Raw Papaya Benefits: ಈ ವಿಷಯ ಗೊತ್ತಾದ್ರೆ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಹಸಿ ಪಪ್ಪಾಯಿ ತಿಂತೀರಾ!
ಜೀರ್ಣಕ್ರಿಯೆ, ಹೊಟ್ಟೆ ಉಬ್ಬರ, ಕರುಳಿನ ಆರೋಗ್ಯಕ್ಕೆ ಹಸಿ ಪಪ್ಪಾಯಿ ತುಂಬಾ ಒಳ್ಳೆಯದು.

ಹಸಿ ಪಪ್ಪಾಯಿ ತಿಂದ್ರೆ ಏನಾಗುತ್ತೆ?
ಪಪ್ಪಾಯಿ ಹಣ್ಣು ಎಲ್ಲರೂ ತಿಂತಾರೆ. ಬಹುತೇಕ ಮಂದಿಗೆ ಇಷ್ಟವಾದ ಹಣ್ಣು ಕೂಡ. ಈ ಹಣ್ಣು ತಿಂದ್ರೆ ನಮಗೆ ತುಂಬಾ ಆರೋಗ್ಯ ಪ್ರಯೋಜನಗಳಿವೆ. ಈ ವಿಷಯ ಎಲ್ಲರಿಗೂ ಗೊತ್ತು. ಆದ್ರೆ.. ಹಸಿ ಪಪ್ಪಾಯಿ ತಿಂದಿದ್ದೀರಾ? ನೀವು ಓದಿದ್ದು ಸರಿ, ಹಸಿ ಪಪ್ಪಾಯಿ ಹಣ್ಣು ತಿಂದ್ರೆ ನಮಗೆ ಊಹಿಸಲಾಗದ ಪ್ರಯೋಜನಗಳಿವೆ.
ಮುಖ್ಯವಾಗಿ ಜೀರ್ಣಕ್ರಿಯೆ, ಹೊಟ್ಟೆ ಉಬ್ಬರ, ಕರುಳಿನ ಆರೋಗ್ಯಕ್ಕೆ ಹಸಿ ಪಪ್ಪಾಯಿ ತುಂಬಾ ಒಳ್ಳೆಯದು. ಪಪ್ಪಾಯಿ ಹಸಿಯಾಗಿದ್ದಾಗಲೇ ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಏನು ಪ್ರಯೋಜನ ಅಂತ ಈಗ ನೋಡೋಣ...
ಹಸಿ ಪಪ್ಪಾಯಿ ಪ್ರಯೋಜನಗಳು
1. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತೆ...
ಹಸಿ ಪಪ್ಪಾಯಿಯಲ್ಲಿ ಪ್ರೋಟೀನ್‌ಗಳನ್ನು ವಿಭಜಿಸಲು ಸಹಾಯ ಮಾಡುವ ಪಪೈನ್ ಎಂಬ ಕಿಣ್ವ ಸಮೃದ್ಧವಾಗಿದೆ. ಖಾಲಿ ಹೊಟ್ಟೆಯಲ್ಲಿ ತಿಂದಾಗ.. ಜೀರ್ಣಕ್ರಿಯೆ ಸುಧಾರಿಸುತ್ತದೆ. ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ. ಮಲಬದ್ಧತೆ ಸಮಸ್ಯೆ ಕೂಡ ಇರಲ್ಲ.
2.ಡೀಟಾಕ್ಸ್..
ನಾರಿನಂಶ, ನೀರು, ವಿಟಮಿನ್ ಎ, ಸಿ, ಇ ಇತ್ಯಾದಿ ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಹಸಿ ಪಪ್ಪಾಯಿ ಉತ್ತಮ ಡೀಟಾಕ್ಸ್ ಆಗಿ ಕೆಲಸ ಮಾಡುತ್ತದೆ. ಲಿವರ್ ಅನ್ನು ಶುದ್ಧೀಕರಿಸಲು, ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದ ಲಿವರ್ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಇಮ್ಯೂನಿಟಿ ಬೂಸ್ಟರ್..
3. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ..
ಹಸಿ ಪಪ್ಪಾಯಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಅದರ ಹೀರಿಕೊಳ್ಳುವಿಕೆ ಹೆಚ್ಚಾಗುತ್ತದೆ. ಇದು ರೋಗನಿರೋಧಕ ಶಕ್ತಿಗೆ ಬೆಂಬಲ ನೀಡುತ್ತದೆ. ಅಷ್ಟೇ ಅಲ್ಲ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮಧುಮೇಹ ಇರುವವರಿಗೆ ಇದು ಉತ್ತಮ ಆಯ್ಕೆ ಅಂತ ಹೇಳಬಹುದು.
4.ತೂಕ ಇಳಿಸಲು ಸಹಾಯ ಮಾಡುವ ಹಸಿ ಪಪ್ಪಾಯಿ..
ಹಸಿ ಪಪ್ಪಾಯಿ ತಿಂದ್ರೆ ನಾವು ತುಂಬಾ ಸುಲಭವಾಗಿ ತೂಕ ಇಳಿಸಬಹುದು. ಯಾಕಂದ್ರೆ, ಪಪ್ಪಾಯಿ ತಿಂದ್ರೆ ಹೊಟ್ಟೆ ತುಂಬಿದ ಅನುಭವ ಆಗುತ್ತೆ. ಇದರಿಂದ ಹಸಿವು ಆಗಲ್ಲ. ಹೆಚ್ಚುವರಿ ಕ್ಯಾಲೋರಿ ಇರುವ ಆಹಾರ ಸೇವಿಸುವ ಸಾಧ್ಯತೆ ಇರಲ್ಲ. ಇದರಿಂದ ಸುಲಭವಾಗಿ ತೂಕ ಇಳಿಸಲು ಸಹಾಯವಾಗುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿರುವ ನಾರಿನಂಶ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
5.ಚರ್ಮವನ್ನ ಫ್ರೆಶ್ ಆಗಿಡುತ್ತೆ
ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಪಪ್ಪಾಯಿ ಚರ್ಮದ ಜೀವಕೋಶಗಳಿಗೆ ಹಾನಿ ಮಾಡುವ ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಸಿ ಪಪ್ಪಾಯಿಯಿಂದ ನಿಮ್ಮ ದಿನವನ್ನು ಪ್ರಾರಂಭಿಸುವುದು ನಿಮ್ಮ ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ಇದರಲ್ಲಿ ವಿಟಮಿನ್ ಸಿ, ಎ, ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿರುವುದರಿಂದ ಕಾಲಜನ್ ಉತ್ಪಾದನೆಗೆ ಬೆಂಬಲ ನೀಡುತ್ತದೆ, ಚರ್ಮದ ಜೀವಕೋಶಗಳನ್ನು ನಿರ್ವಿಷಗೊಳಿಸುತ್ತದೆ. ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ, ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
ಇಷ್ಟೆಲ್ಲಾ ಪ್ರಯೋಜನಗಳಿದ್ದರೂ ಹಸಿ ಪಪ್ಪಾಯಿಯನ್ನು ಮಿತವಾಗಿ ತಿನ್ನಬೇಕು. ಅತಿಯಾಗಿ ತಿಂದ್ರೆ ಹೊಟ್ಟೆ ನೋವು ಬರುತ್ತದೆ, ವಿಶೇಷವಾಗಿ ಸೂಕ್ಷ್ಮ ಜನರಲ್ಲಿ. ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೊದಲು ನಿಮ್ಮ ಆಹಾರ ತಜ್ಞರನ್ನು ಸಂಪರ್ಕಿಸಿ.