MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Football
  • ಪಂದ್ಯ ದಿನ ಎಂಟ್ರಿ ಅವತ್ತೆ ಅಮೆರಿಕದಿಂದ ಮರಳಬೇಕು, ಇರಾನ್ ಫುಟ್ಬಾಲ್ ಟೀಂ ನಿರ್ಬಂಧ ವಿರುದ್ಧ ಫಿಫಾಗೆ ದೂರು

ಪಂದ್ಯ ದಿನ ಎಂಟ್ರಿ ಅವತ್ತೆ ಅಮೆರಿಕದಿಂದ ಮರಳಬೇಕು, ಇರಾನ್ ಫುಟ್ಬಾಲ್ ಟೀಂ ನಿರ್ಬಂಧ ವಿರುದ್ಧ ಫಿಫಾಗೆ ದೂರು

ಫಿಫಾ ವಿಶ್ವಕಪ್‌ನಲ್ಲಿ ಇರಾನ್ ತಂಡಕ್ಕೆ ಆತಿಥ್ಯ ದೇಶ ಅಮೆರಿಕ ಹಲವು ನಿರ್ಬಂಧ ವಿದಿಸಿದೆ. ಪಂದ್ಯದ ದಿನವೇ ಅಮೆರಿಕಗೆ ಎಂಟ್ರಿಕೊಟ್ಟು ಪಂದ್ಯ ಮುಗಿದ ತಕ್ಷಣ ಅಮೆರಿಕದಿಂದ ಜಾಗ ಖಾಲಿ ಮಾಡಬೇಕು. ಈ ನೀತಿ ವಿರುದ್ದ ಫಿಫಾಗೆ ದೂರು ಸಲ್ಲಿಕೆಯಾಗಿದೆ. 

2 Min read
Author : Chethan Kumar
Published : Jun 21 2026, 09:11 AM IST
Share this Photo Gallery
  • FB
  • TW
  • Linkdin
  • Whatsapp
16
ಅಮೆರಿಕ ವಿರುದ್ದ ಫಿಫಾಗೆ ದೂರು
Image Credit : Getty

ಅಮೆರಿಕ ವಿರುದ್ದ ಫಿಫಾಗೆ ದೂರು

ಫಿಫಾ ವಿಶ್ವಕಪ್ ಟೂರ್ನಿ ಪಂದ್ಯಗಳು ರೋಚಕತೆ ಹೆಚ್ಚಿಸುತ್ತಿದೆ. ಈ ಬಾರಿ ಯಾರು ಟ್ರೋಫಿ ಗೆಲ್ಲುತಾರೆ ಅನ್ನೋ ಕುತೂಹಲ ಹೆಚ್ಚಾಗುತ್ತಿದೆ. ಇದರ ನಡುವೆ ವಿವಾದವೂ ಜೋರಾಗುತ್ತಿದೆ. ಇರಾನ್ ಫುಟ್ಬಾಲ್ ತಂಡದ ಮೇಲೆ ಅಮೆರಿಕ ಹೇರಿರುವ ನಿರ್ಬಂಧ ಇದೀಗ ವಿವಾದವಾಗಿದೆ. ಇರಾನ್ ತಂಡ ಪಂದ್ಯದ ದಿನ ಮಾತ್ರ ಅಮೆರಿಕ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಇಷ್ಟೇ ಅಲ್ಲ ಪಂದ್ಯ ಮುಗಿದ ಬೆನ್ನಲ್ಲೇ ಅಮೆರಿಕದಿಂದ ನಿರ್ಗಮಿಸಬೇಕು. ಈ ನೀತಿ ವಿರುದ್ಧ ದೂರು ಸಲ್ಲಿಕೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಇರಾನ್ ಮೇಲಿನ ನಿರ್ಬಂಧದಿಂದ ಸಮಸ್ಯೆ
Image Credit : Getty

ಇರಾನ್ ಮೇಲಿನ ನಿರ್ಬಂಧದಿಂದ ಸಮಸ್ಯೆ

ಇರಾನ್ ಮೇಲಿನ ನಿರ್ಬಂಧದಿಂದ ಇದು ಫುಟ್ಬಾಲ್ ತಂಡದ ಮೇಲೆ ತೀವ್ರ ಪರಿಣಾಮ ಬೀರಿದೆ. ಇರಾನ್ ತಂಡ ಇತರ ತಂಡಗಳಂತೆ ಅಮರಿಕದಲ್ಲಿ ಇರುವಂತಿಲ್ಲ. ಪಂದ್ಯ ನಡೆಯುವ ದಿನವೇ ಇರಾನ್ ತಂಡ ಅಮೆರಿಕ ಪ್ರವೇಶ ಮಾಡಬೇಕು. ಪಂದ್ಯ ಮುಗಿಸಿದ ಬೆನ್ನಲ್ಲೇ ಅಮೆರಿಕದಿಂದ ತೆರಳಬೇಕು. ಇರಾನ್ ತಂಡಕ್ಕೆ ಅಮೆರಿಕದಲ್ಲಿ ಕೇವಲ 24 ಗಂಟೆ ಮಾತ್ರ ಇರಲು ಅವಕಾಶವಿದೆ. ಇದು ತಂಡದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಇರಾನ್ ಫುಟ್ಬಾಲ್ ಕೋಚ್ ಅಮೆರಿಕ್ ಗೆಲನೊಯ್ ದೂರು ದಾಖಲಿಸಿದ್ದಾರೆ.

Related Articles

Related image1
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬ್ರೆಜಿಲ್‌ಗೆ ಮೊದಲ ಜಯ; ಆತಿಥೇಯ ಅಮೆರಿಕ ನಾಕೌಟ್‌ಗೆ ಲಗ್ಗೆ
Related image2
Viral Memes: ವೈರಲ್ ಮೀಮ್ಸ್‌ನ ಮತ್ತೊಬ್ಬ ಹುಡುಗ ಸಿಕ್ಕಿಬಿದ್ದ; ಫುಟ್ಬಾಲ್ ಮೈದಾನದಲ್ಲಿ ತನ್ನದೇ ಫೋಟೋ ಹಿಡಿದು ಪೋಸ್
36
ಫಿಫಾಗೆ ದೂರು ನೀಡಿದ ಇರಾನ್
Image Credit : Getty

ಫಿಫಾಗೆ ದೂರು ನೀಡಿದ ಇರಾನ್

ಅಮೆರಿಕ ನೀತಿಗಳಿಂದ ಇರಾನ್ ಸಂಕಷ್ಟದಲ್ಲಿದೆ. ಪಂದ್ಯದ ದಿನ ಪ್ರಯಾಣ ಮಾಡಿ ಅಮೆರಿಕಾಗೆ ಆಗಮಿಸಿ ಪಂದ್ಯ ಮುಗಿಸಿ ಬಳಿಕ ಪ್ರಯಾಣ ಮಾಡುವುದು ಸುಲಭದ ಮಾತಲ್ಲ.ಪ್ರತಿ ಪಂದ್ಯ, ಸತತ ಪಂದ್ಯಗಳ ಸಮಯದಲ್ಲಿ ಈ ರೀತಿಯ ಪ್ರಯಾಣ ತಂಡದ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಅಮೆರಿಕ ತನ್ನ ನೀತಿ ಸಡಿಸಿಲಿ ಇರಾನ್ ಫುಟ್ಬಾಲ್ ತಂಡಕ್ಕೆ ಪ್ರಯಾಣ ನಿರ್ಬಂಧ ಸಡಿಲಗೊಳಿಸಬೇಕು ಎಂದು ಫಿಫಾ ತನ್ನ ದೂರಿನಲ್ಲಿ ಮನವಿ ಮಾಡಿದೆ.

46
ಪಂದ್ಯ ಮುಗಿದ ಬೆನ್ನಲ್ಲೇ ಪ್ಯಾಕ್ ಮಾಡಲು ಹೇಳಿದ ಅಮೆರಿಕ
Image Credit : X Handle

ಪಂದ್ಯ ಮುಗಿದ ಬೆನ್ನಲ್ಲೇ ಪ್ಯಾಕ್ ಮಾಡಲು ಹೇಳಿದ ಅಮೆರಿಕ

ಕ್ಯಾಲಿಫೋರ್ನಿಯಾದಲ್ಲಿ ನಡೆದ ಪಂದ್ಯದಲ್ಲಿ ಆಘಾತ ಅನುಭವಿಸಿದ ಇರಾನ್ ತಂಡ ಮೈದಾನದಿಂದ ಹೊರಗೆ ಬರುವಷ್ಟರಲ್ಲೇ ಬ್ಯಾಗ್ ಪ್ಯಾಕ್ ಮಾಡಲು ಸೂಚಿಸಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ತಂಡ ಚೇತರಿಸಿಕೊಳ್ಳುವ ಮೊದಲೇ ಬ್ಯಾಗ್ ಪ್ಯಾಕ್ ಮಾಡಿ ಮಕ್ಸಿಕೋಗೆ ತೆರಳುವಂತೆ ಸೂಚಿಸಲಾಗಿತ್ತು. ಪಂದ್ಯಕ್ಕಾಗಿ ಅಮೆರಿಕಗೆ ಬಂದು ಮತ್ತೆ ಮೆಕ್ಸಿಕೋ ಪ್ರಯಾಣದಿಂದ ಇರಾನ್ ತಂಡದ ಮೇಲೆ ಹೆಚ್ಚಿನ ಒತ್ತಡ ಹೇರಲಾಗುತ್ತಿದೆ ಎಂದು ಕೋಚ್ ಹೇಳಿದ್ದಾರೆ.

56
ಸುರಕ್ಷತೆ ಕ್ರಮ ಎಂದು ಸಮರ್ಥಿಸಿಕೊಂಡ ಅಮೆರಿಕ
Image Credit : Getty

ಸುರಕ್ಷತೆ ಕ್ರಮ ಎಂದು ಸಮರ್ಥಿಸಿಕೊಂಡ ಅಮೆರಿಕ

ಇರಾನ್ ಮೇಲೆ ಪ್ರಯಾಣ ನಿರ್ಬಂಧವಿದೆ. ಇದು ಇರಾನ್ ತಂಡಕ್ಕೂ ಅನ್ವಯಿಸುತ್ತದೆ. ಸುರಕ್ಷತಾ ಕ್ರಮಗಳಿಂದ ಭದ್ರತಾ ಎಜೆನ್ಸಿಗಳ ಹೇರಿದೆ ನಿರ್ಬಂಧ ಇದು. ಇದು ಸರುಕ್ಷತಾ ದೃಷ್ಟಿಯಿಂದ ಅನಿವಾರ್ಯವಾಗಿದೆ ಎಂದು ಅಮೆರಿಕ ಸಮರ್ಥಿಸಿಕೊಂಡಿದೆ. ಇದೇ ವೇಳೆ ಬೆಲ್ಜಿಯಂ ವಿರುದ್ದದ ಪಂದ್ಯಕ್ಕೂ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

66
ದೂರು ಆಲಿಸಲಿದೆ ಫಿಫಾ, ವರಸೆ ಬದಲಿಸಿದ ಅಮೆರಿಕ
Image Credit : Getty

ದೂರು ಆಲಿಸಲಿದೆ ಫಿಫಾ, ವರಸೆ ಬದಲಿಸಿದ ಅಮೆರಿಕ

ಫಿಫಾ ಸಂಸ್ಥೆಗೆ ದೂರು ದಾಖಲಿಸುತ್ತಿದ್ದಂತೆ ಅಮೆರಿಕ ತನ್ನ ವರಸೆ ಬದಲಿಸಿದೆ. ಇರಾನ್ ಕೋಚ್ ನೀಡಿರುವ ದೂರು ಆಲಿಸಿ ವಿಚಾರಣೆ ನಡೆಸಲಿದೆ ಎಂದು ಫಿಫಾ ಹೇಳಿದೆ. ಆದರೆ ತಕ್ಷಣಕ್ಕೆ ಪ್ರತಿಕ್ರಿಯಿಸಲು ಫಿಫಾ ನಿರಾಕರಿಸಿದೆ. ಇತ್ತ ವೈಟ್ ಹೌಸ್‌ನ ವಿಶ್ವಕಪ್ ಟಾಸ್ಕ್ ಫೋರ್ಸ್ ನಿರ್ದೇಶಕ ಆ್ಯಂಡ್ಯೂ ಗಿಯೂಲಾನಿ ವರಸೆ ಬದಲಿಸಿದ್ದಾರೆ. ಇರಾನ್ ಮೇಲಿನ ಕಠಿಣ ನೀತಿಯನ್ನು ಮರು ಪರಿಶೀಲಿಸಲಾಗುವುದು ಎಂದಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಇರಾನ್
ಅಮೇರಿಕಾ
ಫುಟ್‌ಬಾಲ್
ಫಿಫಾ ವಿಶ್ವಕಪ್

Latest Videos
Recommended Stories
Recommended image1
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬ್ರೆಜಿಲ್‌ಗೆ ಮೊದಲ ಜಯ; ಆತಿಥೇಯ ಅಮೆರಿಕ ನಾಕೌಟ್‌ಗೆ ಲಗ್ಗೆ
Recommended image2
Lionel Messi: ಫ್ಲೋರಿಡಾದಲ್ಲಿ ಮೆಸ್ಸಿ ಲೈಫ್: ಐಷಾರಾಮಿ ಮನೆ, ಪಕ್ಕದಲ್ಲೇ ಸ್ಪೋರ್ಟ್ಸ್ ದಿಗ್ಗಜರು!
Recommended image3
FIFA World Cup 2026: ಕ್ರೊವೇಷಿಯಾ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡ ಇಂಗ್ಲೆಂಡ್‌
Related Stories
Recommended image1
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬ್ರೆಜಿಲ್‌ಗೆ ಮೊದಲ ಜಯ; ಆತಿಥೇಯ ಅಮೆರಿಕ ನಾಕೌಟ್‌ಗೆ ಲಗ್ಗೆ
Recommended image2
Viral Memes: ವೈರಲ್ ಮೀಮ್ಸ್‌ನ ಮತ್ತೊಬ್ಬ ಹುಡುಗ ಸಿಕ್ಕಿಬಿದ್ದ; ಫುಟ್ಬಾಲ್ ಮೈದಾನದಲ್ಲಿ ತನ್ನದೇ ಫೋಟೋ ಹಿಡಿದು ಪೋಸ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved