Egg Yolk : ನೀವು ಮೊಟ್ಟೆಯ ಬಿಳಿ ಭಾಗ ಮಾತ್ರ ಸೇವಿಸಿ ಹಳದಿ ಭಾಗ ಬಿಸಾಡುತ್ತೀರಾ? ಹಾಗಿದ್ರೆ ಇಲ್ ನೋಡಿ..
ಮೊಟ್ಟೆಗಳು ಬಹಳ ಆರೋಗ್ಯಕರವಾಗಿವೆ. ಬಹಳ ಹಿಂದಿನಿಂದಲೂ ಅವು ಆರೋಗ್ಯಕರ ಆಹಾರ ಯೋಜನೆಯ ಭಾಗವಾಗಿವೆ. ಒಂದು ದಿನದಲ್ಲಿ ಒಂದು ಸಂಪೂರ್ಣ ಮೊಟ್ಟೆ ಸೇವಿಸುವುದು, ಸ್ಕ್ರಾಂಬಲ್ಡ್ (scrambled egg) ಅಥವಾ ಪೋಚ್ಡ್ ಸೇವನೆ, ನಿಮಗೆ 13 ವಿಭಿನ್ನ ಅಗತ್ಯ ವಿಟಮಿನ್ ಗಳು ಮತ್ತು ಪೋಷಕಾಂಶಗಳನ್ನು ಒದಗಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಮೊಟ್ಟೆಗಳ ಹಳದಿ ಭಾಗವನ್ನು ತ್ಯಜಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಅದನ್ನು ಅನಾರೋಗ್ಯಕರ ಮತ್ತು ಕೊಲೆಸ್ಟ್ರಾಲ್ (cholesterol) ಹೆಚ್ಚು ಎಂದು ಬ್ರಾಂಡ್ ಮಾಡಲಾಗುತ್ತಿದೆ. ಸ್ನಾಯುಗಳನ್ನು ನಿರ್ಮಿಸಲು ಅಥವಾ ತೂಕ ಇಳಿಸಲು ಪ್ರಯತ್ನಿಸುತ್ತಿರುವ ಫಿಟ್ನೆಸ್ ಉತ್ಸಾಹಿಗಳಲ್ಲಿ ಈ ಪ್ರವೃತ್ತಿ ಹೆಚ್ಚು ಸಾಮಾನ್ಯವಾಗಿದೆ.
ಸತ್ಯ ಹೇಳಬೇಕೆಂದರೆ, ನೀವು ಹಳದಿ ಭಾಗವನ್ನು ತ್ಯಜಿಸಿದರೆ, ನೀವು ನಿಮ್ಮ ದೇಹಕ್ಕೆ ಬೇಕಾಗಿರುವ ಹಲವಾರು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತೀರಿ ಮತ್ತು ಈ ಸೂಪರ್ ಫುಡ್ ನ ಅರ್ಧದಷ್ಟು ಪ್ರಯೋಜನಗಳನ್ನು ಮಾತ್ರ ಪಡೆಯುತ್ತೀರಿ.
ಹಳದಿಯಲ್ಲಿ ಏನಿದೆ?
ಮೊಟ್ಟೆಯ ಹಳದಿ ಭಾಗವು(egg yolk), ಎಲ್ಲ ಪೋಷಕಾಂಶಗಳನ್ನು ಒಳಗೊಂಡಿದೆ. ಹಳದಿಗೆ ಹೋಲಿಸಿದರೆ ಮೊಟ್ಟೆಯ ಬಿಳಿ ಭಾಗವು ಕನಿಷ್ಠ ಪ್ರಮಾಣದ ಪೋಷಕಾಂಶಗಳನ್ನು ಹೊಂದಿದೆ. ಒಂದು ಇಡೀ ಮೊಟ್ಟೆಯಲ್ಲಿ ವಿಟಮಿನ್ ಎ, ಡಿ, ಇ, ಕೆ ಮತ್ತು ಆರು ವಿಭಿನ್ನ ಬಿ ವಿಟಮಿನ್ ಗಳು ತುಂಬಿವೆ.
ಖನಿಜಗಳ ವಿಷಯಕ್ಕೆ ಬಂದಾಗ, ಹಳದಿ ಭಾಗವು ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಸತು ಮತ್ತು ಫೋಲೇಟ್ ನಿಂದ ತುಂಬಿದೆ. ಹಳದಿಯು ಬಿಳಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ಇದನ್ನು ತಿನ್ನದೇ ಇದ್ದರೆ ಆಂತರಿಕ ಕಾರ್ಯಗಳನ್ನು ನಿರ್ವಹಿಸಲು ದೇಹಕ್ಕೆ ಅಗತ್ಯವಿರುವ ಸಾಕಷ್ಟು ಪೋಷಕಾಂಶಗಳನ್ನು ನೀವು ಪಡೆಯುತ್ತಿಲ್ಲ ಎಂದರ್ಥ. ಬಿಳಿ ಭಾಗವು ಪ್ರೋಟೀನ್ ನಿಂದ ಮಾತ್ರ ಸಮೃದ್ಧವಾಗಿದೆ.
ಹಳದಿಗೆ ಸಂಬಂಧಿಸಿದ ತಪ್ಪು ಕಲ್ಪನೆ
ಹೆಚ್ಚಿನ ಜನರು ಹಳದಿಯನ್ನು ತ್ಯಜಿಸುತ್ತಾರೆ ಏಕೆಂದರೆ ಇದರಲ್ಲಿ ಕೊಲೆಸ್ಟ್ರಾಲ್, ಕೊಬ್ಬು ಮತ್ತು ಸೋಡಿಯಂ (sodium) ಅಂಶ ಹೆಚ್ಚಾಗಿದೆ. ಆದರೆ ನೀವು ಮೊಟ್ಟೆಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ, ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸಿದರೆ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿದರೆ, ಕೊಲೆಸ್ಟ್ರಾಲ್ ಮತ್ತು ಕೊಬ್ಬಿನ ಅಂಶದ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ.
ನೀವು ತೂಕವನ್ನು ಕಳೆದುಕೊಳ್ಳಲು ನೋಡುತ್ತಿರಬಹುದು ಅಥವಾ ಸ್ನಾಯುಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿರಬಹುದು, ನಿಮಗೆ ಹಲವಾರು ಉದ್ದೇಶಗಳಿಗಾಗಿ ಕೊಲೆಸ್ಟ್ರಾಲ್ ಮತ್ತು ಕೊಬ್ಬು ಎರಡೂ ಬೇಕು. ಟೆಸ್ಟೋಸ್ಟೆರಾನ್ ಉತ್ಪಾದನೆಗೆ ಕೊಲೆಸ್ಟ್ರಾಲ್ ಅತ್ಯಗತ್ಯ, ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಮತ್ತು ಸ್ನಾಯುಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಅಲ್ಲದೇ ಚರ್ಮವು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ ವಿಟಮಿನ್ ಡಿ ಯನ್ನು ಸೃಷ್ಟಿಸಲು ನೆರವಾಗುತ್ತದೆ. ಡಿ ವಿಟಮಿನ್ ಮೂಳೆಯ ಬಲವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ಮೊಟ್ಟೆಯಲ್ಲಿರುವ ಕೊಬ್ಬಿನ ಬಗ್ಗೆ ಹೇಳುವುದಾದರೆ, ಇದು ಹೆಚ್ಚಾಗಿ ಆರೋಗ್ಯಕರವಾಗಿರುತ್ತದೆ. ಕೊಬ್ಬನ್ನು ಸೇವಿಸುವುದರಿಂದ ನಿಮ್ಮನ್ನು ಬೆಚ್ಚಗಿಡಲು ಮತ್ತು ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಭಾವನೆಯನ್ನು ಉಂಟುಮಾಡಲು ಸಹಾಯ ಮಾಡುತ್ತದೆ. ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ.
ಮೊಟ್ಟೆಯ ಬಿಳಿ ಭಾಗ ಮತ್ತು ಒಂದು ಇಡೀ ಮೊಟ್ಟೆಯ ಪೌಷ್ಠಿಕಾಂಶದಲ್ಲಿ ಭಾರಿ ವ್ಯತ್ಯಾಸವಿದೆ. ಪೋಷಕಾಂಶಗಳನ್ನು ಹೇಗೆ ವಿಂಗಡಿಸಿದ್ದಾರೆ ಎಂಬುದು ಇಲ್ಲಿದೆ. ಮೊಟ್ಟೆಯ ಬಿಳಿ ಭಾಗ ಅಥವಾ ಹಳದಿ ಭಾಗ ಯಾವ ಭಾಗದಲ್ಲಿ ಹೆಚ್ಚು ಪೋಷಕಾಂಶಗಳು ಸೇರಿವೆ ತಿಳಿಯಿರಿ.
egg
8 ಮೊಟ್ಟೆಯ ಬಿಳಿಭಾಗ
ಪ್ರೋಟೀನ್: 28 ಗ್ರಾಂ
ಕಾರ್ಬ್ಸ್: 2 ಗ್ರಾಂ
ಕೊಬ್ಬುಗಳು: 0 ಗ್ರಾಂ
ಕ್ಯಾಲೊರಿಗಳು: 137
4 ಸಂಪೂರ್ಣ ಮೊಟ್ಟೆಗಳು
ಪ್ರೋಟೀನ್: 28 ಗ್ರಾಂ
ಕಾರ್ಬ್ಸ್: 2 ಗ್ರಾಂ
ಕೊಬ್ಬುಗಳು: 21 ಗ್ರಾಂ
ಕ್ಯಾಲೊರಿಗಳು: 312
ನೀವು ಮೊಟ್ಟೆಯನ್ನು ಸೇವಿಸುವಾಗ, ಅದರ ಎಲ್ಲ ಪೋಷಕಾಂಶಗಳನ್ನು ಪಡೆಯಲು ಇಡೀ ಮೊಟ್ಟೆಯನ್ನು ತಿನ್ನುವುದು ಯಾವಾಗಲೂ ಉತ್ತಮ. ಹಳದಿ ಭಾಗವನ್ನು ತ್ಯಜಿಸಿ ಹೆಚ್ಚು ಬಿಳಿ ಬಣ್ಣವನ್ನು ತಿನ್ನುವುದರಿಂದ ನಿಮಗೆ ಅನೇಕ ಪೋಷಕಾಂಶಗಳು ಇಲ್ಲವಾಗುತ್ತವೆ. 4 ಮೊಟ್ಟೆಯ ಬಿಳಿಭಾಗವನ್ನು ಹೊಂದುವ ಬದಲು, 2 ಸಂಪೂರ್ಣ ಮೊಟ್ಟೆಗಳಿಗೆ ಅಂಟಿಕೊಳ್ಳಿ. 4 ಮೊಟ್ಟೆಯ ಬಿಳಿಭಾಗಗಳಿಗೆ ಹೋಲಿಸಿದರೆ 2 ಸಂಪೂರ್ಣ ಮೊಟ್ಟೆಗಳಿಂದ ನೀವು ಹೆಚ್ಚಿನ ಪೋಷಕಾಂಶಗಳನ್ನು ಪಡೆಯುತ್ತೀರಿ.