ಶಿವನಿಂದ ಪ್ರೇರಿತವಾದ ಆಯುರ್ವೇದ ತತ್ವಗಳು… ಇವತ್ತಿನಿಂದಲೇ ಪಾಲಿಸಿ ಜೀವನ ಬದಲಾಗುತ್ತೆ
Ayurveda lessons: ನಿಮ್ಮ ಆಂತರಿಕ ಅಗ್ನಿಯ ಸಮತೋಲನಗೊಳಿಸುವುದರಿಂದ ಹಿಡಿದು ಸ್ಥಿರತೆಯನ್ನು ಗೌರವಿಸುವವರೆಗೆ, ಶಿವನಿಂದ ಪ್ರೇರಿತವಾದ ಈ ಶಾಶ್ವತ ಆಯುರ್ವೇದ ತತ್ವಗಳು ನಿಮಗೆ ಸ್ಪಷ್ಟತೆ, ಶಕ್ತಿ ಮತ್ತು ಶಾಂತ ಜೀವನದತ್ತ ಮಾರ್ಗದರ್ಶನ ನೀಡುತ್ತವೆ.
16

Image Credit : Instagram
ದೇಹವೆಂಬ ದೇಗುಲವನ್ನು ಗೌರವಿಸಿ
- ಶಿವನ ಶಿಸ್ತಿನ ಜೀವನಶೈಲಿಯು ಸ್ವ ಆರೈಕೆಗೆ ಮಹತ್ವ ನೀಡುತ್ತೆ. ಅಭ್ಯಂಗನ ಸ್ನಾನ ಮಾಡಿ. ಇದರಿಂದ ರಕ್ತಪರಿಚಲನೆ ಮತ್ತು ಚರ್ಮದ ಆರೋಗ್ಯ ಉತ್ತಮವಾಗುತ್ತದೆ.
- ಪ್ರತಿದಿನ ತಪ್ಪದೇ ವ್ಯಾಯಾಮ, ಯೋಗ ಅಥವಾ ಪ್ರಕೃತಿಯಲ್ಲಿ ವಾಕಿಂಗ್ ಮಾಡಿ.
- ನೀವು ನಿಮ್ಮ ದೇಹವನ್ನು ಗೌರವಿಸಿದಾಗ ದೀರ್ಘಾಯುಷ್ಯ ಮತ್ತು ಸ್ಥಿತಿಸ್ಥಾಪಕತ್ವ ನ್ಯಾಚುರಲ್ ಆಗಿ ನಿಮ್ಮನ್ನು ಹಿಂಬಾಲಿಸುತ್ತದೆ.
26
Image Credit : Getty
ನಿಮ್ಮ ಆಂತರಿಕ ಅಗ್ನಿಯನ್ನು ಸಮತೋಲನ ಮಾಡಿ
- ಶಿವನು ಶಕ್ತಿ ಮತ್ತು ಶಾಂತಿಯ ಪರ್ಫೆಕ್ಟ್ ಬ್ಯಾಲೆನ್ಸ್. ಅವನಂತೆ ಆಗಬೇಕು, ದೇಹವನ್ನು ಬ್ಯಾಲೆನ್ಸ್ ಮಾಡಬೇಕೆಂದರೆ ನಿಮ್ಮ ಜೀರ್ಣಕ್ರಿಯೆಯ ಅಗ್ನಿಯನ್ನು ಜಾಗೃತಗೊಳಿಸಬೇಕು, ಅದಕ್ಕಾಗಿ ಬಿಸಿಬಿಸಿಯಾದ ಊಟ, ಆರೋಗ್ಯಯುತ ಆಹಾರ ಸೇವಿಸಿ.
- ಯಾವತ್ತೂ ಆಹಾರವನ್ನು ಮತ್ತೆ ಮತ್ತೆ ಬಿಸಿ ಮಾಡುವುದು ಅಥವಾ ಆಹಾರವನ್ನೇ ಸ್ಕಿಪ್ ಮಾಡಿ ಆ ಸಮತೋಲನವನ್ನು ಕಳೆದುಕೊಳ್ಳಬೇಡಿ.
- ನಿಮ್ಮ ಆಂತರಿಕ ಅಗ್ನಿಯು ಶಕ್ತಿ, ರೋಗನಿರೋಧಕ ಶಕ್ತಿ ಮತ್ತು ಸ್ಪಷ್ಟ ಮನಸ್ಸಿನ ಭದ್ರ ಬುನಾದಿಯಾಗಿದೆ.
36
Image Credit : Getty
ಮನಃಪೂರ್ವಕ ನಿಶ್ಚಲತೆ ಅಭ್ಯಾಸ ಮಾಡಿ
- ಶಿವನು ಈ ಒತ್ತಡ, ಕಿರಿಕಿರಿಯ ಮಧ್ಯೆ ನಿಶ್ಚಲವಾಗಿರುವುದನ್ನು ಕಲಿಸುತ್ತಾನೆ.
- ಪ್ರತಿದಿನವು ದೀರ್ಘ ಉಸಿರಾಟ ಅಥವಾ ಧ್ಯಾನ ಮಾಡುವುದನ್ನು ರೂಢಿ ಮಾಡಿ.
- ನಿಮ್ಮ ಒತ್ತಡವನ್ನು ಕಡಿಮೆ ಮಾಡಿ, ವಾತವನ್ನು ಬ್ಯಾಲೆನ್ಸ್ ಮಾಡಿ ಹಾಗೂ ನಿದ್ರೆಯನ್ನು ಉತ್ತಮಗೊಳಿಸಿ.
- ನೀವು ಆಂತರಿಕವಾಗಿ ಶಾಂತವಾಗಿದ್ದರೆ, ಮಾನಸಿಕ ಸ್ಪಷ್ಟತೆ ಮತ್ತು ಸಂಪೂರ್ಣ ಆರೋಗ್ಯ ಉತ್ತಮವಾಗಿರುತ್ತದೆ.
46
Image Credit : Pinterest
ಪ್ರಕೃತಿಯೊಂದಿಗೆ ಬೆರೆಯಿರಿ
- ಶಿವನು ಪ್ರಾಕೃತಿಕ ಜಗತ್ತಿನೊಂದಿಗೆ ಅನ್ಯೋನ್ಯತೆಯಿಂದ ಜೀವಿಸಿದ್ದನು.
- ನೀವು ಪ್ರಕೃತಿಯೊಂದಿಗೆ ಬೆರೆಯಲು ಸೀಸನಲ್ ಆಹಾರಗಳನ್ನು ಹಾಗೂ ತಾಜಾ ಹಸಿರು ತರಕಾರಿಗಳನ್ನು ಆಹಾರದಲ್ಲಿ ಸೇವಿಸಿ.
- ನಿಮ್ಮ ಆಹಾರದಲ್ಲಿ ಅರಿಶಿನ, ಶುಂಠಿ, ಮತ್ತು ದಾಲ್ಚಿನಿ ಇರಲಿ. ಇವು ದೇಹದ ದೋಷಗಳನ್ನು ಸಮತೋಲನದಲ್ಲಿರಿಸುತ್ತವೆ. ಪ್ರಕೃತಿಗೆ ಅನುಗುಣವಾಗಿ ಆಹಾರವನ್ನು ಸೇವಿಸುವುದರಿಂದ ದೇಹ ಮನಸ್ಸು ಹಾಗೂ ಚೈತನ್ಯವ ಅದ್ಭುತವಾಗಿರುತ್ತದೆ.
56
Image Credit : Freepik
ನಿಮ್ಮ ಜೀವನಶೈಲಿ ಸರಳವಾಗಿರಲಿ
- ಶಿವನು ಯಾವಾಗಲೂ ಮಿನಿಮಲಿಸಂ ಅಂದರೆ ಕನಿಷ್ಠತೆ ಹಾಗೂ ಗಮನದ ಕಡೆಗೆ ಹೆಚ್ಚು ಕೇಂದ್ರೀಕೃತವಾಗಿದ್ದರು.
- ಸಂಸ್ಕರಿಸಿದ ಆಹಾರಗಳಿಗೆ ತಡೆ ಹಾಕಬೇಕು.
- ಸಾಧ್ಯವಾದಷ್ಟು ವಿಶ್ರಾಂತಿ, ಹೈಡ್ರೇಶನ್ ಹಾಗೂ ನಿಮ್ಮ ದೋಷವನ್ನು ಸಮತೋಲನದಲ್ಲಿರಿಸುವ ರೂಟೀನ್ ಫಾಲೋ ಮಾಡಿ.
- ಸರಳತೆಯು ಒತ್ತಡವನ್ನು ನಿವಾರಿಸುತ್ತದೆ ಹಾಗೂ ನಿಮ್ಮ ದೇಹವು ತನ್ನಷ್ಟಕ್ಕೆ ಹೀಲ್ ಆಗುತ್ತದೆ.
66
Image Credit : our own
ಚಕ್ರದೊಂದಿಗೆ ಸಮತೋಲನತೆ
- ಪ್ರಕೃತಿಯ ಚಕ್ರದ ಜೊತೆ ಶಿವನ ರಿಧಂ ಸೇರಿಕೊಳ್ಳುತ್ತದೆ.
- ನೀವು ಸೂರ್ಯನ ಜೊತೆ ಅಥವಾ ಸೂರ್ಯನಿಗೂ ಮುನ್ನ ಎದ್ದೇಳಿ. ಸಾಧ್ಯವಾದಷ್ಟು ಬೇಗ ನಿದ್ರೆ ಮಾಡಿ. ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಿ.
- ನೀವು ಪ್ರತಿಯೊಂದು ಕಾಲದ ಚಕ್ರಕ್ಕೆ ಸರಿಯಾಗಿ ಅಭ್ಯಾಸಗಳನ್ನು ರೂಡಿ ಮಾಡಿಕೊಂಡಿದ್ದರೆ ನಿಮ್ಮ ರೋಗನಿರೋಧಕ ಶಕ್ತಿ ಜೀರ್ಣಕ್ರಿಯೆ ಮತ್ತು ಶಕ್ತಿಯು ಮತ್ತಷ್ಟು ಪವರ್ಫುಲ್ ಆಗುವುದರಲ್ಲಿ ಸಂಶಯವಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos

