ಗ್ರಿಲ್ಡ್ ಚಿಕನ್ ತಿಂದ್ರೆ ಮಾತ್ರ ಅಲ್ಲ, ಈ ಸಸ್ಯಹಾರದಿಂದಲೂ ಮಸಲ್ಸ್ ಬಿಲ್ಡ್ ಮಾಡಬಹುದು!
ಹೆಚ್ಚಿನ ಜನ ಚಿಕನ್ ತಿನ್ನುವ ಮೂಲಕ ಮಸಲ್ ಬಿಲ್ಡ್ ಮಾಡುತ್ತಾರೆ. ಆದರೆ ವೆಜಿಟೇರಿಯನ್ಸ್ ಏನು ಮಾಡಬೇಕು? ನಿಮಗೂ ಅದೇ ಯೋಚನೆ ಇದೆಯೇ? ಹಾಗಿದ್ರೆ ಕೇಳಿ ಇಲ್ಲಿದೆ ಚಿಕನ್ ಗೆ ಬದಲಾಗಿ ನೀವು ಮಸಲ್ ಬಿಲ್ಡ್ ಮಾಡಲು ಏನೆಲ್ಲಾ ತಿನ್ನಬಹುದು…
ನೀವು ಸಸ್ಯಹಾರಿಯಾಗಿದ್ದು (vegetarian), ಮಸಲ್ ಬಿಲ್ಡ್ ಮಾಡಲು ಬಯಸಿದ್ರೆ ಮಿಸ್ ಮಾಡದೇ ಈ ಆಹಾರಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ. ಇವು ಯಾವುದೇ ನಾನ್ ವೆಜ್ ಆಹಾರ ಅಲ್ಲ, ಗ್ರಿಲ್ಡ್ ಚಿಕನ್ ಬದಲಾಗಿ, ನೀವು ಈ ಯಾವುದೇ ವೆಜಿಟೇರಿಯನ್ ಆಹಾರ ಸೇವಿಸಿ…
ತೋಫು (Tofu): ತೋಫು ಅಥವಾ ಪನೀರ್ ನಲ್ಲಿ ಸುಮಾರು 8 ಗ್ರಾಂ ಪ್ರೋಟೀನ್ ಇದೆ. ಇದರಲ್ಲಿರುವ ಅಮಿನೋ ಆಸಿಡ್ ಮಸಲ್ ಬಿಲ್ಡ್ ಮಾಡಲು ಸಹಾಯ ಮಾಡುತ್ತದೆ. ನೀವು ಇದನ್ನ ನಿಯಮಿತವಾಗಿ ಸೇವಿಸಬಹುದು.
ದವಸ ಧಾನ್ಯಗಳು (lentil): ಬೇಯಿಸಿದ ಒಂದು ಕಪ್ ದವಸ ಧಾನ್ಯಗಳಲ್ಲಿ ಸುಮಾರು 18 ಗ್ರಾಂ ಹೈ ಪ್ರೋಟೀನ್ ಇದೆ. ಜೊತೆಗೆ ಇದರಲ್ಲಿರುವ ಫೈಬರ್ ಮತ್ತು ಐರನ್ ಉತ್ತಮ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತೆ.
ಖ್ವಿನೋವಾ (Quinoa): ಒಂದು ಕಪ್ ಖ್ವಿನೋವಾದಲ್ಲಿ ಸುಮಾರು 8 ಗ್ರಾಂ ಪ್ರೊಟೀನ್ ಇದೆ. ಇದರಲ್ಲಿರುವ ಅಮೈನೋ ಆಸಿಡ್ ಮತ್ತು ಫೈಬರ್ ಮಸಲ್ ಬಿಲ್ಡ್ ಮಾಡಲು ಸಹಾಯ ಮಾಡುತ್ತೆ.
ನಟ್ಸ್: ಬಾದಾಮಿ ಮತ್ತು ಶೇಂಗಾ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಪ್ರೊಟೀನ್ ಇದೆ. ಒಂದೊಂದೇ ಬೀಜದಲ್ಲಿ ಸುಮಾರು 6 ಗ್ರಾಂನಷ್ಟು ಪ್ರೋಟೀನ್ ಇದೆ. ಇದರಲ್ಲಿರುವ ಆರೋಗ್ಯಕರ ಫ್ಯಾಟ್ ಮಸಲ್ ಬಿಲ್ಡ್ ಮಾಡಲು ಸಹಾಯ ಮಾಡುತ್ತೆ.
ಪಾಲಕ್ (spinach): ಒಂದು ಕಪ್ ಬೇಯಿಸಿದ ಪಾಲಕ್ ಸೊಪ್ಪಿನಲ್ಲಿ ಸುಮಾರು 5 ಗ್ರಾಂ ಪ್ರೊಟೀನ್ ಇದೆ. ಇದರಲ್ಲಿರುವ ವಿಟಾಮಿನ್ ಮತ್ತು ಐರನ್ ನಿಮ್ಮನ್ನು ಸ್ಟ್ರಾಂಗ್ ಮಾಡಲು ಸಹಾಯ ಮಾಡುತ್ತದೆ.
ಬಿಳಿ ಕಡ್ಲೆ: ಒಂದು ಕಪ್ ಬೇಯಿಸಿದ ಕಡ್ಲೆಯಲ್ಲಿ ಸುಮಾರು 15 ಗ್ರಾಂ ಪ್ರೋಟೀನ್ ಇದೆ. ಇದರಲ್ಲಿ ಫೈಬರ್ ಮತ್ತು ಆಂಟಿ ಆಕ್ಸಿಡೆಂಟ್ ಕೂಡ ಇದೆ. ಇದರಿಂದ ನೀವು ಮತ್ತಷ್ಟು ಸ್ಟ್ರಾಂಗ್ ಆಗಬಹುದು.