ಆಪಲ್ ವಿನೆಗರ್ ನಿಮ್ಮನ್ನು ನಪುಂಸಕರನ್ನಾಗಿ ಮಾಡಬಹುದು, ಹುಷಾರ್!
ಆಪಲ್ ಸೈಡರ್ ವಿನೆಗರ್ ಬಳಸೋದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇತ್ತೀಚಿನ ದಿನಗಳಲ್ಲಿ, ಆಪಲ್ ವಿನೆಗರ್ ಆಹಾರದಲ್ಲಿ ಸೇರಿಸೋದು ಪ್ರಯೋಜನಕಾರಿ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ನೀವೂ ಕೇಳಿರಬಹುದು. ಆದರೆ ಆಯುರ್ವೇದದ ಪ್ರಕಾರ, ಸೇಬಿನ ವಿನೆಗರ್ ಆಹಾರದಲ್ಲಿ ತೆಗೆದುಕೊಳ್ಳುವುದು ಅನೇಕ ಗಂಭೀರ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತೆ. ಆಪಲ್ ಸೈಡರ್ ವಿನೆಗರ್ ಸೇವನೆಯ ಅನಾನುಕೂಲತೆಗಳ ಬಗ್ಗೆ ತಿಳಿದುಕೊಳ್ಳೋಣ.
ಆಪಲ್ ಸೈಡರ್ ವಿನೆಗರ್(Apple cider vinegar) ಒಂದು ಔಷಧಿಯಾಗಿದೆ
ಆಯುರ್ವೇದ ತಜ್ಞರ ಪ್ರಕಾರ ಆಪಲ್ ವಿನೆಗರ್ ಒಂದು ಔಷಧಿ ಇದ್ದಂತೆ. ಇದನ್ನು ಮಿತ ಪ್ರಮಾಣದಲ್ಲಿ ಸೇವಿಸಬೇಕು. ಇದು ಆಹಾರ ಪದಾರ್ಥವಲ್ಲ. ಅನಾರೋಗ್ಯದ ಸಂದರ್ಭದಲ್ಲಿ ಪ್ಯಾರಾಸಿಟಮಾಲ್ ತಿನ್ನಲು ವೈದ್ಯರು ಸಲಹೆ ನೀಡಿದರೆ, ನೀವು ಅದನ್ನು ಪ್ರತಿದಿನ ತಿನ್ನಲು ಪ್ರಾರಂಭಿಸಬೇಕು ಎಂದು ಅರ್ಥವಲ್ಲ.
ಆಯುರ್ವೇದ ತಜ್ಞರ ಪ್ರಕಾರ, ಆಪಲ್ ವಿನೆಗರ್ ಕ್ಷಾರ ವರ್ಗಕ್ಕೆ ಸೇರುತ್ತೆ. ಇದು ಸಾಕಷ್ಟು ಬಿಸಿ, ಶುಷ್ಕ, ವೇಗ, ಭೇದಿಸುವ ಗುಣ ಹೊಂದಿದೆ. ಇದರ ಸೇವನೆಯು ಕಿರಿಕಿರಿ ಮತ್ತು ಬಾಡಿ ಚಾನಲ್ ಬ್ಲಾಕ್ ಗೆ(Block) ಕಾರಣವಾಗಬಹುದು. ಈ ಕಾರಣದಿಂದಾಗಿ ದೇಹದಲ್ಲಿ ವಿಷ ಉದ್ಭವಿಸಲು ಪ್ರಾರಂಭಿಸುತ್ತೆ ಮತ್ತು ದೀರ್ಘಕಾಲದ ರೋಗವಾಗಿ ಬೆಳೆಯಬಹುದು.
ಆಪಲ್ ಸೈಡರ್ ವಿನೆಗರ್ ನ ಅನಾನುಕೂಲತೆಗಳು
ಆಪಲ್ ಸೈಡರ್ ವಿನೆಗರ್ ಹೃದಯ, ಯಕೃತ್ತು, ಹೊಟ್ಟೆ, ಕರುಳು, ಚರ್ಮ ಮತ್ತು ಕೂದಲಿಗೆ ಹಾನಿಕಾರಕ. ಆಯುರ್ವೇದದ ಪ್ರಕಾರ, ಇದನ್ನು ಪ್ರತಿದಿನ ಸೇವಿಸೋದರಿಂದ ಕುರುಡುತನ, ಬೊಕ್ಕತಲೆ(Baldness), ಬಿಳಿ ಕೂದಲು, ಹೃದ್ರೋಗ ಮತ್ತು ನಪುಂಸಕತ್ವಕ್ಕೆ ಕಾರಣವಾಗಬಹುದು.
ಈ ಸಮಸ್ಯೆಗಳನ್ನು ಸಹ ಅನುಭವಿಸಬೇಕಾಗಬಹುದು
ಆಪಲ್ ವಿನೆಗರ್ ಪ್ರತಿದಿನ ಸೇವಿಸೋದರಿಂದ ಅನೇಕ ಅಡ್ಡಪರಿಣಾಮಗಳು ಉಂಟಾಗಬಹುದು. ಅವುಗಳೆಂದರೆ
ಹೊಟ್ಟೆಯ ಸಮಸ್ಯೆಗಳು(Stomach problems)
ಎದೆಯುರಿ
ಒಸಡುಗಳಲ್ಲಿ ಊತ
ಗಂಟಲು ಕಿರಿಕಿರಿ
ಅಲರ್ಜಿ ಮೊದಲಾದ ಸಮಸ್ಯೆಗಳನ್ನು ನೀವು ಅನುಭವಿಸಬೇಕಾಗಬಹುದು.
ಆಪಲ್ ವಿನೆಗರ್ ನ ಸರಿಯಾದ ಬಳಕೆ ಏನು?
ಆಪಲ್ ವಿನೆಗರ್ ಅನ್ನು ಪ್ರತಿದಿನ ಬಳಸುವ ಒಂದು ಮಾರ್ಗವೂ ಇದೆ. ನೀವು ನೀರಿನ ಜೊತೆ ಸ್ವಲ್ಪ ಆಪಲ್ ವಿನೆಗರ್ ಮಿಶ್ರಣ ಮಾಡಬಹುದು ಮತ್ತು ಹಣ್ಣುಗಳು ಮತ್ತು ತರಕಾರಿಗಳನ್ನು(Fruits and vegetables) ಅದರೊಂದಿಗೆ ತೊಳೆಯಬಹುದು. ಇದು ರಾಸಾಯನಿಕಗಳು ಮತ್ತು ಕೊಳೆಯನ್ನು ನಿವಾರಿಸಬಹುದು.
ಹೀಗೆ ಆಪಲ್ ಸೈಡರ್ ವಿನೆಗರ್ ಅನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಉತ್ತಮ ಪ್ರಯೋಜನದೊಂದಿಗೆ ಉತ್ತಮ ಆರೋಗ್ಯವನ್ನು(Health) ಪಡೆಯಬಹುದು, ಇಲ್ಲದಿದ್ದರೆ ಅಪಾಯ ಆಗಬಹುದು, ಹುಷಾರ್! ಇನ್ನು ಮುಂದೆ ಆಪಲ್ ಸೈಡರ್ ವಿನೆಗರ್ ಬಳಕೆ ಮಾಡುವ ಮುನ್ನ ಎಚ್ಚರ ವಹಿಸಿದ್ರೆ ಒಳ್ಳೇದು.