ಫೈಬರ್ ಹೆಚ್ಚಿರೋ ಅನ್ನ ತಿನ್ನಬಾರದು ಅಂತಾರೆ. ಅಂಥದ್ರಲ್ಲಿ ಹೇಗೆ ಬೇಯಿಸಿದರೆ ಒಳ್ಳೇದು?
ನೀವು ಅಕ್ಕಿಯನ್ನು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸುತ್ತೀರಾ? ಅಥವಾ ಬೇರೆ ಪಾತ್ರ ಬೇಯಿಸುತ್ತೀರಾ? ಆಹಾರ ತಯಾರಿಸುವ ವಿಧಾನ ಸಹ ತನ್ನದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿದೆ. ಅಕ್ಕಿಯನ್ನು ಬೇಯಿಸುವುದರಿಂದ ಎಷ್ಟು ಪ್ರಯೋಜನವಿದೆ ಅನ್ನೋದನ್ನು ತಿಳಿಯೋಣ.
rice
ಅನ್ನ ನಮ್ಮ ದೇಶದ ಪ್ರಧಾನ ಆಹಾರ. ಛತ್ತೀಸ್‌ಗಢ, ಕೋಲ್ಕತಾ ಮತ್ತು ದಕ್ಷಿಣ ಭಾರತದಲ್ಲಿ, ರೊಟ್ಟಿ, ಚಪಾತಿಗಿಂತ ಹೆಚ್ಚು ಅನ್ನವನ್ನು ತಿನ್ನಲಾಗುತ್ತದೆ. ಅನ್ನವನ್ನು ವಿವಿಧ ರೀತಿಯಲ್ಲಿ ಬೇಯಿಸಿ, ತಿಂತಾರೆ ಜನ. ಕೆಲವರು ಪ್ರೆಶರ್ ಕುಕ್ಕರ್ನಲ್ಲಿ (pressure cooker) ಆಹಾರ ಬೇಯಿಸಲು ಇಷ್ಟಪಟ್ಟರೆ, ಇನ್ನೂ ಕೆಲವರು ತೆರೆದ ಪಾತ್ರೆಯಲ್ಲಿ ಅನ್ನ ಬೇಯಿಸುತ್ತಾರೆ.
ಅನ್ನವನ್ನು ಬೇಯಿಸಲು ಸರಿಯಾದ ಮಾರ್ಗ ಯಾವುದು ?
ಜಪಾನ್, ಚೀನಾ, ದಕ್ಷಿಣ ಕೊರಿಯಾ ಮುಂತಾದ ಆಗ್ನೇಯ ಏಷ್ಯಾದ ಬಗ್ಗೆ ಹೇಳುವುದಾದರೆ, ಅಕ್ಕಿಯನ್ನು ವಿಶೇಷ ರೈಸ್ ಕುಕ್ಕರ್ ಗಳಲ್ಲಿ(rice cooker) ತಯಾರಿಸಲಾಗುತ್ತದೆ. ಭಾರತದಲ್ಲಿ, ಅಕ್ಕಿಯನ್ನು ಪ್ರೆಶರ್ ಕುಕ್ಕರ್‌ಗಳಲ್ಲಿ ತಯಾರಿಸಲಾಗುತ್ತದೆ ಮತ್ತು ಪಾತ್ರೆಗೆ ಅಕ್ಕಿ ಹಾಕಿ ಕುದಿಸಲಾಗುತ್ತದೆ. ಆದರೆ ಈ ಎರಡು ವಿಧಾನಗಳಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ?
ಅನ್ನದ ಬಗ್ಗೆ ಸಂಶೋಧನೆ ಏನು ಹೇಳುತ್ತದೆ?
ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್ನಲ್ಲಿ ಪ್ರಕಟವಾದ ಸಂಶೋಧನೆಯು ಅನ್ನದ ಗ್ಲೈಸೆಮಿಕ್ ಪ್ರತಿಕ್ರಿಯೆಯು ಮಹಿಳೆಯರ ಆರೋಗ್ಯದ (women health) ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಿದೆ. ಈ ಸಂಶೋಧನೆಯ ದತ್ತಾಂಶವನ್ನು 23-54 ವರ್ಷ ವಯಸ್ಸಿನ ಮಹಿಳೆಯರ ಅನುಭವಗಳು ಮತ್ತು ವೈದ್ಯಕೀಯ ವರದಿಗಳ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ.
ಈ ಅಧ್ಯಯನದ ಪ್ರಕಾರ, ಭಾಗವಹಿಸುವವರ ಗ್ಲೂಕೋಸ್ ಮಟ್ಟವನ್ನು (glucose level) ಅನ್ನ ತಿಂದ 30 ನಿಮಿಷಗಳ ನಂತರ ಪರೀಕ್ಷಿಸಲಾಯಿತು. ಪಾತ್ರೆಯಲ್ಲಿ ಕುದಿಸಿದ ಅನ್ನವನ್ನು ತಿನ್ನುವಾಗ ಗ್ಲುಕೋಸ್ ಮಟ್ಟ ಸ್ವಲ್ಪ ಹೆಚ್ಚಾಗಿದೆ ಎಂದು ಕಂಡುಬಂದಿದೆ. ಅದೇ ಸಮಯದಲ್ಲಿ, ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿದ ಅಕ್ಕಿಯಲ್ಲಿ ಸ್ವಲ್ಪ ಹೆಚ್ಚು ಕ್ಯಾಲೊರಿಗಳಿವೆ ಅನ್ನೋದು ತಿಳಿದು ಬಂದಿದೆ..
ಪ್ರೆಶರ್ ಕುಕ್ಕರ್ ನಲ್ಲಿ ಅಕ್ಕಿ ಬೇಯಿಸುವುದರ ಪ್ರಯೋಜನಗಳು
ಪ್ರೆಶರ್ ಕುಕ್ಕರ್ ನಲ್ಲಿ ಅಕ್ಕಿಯನ್ನು ಬೇಯಿಸುವುದು ತುಂಬಾ ಸುಲಭ ಮತ್ತು ಬೇಗ ಅನ್ನ ತಯಾರಿಸಲಾಗುತ್ತೆ.
ಪ್ರೆಶರ್ ಕುಕ್ಕರ್ ನಲ್ಲಿ ಅಕ್ಕಿಯನ್ನು ಬೇಯಿಸುವುದರಿಂದ ಗ್ಯಾಸ್ ಉಳಿತಾಯವಾಗುತ್ತದೆ.
ಇದು ಹೆಚ್ಚು ರುಚಿಯಾಗಿರುತ್ತದೆ.
ಪ್ರೆಶರ್ ಕುಕ್ಕರ್ ನ ಅಕ್ಕಿಯನ್ನು ತುಪ್ಪದಿಂದ ತಯಾರಿಸಿದರೆ, ಅದನ್ನು ಇತರ ಅನೇಕ ಭಕ್ಷ್ಯಗಳಿಗೂ ಬಳಸಬಹುದು.
ಪ್ರೆಶರ್ ಕುಕ್ಕರ್ ನಲ್ಲಿ ಅಕ್ಕಿ ಬೇಯಿಸುವ ಅನಾನುಕೂಲಗಳು
ಅಕ್ಕಿಯನ್ನು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿದರೆ, ಅದರ ಪಿಷ್ಟ ಹೊರಬರುವುದಿಲ್ಲ. ಇದು ಅನ್ನದಲ್ಲಿ ಹೆಚ್ಚು ಕೊಬ್ಬು (fat) ತುಂಬುವಂತೆ ಮಾಡುತ್ತೆ.
ಪ್ರೆಶರ್ ಕುಕ್ಕರ್ ನಿಂದಾಗಿ ಆಹಾರದಲ್ಲಿನ ಅನೇಕ ಅಗತ್ಯ ಪೋಷಕಾಂಶಗಳು ಬಿಡುಗಡೆಯಾಗುತ್ತವೆ.
ಪ್ರೆಶರ್ ಕುಕ್ಕರ್ ಅನ್ನವನ್ನು ಮತ್ತೆ ಮತ್ತೆ ಸೇವಿಸುವ ಬಯಕೆ ಉಂಟಾಗುತ್ತೆ, ಏಕೆಂದರೆ ಇದು ಉತ್ತಮ ರುಚಿಯನ್ನು ಹೊಂದಿರುತ್ತೆ.
ಕುದಿಸಿ ಅಕ್ಕಿ (boiling rice) ತಯಾರಿಸುವ ಪ್ರಯೋಜನಗಳು
ಇದು ಕಡಿಮೆ ಕ್ಯಾಲೊರಿಯನ್ನು ಹೊಂದಿದೆ. ಯಾರಾದರೂ ಫ್ಯಾಟ್ ಕಡಿಮೆ ಮಾಡಲು ಬಯಸಿದ್ರೆ, ಅವರು ಕುದಿಸಿದ ಅನ್ನವನ್ನು ತಿನ್ನಬಹುದು.
ಪಿಷ್ಟದ ಪ್ರಮಾಣ ಕಡಿಮೆಯಿದ್ದರೆ, ಮಧುಮೇಹಿಗಳಿಗೆ ಈ ಅನ್ನವನ್ನು ತಿನ್ನಲು ಸೂಚಿಸಲಾಗುತ್ತದೆ.
ಅಕ್ಕಿಯನ್ನು ಕುದಿಸಿದ ನಂತರ, ಅದರ ನೀರನ್ನು ಬಿಸಾಡಲಾಗುತ್ತೆ, ಇದು ಅಕ್ಕಿಯನ್ನು ಹೆಚ್ಚು ಸ್ವಚ್ಛವಾಗಿಸುತ್ತದೆ.
ಕುದಿಸಿದ ಅನ್ನವನ್ನು ತಿನ್ನುವ ಅನಾನುಕೂಲಗಳು
ಅಗತ್ಯ ಪೋಷಕಾಂಶಗಳು ಬಿಡುಗಡೆಯಾಗುತ್ತವೆ.
ಇದರ ರುಚಿಯು (taste of the food) ಅಷ್ಟೊಂದು ಚೆನ್ನಾಗಿರೋದಿಲ್ಲ..
ಅಡುಗೆ ಮಾಡಲು ಹೆಚ್ಚು ಸಮಯ ಮತ್ತು ಗ್ಯಾಸ್ ಬೇಕಾಗುತ್ತದೆ.