MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • 40 ವರ್ಷ ದಾಟಿದೆಯಾ? ಚಿಂತಿಸಬೇಡಿ, ಹಿರಿಯರಿಗೆ ಇಲ್ಲಿವೆ ವಿಶೇಷ ಸಲಹೆಗಳು

40 ವರ್ಷ ದಾಟಿದೆಯಾ? ಚಿಂತಿಸಬೇಡಿ, ಹಿರಿಯರಿಗೆ ಇಲ್ಲಿವೆ ವಿಶೇಷ ಸಲಹೆಗಳು

40 ರ ನಂತರದ ಜೀವನವು ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ವ್ಯಕ್ತಿಗಳು ತಮ್ಮ ಚೈತನ್ಯವನ್ನು ಕಾಪಾಡಿಕೊಳ್ಳಲು ಜೀವನಶೈಲಿಯನ್ನು ಬದಲಾಯಿಸಬೇಕಾಗುತ್ತದೆ. ಅಂತಹ ಆರೋಗ್ಯಕರ ಸಲಹೆಗಳು ಇಲ್ಲಿ ಕೊಡಲಾಗಿದೆ. 

2 Min read
Ravi Janekal
Published : Oct 25 2024, 11:00 AM IST| Updated : Oct 25 2024, 12:03 PM IST
Share this Photo Gallery
  • FB
  • TW
  • Linkdin
  • Whatsapp
18
ಹೆಚ್ಚು ನೀರು ಕುಡಿಯಿರಿ

ಹೆಚ್ಚು ನೀರು ಕುಡಿಯಿರಿ

ವಯಸ್ಸಾಗುವುದು ಎಂದರೆ ಸುಲಭವಲ್ಲ. ವೃದ್ಧಾಪ್ಯ ಶುರುವಾಗುತ್ತಿದ್ದಂತೆ ನಿಮ್ಮ ದೇಹವು ನೋಯಲು ಪ್ರಾರಂಭಿಸುತ್ತದೆ,  ಚರ್ಮವು ಸುಕ್ಕುಗಟ್ಟಲು ಪ್ರಾರಂಭಿಸುತ್ತದೆ, ನಿಮ್ಮ ಕೂದಲು ಬೂದು ಬಣ್ಣಕ್ಕೆ ಬಳಿಕ ಬಿಳಿಯಾಗುತ್ತದೆ. ಈ ಬದಲಾವಣೆಗಳು ನಿಮ್ಮನ್ನು ಸಂತೋಷದಿಂದ ಕುಣಿದಾಡಲು ಸಾಧ್ಯವಿಲ್ಲ ಎಂದೇನೂ ಅಲ್ಲ. ಆದರೆ ವೃದ್ಧಾಪ್ಯವು ಅದರ ನೋವು ವಿಷಾದೊಂದಿಗೆ ಬರುತ್ತದೆ. ಅದರರ್ಥ ನೀವು 40 ವರ್ಷದ ನಂತರ ಸಂತೋಷ ಕ್ಷಣ ಕಳೆದುಕೊಳ್ಳಲಿದ್ದೀರಿ ಎಂದಲ್ಲ. ಇದಕ್ಕೆ ತದ್ವಿರುದ್ಧವಾಗಿ, ಸ್ವಲ್ಪ ಕೃತಜ್ಞತೆ, ಕೆಲವು ಉತ್ತಮ ಸ್ನೇಹಿತರು ಮತ್ತು ನಿಮ್ಮ ಉತ್ತಮ ಜೀವನ ಶೈಲಿ ಮೈಗೂಡಿಸಿಕೊಂಡರೆ (ನಿಮ್ಮ ಸುಕ್ಕುಗಳು ಮತ್ತು ಬೂದು ಕೂದಲಿನ ಹೊರತಾಗಿಯೂ) ಜೀವನ ಸುಂದರ ಸುಖಮಯಗೊಳಿಸಬಹುದು.

ವಯಸ್ಸಾಗ್ತಿದ್ದಂತೆ ಊಟ, ಬಾಯರಿಕೆಗಳಲ್ಲಿ ಬದಲಾವಣೆಗಳಾಗುತ್ತದೆ. ನಿಮಗೆ ಬಾಯಾರಿಕೆಯಿಲ್ಲದಿದ್ದರೂ ಅಥವಾ ಅವಶ್ಯಕತೆಯಿಲ್ಲದಿದ್ದರೂ ಆಗಾಗ ನೀರು ನೀರನ್ನು ಕುಡಿಯಿರಿ, ದೊಡ್ಡ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳಲ್ಲಿ ಹೆಚ್ಚಿನವು ದೇಹದಲ್ಲಿ ನೀರಿನ ಕೊರತೆಯಿಂದಾಗಿಯೇ ಬರುತ್ತವೆ ಎಂದು ವೈದ್ಯರು ಹೇಳುತ್ತಾರೆ ಹೀಗಾಗಿ ಪ್ರತಿದಿನವೂ ನಿಯಮಿತವಾಗಿ ನೀರನ್ನು ಕುಡಿಯುತ್ತಿರಿ.

28
ಕಡಿಮೆ ತಿನ್ನಿ

ಕಡಿಮೆ ತಿನ್ನಿ

 40 ವರ್ಷದ ಬಳಿಕ ಕಡಿಮೆ ತಿನ್ನಲು ಪ್ರಾರಂಭಿಸಿ. ಹೆಚ್ಚು ತಿನ್ನುವ ಹಂಬಲವನ್ನು ಬೇಡ. ಹೆಚ್ಚು ತಿಂದಷ್ಟು ಜೀರ್ಣಿಸಿಕೊಳ್ಳುವ ವಯಸ್ಸಲ್ಲ, ದೈಹಿಕ ಚಟುವಟಿಕೆಯೂ ಕಡಿಮೆ ಇರುವುದರಿಂದ ಹೆಚ್ಚು ತಿನ್ನುವುದು ಆರೋಗ್ಯಕ್ಕೂ ಒಳ್ಳೆಯದಲ್ಲ.ತಿನ್ನುವ ಪ್ರಮಾಣವನ್ನು ಕಡಿಮೆ ಮಾಡಿ.  ಪ್ರೋಟೀನ್, ಕಾರ್ಬೋಹೈಡ್ರೇಟ್ ಭರಿತ ಆಹಾರಗಳನ್ನು ಹೆಚ್ಚು ಬಳಸಿ.

38
ದಿನವೂ ವಾಕಿಂಗ್ ಮಾಡಿ

ದಿನವೂ ವಾಕಿಂಗ್ ಮಾಡಿ

ನಿಂತ ನೀರಲ್ಲಿ ಕ್ರಿಮಿ ಎನ್ನುವಂತೆ ಕುಳಿತಲ್ಲೇ ಕುಳಿತರೆ ರೋಗಗಳು. ಹೀಗಾಗಿ ಸಾಧ್ಯವಾದಷ್ಟು ದೈಹಿಕ ಶ್ರಮವಹಿಸುವ ಕೆಲಸವನ್ನು ಮನೆ ಮುಂದಿನ ತೋಟ, ಸಸಿ ನೆಡವಿಕೆ, ಸ್ವಚ್ಛಗೊಳಿಸುವಿಕೆ ಹೀಗೆ ಏನಾದರೂ ಒಂದು ದೈಹಿಕ ಚಟುವಟಿಕೆ ಮಾಡುತ್ತಲೇಳ ಇರಿ. ಏನಿಲ್ಲದಿದ್ದರೂ ನಡಿಗೆ, ಈಜು ಚಲನಶೀಲನೆ ನಿರಂತವಾಗಿರಲಿ.

48

ಕೆಲವರು ನಲ್ವತ್ತು ವರ್ಷದ ಬಳಿಕ ನಡೆದಾಡುವುದನ್ನ ನಿಲ್ಲಿಸಿಬಿಡ್ತಾರೆ. ಎಲ್ಲದಕ್ಕೂ ವಾಹನ ಬಳಸಲು ಪ್ರಾರಂಭಿಸುತ್ತಾರೆ. ವಾಹನವು ಸಂಪೂರ್ಣವಾಗಿ ಅಗತ್ಯವಿಲ್ಲದಿದ್ದರೆ ಅದನ್ನು ಬಳಸಲೇಬೇಡಿ.  ನೀವು ದಿನಸಿಗಳನ್ನು ತೆಗೆದುಕೊಳ್ಳಲು ಅಂಗಡಿಗೆ ಹೋಗುವುದು, ತರಕಾರಿ ತರಲು ಹೋಗುವುದು, ಯಾರನ್ನಾದರೂ ಭೇಟಿ ಮಾಡಲು ಅಥವಾ ಕೆಲಸ ಮಾಡಲು ಎಲ್ಲಿಯಾದರೂ ಹೋಗುತ್ತಿದ್ದರೆ, ನಿಮ್ಮ ಕಾಲುಗಳ ಮೇಲೆ ನಡೆಯಲು ಪ್ರಯತ್ನಿಸಿ.  ಲಿಫ್ಟ್, ಎಸ್ಕಲೇಟರ್ ಬಳಸುವ ಬದಲು ಮೆಟ್ಟಿಲುಗಳನ್ನು ಹತ್ತಲು ಪ್ರಾರಂಭಿಸಿ.

58

ವಯಸ್ಸಾಗುತ್ತಿದ್ದಂತೆ ಕೋಪವನ್ನು ನಿಯಂತ್ರಿಸಿ, ಅತಿಯಾಗಿ ಚಿಂತಿಸುವುದನ್ನು ಬಿಟ್ಟುಬಿಡಿ ಮನಸಿಗೆ ನೋವುಂಟು ಮಾಡುವ ಯಾವುದೇ ವಿಷಯಗಳನ್ನು ಮರೆಯಲು ಪ್ರಯತ್ನಿಸಿ.  ರಿಸ್ಕ್ ತೆಗೆದುಕೊಳ್ಳಬೇಡಿ. ನಿಮ್ಮ ಬಗ್ಗೆ ಅಥವಾ ನೀವು ಸಾಧಿಸಲು ಸಾಧ್ಯವಾಗದ ಯಾವುದನ್ನಾದರೂ ಅಥವಾ ನೀವು ಆಶ್ರಯಿಸಲು ಸಾಧ್ಯವಾಗದ ಯಾವುದನ್ನಾದರೂ ಕುರಿತು ವಿಷಾದಿಸಬೇಡಿ. ಅಯ್ಯೋ ಅದನ್ನ ಸಾಧಿಸಲಾಗಲಿಲ್ಲ, ಈಡೇರಿಸಲಾಗಲಿಲ್ಲ, ಅನುಭವಿಸಲಾಗಲಿಲ್ಲ ಎಂಬ ಚಿಂತೆ ಬೇಡ. ಈಡೇರಿಸಲಾಗದ್ದನ್ನು ಮರೆತುಬಿಡಿ

68

ನಲ್ವತ್ತು ವರ್ಷವಾಗುತ್ತಿದ್ದಂತೆ ತಲೆಯಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುತ್ತವೆ. ಇದು ಸಹ ಪ್ರಕೃತಿ ನಿಯಮ. ನಿಮ್ಮ ಕೂದಲು ಬಿಳಿಯಾಗಿದ್ದರೆ, ಜೀವನ ಮುಗಿದೇ ಹೋಯ್ದು, ಜೀವನದ ಅಂತ್ಯ ಸಮೀಪಿಸಿತು ಎಂದರ್ಥವಲ್ಲ, ಮುಂದಿನ ಜೀವನವನ್ನು ಇನ್ನಷ್ಟು ಉತ್ತಮವಾಗಿ ಕಳೆಯಬೇಕು ಎಂಬುದರ ಸೂಚನೆ ಅದು. ಪ್ರತಿ ಕ್ಷಣವನ್ನು ಆನಂದಿಸಲು ಪ್ರಾರಂಭಿಸಿ.

78

ಮೊದಲನೆಯದಾಗಿ ನಲ್ವತ್ತು ವರ್ಷ ದಾಟುತ್ತಿದ್ದಂತೆ ಹಣದ ಮೇಲಿನ ವ್ಯಾಮೋಹ ಕಡಿಮೆ ಮಾಡಿ,. ಕೆಲವರು ಹಣಕ್ಕಾಗಿ ಆರೋಗ್ಯ ಪಣಕ್ಕಿಟ್ಟು ಹಗಲು ರಾತ್ರಿ ದುಡಿಯುತ್ತಲೇ ಇರುತ್ತಾರೆ, ಇಂತಹ  ಹಣದ ಮೇಲಿನ ವ್ಯಾಮೋಹ ಬಿಟ್ಟುಬಿಡಿ  ಸುತ್ತಲಿರುವ ಜನರೊಂದಿಗೆ ಸಂಪರ್ಕ ಸಾಧಿಸಿ, ಸಂತೋಷವಾಗಿ ಮಾತಾಡಿಸಿ, ಯಾರೂ ಇಲ್ಲದಿದ್ದರೂ ಮಡದಿಯೊಂದಿಗೆ ಮಾತನಾಡಿ ಪಕ್ಕದ ಗಾರ್ಡನ್, ಸುತ್ತಮುತ್ತಲಿನ ಆಹ್ಲಾದಕಾರ ವಾತಾವರನದಲ್ಲಿ ಸುತ್ತಾಡಿ.

ನಿಮ್ಮ ಪುಟ್ಟ ಮಕ್ಕಳನ್ನು ಪ್ರೀತಿ, ಸಹಾನುಭೂತಿ ಮತ್ತು ಪ್ರೀತಿಯಿಂದ ಭೇಟಿ ಮಾಡಿ!  ವ್ಯಂಗ್ಯವಾಗಿ ಏನನ್ನೂ ಹೇಳಬೇಡಿ!  ನಿಮ್ಮ ಮುಖದಲ್ಲಿ ನಗುವನ್ನು ಇರಿಸಿ!

88

ಹಣ, ಸ್ಥಾನ, ಪ್ರತಿಷ್ಠೆ, ಅಧಿಕಾರ, ಸೌಂದರ್ಯ, ಜಾತಿ ಮತ್ತು ಪ್ರಭಾವ;
 ಇವೆಲ್ಲವೂ ಅಹಂಕಾರವನ್ನು ಹೆಚ್ಚಿಸುತ್ತವೆ.  ನಮ್ರತೆಯು ಜನರನ್ನು ಪ್ರೀತಿಯಿಂದ ಹತ್ತಿರ ತರುತ್ತದೆ  ಹಿಂದೆ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ವರ್ತಮಾನದಲ್ಲಿ ಅದನ್ನು ಮರೆತು ಎಲ್ಲರೊಂದಿಗೆ ಬೆರೆಯಿರಿ!

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved