ಹಣ್ಣುಗಳನ್ನು ಸಂಜೆ ತಿನ್ನಬಾರದಾ? ಇಲ್ಲಿದೆ ನೋಡಿ ಡೌಟಿದ್ದರೆ ಉತ್ತರ!
ಚಳಿಗಾಲದಲ್ಲಿ ಕಿತ್ತಳೆ, ಸೇಬು, ಮುಂತಾದ ಹಣ್ಣುಗಳು ಧಾರಾಳವಾಗಿ ಮತ್ತು ಫ್ರೆಶ್ ಆಗಿ ದೊರೆಯುತ್ತದೆ. ಅವುಗಳನ್ನು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಆದರೆ ಸರಿಯಾದ ಸಮಯದಲ್ಲಿ ಸೇವಿಸದ ಆಹಾರವೂ ಹಾನಿ ಮಾಡುತ್ತದೆ. ಹಣ್ಣುಗಳ ವಿಷಯದಲ್ಲೂ ಇದು ಸತ್ಯ. ಸಾಮಾನ್ಯವಾಗಿ ಸಂಜೆ ಹಣ್ಣುಗಳನ್ನು ತಿನ್ನಬಾರದು ಎಂದು ಹೇಳುತ್ತಾರೆ. ಇದು ನಿಜವಾ? ಇಲ್ಲಿದೆ ಉತ್ತರ ಹಾಗೂ ಯಾವ ಸಮಯದಲ್ಲಿ ಯಾವ ಹಣ್ಣುಗಳನ್ನು ತಿನ್ನಬೇಕು ಎನ್ನುವ ವಿವರ.
ಹಣ್ಣುಗಳಲ್ಲಿ ಪ್ರೋಟೀನ್, ವಿಟಮಿನ್, ಆ್ಯಂಟಿ ಆ್ಯಕ್ಸಿಡೆಂಟ್, ಫೈಬರ್ ಮತ್ತು ಅನೇಕ ಪೌಷ್ಠಿಕಾಂಶಗಳಿವೆ. ಇದು ದೇಹವನ್ನು ಫಿಟ್ ಮತ್ತು ಆರೋಗ್ಯಕರಗೊಳಿಸುತ್ತದೆ. ಆದರೆ ಹಣ್ಣುಗಳ ಸಂಪೂರ್ಣ ಲಾಭ ಪಡೆಯಲು, ಸರಿಯಾದ ಸಮಯದಲ್ಲಿ ಅವುಗಳನ್ನು ತಿನ್ನುವುದು ಬಹಳ ಮುಖ್ಯ.
ವಿಂಟರ್‌ನಲ್ಲಿ ಸೀಬೆ ಹಣ್ಣು ಧಾರಾಳವಾಗಿ ದೊರೆಯುತ್ತದೆ. ವಿಟಮಿನ್ ಸಿ ಸಮೃದ್ಧವಾರುವ ಈ ಹಣ್ಣನ್ನು ಯಾವಾಗಲೂ ಹಗಲಿನಲ್ಲಿ ತಿನ್ನಬೇಕು.
ಮುಸಂಬಿಯನ್ನು ಮಧ್ಯಾಹ್ನ ಸೇವಿಸಬೇಕು. ಈ ಹಣ್ಣನ್ನು ಬಿಸಿಲಿಗೆ ಹೋಗುವ ಮೊದಲು ಅಥವಾ ಹೊರಗಿನಿಂದ ಬಂದ ನಂತರ ಮಧ್ಯಾಹ್ನ ಸೇವಿಸಬೇಕು. ಇದು ಡೀಹೈಡ್ರೆಶನ್ ಅನ್ನು ತಡೆಯುತ್ತದೆ.
ವಿಟಮಿನ್-ಸಿ, ಪ್ರೋಟೀನ್, ಖನಿಜಗಳ ಅತ್ಯುತ್ತಮ ಮೂಲವಾಗಿರುವ ಕಿತ್ತಳೆ ಹಣ್ಣುಗಳನ್ನು ಎಂದಿಗೂ ಬೆಳಿಗ್ಗೆ ಮತ್ತು ರಾತ್ರಿಯಲ್ಲಿ ತಿನ್ನಬಾರದು. ಕಿತ್ತಳೆಯನ್ನು ಊಟಕ್ಕೆ 1 ಗಂಟೆ ಮೊದಲು ಅಥವಾ ಊಟದ 1 ಗಂಟೆ ನಂತರ ಸೇವಿಸಿ.
