹಾಯ ಮಾಡುತ್ತೆ. ಯೋಗದಲ್ಲಿ ದಂಪತಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಪರಸ್ಪರ ಬೆಂಬಲಿಸುತ್ತಾರೆ. ಇದು ಆರೋಗ್ಯ ಸಮಸ್ಯೆಗಳನ್ನು ತೆಗೆದುಹಾಕುತ್ತದೆ, ಭಾವನಾತ್ಮಕ ವ್ಯಾಮೋಹವೂ ಹೆಚ್ಚಾಗುತ್ತದೆ. 

69

ಇನ್ನು ಇತ್ತೀಚಿನ ದಿನಗಳಲ್ಲಿ ಬಿಯರ್ ಯೋಗದ (beer yoga) ಟ್ರೆಂಡಿಂಗ್ ಬಹಳ ವೇಗವಾಗಿ ಹರಡುತ್ತಿದೆ. ಆದಾಗ್ಯೂ, ಈ ರೀತಿಯ ಯೋಗವನ್ನು ಭಾರತದಲ್ಲಿ ಮಾಡಲಾಗುವುದಿಲ್ಲ. ಆದರೆ ಬ್ಯಾಂಕಾಕ್, ಥೈಲ್ಯಾಂಡ್, ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಬಿಯರ್ ಯೋಗ ಮಾಡಲಾಗುತ್ತಿದೆ. ಯೋಗದಲ್ಲಿ, ಒಂದರಿಂದ ಎರಡು ಗಂಟೆಗಳ ಅವಧಿಯಲ್ಲಿ ಒಂದರಿಂದ ಎರಡು ಬಾಟಲಿ ಬಿಯರ್ ಅನ್ನು ಕುಡಿಯಲಾಗುತ್ತದೆ. 

79

ಈ ಯೋಗ ಮಾಡುವ ಮೊದಲು, ಸ್ವಲ್ಪ ಬಿಯರ್ ಕುಡಿಯಲಾಗುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಯೋಗದಲ್ಲಿ ಧ್ಯಾನ ಮಾಡಲು ಸಹಾಯ ಮಾಡುತ್ತದೆ. ಯೋಗ ಮಾಡುವಾಗ, ವ್ಯಕ್ತಿಯು ಮೊದಲಿಗೆ ಕೈಗಳ ಮೇಲೆ, ನಂತರ ತಲೆಯ ಮೇಲೆ ಬಿಯರ್ ಬಾಟಲಿಯನ್ನು ಬ್ಯಾಲೆನ್ಸ್ ಮಾಡುತ್ತಾನೆ. ಇದು ನಿಧಾನವಾಗಿ ಏಕಾಗ್ರತೆಗೆ ಕಾರಣವಾಗುತ್ತದೆ. ಇದರ ನಂತರ, ಯೋಗ ಶಿಕ್ಷಕರು ವಿವಿಧ ಆಸನಗಳನ್ನು ಅದರೊಂದಿಗೆ ಮಾಡುತ್ತಾರೆ.

89

ಹಾಟ್ ಯೋಗವು (hot yoga) ಸಾಕಷ್ಟು ಜನಪ್ರಿಯವಾಗುತ್ತಿದೆ. ಈ ಯೋಗವನ್ನು ಮಾಡುವುದರಿಂದ, ಒಬೆಸಿಟಿ ಬಹಳ ಬೇಗನೆ ಕರಗಿಸಬಹುದು. ಇದನ್ನು ಮುಚ್ಚಿದ ಬೆಚ್ಚಗಿನ ಕೋಣೆಯಲ್ಲಿ ಮಾಡಲಾಗುತ್ತದೆ, ಇದರಿಂದಾಗಿ ಹೆಚ್ಚು ಬೆವರು ಹೊರಬರುತ್ತದೆ ಮತ್ತು ಕ್ಯಾಲೋರಿ ಬರ್ನ್ ಮಾಡಲು ಸಹಾಯ ಮಾಡುತ್ತೆ. 

99

ಹಾಟ್ ಯೋಗಕ್ಕಾಗಿ ಕೋಣೆಯ ತಾಪಮಾನವನ್ನು 40 ರಿಂದ 45 ಡಿಗ್ರಿಗಳವರೆಗೆ ಬಿಸಿ ಮಾಡಿ ಇಡಲಾಗುತ್ತೆ. ಈ 90 ನಿಮಿಷಗಳ ಯೋಗ ಸೆಶನ್ ನಲ್ಲಿ, 26 ಆಸನಗಳು ಮತ್ತು 2 ಪ್ರಾಣಾಯಾಮಗಳನ್ನು ಮಾಡಲಾಗುತ್ತದೆ. ಇದರಿಂದ ಅನೇಕ ರೀತಿಯ ದೈಹಿಕ ಪ್ರಯೋಜನಗಳಿವೆ. 

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved