- Home
- Technology
- Gadgets
- Tech Explained: 3-ಪಿನ್ ಪ್ಲಗ್‌ನಲ್ಲಿ ಒಂದು ಪಿನ್ ಯಾಕೆ ದೊಡ್ಡದಿರುತ್ತೆ? ಅಪ್ಪಿತಪ್ಪಿಯೂ ಈ ವಿಚಾರ ನಿರ್ಲಕ್ಷಿಸಬೇಡಿ
Tech Explained: 3-ಪಿನ್ ಪ್ಲಗ್‌ನಲ್ಲಿ ಒಂದು ಪಿನ್ ಯಾಕೆ ದೊಡ್ಡದಿರುತ್ತೆ? ಅಪ್ಪಿತಪ್ಪಿಯೂ ಈ ವಿಚಾರ ನಿರ್ಲಕ್ಷಿಸಬೇಡಿ
3 pin plug earthing reason: ದಿನಾ ಬಳಸುವ ಎಲೆಕ್ಟ್ರಿಕ್ ಪ್ಲಗ್‌ಗಳಲ್ಲಿ ಒಂದು ಪಿನ್ ಉದ್ದ, ದಪ್ಪವಾಗಿರುವುದನ್ನು ಗಮನಿಸಿರುತ್ತೇವೆ. ಇದನ್ನು ಕೇವಲ ಡಿಸೈನ್ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಈ ಬದಲಾವಣೆಯ ಹಿಂದೆ ನಿಮ್ಮನ್ನು ಎಲೆಕ್ಟ್ರಿಕ್ ಶಾಕ್‌ನಿಂದ ರಕ್ಷಿಸುವ ದೊಡ್ಡ ತಂತ್ರಜ್ಞಾನ ಅಡಗಿದೆ.
ಕರೆಂಟ್ ಲೀಕ್ ಆದ್ರೂ ಸಮಸ್ಯೆಯಾಗಲ್ಲ
ಕರೆಂಟ್ ಲೀಕ್ ಆದ್ರೂ ಸಮಸ್ಯೆಯಾಗಲ್ಲ
ನೀವು ಎಂದಾದರೂ ಗಮನಿಸಿದ್ದೀರಾ? 3-ಪಿನ್ ಪ್ಲಗ್‌ನಲ್ಲಿ ಒಂದು ಪಿನ್ ಉಳಿದ ಎರಡಕ್ಕಿಂತ ದೊಡ್ಡದಾಗಿ ಮತ್ತು ದಪ್ಪವಾಗಿರುತ್ತದೆ. ಇದು ಕೇವಲ ಲುಕ್‌ಗೆ ಅಥವಾ ಡಿಸೈನ್‌ಗಾಗಿ ಮಾಡಿದ್ದಲ್ಲ, ಇದರ ಹಿಂದೆ ಟೆಕ್ನಿಕಲ್ ಕಾರಣವಿದೆ. ವಾಸ್ತವವಾಗಿ, ಈ ಪಿನ್ ಹೆಚ್ಚಿನ ವಿದ್ಯುತ್ ಬಳಸುವ ಉಪಕರಣಗಳಿಂದ ನಿಮಗೆ ಎಲೆಕ್ಟ್ರಿಕ್ ಶಾಕ್ ತಗುಲದಂತೆ ರಕ್ಷಿಸುತ್ತದೆ. ಉದ್ದವಾಗಿರುವುದರಿಂದ ಇದು ಸಾಕೆಟ್ ಒಳಗೆ ಮೊದಲೇ ಸೇರಿಕೊಂಡು ಉಪಕರಣದ 'ಅರ್ತಿಂಗ್' (Earthing) ಸಂಪರ್ಕವನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ಕರೆಂಟ್ ಲೀಕ್ ಆಗುತ್ತಿದ್ದರೂ ಅದು ನಿಮಗೆ ತಗುಲದೆ ಸುರಕ್ಷಿತವಾಗಿ ಭೂಮಿಗೆ ಸೇರುತ್ತದೆ.
ಭಾರೀ ಉಪಕರಣಗಳಿಗೆ 3-ಪಿನ್ ಪ್ಲಗ್ ಏಕೆ ಬೇಕು?
ಭಾರೀ ಉಪಕರಣಗಳಿಗೆ 3-ಪಿನ್ ಪ್ಲಗ್ ಏಕೆ ಬೇಕು?
ಮನೆಯಲ್ಲಿರುವ ಫ್ರಿಡ್ಜ್, ಎಸಿ, ಮೈಕ್ರೋವೇವ್ ಮತ್ತು ಗೀಸರ್ ಅಂತಹ ಹೆಚ್ಚಿನ ಲೋಡ್ ಬಳಸುವ ಉಪಕರಣಗಳ ಹೊರಭಾಗವು ಹೆಚ್ಚಾಗಿ ಲೋಹದಿಂದ (Metal) ಮಾಡಲ್ಪಟ್ಟಿರುತ್ತದೆ. ಇವುಗಳಲ್ಲಿ ವಿದ್ಯುತ್ ಸೋರಿಕೆಯಾಗುವ (Current leak) ಅಪಾಯ ಹೆಚ್ಚು. ಒಂದು ವೇಳೆ ಇವುಗಳಿಗೆ ಅರ್ತಿಂಗ್ ಸಂಪರ್ಕ ಇಲ್ಲದಿದ್ದರೆ, ಉಪಕರಣವನ್ನು ಮುಟ್ಟಿದ ತಕ್ಷಣ ನಮಗೆ ಶಾಕ್ ಹೊಡೆಯುವ ಸಾಧ್ಯತೆ ಇರುತ್ತದೆ. ಮೊಬೈಲ್ ಚಾರ್ಜರ್ ಅಥವಾ ಟಿವಿಯಂತಹ ಕಡಿಮೆ ವೋಲ್ಟೇಜ್ ಸಾಧನಗಳಲ್ಲಿ ಈ ಅಪಾಯ ಕಡಿಮೆ ಇರುವುದರಿಂದ ಅಲ್ಲಿ 2-ಪಿನ್ ಪ್ಲಗ್ ಸಾಕಾಗುತ್ತದೆ.
3-ಪಿನ್ ಪ್ಲಗ್‌ನಲ್ಲಿ ಒಂದು ಪಿನ್ ಉದ್ದವಾಗಿರುವುದು ಏಕೆ?
3-ಪಿನ್ ಪ್ಲಗ್‌ನಲ್ಲಿ ಒಂದು ಪಿನ್ ಉದ್ದವಾಗಿರುವುದು ಏಕೆ?
ಪ್ಲಗ್‌ನಲ್ಲಿ ಒಂದು ಪಿನ್ ಉದ್ದವಾಗಿದ್ದರೆ, ನೀವು ಅದನ್ನು ಸಾಕೆಟ್‌ಗೆ ಹಾಕುವಾಗ ಆ ಉದ್ದವಾದ ಪಿನ್ ಉಳಿದ ಎರಡಕ್ಕಿಂತ (Neutral and Phase) ಮೊದಲೇ ಒಳಹೋಗುತ್ತದೆ. ಇದರಿಂದ ಉಪಕರಣಕ್ಕೆ ವಿದ್ಯುತ್ ಹರಿಯುವ ಮೊದಲೇ 'ಅರ್ತಿಂಗ್' ಸಂಪರ್ಕ ಏರ್ಪಡುತ್ತದೆ. ಒಂದು ವೇಳೆ ಉಪಕರಣದ ಒಳಗೆ ಶಾರ್ಟ್ ಸರ್ಕ್ಯೂಟ್ ಆಗಿದ್ದರೆ ಅಥವಾ ಕರೆಂಟ್ ಲೀಕ್ ಆಗುತ್ತಿದ್ದರೆ, ಅದು ನಿಮ್ಮ ದೇಹದ ಮೂಲಕ ಹರಿಯುವ ಬದಲು ಈ ಉದ್ದವಾದ ಪಿನ್ ಮೂಲಕ ನೇರವಾಗಿ ಭೂಮಿಗೆ ಸೇರುತ್ತದೆ. ಹೀಗಾಗಿ ನೀವು ಅಪಾಯದಿಂದ ಪಾರಾಗುತ್ತೀರಿ.
3-ಪಿನ್ ಪ್ಲಗ್‌ನಲ್ಲಿ ಆ ಪಿನ್ ದಪ್ಪವಾಗಿರುವುದು ಏಕೆ?
3-ಪಿನ್ ಪ್ಲಗ್‌ನಲ್ಲಿ ಆ ಪಿನ್ ದಪ್ಪವಾಗಿರುವುದು ಏಕೆ?
ತಪ್ಪಾದ ಕನೆಕ್ಷನ್ ತಡೆಯಲು: ಪಿನ್ ದಪ್ಪವಾಗಿರುವುದರಿಂದ ಯಾರೂ ಅದನ್ನು ತಪ್ಪಾದ ರೀತಿಯಲ್ಲಿ ಸಾಕೆಟ್‌ಗೆ ಹಾಕಲು ಸಾಧ್ಯವಿಲ್ಲ. ಅಂದರೆ ಪೇಸ್ ಅಥವಾ ನ್ಯೂಟ್ರಲ್ ರಂಧ್ರಕ್ಕೆ ಅರ್ತಿಂಗ್ ಪಿನ್ ಅನ್ನು ಹಾಕಲು ಸಾಧ್ಯವಾಗದಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ಕಡಿಮೆ ಪ್ರತಿರೋಧ (Low Resistance): ವಿಜ್ಞಾನದ ಪ್ರಕಾರ, ತಂತಿ ಅಥವಾ ಪಿನ್ ಎಷ್ಟು ದಪ್ಪವಾಗಿರುತ್ತದೋ ಅದರ ವಿದ್ಯುತ್ ಪ್ರತಿರೋಧ ಅಷ್ಟು ಕಡಿಮೆಯಿರುತ್ತದೆ. ಪಿನ್ ದಪ್ಪವಾಗಿದ್ದಾಗ ಅದರ ಮೂಲಕ ವಿದ್ಯುತ್ ಅತಿ ವೇಗವಾಗಿ ಮತ್ತು ಸುಲಭವಾಗಿ ಹರಿಯುತ್ತದೆ. ಇದರಿಂದ ಫ್ರಿಡ್ಜ್ ಮತ್ತು ಎಸಿಯಂತಹ ಉಪಕರಣಗಳಿಂದ ಲೀಕ್ ಆಗುವ ಹೆಚ್ಚಿನ ವಿದ್ಯುತ್ ಯಾವುದೇ ಅಡೆತಡೆಯಿಲ್ಲದೆ ಭೂಮಿಗೆ ಸೇರುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.