ಪ್ರತಿದಿನ ಸೇಬುವನ್ನು ತಿನ್ನುತ್ತಿದ್ದರೆ, ಮೆದುಳು ಸಕ್ರಿಯವಾಗಿರುತ್ತದೆ. ಸೇಬನ್ನು ಬೆಳಗ್ಗೆ ಉಪಾಹಾರದ ಒಂದು ಗಂಟೆ ನಂತರ ಅಥವಾ ಒಂದು ಗಂಟೆ ಮೊದಲು ತಿನ್ನಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬನ್ನು ಎಂದಿಗೂ ತಿನ್ನಬಾರದು ನೆನಪಿಡಿ.
ಯಾವುದೇ ಸಮಯದಲ್ಲಿ, ಯಾವಾಗ ಬೇಕಾದರೂ ತಿನ್ನಬಹುದಾದ ಬಾಳೆಹಣ್ಣಿನಲ್ಲಿ ಗ್ಲೂಕೋಸ್ ಮತ್ತು ಎನರ್ಜಿ ಸಮೃದ್ಧವಾಗಿದೆ. ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಹಾರ ಸೇವಿಸುವ ಮೊದಲು ಬಾಳೆಹಣ್ಣನ್ನು ಸೇವಿಸಿದರೆ, ಹೊಟ್ಟೆ ತುಂಬಿರುವಂತೆ ಭಾಸವಾಗುತ್ತದೆ. ಆಹಾರವನ್ನು ಕಡಿಮೆ ತಿನ್ನುತ್ತೀರಿ. ಆಹಾರ ಸೇವನೆಯ ನಂತರ ಬಾಳೆಹಣ್ಣು ತಿನ್ನುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ದ್ರಾಕ್ಷಿಯನ್ನು ಬಿಸಿಲಿಗೆ ಹೋಗುವ ಮೊದಲು ಅಥವಾ ನಂತರ ತಿನ್ನುವುದು ಪ್ರಯೋಜನಕಾರಿ. ಆಹಾರ ಮತ್ತು ದ್ರಾಕ್ಷಿಯನ್ನು ತಿನ್ನುವುದರ ನಡುವೆ ಟೈಮ್ ಗ್ಯಾಪ್ ಹೊಂದಿರುವುದು ಬಹಳ ಮುಖ್ಯ ಎಂದು ನೆನಪಿಡಿ.
ರಾತ್ರಿಯಲ್ಲಿ ಹಣ್ಣುಗಳನ್ನು ತಿನ್ನಬಾರದು ಎಂದು ಸಾಮಾನ್ಯವಾಗಿ ಹೇಳುತ್ತಾರೆ. ರಾತ್ರಿಯಲ್ಲಿ ಹಣ್ಣು ತಿನ್ನುವುದರಿಂದ ಯಾವುದೇ ಹಾನಿ ಇಲ್ಲವಾದರೂ, ಊಟ ಮತ್ತು ಹಣ್ಣು ತಿನ್ನುವ ನಡುವೆ ಕನಿಷ್ಠ 30 ನಿಮಿಷಗಳ ಅಂತರವಿರಬೇಕು. ಸಾಧ್ಯವಾದರೆ, ರಾತ್ರಿ ಊಟಕ್ಕೆ ಒಂದರಿಂದ ಎರಡು ಗಂಟೆಗಳ ಮೊದಲು ಹಣ್ಣುಗಳನ್ನು ಸೇವಿಸಬೇಕು.
ರಾತ್ರಿಯ ಸಮಯದಲ್ಲಿ ಕಲ್ಲಂಗಡಿ, ಪಿಯರ್ ಅಥವಾ ಕಿವಿ ತಿನ್ನುವುದು ಒಳ್ಳೆಯದು. ಇವುಗಳಲ್ಲಿ ಫೈಬರ್ ಅಂಶ ಹೆಚ್ಚು ಮತ್ತು ಸಕ್ಕರೆ ಕಡಿಮೆ ಇರುತ್ತದೆ.
ಹಣ್ಣುಗಳನ್ನು ಯಾವುದೇ ಡೈರಿ ಉತ್ಪನ್ನಗಳ ಜೊತೆಗೆ ವಿಶೇಷವಾಗಿ ಹಾಲು ಮತ್ತು ಮೊಸರು ಜೊತೆ ಸೇವಿಸುವುದನ್ನು ತಪ್ಪಿಸಬೇಕು.