ಚಳಿಗಾಲದಲ್ಲಿ ಪ್ರತಿದಿನ ಒಂದು ತುಂಡು ಬೆಲ್ಲ ತಿಂದ್ರೆ ಈ ಕಾಯಿಲೆಗಳು ನಿಮ್ಮ ಹತ್ತಿರ ಬರೋದಿಲ್ಲ!
Home Remedies Jaggery: ಬೆಲ್ಲವು ನೈಸರ್ಗಿಕವಾಗಿ ಸಿಹಿಯಾಗಿರುವುದಲ್ಲದೆ, ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಪ್ರಮುಖ ಖನಿಜಗಳನ್ನು ಸಹ ಹೊಂದಿದೆ. ಆದ್ದರಿಂದ ನಾವಿಂದು ವಿಶೇಷವಾಗಿ ಚಳಿಗಾಲದಲ್ಲಿ ಬೆಲ್ಲವನ್ನು ತಿನ್ನುವುದರಿಂದ ಸಿಗುವ 5 ಪ್ರಮುಖ ಆರೋಗ್ಯ ಪ್ರಯೋಜನಗಳನ್ನು ನೋಡೋಣ.

ಹೆಚ್ಚಿದೆ ಬೆಲ್ಲದ ಸೇವನೆ
ಶತ ಶತಮಾನಗಳಿಂದಲೂ ಭಾರತೀಯರು ಬೆಲ್ಲವನ್ನು ಪ್ರಧಾನ ಆಹಾರವಾಗಿ ಬಳಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಕ್ಕರೆ ಸೇವನೆ ಹೆಚ್ಚಿತ್ತು. ಆದರೆ ಕ್ರಮೇಣ ಸಕ್ಕರೆಯಿಂದ ಅನುಕೂಲಕ್ಕಿಂತ ಅನಾಕೂಲವೇ ಹೆಚ್ಚು ಎಂದು ತಿಳಿದ ಮೇಲೆ ಮತ್ತೆ ಬೆಲ್ಲದ ಸೇವನೆ ಹೆಚ್ಚಿದೆ. ಬೆಲ್ಲವು ನೈಸರ್ಗಿಕವಾಗಿ ಸಿಹಿಯಾಗಿರುವುದಲ್ಲದೆ, ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಪ್ರಮುಖ ಖನಿಜಗಳನ್ನು ಸಹ ಹೊಂದಿದೆ. ಆದ್ದರಿಂದ ನಾವಿಂದು ವಿಶೇಷವಾಗಿ ಚಳಿಗಾಲದಲ್ಲಿ ಬೆಲ್ಲವನ್ನು ತಿನ್ನುವುದರಿಂದಾಗುವ 5 ಪ್ರಮುಖ ಆರೋಗ್ಯ ಪ್ರಯೋಜನಗಳನ್ನು ನೋಡೋಣ..
ದೇಹವನ್ನು ಬೆಚ್ಚಗಿರಿಸುತ್ತದೆ
ನೀವು ಆಗಾಗ್ಗೆ ಶೀತದ ಸಮಸ್ಯೆಯಿಂದ ಬಳಲುತ್ತಿದ್ದರೆ ಪ್ರತಿದಿನ ಒಂದು ಸಣ್ಣ ತುಂಡು ಬೆಲ್ಲ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಚಳಿಗಾಲದಲ್ಲಿ ನೀವು ಬೆಲ್ಲ ತಿನ್ನಲು ಪ್ರಾರಂಭಿಸಿದರೆ ಅದು ನಿಮ್ಮ ದೇಹವನ್ನು ಒಳಗಿನಿಂದ ಬೆಚ್ಚಗಿಡಲು ಸಹಾಯ ಮಾಡುತ್ತದೆ. ಇದು ಚಳಿಗಾಲದ ಕಾಯಿಲೆಗಳನ್ನು ತಡೆಗಟ್ಟಲು ಸಹ ಸಹಾಯ ಮಾಡುತ್ತದೆ.
ದೇಹದಲ್ಲಿ ರಕ್ತ ಹೆಚ್ಚಳ
ಬೆಲ್ಲವು ಕಬ್ಬಿಣ ಮತ್ತು ವಿವಿಧ ಪ್ರಮುಖ ಖನಿಜಗಳಿಂದ ಸಮೃದ್ಧವಾಗಿದೆ. ಅದಕ್ಕಾಗಿಯೇ ರಕ್ತಹೀನತೆಯಿಂದ ಬಳಲುತ್ತಿರುವವರು ಬೆಲ್ಲವನ್ನು ತಿನ್ನಲೇಬೇಕು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿ ರಕ್ತದ ಉತ್ಪಾದನೆ ಸುಧಾರಿಸುತ್ತದೆ.
ಜೀರ್ಣಕ್ರಿಯೆ ಸುಧಾರಣೆ
ಚಳಿಗಾಲದಲ್ಲಿ ಅಥವಾ ಹೆವಿ ಊಟ ಮಾಡಿದ ನಂತರ ಹೊಟ್ಟೆಯಲ್ಲಿ ಭಾರವಾದ ಅನುಭವವಾಗುವುದು ಸಾಮಾನ್ಯ. ಈ ಸಮಸ್ಯೆ ಇರುವವರು ಊಟದ ನಂತರ ಸ್ವಲ್ಪ ಬೆಲ್ಲ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಬೆಲ್ಲವನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ. ನಿಮಗೆ ಗ್ಯಾಸ್ ಮತ್ತು ಮಲಬದ್ಧತೆಯ ಸಮಸ್ಯೆಗಳಿದ್ದರೆ ಬೆಲ್ಲವನ್ನು ಸೇವಿಸುವುದರಿಂದ ಪರಿಹಾರ ಸಿಗುತ್ತದೆ.
ರೋಗನಿರೋಧಕ ಶಕ್ತಿ
ಚಳಿಗಾಲದಲ್ಲಿ ಕೇವಲ ಶೀತದಿಂದಾಗಿಯೇ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು. ಬೆಲ್ಲದಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ಈ ಸಮಯದಲ್ಲಿ ನಮಗೆ ತುಂಬಾ ಪ್ರಯೋಜನಕಾರಿ. ಬೆಲ್ಲವನ್ನು ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿ ಸುಧಾರಿಸುತ್ತದೆ. ಇದು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ನಿಮ್ಮನ್ನು ಸುಂದರವಾಗಿಡುತ್ತದೆ
ಬೆಲ್ಲವನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ಆರೋಗ್ಯ ಸುಧಾರಿಸುವುದಲ್ಲದೆ, ರಕ್ತವೂ ಶುದ್ಧವಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಮೊಡವೆಗಳನ್ನು ತಡೆಗಟ್ಟುವುದರ ಜೊತೆಗೆ, ನಿಮ್ಮ ಚರ್ಮವು ಹೊಳೆಯುತ್ತದೆ. ಕೂದಲು ಬಲಗೊಳ್ಳುತ್ತದೆ. ಆದ್ದರಿಂದ ಪೋಷಕಾಂಶಗಳಿಗಾಗಿ ಸಕ್ಕರೆಯ ಬದಲಿಗೆ ಬೆಲ್ಲವನ್ನು ಬಳಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.